T20 WC; ಹೊಸ ರೂಪ ಪಡೆದ ಸೆಮಿ ರೇಸ್; ಭಾರತ, ಆಸೀಸ್, ಅಫ್ಘಾನ್ ಪಯಣ ಹೇಗೆ? ಇಲ್ಲಿದೆ ಮಾಹಿತಿ
Team Udayavani, Jun 23, 2024, 11:52 AM IST
ಕಿಂಗ್ಸ್ ಟೌನ್: ಬಲಿಷ್ಠ ಆಸ್ಟ್ರೇಲಿಯಾ ವಿರುದ್ದದ ಅಫ್ಘಾನಿಸ್ತಾನ ತಂಡದ ಪ್ರಸಿದ್ದ ಗೆಲುವಿನ ಬಳಿಕ ಐಸಿಸಿ ಟಿ20 ವಿಶ್ವಕಪ್ 2024ರ ಸೂಪರ್ 8 ಕದನ ಹೊಸ ರೂಪ ಪಡೆದಿದೆ. ಅಫ್ಘಾನ್ ತಂಡದ ಅಚ್ಚರಿಯ ಗೆಲುವಿನ ಕಾರಣದಿಂದ ಸೆಮಿ ಫೈನಲ್ ಗೆ ಯಾವ ತಂಡ ಅರ್ಹತೆ ಪಡೆಯಬಹುದು ಎನ್ನುವ ಕುತೂಹಲ ಗರಿಗೆದರಿದೆ.
ಇಂದು ಕಿಂಗ್ಸ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ಆರು ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿದರೆ, ಆಸ್ಟ್ರೇಲಿಯಾ ತಂಡವು 127 ರನ್ ಗಳಿಗೆ ಆಲೌಟಾಯಿತು. ಈ ಮೂಲಕ ಅಫ್ಘಾನ್ ತಂಡವು 21 ರನ್ ಅಂತರದ ಗೆಲುವು ಸಾಧಿಸಿತು.
ಸೂಪರ್ 8 ನ ಗುಂಪು 1ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸುಲಭವಾಗಿ ಸೆಮಿ ಫೈನಲ್ ಗೆ ಅರ್ಹತೆ ಪಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇಂದಿನ ಪಂದ್ಯದ ಫಲಿತಾಂಶದ ಬಳಿಕ ಅಫ್ಘಾನ್ ಕೂಡಾ ಸೆಮಿ ರೇಸ್ ನಲ್ಲಿ ಜೀವಂತವಾಗಿದೆ.
ಸೂಪರ್ 8 ಹಂತದ ಮೊದಲೆರಡು ಪಂದ್ಯಗಳನ್ನು ಗೆದ್ದ ಭಾರತ 2.425 ರನ್ ರೇಟ್ ನೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತ ಸೆಮಿ ಫೈನಲ್ ಗೆ ತಲುಪುವ ಅವಕಾಶ ಹೆಚ್ಚು. ಸದ್ಯ ಆಸೀಸ್ ಮತ್ತು ಅಫ್ಘಾನ್ ತಲಾ ಎರಡು ಅಂಕಗಳೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.
ಭಾರತದ ಪಯಣ ಹೇಗೆ
ರೋಹಿತ್ ಬಳಗವು ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಆಡಲಿದೆ. ಈ ಪಂದ್ಯ ಗೆದ್ದರೆ ಭಾರತ ಸೆಮಿ ಫೈನಲ್ ಗೆ ಪ್ರವೇಶ ಪಡೆಯಲಿದೆ. ಒಂದು ವೇಳೆ ಸೋತರೂ ಭಾರತದ ರನ್ ರೇಟ್ ಉತ್ತಮವಾಗಿರುವ ಕಾರಣ ಭಾರತ ಬಹುತೇಕ ಸೆಮಿಗೆ ಹೋಗಲಿದೆ. ಆದರೆ ಅತಿ ದೊಡ್ಡ ಸೋಲು ಭಾರತದ ಪಯಣವನ್ನು ತಡೆಯಬಹುದು.
A famous night for Afghanistan🥳#T20WorldCup #AFGvAUS pic.twitter.com/H32KXK4PaG
— ICC (@ICC) June 23, 2024
ಆಸ್ಟ್ರೇಲಿಯಾ
ಅಫ್ಘಾನ್ ವಿರುದ್ದದ ಸೋಲಿನಿಂದ ಆಘಾತಗೊಂಡಿರುವ ಆಸೀಸ್ ಗೆ ಮುಂದಿನ ಪಂದ್ಯವು ಮಾಡು ಇಲ್ಲವೆ ಮಡಿ ಪಂದ್ಯ. ಅದೂ ಅಜೇಯವಾಗಿರುವ ಭಾರತದ ವಿರುದ್ದ. ಈ ಪಂದ್ಯದಲ್ಲಿ ಸೋತರೆ ಆಸೀಸ್ ಪಯಣ ಬಹುತೇಕ ಮುಗಿದಂತೆ. ಆಸ್ಟ್ರೇಲಿಯವು ಭಾರತದ ವಿರುದ್ಧ ಸೋಲನ್ನು ಅನುಭವಿಸಿದರೆ ಮತ್ತು ಅಫ್ಘಾನಿಸ್ತಾನವು ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೆ, ಆಫ್ಘನ್ನರು ಭಾರತದ ಜೊತೆಯಲ್ಲಿ ಸೆಮಿಫೈನಲ್ ಗೆ ಪ್ರವೇಶಿಸುತ್ತಾರೆ ಅದೇ ವೇಳೆ ಆಸ್ಟ್ರೇಲಿಯಾ ಮನೆಗೆ ತೆರಳಬೇಕಾಗುತ್ತದೆ.
ಅಫ್ಘಾನಿಸ್ತಾನ
ಅದ್ಭುತ ಆಟದಿಂದ ಆಸೀಸ್ ಗೆ ಸೋಲುಣಿಸಿರುವ ಅಫ್ಘಾನ್ ಮೊದಲ ಬಾರಿಗೆ ವಿಶ್ವಕಪ್ ಸೆಮಿ ಫೈನಲ್ ತಲುಪುವ ಅವಕಾಶ ಹೊಂದಿದೆ. ಆಸೀಸ್ ಭಾರತ ವಿರುದ್ದ ಸೋತರೆ, ಅಫ್ಘಾನಿಸ್ತಾನವು ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೆ ರಶೀದ್ ಬಳಗ ಸೆಮಿಗೆ ತಲುಪಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯವು ಅಫ್ಘಾನ್ ಪಂದ್ಯಕ್ಕೆ ಮೊದಲು ನಡೆಯಲಿರುವ ಕಾರಣ ಇದು ಅವರಿಗೆ ಲಾಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಹರಾಜು ಆರಂಭ; ಭರ್ಜರಿ ಬಿಡ್ ಗಳಿಸಿದ ವೇಗಿ ಅರ್ಶದೀಪ್ ಸಿಂಗ್
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.