Fusion: Cinema; ಪೋಸ್ಟ್‌ ಮ್ಯಾನ್‌ಇನ್‌ ದಿ ಮೌಂಟೇನ್ಸ್‌, ಡ್ಯುಯಲ್‌


Team Udayavani, Jun 24, 2024, 1:45 PM IST

12-uv-fusion

ಪೋಸ್ಟ್‌ ಮ್ಯಾನ್‌ಇನ್‌ ದಿ ಮೌಂಟೇನ್ಸ್‌

ತಂದೆ ಮತ್ತು ಮಗನ ನಡುವಿನ ಬಾಂಧವ್ಯ, ಕುಟುಂಬದ ಬಾಂಧವ್ಯವನ್ನು ಇಷ್ಟಪಡುವವರು ಈ ಸಿನಿಮಾ ನೋಡಲೇಬೇಕು. ಅದೂ ಈಗ ಮುಂಗಾರು ಆರಂಭವಾಗಿದೆ. ಮಳೆ ಸುರಿಯ ತೊಡಗಿದೆ. ಈ ಹೊತ್ತಿನಲ್ಲಿ ಈ ಸಿನಿಮಾ ನೋಡಿದರೆ ಆಪ್ಪನ ಬೆಚ್ಚನೆಯ ಅಪ್ಪುಗೆ ಹಿತವೆನಿಸುತ್ತದೆ. ಸಿನಿಮಾದಲ್ಲಿ ಬಹಳ ಸರ್ಕಸ್‌ ಗಳಿಲ್ಲ.

ಚೀನಿ ಭಾಷೆಯ ಚಲನಚಿತ್ರ. 1999 ರಲ್ಲಿ ಬಿಡುಗಡೆಯಾದದ್ದು. ನಿರ್ದೇಶಕ ಹೂವೊ ಜಿಯಾಂಖೀ (ಏuಟ ಒಜಿಚnಟಿಜಿ). ಸುಮಾರು 93 ನಿಮಿಷಗಳ ಪುಟ್ಟ ಸಿನಿಮಾ. ಚೀನದ ಮಾಂಡರಿನ್‌ ಭಾಷೆಯ ಸಿನಿಮಾ.

ಸಿನಿಮಾ ಶುರುವಾಗುವುದು ಅಪ್ಪ (ಪೋಸ್ಟ್‌ ಮ್ಯಾನ್‌) ಕೆಲಸಕ್ಕೆ ಹೊರಡುವುದರಿಂದ. ಅಪ್ಪ ಹತ್ತಿರದ ಬೆಟ್ಟ ಗುಡ್ಡಗಳಲ್ಲಿನ ವಸತಿ ಪ್ರದೇಶಗಳಿಗೆ ಆಂಚೆಯಣ್ಣ. ಬಂದ ಅಂಚೆ ಗಳನ್ನು ಹಂಚಿ, ಎಲ್ಲರನ್ನೂ ಖುಷಿಪಡಿಸಿ, ದುಃಖೀತರಿಗೆ ಸಮಾಧಾನಪಡಿಸಿ ಬರುವ ಕೆಲಸ. ಒಮ್ಮೆ ಹೋದರೆ ವಾಪಸು ಬರುವುದು ನಾಲ್ಕೈದು ದಿನಗಳ ಬಳಿಕ. ಮಗ ಏಳುವಷ್ಟರಲ್ಲಿ ಅಪ್ಪ ಬೆಟ್ಟ ಏರುತ್ತಿರುತ್ತಾನೆ. ಇದು ಅವನ ವೃತ್ತಿಯ ಕೊನೆಯ ಟ್ರಿಪ್‌.

ಆ ಬಳಿಕ ಆ ಕೆಲಸದ ಹೊಣೆ ಮಗನಿಗೆ ವರ್ಗಾವಣೆಯಾಗುತ್ತದೆ. ಈ ಕೊನೆಯ ಟ್ರಿಪ್‌ ನಲ್ಲಿ ತನ್ನ ಜವಾಬ್ದಾರಿಯನ್ನು ಮಗನಿಗೆ ವರ್ಗಾಯಿಸುವ ಕಾರ್ಯವನ್ನೂ ಮಾಡಬೇಕಿದೆ. ಅದಕ್ಕಾಗಿ ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ. ಹೀಗೆ ಅಪ್ಪ-ಮಗನ ಈ ಪಯಣದಲ್ಲಿ ಪರಸ್ಪರ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಇಬ್ಬರೂ ಇದುವರೆಗೂ ಆನುಭವಿಸದ ಬಾಂಧವ್ಯದ ಸುಖವನ್ನು ಕಾಣುತ್ತಾರೆ.

ಆಪ್ಪನಿಗೆ ಮಗ ಬೆಳೆದಿದ್ದಾನೆ ಎನಿಸುತ್ತದೆ, ಮಗನಿಗೆ ಅಪ್ಪ ದಿ ಗ್ರೇಟ್‌ ಎನಿಸುತ್ತಾನೆ. ನಿರ್ದೇಶಕ ಅತ್ಯಂತ ನಾಜೂಕಿನಿಂದ ಕಥೆಯನ್ನು ದೃಶ್ಯಗಳಿಗೆ ಅಳವಡಿಸಿದ್ದಾನೆ. ಕೆಲವು ದೃಶ್ಯಗಳಂತೂ ಮನಸ್ಸಿಗೆ ತೀವ್ರವಾಗಿ ತಟ್ಟುತ್ತದೆ. ಭಾವುಕರನ್ನಾಗಿಸುತ್ತದೆ. ಕಣ್ಣುಗಳ ಅಂಚಿನಲ್ಲಿ ನೀರಿನ ಹನಿಗಳು ಬಂದು ನಿಲ್ಲುತ್ತವೆ. ಅಪ್ಪ ಮಕ್ಕಳ ಬಾಂಧವ್ಯ ಬಂಧವನ್ನು ನಿಖರವಾಗಿ ಕಟ್ಟಿಕೊಡುವ ಪ್ರಯತ್ನ ನಿರ್ದೇಶಕನದ್ದು. ಅದರಲ್ಲಿ ಯಶಸ್ವಿಯಾಗಿದ್ದಾನೆ. ಈ ಭಾವನೆಗಳ ಓಘಕ್ಕೆ ತಕ್ಕಂತೆ ದೃಶ್ಯಗಳ ಹಿನ್ನೆಲೆ, ಭೂದೃಶ್ಯವೂ ಚೆನ್ನಾಗಿ ಹೊಂದಿಸಲಾಗಿದೆ. ಇದರ ಸಿನಿಮಾದ ಛಾಯಾಗ್ರಹಣ ಮಾಡಿದ  ಝಾವೊಲೆ ಗೂ (Zhao Lei) ಮೆಚ್ಚುಗೆ ಸಲ್ಲಲೇಬೇಕು.

ಸಿನಿಮಾ ಮುಗಿಸಿ ವೀಕ್ಷಿಸಿದ ಮೇಲೆ ನಮ್ಮ ಮನದೊಳಗೆ ಸಣ್ಣದೊಂದು ಭಾವನೆಯ ಮೋಡ ಆವರಿಸಿಕೊಳ್ಳುತ್ತದೆ. ಮೋಡ ಮೆಲ್ಲಗೆ ಹನಿಗಳಾಗುವ ಮಾದರಿ ನಿರ್ಮಾಣವಾಗುತ್ತದೆ. ಎರಡು ಕ್ಷಣದ ಮೌನ ಆಯಾಚಿತವಾಗಿ ಕಣ್ಣನ್ನು ಮುಚ್ಚಿ ಅನುಭವಿಸುವ ಸುಖ ತಂದುಕೊಡುತ್ತದೆ. ಎಲ್ಲರೂ ನೋಡಲೇಬೇಕಾದ ಚಿತ್ರ.

ಮಾಂಟ್ರಿಯಲ್‌ ವರ್ಲ್ಡ್ ಸಿನಿಮಾ ಉತ್ಸವದ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಈ ಸಿನಿಮಾಕ್ಕೆ ಸಂದಾಯವಾಗಿವೆ.

ಡ್ಯುಯಲ್‌

ಡ್ಯುಯಲ್‌ ಸಿನಿಮಾ ಬಹಳ ಸರಳ. ಅದರ ಕಥೆಯ ಎಳೆಯೂ ಅಷ್ಟೇ ಸರಳ, ಸೀದಾಸಾದ. ಈ ಚಿತ್ರ ರೂಪಿಸಿದ್ದು ಅಮೆರಿಕದ ಟೆಲಿವಿಷನ್‌ ಗೆ. 1973 ರಲ್ಲಿ. ಇದರ ನಿರ್ದೇಶಕ ಸ್ಟೀವನ್‌ ಸ್ಪಿಲ್‌ ಬರ್ಗ್‌. ಈಗ ಆ ಚಿತ್ರಕ್ಕೆ ಸರಿಯಾಗಿ 50ವರ್ಷ ಮುಗಿದು, 51 ನೇ ವರ್ಷದ ಸಂಭ್ರಮ. ಆದರೆ ಚಿತ್ರ ಈಗಲೂ ಮನಸ್ಸಿಗೆ ರಂಜನೆ ನೀಡುವಷ್ಟು  ಸಮರ್ಥ.

ಸೇಲ್ಸ್ ಮ್ಯಾನ್‌ ಡೇವಿಡ್‌ ಕ್ಯಾಲೊಫೋರ್ನಿಯಾದ ಗ್ರಾಮೀಣ ಭಾಗದಲ್ಲಿರುವ ತನ್ನ ಗ್ರಾಹಕನೊಬ್ಬನನ್ನು ಭೇಟಿಯಾಗಲು ಕಾರಿನಲ್ಲಿ  ಹೊರಡುತ್ತಾನೆ. ಒಂದಿಷ್ಟು ದೂರ ಕ್ರಮಿಸುವಾಗ ಕಾರಿನ ಕನ್ನಡಿಯಲ್ಲಿ ಟ್ರಕ್ಕೊಂದು ಹಿಂಬಾಲಿಸುತ್ತಿರುವಂತೆ ಭಾಸವಾಗುತ್ತದೆ. ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದೇ ಅವನು ಕಾರು ಚಾಲನೆಯಲ್ಲಿ ಮುಳುಗುತ್ತಾನೆ. ಮತ್ತೂಂದಿಷ್ಟು ದೂರ ಹೋದ ಮೇಲೆ ಮತ್ತೆ ಕಾರಿನ ಕನ್ನಡಿಯಲ್ಲಿ  ನೋಡುವಾಗ ಟ್ರಕ್‌ ಹಿಂಬಾಲಿಸುವುದು ದೃಢವಾಗುತ್ತದೆ. ಅಲ್ಲಿಂದ ಸಿನಿಮಾಕ್ಕೂ ವೇಗ ದೊರಕುತ್ತದೆ.

ವಾಸ್ತವವಾಗಿ 74 ನಿಮಿಷಗಳ ಸಿನಿಮಾ ವೀಕ್ಷಕರಾದ ನಮ್ಮನ್ನು ಕುತೂಹಲದ ತುತ್ತತುದಿಗೆ ತಂದು ನಿಲ್ಲಿಸುತ್ತದೆ. ಡೇವಿಡ್‌ ನೊಳಗೆ ಹುಟ್ಟಿಕೊಳ್ಳುವ ಉದ್ವೇಗ, ಆತಂಕ, ಅವ್ಯಕ್ತ ಭಯ ಎಲ್ಲವೂ ವೀಕ್ಷಕನ ಮುಖದ ಮೇಲೆ ತೋರುತ್ತದೆ. ಸಂಪೂರ್ಣ ಥ್ರಿಲ್ಲಿಂ-ಗ್‌ – ಮಕಾನುಭವ ನೀಡುವ ಚಿತ್ರದಲ್ಲಿಇಬ್ಬರೇ ಪಾತ್ರಧಾರಿಗಳು.

ಪಾತ್ರ ಒಂದು -ಡೇವಿಡ್‌ ಕಾರು.

ಎರಡನೆಯದು ಟ್ರಕ್‌.

ಎರಡೇ ಪಾತ್ರಗಳನ್ನು ನಿರ್ವಹಿಸಿದ ಬಗೆ ಅದ್ಭುತ. ಕಥೆಯಲ್ಲಿ ಇರುವ ಸಂಕೀರ್ಣತೆಯನ್ನು ಕತೆಯ ಬಿಗಿತ ಹೋಗದಂತೆ ಹೇಳಿದ ಬಗೆಯೂ ಅನನ್ಯ.

ಒಬ್ಬ  ನಿರ್ದೇಶಕ ಪಾತ್ರಗಳನ್ನು ನಿರ್ವಹಿಸಬೇಕೋ ಅಥವಾ ಅದರೊಳಗೆ ಇರಬಹುದಾದ ಕಥೆಯನ್ನು ಹೇಳಬೇಕೋ ಎಂಬ ದ್ವಂದ್ವಕ್ಕೆ  ಸಿಲುಕುವುದು ಉಂಟು. ಅದನ್ನು ಸ್ಪಷ್ಟವಾಗಿ ನಿಭಾಯಿಸಿದ್ದಾನೆ ನಿರ್ದೇಶಕ.

ಮನಸ್ಸಿಗೆ ಬೋರ್‌ ಆದರೆ ಈ ಸಿನಿಮಾ ನೋಡಬಹುದು.

-ಅಪ್ರಮೇಯ

ಟಾಪ್ ನ್ಯೂಸ್

Road

Traffic Jam: ಬಿ.ಸಿ.ರೋಡು-ಕಲ್ಲಡ್ಕ ಮಧ್ಯೆ ಹದಗೆಟ್ಟ ಹೆದ್ದಾರಿ

ಸೇತುವೆ ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ

Bridge ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಆದೇಶ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Elephant ತುಳಿತದಿಂದ ಜೀವ ಹಾನಿ ತಡೆಗೆ ಕಾರ್ಯಾಗಾರ

Elephant ತುಳಿತದಿಂದ ಜೀವ ಹಾನಿ ತಡೆಗೆ ಕಾರ್ಯಾಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

Road

Traffic Jam: ಬಿ.ಸಿ.ರೋಡು-ಕಲ್ಲಡ್ಕ ಮಧ್ಯೆ ಹದಗೆಟ್ಟ ಹೆದ್ದಾರಿ

ಸೇತುವೆ ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ

Bridge ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಆದೇಶ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.