Ullal :ಕಂಪೌಂಡ್ ಕುಸಿದು ಮನೆ ಮೇಲೆ ಬಿದ್ದು ಮಕ್ಕಳು ಸಹಿತ ನಾಲ್ವರು ಬಲಿ


Team Udayavani, Jun 26, 2024, 8:11 AM IST

1-wqweqwewq

ಮಂಗಳೂರು/ಉಳ್ಳಾಲ: ಪಕ್ಕದ ಮನೆಯ ತಡೆಗೋಡೆ ಇನ್ನೊಂದು ಮನೆಯ ಮೇಲೆ ಕುಸಿದು ನಾಲ್ವರು ಮೃತಪಟ್ಟ ಘಟನೆ ಉಳ್ಳಾಲ ತಾಲೂಕು ಮುನ್ನೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುತ್ತಾರು ಮದನಿನಗರದಲ್ಲಿ ಬುಧವಾರ ಸಂಭವಿಸಿದೆ.

ಮಹಮ್ಮದ್‌ ಯಾಸೀರ್‌ (45), ಪತ್ನಿ ಮರಿಯಮ್ಮ (40), ಪುತ್ರಿಯರಾದ ಹಾಝಾÅ ರಿಫಾನ (17) ಮತ್ತು ಆಯಿಶಾ ರಿಹಾನ (11) ಮೃತಪಟ್ಟವರು. ಮನೆಯೊಳಗೆ ನಾಲ್ವರು ಮಾತ್ರ ಇದ್ದರು. ಎಲ್ಲರೂ ಮಲಗಿದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ. ಮುಂಜಾವ 6 ಗಂಟೆಯ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ.

ಯಾಸೀರ್‌ ಕೂಲಿ ಕಾರ್ಮಿಕರಾಗಿದ್ದರು. ಮರಿಯಮ್ಮ ಗೃಹಿಣಿ. ರಿಫಾನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಆಯಿಶಾ 8ನೇ ತರಗತಿಯಲ್ಲಿ ಓದುತ್ತಿದ್ದರು. ಇನ್ನೋರ್ವ ಪುತ್ರಿಗೆ ವಿವಾಹವಾಗಿದ್ದು ಆಕೆ ಪತಿಯ ಮನೆಯಲ್ಲಿದ್ದರು.

ಘಟನೆ ಹೇಗಾಯಿತು?
ದುರ್ಘ‌ಟನೆ ಸಂಭವಿಸಿದ ಯಾಸೀರ್‌ ಅವರ ಮನೆ ಇಳಿಜಾರು ಪ್ರದೇಶದಲ್ಲಿದೆ. ಇದೇ ರೀತಿ ಇಲ್ಲಿ ಹಲವಾರು ಮನೆಗಳಿವೆ. ಯಾಸೀರ್‌ ಅವರ ಮನೆಯ ಅಕ್ಕಪಕ್ಕದಲ್ಲಿಯೂ ಮನೆಗಳಿವೆ.

ಮೇಲ್ಭಾಗದಲ್ಲಿದ್ದ ಮನೆಯೊಂದರ ಮುರಕಲ್ಲಿನ 15 ಅಡಿಗೂ ಹೆಚ್ಚು ಎತ್ತರದ ತಡೆಗೋಡೆ ಕೆಳಭಾಗದಲ್ಲಿರುವ ಯಾಸೀರ್‌ ಅವರ ಮನೆೆಗೆ ಬಿದ್ದಿದ್ದು, ಮನೆಯ ಗೋಡೆ ಕುಸಿದಿದೆ. ತಡೆಗೋಡೆ ಮತ್ತು ಮನೆ ಗೋಡೆಯ ಕಲ್ಲುಗಳು ಒಳಗೆ ಮಲಗಿದ್ದವರ ಮೇಲೆ ಬಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಡೆಗೋಡೆಯ ಬುಡದಲ್ಲಿಯೇ 2 ಅಡಿಕೆಮರಗಳಿದ್ದವು. ಕಳೆದೆರಡು ದಿನಗಳಿಂದ ಗಾಳಿ ಸಹಿತ ಮಳೆ ನಿರಂತರವಾಗಿತ್ತು. ಅಡಿಕೆ ಮರಗಳು ಕಾಂಪೌಂಡ್‌ ಗೋಡೆಗೆ ಸ್ಪರ್ಶಿಸುತ್ತಿದ್ದವು. ಅವುಗಳ ಭಾರಕ್ಕೆ ಹಾಗೂ ಕಾಂಪೌಂಡ್‌ ವಾಲ್‌ನಡಿ ನೀರು ನುಗ್ಗಿ ತಡೆಗೋಡೆ ಕುಸಿದಿದೆ. ಮಳೆ ನೀರು ಹರಿಯಲು ವ್ಯವಸ್ಥೆ ಇಲ್ಲದಿರುವುದು ಕೂಡ ಘಟನೆಗೆ ಮುಖ್ಯ ಕಾರಣವಾಗಿದೆ.

ರಕ್ಷಿಸಲು ಅವಕಾಶವೇ ಇರಲಿಲ್ಲ
ಘಟನೆ ಮುಂಜಾವ 6 ಗಂಟೆಯ ಸುಮಾರಿಗೆ ನಮ್ಮ ಗಮನಕ್ಕೆ ಬಂದಿದೆ. ಅಕ್ಕಪಕ್ಕದ ಮನೆಯ ನಾಲ್ಕೈದು ಮಂದಿ ಹೋಗಿ ನೋಡಿದಾಗ ಮನೆಯ ಮೇಲೆ ಕಲ್ಲು ಮಣ್ಣು ಬಿದ್ದು ಮನೆ ಕುಸಿದಿತ್ತು. ಬಾಗಿಲು ಚಿಲಕ ಹಾಕಿತ್ತು. ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಕಲ್ಲು, ಮಣ್ಣಿನ ಅಡಿಯಲ್ಲಿ ಮೂವರ ಮೃತದೇಹ ಇತ್ತು. ಸುಮಾರು ಅರ್ಧ ತಾಸಿನ ಬಳಿಕ ಮತ್ತೋರ್ವಳ ಕಾಲು ಕಂಡಿತು. ಯಾರನ್ನೂ ಬದುಕಿಸಲು ಸಾಧ್ಯವಾಗಿಲ್ಲ. ನಾವು ಕಲ್ಲು, ಮಣ್ಣು ತೆಗೆಯುವಾಗ ಅವರ ಪ್ರಾಣ ಹಾರಿಹೋಗಿತ್ತು ಎಂದು ದುರಂತ ಸಂಭವಿಸಿದ ಪಕ್ಕದ ಮನೆಯ ನಿವಾಸಿ ಅಶ್ರಫ್ ತಿಳಿಸಿದ್ದಾರೆ.

ಘಟನೆ ಆಗಿದ್ದು ಯಾವಾಗ?
ಘಟನೆ ಮುಂಜಾವ ನಡೆದಿದೆಯೇ ಅಥವಾ ತಡರಾತ್ರಿಯೇ ನಡೆದಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಘಟನೆ ಬೇಗನೇ ನಡೆದಿರಬಹುದು. ಗಾಳಿ-ಮಳೆ ಇದ್ದುದರಿಂದ ಯಾರ ಗಮನಕ್ಕೂ ಬಂದಿರಲ್ಲವೆನ್ನಲಾಗಿದೆ. ಸ್ಥಳೀಯರು ಬಂದು ನೋಡುವಾಗ ಒಂದು ಕೋಣೆಯಲ್ಲಿದ್ದ ಮೂವರು ಮೃತಪಟ್ಟಿದ್ದರು. ಮತ್ತೂಂದು ಕೋಣೆಯಲ್ಲಿದ್ದ ರಿಫಾನ ಅವರ ಕೈ ಅಲುಗಾಡುತ್ತಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವಾಗ ಪ್ರಾಣ ಹಾರಿತ್ತು ಎಂದು ತಿಳಿದುಬಂದಿದೆ.

ಮುಗಿಲು ಮುಟ್ಟಿದ ಆಕ್ರಂದನ
ರಿಹಾನ ಮತ್ತು ರಿಫಾನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರು ಓದುತ್ತಿದ್ದ ಶಾಲೆ ಮತ್ತು ಕಾಲೇಜಿಗೆ ರಜೆ ಘೋಷಿಸಲಾಯಿತು. ಯೇನಪೊಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ದುರಂತದ ಹಿನ್ನೆಲೆಯಲ್ಲಿ ಕುತ್ತಾರು, ಮದನಿನಗರ ಪರಿಸರದಲ್ಲಿ ಶೋಕದ ವಾತಾವರಣ ಕಂಡುಬಂತು. ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರು. ಈ ವೇಳೆ ಓರ್ವ ಪಕ್ಕದ ಮನೆಯ ಮಹಡಿಯಿಂದ ಬಿದ್ದು ಗಾಯಗೊಂಡರು.

 

ಗಣ್ಯರ ಭೇಟಿ
ಸ್ಥಳಕ್ಕೆ ಸ್ಪೀಕರ್‌ ಯು.ಟಿ. ಖಾದರ್‌, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿ.ಪಂ. ಸಿಇಒ ಡಾ| ಅನಂದ್‌, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ಮಂಗಳೂರು ಕ್ಷೇತ್ರ ಪ್ರಭಾರ ಅಧ್ಯಕ್ಷ ಹೇಮಂತ್‌ ಶೆಟ್ಟಿ ದೇರಳಕಟ್ಟೆ, ಮುಖಂಡ ಸಂತೋಷ್‌ ರೈ ಬೋಳಿಯಾರ್‌, ಬಂಟ್ವಾಳ ತಾ.ಪಂ. ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮೊದಲಾದವರು ಭೇಟಿ ನೀಡಿದರು. ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳದವರು, ಸ್ಥಳೀಯ ಯುವಕರು ಕಾರ್ಯಾಚರಣೆ ನಡೆಸಿದರು.

ಗರಿಷ್ಠ ಪರಿಹಾರ,
ಸಹಕಾರ: ಖಾದರ್‌
ಸರಕಾರದಿಂದ ಗರಿಷ್ಠ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ. ಮೃತರ ಕುಟುಂಬಸ್ಥರ ನೋವಿನ ಜತೆಗೆ ಇರುತ್ತೇವೆ. ಈ ಘಟನೆ ಎಲ್ಲರಿಗೂ ಎಚ್ಚರಿಕೆ. ಅಧಿಕಾರಿಗಳು, ಮನೆ ಕಟ್ಟುವವರು ಕೂಡ ಎಚ್ಚರಿಕೆ ವಹಿಸಬೇಕು. ಆರ್ಥಿಕ ಸಂಕಷ್ಟದಿಂದ ಕೆಲವರು ಅನಿವಾರ್ಯ ಸ್ಥಿತಿಯಲ್ಲಿ ಈ ರೀತಿಯಲ್ಲಿ ಮನೆಯನ್ನು ಕಟ್ಟುತ್ತಾರೆ. ಸುರಕ್ಷೆ, ನಿಯಮ ಮೀರಿ ಮನೆ ನಿರ್ಮಿಸದಂತೆ ಸ್ಥಳೀಯಾಡಳಿತಗಳು ಕೂಡ ಎಚ್ಚರಿಕೆ ವಹಿಸಬೇಕು ಎಂದು ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದ್ದಾರೆ.

ಮುಂಜಾಗ್ರತಾ ಕ್ರಮ ಆಗಲಿ: ನಳಿನ್‌
ಸರಕಾರ ಕೂಡಲೇ ಪರಿಹಾರ ನೀಡಬೇಕು. ಇಂಥ ಘಟನೆಗಳನ್ನು ತಡೆಯಬಹುದಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಉಳಿದ ಮನೆಗಳಿಗೆ ರಕ್ಷಣೆ ಒದಗಿಸಬೇಕು ಎಂದು ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ಆಗ್ರಹಿಸಿದ್ದಾರೆ.

ಸಾಮೂಹಿಕ ದಫ‌ನ
ನಾಲ್ವರ ಸಾಮೂಹಿಕ ದಫ‌ನ ಮದನಿನಗರದ ಜುಮ್ಮಾ ಮಸೀದಿಯ ಬಳಿ ನಡೆಯಿತು. ನೂರಾರು ಮಂದಿ ದುಃಖತಪ್ತರು ಮಳೆಯ ನಡುವೆಯೂ ಅಂತಿಮ ದರುಶನ ಪಡೆದರು.

2 ವರ್ಷದ ಹಿಂದೆಯೂ ಕುಸಿದಿತ್ತು!
ಇದೇ ಮನೆಯ ಮೇಲ್ಭಾಗದ ಮನೆಯ ತಡೆಗೋಡೆ ಎರಡು ವರ್ಷಗಳ ಹಿಂದೆಯೂ ಕುಸಿದು ಯಾಸೀರ್‌ ಅವರ ಮನೆಗೆ ಹಾನಿ ಆಗಿತ್ತು. ಆಗ ಮನೆಯಲ್ಲಿ ಯಾರೂ ಇರಲಿಲ್ಲ.

9 ವರ್ಷದಿಂದ ವಾಸ್ತವ್ಯ
ಇದು ಸುಮಾರು 15 ವರ್ಷ ಹಳೆಯದಾದ ಕಲ್ಲಿನ ಗೋಡೆಯ ಹೆಂಚಿನ ಮನೆ. ಇದನ್ನು ಯಾಸೀರ್‌ ಅವರು ಸುಮಾರು 9 ವರ್ಷಗಳ ಹಿಂದೆ ಖರೀದಿಸಿದ್ದರು. ಒಮ್ಮೆ ಮನೆಯ ಮೇಲೆ ತಡೆಗೋಡೆ ಕುಸಿದಿದ್ದರಿಂದ ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ, ಬಳಿಕ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರು. ಈ ಮನೆಯನ್ನು ಲೀಸ್‌ಗೆ ನೀಡಿದ್ದರು. ದೊಡ್ಡ ಮಗಳ ಮದುವೆಯ ಸಂದರ್ಭ ಮತ್ತೆ ಈ ಮನೆಗೆ ವಾಪಸಾಗಿದ್ದರು.

ಶಿಕ್ಷಕಿಯಾಗುವ ಕನಸು ಮಣ್ಣಾಯಿತು!
ಹಾಝಾ ರಿಫಾನಾ ಮಂಗಳೂರಿನ ಬದ್ರಿಯಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದರು.ಪ್ರತಿಭಾವಂತೆಯಾಗಿದ್ದು ಆಟೋಟ, ನೃತ್ಯ, ಸಂಗೀತ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುತ್ತಿದ್ದಳು. ಶಿಕ್ಷಕಿ ಆಗಬೇಕು ಎಂದು ಕನಸು ಕಟ್ಟಿಕೊಂಡಿದ್ದರು. ಅವಳ ಅಕ್ಕ ಕೂಡ ನಮ್ಮಲ್ಲೇ ಓದಿದ್ದಳು ಎಂದು ಪ್ರಾಂಶುಪಾಲೆ ಸೀಮಾ ಎ.ಕೆ. ಹೇಳಿದ್ದಾರೆ.

ಕಲಿಕೆಯಲ್ಲಿ ಮುಂದು
ಆಯಿಶಾ ರಿಹಾನ ಹಳೆಕೋಟೆ ಸೈಯದ್‌ ಮದನಿ ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ. ಪ್ರತಿಭಾವಂತೆಯಾಗಿದ್ದು, 7ನೇ ತರಗತಿಯಲ್ಲಿ ಎಲ್ಲ ವಿಷಯಗಳಲ್ಲಿ “ಎ ಪ್ಲಸ್‌’ ಅಂಕ ಪಡೆದಿದ್ದಳು. ಒಳ್ಳೆಯ ಸ್ವಭಾವದ ಹುಡುಗಿಯಾಗಿದ್ದಳು ಎನ್ನುತ್ತಾರೆ ಮುಖ್ಯ ಶಿಕ್ಷಕ ಕೆ.ಎಂ.ಕೆ. ಮಂಜನಾಡಿ.

ಶ್ರಮಜೀವಿ ಯಾಸೀರ್‌
ಯಾಸೀರ್‌ ಅವರು ಬಂದರು ಪ್ರದೇಶದಲ್ಲಿ ಆಯಿಲ್‌ಗೆ ಸಂಬಂಧಿಸಿದ ಕೂಲಿ ಕೆಲಸ ಹಾಗೂ ಸ್ಥಳೀಯವಾಗಿಯೂ ಕೂಲಿ ಕೆಲಸ ಮಾಡುತ್ತಿದ್ದರು. ಶ್ರಮಜೀವಿಯಾಗಿದ್ದರು. ಮಂಗಳವಾರ ರಾತ್ರಿವರೆಗೆ ನಮ್ಮೊಂದಿಗೆ ಲೂಡೋ ಆಡಿ ಮನೆಗೆ ವಾಪಸಾಗಿದ್ದರು ಎಂದು ಸ್ಥಳೀಯ ನಿವಾಸಿ ಅಶ#ಕ್‌ ಹೇಳಿದ್ದಾರೆ.

ವಿವಾಹ ಮಾತುಕತೆ ನಡೆದಿತ್ತು
ರಿಫಾನಾಳಿಗೂ ವಿವಾಹದ ಬಗ್ಗೆ ವಾರದ ಹಿಂದೆ ಪ್ರಸ್ತಾವ ಬಂದಿತ್ತು. ಆದರೆ ಅಂತಿಮ ತೀರ್ಮಾನ ಆಗಿರಲಿಲ್ಲ. ಮಂಗಳವಾರ ರಾತ್ರಿ ಕೂಡ ಈ ಬಗ್ಗೆ ಆಕೆಯ ಮಾವ ಮಾತನಾಡಿದ್ದರು ಎಂದು ಯಾಸೀರ್‌ ಅವರ ಆತ್ಮೀಯರು ತಿಳಿಸಿದ್ದಾರೆ.

ಅಪಾಯದಲ್ಲಿದೆ ಹಲವು ಮನೆಗಳು
ಈ ಪ್ರದೇಶದಲ್ಲಿರುವ ಜಾಫರ್‌, ಉಬೈದ್‌, ಮಹಮ್ಮದ್‌, ರೈಮಂಡ್‌ ಅವರ ಮನೆ ಸಹಿತ 30ಕ್ಕೂ ಅಧಿಕ ಮನೆಗಳು ಇದೇ ರೀತಿ ಅಪಾಯದಲ್ಲಿವೆ. ಮಳೆಗಾಲದಲ್ಲಿ ರಾತ್ರಿ ಮಲಗುವುದಕ್ಕೂ ಭಯವಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಎತ್ತರದ ಮನೆಗಳ ತಡೆಗೋಡೆಗಳು ಯಾವಾಗ ಕುಸಿಯುತ್ತವೆಯೋ ಹೇಳಲಾಗದು. ಇವುಗಳನ್ನು ಸಮರ್ಪಕ ವಾಗಿ ನಿರ್ಮಿಸಬೇಕು. ನೀರು ಹಾದು ಹೋಗಲು ವ್ಯವಸ್ಥೆ ಮಾಡಿಕೊಡ ಬೇಕು. ಇದೇ ಪರಿಸರದ ಮನೆಯ ತಡೆಗೋಡೆ ಕಳೆದ ವರ್ಷ ಕುಸಿದಿತ್ತು. ಆದರೆ ಮನೆಗೆ ಹಾನಿಯಾಗಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೇಲಿನ ಮನೆ ಖಾಲಿ
ದುರಂತ ಸಂಭವಿಸಿದ ಮನೆಯ ಮೇಲ್ಭಾಗದಲ್ಲಿರುವ ಮನೆ (ತಡೆಗೋಡೆ ಕುಸಿದಿರುವ ಮನೆ)ಯಲ್ಲಿ ಕಳೆದ 3 ತಿಂಗಳುಗಳಿಂದ ಯಾರು ಕೂಡ ವಾಸ್ತವ್ಯ ಇರಲಿಲ್ಲ. ಅವರು ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

1

Bantwal: ಕೃಷಿಕರ ತೋಟಗಳಿಗೆ ನುಗ್ಗಿದ ಜಕ್ರಿಬೆಟ್ಟು ಅಣೆಕಟ್ಟು ನೀರು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.