78,000ದ ಗಡಿ ದಾಟಿ ಸೆನ್ಸೆಕ್ಸ್ ಐತಿಹಾಸಿಕ ದಾಖಲೆ; ಬಾಂಬೆ ಷೇರುಪೇಟೆ ಹೂಡಿಕೆದಾರರಿಗೆ ಖುಷ್
Team Udayavani, Jun 25, 2024, 11:36 PM IST
ಮುಂಬಯಿ: ಬಾಂಬೆ ಷೇರುಪೇಟೆಯಲ್ಲಿ ಮತ್ತೆ ಹೊಸ ದಾಖಲೆ ಸೃಷ್ಟಿಯಾಗಿದೆ. ಇದೇ ಮೊದಲ ಬಾರಿಗೆ ಬಿಎಸ್‌ಇ ಸೆನ್ಸೆಕ್ಸ್ 78,000ದ ಗಡುವು ದಾಟುವ ಮೂಲಕ ಇತಿಹಾಸ ಬರೆದಿದೆ. ನಿಫ್ಟಿ ಮೊದಲ ಬಾರಿಗೆ ಹೊಸ ದಾಖಲೆಬರೆದು ವಹಿವಾಟು ಅಂತ್ಯಗೊಳಿಸಿದೆ.
ಬ್ಲೂಚಿಪ್ ಬ್ಯಾಂಕ್ ಷೇರುಗಳು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಖರೀದಿಯಲ್ಲಿ ಹೂಡಿಕೆದಾರರು ಭಾರೀ ಆಸಕ್ತಿ ವಹಿಸಿದ ಪರಿಣಾಮ, ಮಂಗಳವಾರ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 712.44 ಅಂಕ ಏರಿಕೆ ಕಂಡು, ದಿನಾಂತ್ಯಕ್ಕೆ 78,053ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಸೆನ್ಸೆಕ್ಸ್ 78 ಸಾವಿರದ ಗಡಿ ದಾಟಿದೆ. ಜೂ.10ರಂದು ಸೆನ್ಸೆಕ್ಸ್ 77,000ದ ಗಡಿ ದಾಟಿ ದಾಖಲೆ ಬರೆದಿತ್ತು. ಇನ್ನು, ಮಂಗಳವಾರ ನಿಫ್ಟಿ 183 ಅಂಕ ಏರಿಕೆ ಕಂಡು, ಸಾರ್ವಕಾಲಿಕ 23,721ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಮಾರ್ಚ್‌ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆ ಮಿಗತೆ 5.7 ಶತಕೋಟಿ ಡಾಲರ್ ಆಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದ ಬೆನ್ನಲ್ಲೇ ಷೇರುಪೇಟೆ ವಹಿವಾಟು ಚೇತರಿಸಿಕೊಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.