School Days: ವ್ಯಾನ್‌ ಬಂತು ಓಡೂ..! ಸ್ಕೂಲ್‌ ಶುರುವಾಗಿದೆ; ಮಕ್ಕಳಿಗೆ, ಅಮ್ಮಂದಿರಿಗೆ..


Team Udayavani, Jun 23, 2024, 11:35 AM IST

Untitled-1

ಸಾಂದರ್ಭಿಕ ಚಿತ್ರ

ಬೆಳಗ್ಗಿನ ಗಡಿಬಿಡಿ ಅಂದರೆ ಏನು ಅಂತ ತಿಳಿದುಕೊಳ್ಳಬೇಕು ಅಂತಾದರೆ ನೀವು ಶಾಲೆಗೆ ಹೋಗುವ ಮಕ್ಕಳಿರುವ ಪೋಷಕರನ್ನು ಕೇಳಬೇಕು. ಬೆಳಿಗ್ಗೆ ಆರರಿಂದ ಎಂಟು ಗಂಟೆಯವರೆಗಿನ ಆ ಎರಡು ಗಂಟೆ, ನೂರಿಪ್ಪತ್ತು ನಿಮಿಷ ಅಂದರೆ 7,200 ಸೆಕೆಂಡ್‌ ಗಳು ಅವರಿಗೆ ತುಂಬಾ ಅಮೂಲ್ಯವಾದುದು. ದಿನದ ಬೇರೆಲ್ಲಾ ಹೊತ್ತಿಗಿಂತ ಬೆಳಗ್ಗೆ ಎದ್ದು ಮಕ್ಕಳನ್ನು ಶಾಲೆಗೆ ಕಳುಹಿಸುವವರೆಗಿನ ಸಮಯದಲ್ಲಿ ಈ ಗಡಿಯಾರ ತೀವ್ರಗತಿಯಲ್ಲಿ ಸಾಗುತ್ತದೇನೋ ಎಂಬ ಅನುಮಾನವೂ ಪೋಷಕವಲಯದಲ್ಲಿ ಸುಳಿದಾಡುತ್ತಿದೆ.

ನನ್ನ ಮಗಳು ಈಗ ಮೂರನೇ ತರಗತಿ. ಕಳೆದ ಶೈಕ್ಷಣಿಕ ವರ್ಷ ಮುಗಿಯುವವರೆಗೂ ನಾವು ಬೆಂಗಳೂರಿನಲ್ಲಿದ್ದೆವು. ಅಲ್ಲಿ ಬೆಳಿಗ್ಗೆ 8 ಗಂಟೆಗೇ ಶಾಲೆ ಆರಂಭವಾಗುತ್ತಿತ್ತು. ಹಾಗಾಗಿ 7.50 ರ ಒಳಗೆ ನಾವು ಅವಳನ್ನು ಶಾಲೆಗೆ ಬಿಡಬೇಕಿತ್ತು. ಅಲ್ಲಿನ ಶಾಲೆ ನಾವು ವಾಸವಿದ್ದ ಅಪಾರ್ಟ್‌ ಮೆಂಟ್‌ನ ಎದುರಿಗೇ ಇದ್ದುದರಿಂದ 7.45ಕ್ಕೆ ಮನೆ ಬಿಟ್ಟರೆ ಸಾಕಿತ್ತು. ನಾನು ಬೆಳಿಗ್ಗೆ 5.30ಕ್ಕೆ ಎದ್ದು, ಮಗಳ ಶಾರ್ಟ್‌ ಬ್ರೇಕ್‌ ಹಾಗೂ ಲಂಚ್‌ ಬ್ರೇಕ್‌ ಗೆ ಬೇಕಾದ ತಿಂಡಿ ಹಾಗೂ ಅಡುಗೆಯನ್ನು ತಯಾರಿಸಿ ನಂತರ ಅವಳನ್ನು ಎಬ್ಬಿಸುತ್ತಿದ್ದೆ. ಎದ್ದ ಕೂಡಲೇ ಬ್ರಶ್‌, ನಂತರ ಸ್ನಾನ, ಆಮೇಲೆ ತಿಂಡಿ ತಿನ್ನಿಸಿ, ಯೂನಿಫಾರ್ಮ್ ಹಾಕಿ, ಶೂಸ್‌ ಹಾಕಿ ಎಷ್ಟೇ ಬೇಗ ಅಂತ ರೆಡಿಯಾದರೂ ಗಡಿಯಾರ 7.45 ತೋರಿಸುತ್ತಿತ್ತು.

ಮಕ್ಕಳ ಹಿಂದೆಯೇ ಓಡಿಹೋಗಿ…

ಹಿಂದಿನ ದಿನ ಎಷ್ಟೇ ತಯಾರಿ ಮಾಡಿದರೂ ಬೆಳಗ್ಗಿನ ಗಡಿಬಿಡಿ ತಪ್ಪುತ್ತಿರಲಿಲ್ಲ. “ಅಮ್ಮಾ ನನ್ನ ಶೂಸ್‌ ಪಾಲಿಶ್‌ ಆಗಿಲ್ಲ, ಈ ಸಾಕ್ಸ್ ಗಲೀಜಾಗಿದೆ, ವಾಶ್‌ ಆಗಿರೋದು ಕೊಡು. ವಾಟರ್‌ ಬಾಟಲ್‌ ಗೆ ನೀರು ತುಂಬಿಸಿಲ್ಲ…’ ಹೀಗೆ ಒಂದಲ್ಲಾ ಒಂದು ರಾಗ ಇದ್ದೇ ಇರುತ್ತಿತ್ತು. ಕೆಲವೊಮ್ಮೆ ಬೆಳಿಗ್ಗೆ ಎದ್ದ ನಂತರ ಹಿಂದಿನ ದಿನ ಕೊಟ್ಟ ಹೋಂವರ್ಕ್‌ ನೆನಪು ಮಾಡಿಕೊಂಡು ಹೇಳುತ್ತಾ ಇದ್ದಳು. ‌

ಆಗೆಲ್ಲಾ ಕ್ಷಾಮದಲ್ಲಿ ಅಧಿಕಮಾಸ, ಇದು ಬೇರೆ…’ ಅಂತ ಗೊಣಗಿಕೊಂಡು ಹೋಂವರ್ಕ್‌ ಮಾಡಿಸ್ತಾ ಇದ್ದೆ. ಕೆಲವೊಮ್ಮೆ ಅವಳನ್ನು ಶಾಲೆಗೆ ಬಿಟ್ಟು ಬಂದ ನಂತರ ಅವಳ ಸ್ಕೂಲ್‌ ಡೈರಿ, ವಾಟರ್‌ ಬಾಟಲ್‌ ಅಥವಾ ಇನ್ನೇನೋ ಅಗತ್ಯ ವಸ್ತು ಮನೆಯ ಕಾಫಿ ಟೇಬಲ್‌ ಇಲ್ಲವೇ ಶೂ ಸ್ಟಾಂಡ್‌ ಮೇಲೆ ಕುಳಿತು ನನ್ನನ್ನು ನೋಡಿ ನಗುತ್ತಿದ್ದವು. ಮತ್ತೆ ಅವನ್ನೆತ್ತಿಕೊಂಡು ಅದಕ್ಕೆ ಅವಳ ಹೆಸರು, ಕ್ಲಾಸ್‌ ಹಾಗೂ ಸೆಕ್ಷನ್‌ ಬರೆದಿರುವ ಚೀಟಿ ಅಂಟಿಸಿ ಮತ್ತೆ ಸ್ಕೂಲ್‌ ಹತ್ತಿರ ಹೋಗಿ ಸೆಕ್ಯುರಿಟಿ ಗಾರ್ಡ್‌ಗೆ ಮಸ್ಕಾ ಹೊಡೆದು ಅವಳಿಗೆ ತಲುಪಿಸಿ ಅಂತ ಹೇಳುವಷ್ಟರಲ್ಲಿ ಸಾಕು ಸಾಕಾಗುತ್ತಿತ್ತು.

ಫ‌ಜೀತಿಗಳು ಒಂದಾ ಎರಡಾ…

ಒಮ್ಮೆ ವಿದ್ಯಾರ್ಥಿಗಳನ್ನೆಲ್ಲಾ ಲಾಲ್‌ಬಾಗ್‌ಗೆ ಫೀಲ್ಡ್ ಟ್ರಿಪ್‌ ಕರೆದುಕೊಂಡು ಹೋಗಿದ್ದರು. ಸೋಮವಾರದಿಂದ ಗುರುವಾರದವರೆಗೆ ಬ್ರೌನ್‌ ಕಲರ್‌ ರೆಗ್ಯುಲರ್‌ ಯುನಿಫಾರ್ಮ್ ಮತ್ತು ಶುಕ್ರವಾರ ಹೌಸ್‌ ಯುನಿಫಾರ್ಮ್ ಅಂದರೆ ಹೌಸ್‌ ಟಿ ಶರ್ಟ್‌ ಮತ್ತು ವೈಟ್‌ ಸ್ಕರ್ಟ್‌ ಧರಿಸಬೇಕು ಎಂಬುದು ನಿಯಮ. ಆದರೆ ವಾರದ ಮಧ್ಯದ ದಿನ ಫೀಲ್ಡ್ ಟ್ರಿಪ್‌ಗೆ ಹೌಸ್‌ ಟಿ ಶರ್ಟ್‌ ಮತ್ತು ಜೀನ್ಸ್ ಧರಿಸಿದ್ದರಿಂದ ಆ ವಾರ ಶುಕ್ರವಾರ ರೆಗ್ಯುಲರ್‌ ಯುನಿಫಾರ್ಮ್ ಹಾಕಿಕೊಂಡು ಬರುವಂತೆ ಹೇಳಿದ್ದರು. ಆ ಬಗ್ಗೆ ನೋಟ್‌ ಕೂಡಾ ಕಳುಹಿಸಿದ್ದರು. ನಾನು ಓದಿ ಸೈನ್‌ ಕೂಡಾ ಮಾಡಿದ್ದೆ. ಆದರೆ ಶುಕ್ರವಾರ ಬಂದಾಗ ಗಡಿಬಿಡಿಯಲ್ಲಿ ಎಂದಿನಂತೆ ಹೌಸ್‌ ಯುನಿಫಾರ್ಮ್ ಹಾಕಿಸಿ ಕರೆದುಕೊಂಡು ಹೋದೆ. ಶಾಲೆಯ ಹತ್ತಿರ ಹೋಗಿ ನೋಡಿದ್ರೆ ಎಲ್ಲರೂ ರೆಗ್ಯುಲರ್‌ ಯುನಿಫಾರ್ಮ್ ಹಾಕ್ಕೊಂಡಿದ್ದಾರೆ. ಆಗ ನೆನಪಾಯ್ತು ಡೈರಿ ನೋಟ್‌ ! ಖಚಿತ ಪಡಿಸಿಕೊಳ್ಳಲು ಮಗಳ ಬಳಿ ಕೇಳಿದಾಗ ಅವಳೂ ಕೂಡಾ “ಹೌದು, ಇವತ್ತು ರೆಗ್ಯುಲರ್‌ ಯುನಿಫಾರ್ಮ್ ಹಾಕಬೇಕಿತ್ತು’ ಅಂದ್ರು. ಮನೇಲೇ ಹೇಳ್ಬಾರ್ದಿತ್ತಾ ಅಂತ ಕೇಳಿದ್ದಕ್ಕೆ, ನಿಂಗೆ ಮರೆತು ಹೋದ ಹಾಗೆ ನಂಗೂ ಮರೆತು ಹೋಯ್ತು ಅಂತ ಉತ್ತರ ಕೊಟ್ಟಳು. ಇರಲಿ ಬಿಡು, ಮ್ಯಾಮ್‌ ಹತ್ರ ಇದನ್ನೇ ಹೇಳು ಅಂದರೆ “ಊಹೂಂ, ನಾನು ಹೋಗಲ್ಲ. ಮ್ಯಾಮ್‌ ಬೈತಾರೆ’ ಅಂತ ಅಳಲು ಶುರು ಮಾಡಿದ್ರು. ನಮ್ಮ ವಾದ ಮತ್ತು ಪ್ರತಿವಾದಗಳನ್ನು ಕೇಳಿಸಿಕೊಂಡ ಸೆಕ್ಯುರಿಟಿ ಗಾರ್ಡ್‌, ನಿಮ್ಮ ಮನೆ ಇಲ್ಲೇ ಹತ್ತಿರ ಅಲ್ವಾ, ಹೋಗಿ ಚೇಂಜ್‌ ಮಾಡಿಕೊಂಡು ಬನ್ನಿ ಮ್ಯಾಮ್. ಪ್ರೇಯರ್‌ ಮಿಸ್‌ ಆಗುತ್ತೆ ಅಷ್ಟೇ ಅಂತ ಜಡ್ಜ್ಮೆಂಟ್‌ ಕೊಟ್ಟರು. ಈ ಥರದ ಫ‌ಜೀತಿಗಳು ಒಂದಾ ಎರಡಾ…

ಯುದ್ದ ಗೆದ್ದ ಅನುಭವ..

ಕಳೆದ ಶೈಕ್ಷಣಿಕ ವರ್ಷ ಮುಗಿದ ನಂತರ ನಾವು ಉಡುಪಿಗೆ ಬಂದು ನೆಲೆಸಿದೆವು. ಇಲ್ಲಿನ ಶಾಲೆಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ. ಹಾಗಾಗಿ ಇಲ್ಲಿ ನನಗೆ ಆರಾಮ, ಬೆಳಗ್ಗಿನ ಗಡಿಬಿಡಿಗಳಿಲ್ಲ ಅಂತ ಭಾವಿಸಿದ್ದೆ. ಆದರೆ ಯಾವಾಗ ಶಾಲೆ ಶುರುವಾಯಿತೋ; ಆಗ ನನ್ನ ಎಣಿಕೆ ತಪ್ಪು ಅಂತ ನನಗೆ ಗೊತ್ತಾಯಿತು. ಊಟದ ಡಬ್ಬಿ ಕೊಡಬೇಕಾಗಿಲ್ಲ, ಆದರೂ ಶಾರ್ಟ್‌ ಬ್ರೇಕ್‌ಗೆ ತಿಂಡಿ ಕಳುಹಿಸಬೇಕು! ಮತ್ತೆ ಇಲ್ಲಿ ಶಾಲೆ ದೂರ ಇರುವುದರಿಂದ ಸ್ಕೂಲ್‌ ಬಸ್‌ನಲ್ಲಿ ಹೋಗುವ ವ್ಯವಸ್ಥೆ ಇದೆ. ಹಾಗಾಗಿ ಸ್ಕೂಲ್‌ ಬಸ್‌ ಬರುವುದರೊಳಗೆ ನಾವು ನಿಗದಿತ ಜಾಗದಲ್ಲಿ ಹಾಜರಿರಬೇಕು. ಜೊತೆಗೆ, ಶಾಲೆ ದೂರ ಇರುವುದರಿಂದ ಯಾವುದಾದರೂ ಅಗತ್ಯ ವಸ್ತು ತಪ್ಪಿಹೋದರೆ ತಲುಪಿಸಲು ಸಾಧ್ಯವಿಲ್ಲ. ಹಾಗಾಗಿ ಎರಡೆರಡು ಬಾರಿ ನೋಡಿ ಖಚಿತ ಮಾಡಿಕೊಳ್ಳುವುದು ಅನಿವಾರ್ಯ. ಬೆಂಗಳೂರೇ ಇರಲಿ, ಉಡುಪಿಯೇ ಇರಲಿ, ನಮ್ಮ ಬೆಳಗ್ಗಿನ ಗಡಿಬಿಡಿಗೆ ಮುಕ್ತಿ ಇಲ್ಲ ಎಂಬ ಸತ್ಯ ನನಗೀಗ ಅರಿವಾಗಿದೆ.

ಬೆಳಿಗ್ಗೆ 7.45ಕ್ಕೆ ಮಗಳನ್ನು ಸ್ಕೂಲ್‌ ಬಸ್‌ ಹತ್ತಿಸಿ ಮನೆಗೆ ಬಂದು ಕಾಫಿ ಲೋಟ ಹಿಡಿದು ಕುಳಿತಾಗ, ಒಂದು ಯುದ್ಧ ಗೆದ್ದ ನಂತರದ ಸಂಭ್ರಮಾಚರಣೆಯಂತೆ ಭಾಸವಾಗುತ್ತದೆ. ನನ್ನ ಮಗಳೀಗ ಮೂರನೇ ತರಗತಿ. ಇನ್ನು ಹತ್ತು-ಹದಿನಾಲ್ಕು ವರ್ಷ ಈ ಗಡಿಬಿಡಿ ಇದ್ದೇ ಇದೆ. ಈ ಗಡಿಬಿಡಿಯಲ್ಲೂ ಒಂದು ಸುಖವಿದೆ: ಮುಂದೆ ಮಗಳು ದೊಡ್ಡವಳಾಗಿ ಅವಳ ಕೆಲಸ ಅವಳೇ ಮಾಡಿಕೊಳ್ಳುವಾಗ ನಾನು ಈ ಗಡಿಬಿಡಿಯ ಸುಖವನ್ನು ಮಿಸ್‌ ಮಾಡಿಕೊಳ್ಳುತ್ತೇನೆ ಎನ್ನುವ ಅರಿವೂ ನನಗಿದೆ.

ಅನ್ನಪೂರ್ಣ ಶ್ಯಾನುಭೋಗ್‌, ಉಡುಪಿ

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.