ಮಂಗಳೂರು: ಮತ್ತೆ “ಲೇಡಿಸ್‌ ಬಸ್‌’ಗೆ ಮಹಿಳೆಯರ ಬೇಡಿಕೆ

ಬಸ್‌ ಸೌಲಭ್ಯ ಕಲ್ಪಿಸಿದರೆ ಹೆಚ್ಚಿನವರಿಗೆ ಇದರಿಂದ ಅನುಕೂಲ ಆಗಬಹುದು

Team Udayavani, Jun 25, 2024, 2:32 PM IST

ಮಂಗಳೂರು: ಮತ್ತೆ “ಲೇಡಿಸ್‌ ಬಸ್‌’ಗೆ ಮಹಿಳೆಯರ ಬೇಡಿಕೆ

ಮಹಾನಗರ: ನಗರದ ಸಿಟಿ ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ರಶ್‌ ಹೆಚ್ಚಾಗುತ್ತಿದ್ದು, ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಮತ್ತು
ನಗರದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮಹಿಳೆಯರಿಗೆಂದೇ “ಮಹಿಳಾ ಬಸ್‌’ ಆರಂಭಿಸಬೇಕು ಎಂಬ
ಒತ್ತಾಯ ಕೇಳಿಬರತೊಡಗಿದೆ.

ಸುಮಾರು ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ “ಮಹಿಳಾ ಬಸ್‌’ ಬಳಿಕ ಸ್ಥಗಿತಗೊಂಡಿತ್ತು. ಜಿಲ್ಲೆಗೆ ಸೀಮಿತವಾಗಿ ಕೆಲವೊಂದು ರೂಟ್‌ ಗಳಲ್ಲಿ ಆರಂಭಿಸಬೇಕು, ಇದರಿಂದಾಗಿ ಮಹಿಳಾ ಪ್ರಯಾಣಿಕರಿಗೆ, ಅದರಲ್ಲೂ ಬೆಳಗ್ಗೆ ವೇಳೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರಿಗೆ ಬಹು ಅನುಕೂಲವಾಗಬಹುದು ಎಂಬ ಅಭಿಪ್ರಾಯವಿದೆ. ಶಕ್ತಿ ಯೋಜನೆಯ ಮೂಲಕ ರಾಜ್ಯ ಸರಕಾರದಿಂದ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಘೋಷಣೆ ಮಾಡಲಾಗಿದ್ದು, ಮಹಿಳೆಯರಿಗೆಂದೇ ಬಸ್‌ ಸೌಲಭ್ಯ ಕಲ್ಪಿಸಿದರೆ ಹೆಚ್ಚಿನವರಿಗೆ ಇದರಿಂದ ಅನುಕೂಲ ಆಗಬಹುದು.

ಮಂಗಳೂರು ನಗರ ಸೀಮಿತವಾಗಿ ಸದ್ಯ ಬೆರಳೆಣಿಕೆಯಷ್ಟು ಮಾತ್ರ ನರ್ಮ್ ಸರಕಾರಿ ಬಸ್‌ ಇದೆ. ಉಳಿದಂತೆ ವಿವಿಧ ರೂಟ್‌ಗಳಲ್ಲಿ ಸಿಟಿ ಬಸ್‌ಗಳೇ ತೆರಳುತ್ತದೆ. ಇದರಿಂದಾಗಿ ಇಲ್ಲಿನ ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆಯೂ ಹೆಚ್ಚಾಗುತ್ತಿದೆ.

ಸುದಿನದ ಜತೆ ಮಾತನಾಡಿದ ಕಾಲೇಜು ವಿದ್ಯಾರ್ಥಿನಿ ಅಮಿತಾ ಅವರು, “ನಾನು ಬೆಳಗ್ಗೆ ಕುಲಶೇಖರ ಕಡೆಯಿಂದ ಕಾಲೇಜಿಗೆ
ತೆರಳುತ್ತೇನೆ. ಬಸ್‌ನಲ್ಲಿ ಪ್ರತೀ ದಿನ ರಶ್‌ ಇದ್ದು, ಕಷ್ಟಪಟ್ಟು ಪ್ರಯಾಣಿಸಬೇಕಾದ ಅನಿವಾರ್ಯವಿದೆ. ಬೆಳಗ್ಗೆ, ಸಂಜೆ ವೇಳೆ
ಶಾಲಾ-ಕಾಲೇಜು, ಕೆಲಸಕ್ಕೆಂದು ತೆರಳುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆಂದೇ ಮಹಿಳಾ ಬಸ್‌ ಆರಂಭ ಮಾಡಬೇಕು ಎಂಬುವುದು ನಮ್ಮ ಒತ್ತಾಯ’ ಎಂದು ಹೇಳಿದರು.

15 ವರ್ಷಗಳ ಹಿಂದಿತ್ತು ” ಮಹಿಳಾ ಸಿಟಿ ಬಸ್‌’
ಮಂಗಳೂರಿನಲ್ಲಿ ಸುಮಾರು 15 ವರ್ಷಗಳ ಹಿಂದೆ ಮಹಿಳಾ ವಿಶೇಷ ಸಿಟಿ ಬಸ್‌ ಸೇವೆ ಇತ್ತು. ಆಗಿನ ರಾಜ್ಯಪಾಲರಾಗಿದ್ದ ರಮಾದೇವಿ ಅವರು ನೂತನ ಬಸ್ಸಿಗೆ ಚಾಲನೆ ನೀಡಿದ್ದರು. ಬಳಿಕ 27 ನಂಬರ್‌ನ ಸ್ಟೇಟ್‌ಬ್ಯಾಂಕ್‌ -ಮಂಗಳಾದೇವಿ, 44 ನಂಬರ್‌ನ ಉಳ್ಳಾಲ-ಸ್ಟೇಟ್‌ಬ್ಯಾಂಕ್‌ ಮತ್ತು 21 ನಂಬರ್‌ನ ನೀರುಮಾರ್ಗಕ್ಕೆ ಮಹಿಳಾ ಬಸ್‌ ಸಂಚಾರ ಇತ್ತು. ದಿನಕಳೆದಂತೆ ಬಸ್‌ ಗೆ ಬೇಡಿಕೆ ಕಡಿಮೆಯಾದ ಹಿನ್ನಲೆಯಲ್ಲಿ ಒಂದೇ ಬಸ್‌ನಲ್ಲಿ ಎರಡು ಭಾಗ ಮಾಡಿ ಮಹಿಳೆಯರು ಮತ್ತು ಪುರುಷರ ವಿಭಾಗ ಮಾಡಲಾಗಿತ್ತು. ಆದರೂ, ಉತ್ತಮ ಜನಸ್ಪಂದನೆ ದೊರಕದ ಹಿನ್ನಲೆಯಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಕಾಸರಗೋಡು ಮಾರ್ಗದಲ್ಲೂ ಇತ್ತು
ಮಂಗಳೂರು- ಕಾಸರಗೋಡು ಮಾರ್ಗದಲ್ಲಿ ಹತ್ತು ವರ್ಷಗಳ ಹಿಂದೆ ಮಹಿಳಾ ಬಸ್‌ ಕಾರ್ಯಾಚರಣೆ ನಡೆಸುತ್ತಿತ್ತು. ಕೆಲವೇ ವರ್ಷಗಳಲ್ಲಿ ಸ್ಥಗಿತಗೊಂಡ ಬಸ್‌ ಸೇವೆ ಮರು ಆರಂಭಗೊಳ್ಳಲಿಲ್ಲ. ಈ ಬಸ್‌ ಎರಡು ಟ್ರಿಪ್‌ ಇತ್ತು. ಬೆಳಗ್ಗೆ 8 ಗಂಟೆಗೆ ಕಾಸರಗೋಡಿನಿಂದ ಹೊರಟು 9.40ಕ್ಕೆ ಮಂಗಳೂರು ತಲುಪುತ್ತಿತ್ತು. ಇನ್ನು ಸಂಜೆ 6.05ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 7.30ಕ್ಕೆ ಕಾಸರಗೋಡು ತಲುಪುತ್ತಿತ್ತು.

ಬಸ್‌ ಸಂಚಾರ ಆರಂಭಕ್ಕೆ ಮನವಿ
ಮಂಗಳೂರಿನಿಂದ ಕಾಸರಗೋಡಿಗೆ ಹಿಂದೆ ಮಹಿಳಾ ಬಸ್‌ ಸಂಚರಿಸುತ್ತಿತ್ತು. ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದ ಕಾರಣ ರದ್ದುಗೊಂಡಿತ್ತು. ಸದ್ಯ ಬಸ್‌ ಸಂಚಾರ ಆರಂಭಕ್ಕೆ ಪತ್ರ ಮೂಲಕ ಮನವಿ ಬಂದರೆ ಆ ಕುರಿತು ಕೇಂದ್ರ ಕಚೇರಿಗೆ ಮಾಹಿತಿ ತಿಳಿಸಲಾಗುವುದು.
– ರಾಜೇಶ್‌ ಶೆಟ್ಟಿ,
ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಂಗಳೂರು

ಸ್ಪಂದನೆ ಕಡಿಮೆ
ನಗರದಲ್ಲಿ ಈ ಹಿಂದೆ ಮಹಿಳಾ ಸಿಟಿ ಬಸ್‌ ಓಡುತ್ತಿತ್ತು. ರಾಜ್ಯಪಾಲರಾಗಿದ್ದ ರಮಾದೇವಿ ಅವರು ಟೌನ್‌ಹಾಲ್‌ನಲ್ಲಿ ಬಸ್ಸಿಗೆ ಚಾಲನೆ ನೀಡಿದ್ದರು. ಬಳಿಕದ ದಿನಗಳಲ್ಲಿ ಪ್ರಯಾಣಿಕರಿಂದ ಸ್ಪಂದನೆ ಕಡಿಮೆಯಾಯಿತು. ಇದರಿಂದಾಗಿ ಅರ್ಧದಲ್ಲೇ ಬಸ್‌ ಸಂಚಾರ ನಿಲ್ಲಿಸಲಾಗಿತ್ತು.
* ಜಯರಾಮ ಶೇಖರ, ಬಸ್‌ ಮಾಲಕ

*ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

1-lo

Police; ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯತೀಶ್ ಎನ್.

1-anurag

Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್

1-qe

Hathras stampede; ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಯಾರು?

1-a-baaba

Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 116ಕ್ಕೆ

Barbados

Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?

Court-Symbol

Dakshina Kannada: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ನಿವೃತ್ತ ಕಮಾಂಡೆಂಟ್‌ ದೋಷಮುಕ್ತ

Agriculture-Tracator

Agriculture: ಭತ್ತದ ಕೃಷಿಗೆ ಯಂತ್ರವೂ ಸಿಗುತ್ತಿಲ್ಲ, ಕಾರ್ಮಿಕರೂ ಬರುತ್ತಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court-Symbol

Dakshina Kannada: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ನಿವೃತ್ತ ಕಮಾಂಡೆಂಟ್‌ ದೋಷಮುಕ್ತ

Court-Symbol

Mangaluru: ಪತಿಯ ಹತ್ಯೆ ಪ್ರಕರಣ; ಮಹಿಳೆ ಸಹಿತ ಐವರಿಗೆ ಜೀವಾವಧಿ ಶಿಕ್ಷೆ

Mangaluru ಸಮವಸ್ತ್ರದಲ್ಲೇ ಹಾರೆ ಹಿಡಿದು ಗುಂಡಿ ಮುಚ್ಚಿದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌

Mangaluru ಸಮವಸ್ತ್ರದಲ್ಲೇ ಹಾರೆ ಹಿಡಿದು ಗುಂಡಿ ಮುಚ್ಚಿದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌

Mangaluru ಅಡಿಕೆಯ ಮೇಲಿನ ಜಿಎಸ್‌ಟಿ ಇಳಿಸಲು ಕ್ಯಾಂಪ್ಕೊ ಆಗ್ರಹ

Mangaluru ಅಡಿಕೆಯ ಮೇಲಿನ ಜಿಎಸ್‌ಟಿ ಇಳಿಸಲು ಕ್ಯಾಂಪ್ಕೊ ಆಗ್ರಹ

Fraud Case ಬಿಟ್‌ ಕಾಯಿನ್‌ ಹೂಡಿಕೆ ಮಾಡಿಸಿ ಲಕ್ಷಾಂತರ ವಂಚನೆ; ದೂರು

Fraud Case ಬಿಟ್‌ ಕಾಯಿನ್‌ ಹೂಡಿಕೆ ಮಾಡಿಸಿ ಲಕ್ಷಾಂತರ ವಂಚನೆ; ದೂರು

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

3

Supplier: ಬೇಗ ಊಟ ತನ್ನಿ ಎಂದಿದ್ದಕ್ಕೆ ಆಶ್ಲೀಲ ಸನ್ನೆ ತೋರಿದ ಸಪ್ಲ್ಯೈಯರ್; ವೈರಲ್‌

ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್‌ ಪತ್ತೆಗಾಗಿ 250 ಸಿಸಿ ಕ್ಯಾಮೆರಾ ಶೋಧಿಸಿದ್ದ ಪೊಲೀಸರು

ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್‌ ಪತ್ತೆಗಾಗಿ 250 ಸಿಸಿ ಕ್ಯಾಮೆರಾ ಶೋಧಿಸಿದ್ದ ಪೊಲೀಸರು

New Criminal Law: 3 ಹೊಸ ಕ್ರಿಮಿನಲ್‌ ಕಾಯ್ದೆಯಡಿ ನಗರದಲ್ಲಿ ಮೊದಲ ದಿನ 39 ಕೇಸ್‌

New Criminal Law: 3 ಹೊಸ ಕ್ರಿಮಿನಲ್‌ ಕಾಯ್ದೆಯಡಿ ನಗರದಲ್ಲಿ ಮೊದಲ ದಿನ 39 ಕೇಸ್‌

1-asdsada

Yellapur; ಪಣಸಗುಳಿ ಸೇತುವೆ ಮುಳುಗಡೆ: ಸಂಚಾರ ಸ್ಥಗಿತ

1-eee

Mandya; ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.