JDS MLC ಸೂರಜ್‌ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

Team Udayavani, Jun 24, 2024, 6:00 AM IST

1-SURAJ

ಬೆಂಗಳೂರು: ಪರಿಚಯಸ್ಥ ಯುವಕನ ಮೇಲೆ ಅನೈಸರ್ಗಿಕ ಲೈಂಗಿಕ ಕ್ರಿಯೆ, ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜೆಡಿಎಸ್‌ ಎಂಎಲ್‌ಸಿ ಸೂರಜ್‌ ರೇವಣ್ಣ ಅವರನ್ನು ರವಿವಾರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದಕ್ಕೂ ಮುನ್ನ ಹಾಸನ ದಲ್ಲಿ ಪೊಲೀಸರು ಅವರನ್ನು ಶನಿ ವಾರ ಸಂಜೆಯೇ ವಶಕ್ಕೆ ಪಡೆದು ತಡರಾತ್ರಿವರೆಗೆ ವಿಚಾರಣೆ ನಡೆಸಿ ದ್ದರು. ರವಿವಾರ ಬೆಳಗ್ಗೆ ಅವರನ್ನು ಅಧಿಕೃತವಾಗಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಸೂರಜ್‌ ಅವರನ್ನು 42ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಅವರನ್ನು ಜು. 6ರ ವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.

ಈ ನಡುವೆ ರಾಜ್ಯ ಸರಕಾರ ಪ್ರಕರಣದ ತನಿಖೆಯ ಹೊಣೆ ಯನ್ನು ಸಿಐಡಿಗೆ ಒಪ್ಪಿಸಿದೆ. ಸೋಮವಾರ ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಲಿದ್ದು, ಬಾಡಿ ವಾರಂಟ್‌ ಪಡೆದು ಸೂರಜ್‌ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಹೊಳೇನರಸೀಪುರ ಠಾಣೆಯಲ್ಲಿ ಜೂ. 22ರಂದು ದಾಖಲಾಗಿದ್ದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ರಾಜ್ಯ ಸರಕಾರ ಸಿಐಡಿಗೆ ವರ್ಗಾವಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹೊಳೇನರಸೀಪುರ ಠಾಣೆ ಪೊಲೀಸರು ಸೂರಜ್‌ ಅವರನ್ನು ಬಿಗಿ ಭದ್ರತೆಯಲ್ಲಿ ಬೆಂಗಳೂರಿಗೆ ಕರೆತಂದು, ರವಿವಾರ ಸಂಜೆ ಕೋರಮಂಗಲದಲ್ಲಿರುವ 42ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಿದರು. ಬಳಿಕ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿರುವುದರಿಂದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶರು ಸಮ್ಮತಿಸಿ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.

ಇಂದು ಪ್ರಕರಣದ ಕಡತಗಳು ಹಸ್ತಾಂತರ
ರಾಜ್ಯ ಸರಕಾರದ ಸೂಚನೆ ಮೇರೆಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್‌. ಹಿತೇಂದ್ರ ಪ್ರಕರಣದ ವರ್ಗಾವಣೆಗೆ ಆದೇಶ ಹೊರಡಿಸಿದ್ದಾರೆ. ಹೊಳೇನರಸಿಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಕ್ರೈಂ ನಂಬರ್‌ 92/2024 ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು, ಈ ಕೂಡಲೇ ಮುಂದಿನ ತನಿಖೆಗಾಗಿ ಪ್ರಕರಣದ ಎಲ್ಲ ಕಡತಗಳನ್ನು ಸಿಐಡಿ ಕಚೇರಿಗೆ ತೆರಳಿ, ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಹಿರಿಯ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಎಂದು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ. ಹಾಸನ ಪೊಲೀಸರು ಆರೋಪಿ ಸೂರಜ್‌ ಸಮೇತ ಬೆಂಗಳೂರಿಗೆ ಕರೆತಂದಿದ್ದು, ರಾತ್ರಿ ತಡವಾಗಿದ್ದರಿಂದ ಸೋಮವಾರ ಪ್ರಕರಣದ ಎಲ್ಲ ಕಡತಗಳನ್ನು ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.

ಸಂಕಷ್ಟದ ಸುಳಿಗೆ ಸಿಲುಕಿದ ರೇವಣ್ಣ ಕುಟುಂಬ!
ಸಂತ್ರಸ್ತೆಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಬಂಧನಕ್ಕೆ ಒಳಗಾಗಿ 10 ದಿನ ಸೆರೆವಾಸ ಅನುಭವಿಸಿ, ಬಿಡುಗಡೆಯಾಗಿದ್ದಾರೆ. ಅವರ ದ್ವಿತೀಯ ಪುತ್ರ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ದ್ದಾರೆ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಬಂಧನ ಭೀತಿ ಎದುರಿಸುತ್ತಿದ್ದು, ಸದ್ಯ ನಿರೀಕ್ಷಣ ಜಾಮೀನು ಪಡೆದುಕೊಂಡಿದ್ದಾರೆ. ಈಗ ಮೊದಲ ಪುತ್ರ, ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅನೈಸರ್ಗಿಕ ಲೈಂಗಿಕ ಕ್ರಿಯೆ, ದೌರ್ಜನ್ಯ ಆರೋಪಡಿ ಬಂಧನಕ್ಕೆ ಒಳಗಾಗಿದ್ದಾರೆ. ಹೀಗೆ ರೇವಣ್ಣ ಕುಟುಂಬಕ್ಕೆ ಸಾಲು ಸಾಲು ಸಂಕಷ್ಟಗಳು ಎದುರಾಗಿವೆ.

ಸೂರಜ್‌ ರೇವಣ್ಣ ಬಗ್ಗೆ ನನ್ನಲ್ಲೇಕೆ ಕೇಳುತ್ತೀರಿ? ಈ ರೀತಿಯ ವಿಷಯ ಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಕಾನೂನು ಅದರ ಕ್ರಮ ತೆಗೆದುಕೊಳ್ಳುತ್ತದೆ.
-ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ನಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡು ತ್ತಿದ್ದಾರೆ. ಹಾಸನದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸದೆ ಬೆಂಗಳೂರಿಗೆ ಯಾಕೆ ಕರೆ ತಂದರು? ಯಾರು ಷಡ್ಯಂತ್ರ ಮಾಡುತ್ತಿ ದ್ದಾರೆ ಎಂದು ಈಗ ಹೇಳುವುದಿಲ್ಲ. ಸಮಯ ಬಂದಾಗ ಹೇಳುತ್ತೇನೆ.
– ಎಚ್‌.ಡಿ. ರೇವಣ್ಣ, ಮಾಜಿ ಸಚಿವ

ಟಾಪ್ ನ್ಯೂಸ್

Shivaraj-Thangadagi

Government: ಗಟ್ಟಿತನ ಇದ್ದುದರಿಂದಲೇ ಜಾತಿಗಣತಿ ವರದಿ ಸ್ವೀಕಾರ- ತಂಗಡಗಿ

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

B. Y. Vijayendra ಹಿಂದೂಗಳ ತೇಜೋವಧೆ ಮಾಡಿರುವ ರಾಹುಲ್‌ ಕ್ಷಮೆ ಕೇಳಲಿ

B. Y. Vijayendra ಹಿಂದೂಗಳ ತೇಜೋವಧೆ ಮಾಡಿರುವ ರಾಹುಲ್‌ ಕ್ಷಮೆ ಕೇಳಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivaraj-Thangadagi

Government: ಗಟ್ಟಿತನ ಇದ್ದುದರಿಂದಲೇ ಜಾತಿಗಣತಿ ವರದಿ ಸ್ವೀಕಾರ- ತಂಗಡಗಿ

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

Shivaraj-Thangadagi

Government: ಗಟ್ಟಿತನ ಇದ್ದುದರಿಂದಲೇ ಜಾತಿಗಣತಿ ವರದಿ ಸ್ವೀಕಾರ- ತಂಗಡಗಿ

Will not believe EVMs says akhilesh yadav

ಉ.ಪ್ರ.ದ 80 ಕ್ಷೇತ್ರ ಗೆದ್ದರೂ EVM ನಂಬಲ್ಲ: ಅಖೀಲೇಶ್‌

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Question paper ready 2 hours before NEET-PG exam start?

NEET-PG ಪರೀಕ್ಷೆ ಆರಂಭಕ್ಕಿಂತ 2 ಗಂಟೆ ಮುಂಚೆ ಪ್ರಶ್ನೆಪತ್ರಿಕೆ ಸಿದ್ಧ?

Indian Prime Minister visits Austria after 41 years!

Narendra Modi; 41 ವರ್ಷಗಳ ಬಳಿಕ ಆಸ್ಟ್ರಿಯಾಗೆ ಭಾರತದ ಪ್ರಧಾನಿ ಭೇಟಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.