![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jun 25, 2024, 6:19 AM IST
ರಿಯಾದ್: ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದ 98 ಭಾರತೀಯರು ಸೇರಿ ವಿವಿಧ ದೇಶಗಳ 1301 ಯಾತ್ರಿಗಳು ಬಿಸಿಲಾಘಾತದಿಂದ ಅಸುನೀಗಿದ್ದಾರೆ ಎಂದು ಸೌದಿ ಅರೇಬಿಯಾ ಆರೋಗ್ಯ ಸಚಿವ ಫಹದ್ ಬಿನ್ ಅಬ್ದುರ ಹಮಾನ್ ಅಲ್ ಜಲಾಜೆಲ್ ಮಾಹಿತಿ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 660 ಈಜಿಪ್ಟ್, 165 ಇಂಡೊನೇಷ್ಯಾ ಯಾತ್ರಿಕರು ಸೇರಿ ಜೋರ್ಡಾನ್, ಟ್ಯುನೇಷ್ಯಾ, ಮೊರೊಕ್ಕೊ, ಅಲ್ಜೀರಿಯಾ, ಮಲೇಷ್ಯಾ ಯಾತ್ರಿಕರು ಹಜ್ ಯಾತ್ರೆ ವೇಳೆ ಅಸು ನೀಗಿದ್ದಾರೆ. ಉರಿ ಬಿಸಿಲಿನಲ್ಲಿ ಬಹು ದೂರದಿಂದ ನಡೆದುಕೊಂಡು ಬಂದ ಪರಿಣಾಮ ಉಷ್ಣ ಮಾರುತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಶೇ.83 ನೋಂದಣಿ ಇಲ್ಲದವರು: ಸಾವಿಗೀಡಾದವರಲ್ಲಿ ಶೇ. 83ರಷ್ಟು ನೋಂದಣಿ ಮಾಡಿಸಿಕೊಳ್ಳದ ಯಾತ್ರಿಕರಿ ದ್ದಾರೆ. ಈಜಿಪ್ಟ್ನಲ್ಲಿ 16 ಪ್ರವಾಸಿ ಸಂಸ್ಥೆ ಗಳು ನಿಷೇಧಗೊಂಡ ಪರಿಣಾಮ ಅಲ್ಲಿಂದ ಮೆಕ್ಕಾಗೆ ಬರುವ ಅನಧಿಕೃತ ಯಾತ್ರಿಕರ ಸಂಖ್ಯೆ ಅಧಿಕವಾಗಿದೆ. ಉಳಿದುಕೊಳ್ಳಲು ಅಲ್ಲಿ ವಸತಿ ವ್ಯವಸ್ಥೆ ಇರುವುದಿಲ್ಲ. ಬಿಸಿಲಿನಿಂದ ರಕ್ಷಿಸಿಕೊಳ್ಳಲಾಗದೆ ಯಾತ್ರೆ ವೇಳೆ ಅಸುನೀಗಿದ್ದಾರೆ. ಜೂ. 14ರಿಂದ 19ರವರೆಗೆ ಈ ವರ್ಷದ ಹಜ್ ಯಾತ್ರೆ ನಡೆದಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.