T20 World Cup: ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್ ಗೇರಿದ ಅಘ್ಘಾನ್; ಆಸೀಸ್‌ಗೆ ಆಘಾತ
Team Udayavani, Jun 25, 2024, 11:18 AM IST
ಕಿಂಗ್ ಸ್ಟನ್: ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಫ್ಘಾನಿಸ್ಥಾನ ಬಾಂಗ್ಲಾದೇಶವನ್ನು ಮಣಿಸಿ ಚೊಚ್ಚಲ ಬಾರಿಗೆ ಸೆಮಿಫೈನಲ್ ಗೇರಿದೆ.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಗಿಳಿದ ಅಫ್ಘಾನಿಸ್ಥಾನ ಆರಂಭದಲ್ಲಿ ಜೊತೆಯಾಟ ನೀಡಿದ ಬಳಿಕ ಮಂದಗತಿಯ ಆಟವನ್ನು ಆಡಿತು.
ಗುರ್ಬಜ್(43 ರನ್), ಇಬ್ರಾಹಿಂ ಜದ್ರಾನ್(18 ರನ್) ಪವರ್ ಪ್ಲೇ ಓವರ್ ನಲ್ಲಿ ಬಿರುಸಿನ ಆಟವನ್ನು ನೀಡಿದ ಬಳಿಕ ಅಘ್ಘಾನ್ ತಂಡದ ಇತರೆ ಬ್ಯಾಟರ್ ಗಳು ಕನಿಷ್ಠ ರನ್ ಬಾರಿಸಿ ಪೆವಿಲಿಯನ್ ನತ್ತ ಸಾಗಿದರು.
ಅಂತಿಮ ಹಂತದಲ್ಲಿ ಬಂದ ಕ್ಯಾಪ್ಟನ್ ರಶೀದ್ ಖಾನ್ 19 ರನ್ ಬಾರಿಸಿ ನೂರಾರ ಗಡಿದಾಟಿಸಿದರು.
ಬಾಂಗ್ಲಾದ ಪರವಾಗಿ ರಿಶಾದ್ ಹುಸೇನ್ 3 ಪ್ರಮುಖ ವಿಕೆಟ್ ಗಳನ್ನು ಪಡೆದರು. ಮುಸ್ತಫಿಜುರ್, ತಸ್ಕಿನ್ ಅಹ್ಮದ್ ತಲಾ 1 ವಿಕೆಟ್ ಪಡೆದರು.
20 ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ ಗಳ ಕನಿಷ್ಠ ಗುರಿಯನ್ನು ಅಘ್ಘಾನ್ ಬಾಂಗ್ಲಾಕ್ಕೆ ನೀಡಿತು.
12.1 ಓವರ್ ಯೊಳಗೆ ಪಂದ್ಯವನ್ನು ಗೆದ್ದರೆ ಬಾಂಗ್ಲಾ ಕೂಡ ಸೆಮಿಪೈನಲ್ ಗೆ ಹೋಗುವ ಅವಕಾಶವಿತ್ತು. ಈ ಕಾರಣದಿಂದ ಆರಂಭದಲ್ಲೇ ಬಿರುಸಿದ ಬ್ಯಾಟಿಂಗ್ ಮಾಡಲು ಬಾಂಗ್ಲಾ ಆಟಗಾರರು ಮುಂದಾದರು.
ಆರಂಭಿಕ ಆಟಗಾರ ಲಿಟನ್ ದಾಸ್ 54 ರನ್ ಗಳಿಸಿ ಔಟಾಗದೆ ತಂಡವನ್ನು ಗೆಲುವಿನತ್ತ ಸಾಗಿಸಲು ಪ್ರಯತ್ನಿಸಿದರು. ಆದರೆ ಉಳಿದ ಆಟಗಾರರು ಸಾಲಾಗಿ ವಿಕೆಟ್ ಒಪ್ಪಿಸುತ್ತಾ ಹೋದರು. ಬಾಂಗ್ಲಾದ ಭರವಸೆ ಆಟಗಾರರಾದ ಶಾಕಿಬ್ ಅಲ್ ಹಸನ್, ತಂಝೀದ್ ಹಸನ್, ನಜ್ಮುಲ್ ಹೊಸೈನ್ ಶಾಂತೋ, ಸೌಮ್ಯ ಸರ್ಕಾರ್, ಮಹಮ್ಮದುಲ್ಲಾ ಎರಡಂಕಿ ರನ್ ಗಳಿಸಲೂ ಕೂಡ ಪರದಾಡುವ ಸ್ಥಿತಿ ಕಂಡುಬಂತು.
ಕನಿಷ್ಠ ಮೊತ್ತದ ಪಂದ್ಯದಲ್ಲಿ ಅಘ್ಘಾನ್ ಬ್ಯಾಟರ್ ಗಳನ್ನು ಕಟ್ಟಿಹಾಕಿ ಪಂದ್ಯದ ಮೇಲೆ ಗರಿಷ್ಠ ಒತ್ತಡವನ್ನು ಹಾಕಿದರು. ಒಂದು ಹಂತದಲ್ಲಿ ಸುಲಭವಾಗಿ ಪಂದ್ಯವನ್ನು ಗೆಲುವ ಸಾಧ್ಯತೆಯಿದ್ದ ಪಂದ್ಯದಲ್ಲಿ ಅಘ್ಘಾನ್ ಬೌಲರ್ ಗಳು ಮೈಲುಗೈ ಸಾಧಿಸಿದರು.
ಮಳೆಯ ಕಾರಣದಿಂದ ಪಂದ್ಯವನ್ನು 19 ಓವರ್ ಗೆ ಇಳಿಸಲಾಗಿತ್ತು. 114 ರ ಗುರಿಯನ್ನು ನೀಡಲಾಗಿತ್ತು.
ನವೀನ್ ಉಲ್ ಹಕ್ ಹಾಗೂ ನಾಯಕ ರಶೀದ್ ಖಾನ್ ಅವರ ಬೌಲಿಂಗ್ ಬಾಂಗ್ಲಾದ ಬ್ಯಾಟರ್ ಗಳು ತತ್ತರಿಸಿದರು. ನವೀನ್ ಹಾಗೂ ರಶೀದ್ ತಲಾ 4 ವಿಕೆಟ್ ಗಳನ್ನು ಪಡೆದರು.
ಅಘ್ಘಾನ್ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶವನ್ನು ಪಡೆದಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿದೆ.
ಮೊದಲ ಸೆಮಿಫೈನಲ್ ಜೂ.26 ರಂದು ದಕ್ಷಿಣ ಆಫ್ರಿಕಾ – ಅಫ್ಘಾನಿಸ್ತಾನ ನಡುವೆ ನಡೆಯಲಿದೆ. ಎರಡನೇ ಸೆಮಿಫೈನಲ್ ಜೂ.27 ರಂದು ಭಾರತ – ಇಂಗ್ಲೆಂಡ್ ನಡುವೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.