Kunigal: ಗಮನ ಬೇರೆಡೆಗೆ ಸೆಳೆದು 3.30 ಲಕ್ಷ ರೂ. ಹಣ ದೋಚಿ ಪರಾರಿಯಾದ ದುಷ್ಕರ್ಮಿಗಳು


Team Udayavani, Jun 25, 2024, 5:53 PM IST

5-Kunigal

ಕುಣಿಗಲ್: ಬಾರ್ ಕ್ಯಾಶಿಯರ್‌ನ ಗಮನ ಬೇರೆಡೆಗೆ ಸೆಳೆದು ಲಕ್ಷಾಂತ ರೂ. ನಗದು ಹಣ ಕಳವು ಮಾಡಿ ಹೋಗಿರುವ ಘಟನೆ ಜೂ.25ರ ಮಂಗಳವಾರ ಹಾಡುಹಗಲೇ ಪಟ್ಟಣ ಕೆಆರ್‌ಎಸ್ ಅಗ್ರಹಾರದ ಎಸ್‌ಬಿಐ ಬ್ಯಾಂಕ್ ಮುಂಭಾಗ ನಡೆದಿದೆ.

ಪಟ್ಟಣದ ಜೆ.ಕೆ.ಬಾರ್ ಸಹಾಯಕ ಕ್ಯಾಶಿಯರ್ ವೆಂಕಟೇಶ್ ದುಷ್ಕರ್ಮಿಗಳ ಮೋಸಕ್ಕೆ ಒಳಗಾದ ವ್ಯಕ್ತಿಯಾಗಿದ್ದಾನೆ.

ಘಟನೆ ವಿವರ: ಮಂಗಳವಾರ ಬಾರ್ ಸಹಾಯಕ ಕ್ಯಾಶಿಯರ್ ವೆಂಕಟೇಶ್ ಎಸ್‌ಬಿಐ ಬ್ಯಾಂಕ್‌ಗೆ 5 ಲಕ್ಷ ರೂ. ಹಣ ಕಟ್ಟಲೆಂದು ಹಣವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟು ಬೈಕ್‌ನಲ್ಲಿ ಇಲ್ಲಿನ ಕೆ.ಆರ್.ಎಸ್ ಅಗ್ರಹಾರದ ಎಸ್‌ಬಿಐ ಬ್ಯಾಂಕ್‌ಗೆ ಬಂದರು. ಬೈಕ್ ಬ್ಯಾಂಕ್ ಮುಂಭಾಗ ನಿಲ್ಲಿಸಿ 1.70 ಲಕ್ಷ ರೂ.ಗಳನ್ನು ಬ್ಯಾಂಕ್‌ನಲ್ಲಿ ಕಟ್ಟಿ, ಉಳಿದ 3.30 ಲಕ್ಷ ರೂ. ಗಳನ್ನು ಪಟ್ಟಣದ ಪುರಸಭೆ ಬಳಿಯಿರುವ ಎಸ್‌ಬಿಐ ಬ್ಯಾಂಕ್‌ಗೆ ಕಟ್ಟಲೆಂದು, ಹಣದ ಕವರ್ ಹಿಡಿದುಕೊಂಡು ಬೈಕ್ ಹತ್ತಿ ಕುಳಿತುಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ2 ಬೈಕ್‌ನಲ್ಲಿ ಬಂದ ನಾಲ್ವರು ಅವರ ಜೇಬಿನಿಂದ 50 ರೂ.ಗಳ 10 ನೋಟುಗಳನ್ನು ವೆಂಕಟೇಶ್ ಕುಳಿತಿದ್ದ ಬೈಕ್ ಬಳಿ ಎಸೆದಿದ್ದಾರೆ.

ಬಳಿಕ ನಿಮ್ಮ ಹಣ ಬಿದ್ದಿದೆ ಎಂದು ವೆಂಕಟೇಶ್‌ಗೆ ಹೇಳಿ, ವೆಂಕಟೇಶ್ ಗಮನವನ್ನು ಬೇರೆಡೆಗೆ ಸೆಳೆದರು. ಆ ಸಂದರ್ಭದಲ್ಲಿ ವೆಂಕಟೇಶ್ ಬೈಕ್ ಬಳಿ ಬಿದ್ದಿದ ಹಣ ಹೆಕ್ಕಿಕೊಳ್ಳಲು ಅವರ ಬಳಿಯಿದ್ದ 3.30 ಲಕ್ಷ ರೂ.ಗಳ ಹಣದ ಕವರನ್ನು ಬೈಕ್ ಮೇಲೆ ಇಟ್ಟು ನೆಲಕ್ಕೆ ಬಗ್ಗಿ ಎತ್ತುಕೊಳ್ಳಲು ಮುಂದಾಗಿದ್ದರು.

ಈ ವೇಳೆ ಪ್ಲಾಸ್ಟಿಕ್ ಕವರ್‌ನಲ್ಲಿದ್ದ ಹಣವನ್ನು ಕಳ್ಳರು ಕ್ಷಣಾರ್ಥದಲ್ಲಿ ತೆಗೆದುಕೊಂಡು ಪರಾರಿಯಾಗಿದ್ದಾರೆ.  ಬೈಕ್ ಮೇಲೆ ಇಟ್ಟಿದ್ದ ಹಣದ ಕವರ್ ಇಲ್ಲದನ್ನು ನೋಡಿ ಗಾಬರಿಗೊಂಡ ವೆಂಕಟೇಶ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸಿಪಿಐ ನವೀನ್‌ಗೌಡ, ಪಿಎಸ್‌ಐ ಕೃಷ್ಣಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಟಾಪ್ ನ್ಯೂಸ್

3-holiday

Heavy Rain: ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

2-Vijayapura

Vijayapura: ಕೃಷ್ಣಾ ನದಿ ತೆಪ್ಪ ದುರಂತ: ಮತ್ತೊಬ್ಬನ ಶವ ಪತ್ತೆ

Dinesh-gundurao

Private Hospital: ಡೆಂಗ್ಯೂ ಪರೀಕ್ಷೆಗೆ ಏಕರೂಪ ದರ

CM-Siddaramaiah

Valmiki Nigama ಅಕ್ರಮದ ತನಿಖೆ ನಡೆಯುತ್ತಿದೆ: ಸಿಎಂ ಸಿದ್ದರಾಮಯ್ಯ

CM-Meeting

Bumper Gift: ಬಡವರ 1.30 ಲಕ್ಷ ಮನೆಗೆ ರಾಜ್ಯದಿಂದ ತಲಾ 5 ಲಕ್ಷ ರೂಪಾಯಿ

1-24-thursday

Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಆರೋಗ್ಯದ ಕಡೆ ಗಮನವಿರಲಿ

Manipal ಆನ್‌ಲೈನ್‌ ವಂಚಕರ ಬಲೆಗೆ ಬಿದ್ದ ಪಿಎಚ್‌.ಡಿ. ವಿದ್ಯಾರ್ಥಿನಿ!

Manipal ಆನ್‌ಲೈನ್‌ ವಂಚಕರ ಬಲೆಗೆ ಬಿದ್ದ ಪಿಎಚ್‌.ಡಿ. ವಿದ್ಯಾರ್ಥಿನಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

koratagere

Koratagere: ಎರಡು ವಿದ್ಯುತ್‌ ಉಪಸ್ಥಾವರ ಘಟಕಗಳ ಉದ್ಘಾಟನೆ

Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ

Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ

7-kunigal

Kunigal: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌; ಮನೆಯ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿ

ನಾನು ಸೋತಿದ್ದೇನೆ, ಸತ್ತಿಲ್ಲ: ಡಿ.ಕೆ. ಸುರೇಶ್‌ ಗುಡುಗು

Kunigal ನಾನು ಸೋತಿದ್ದೇನೆ, ಸತ್ತಿಲ್ಲ: ಡಿ.ಕೆ. ಸುರೇಶ್‌ ಗುಡುಗು

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

3-holiday

Heavy Rain: ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

2-Vijayapura

Vijayapura: ಕೃಷ್ಣಾ ನದಿ ತೆಪ್ಪ ದುರಂತ: ಮತ್ತೊಬ್ಬನ ಶವ ಪತ್ತೆ

Dinesh-gundurao

Private Hospital: ಡೆಂಗ್ಯೂ ಪರೀಕ್ಷೆಗೆ ಏಕರೂಪ ದರ

CM-Siddaramaiah

Valmiki Nigama ಅಕ್ರಮದ ತನಿಖೆ ನಡೆಯುತ್ತಿದೆ: ಸಿಎಂ ಸಿದ್ದರಾಮಯ್ಯ

CM-Meeting

Bumper Gift: ಬಡವರ 1.30 ಲಕ್ಷ ಮನೆಗೆ ರಾಜ್ಯದಿಂದ ತಲಾ 5 ಲಕ್ಷ ರೂಪಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.