Sri Raghaweshwara Swamiji: 29ಕ್ಕೆ ಭಾವರಾಮಾಯಣ ರಾಮಾವತರಣ ಕೃತಿ ಬಿಡುಗಡೆ
ಮಂತ್ರಾಲಯ ಶ್ರೀ ಸುಬುಧೇಂದ್ರ ಸ್ವಾಮೀಜಿ ಸಾನ್ನಿಧ್ಯ, 108 ಮಂದಿ ಗಣ್ಯರು ಭಾಗಿ, ಶ್ರೀರಾಮಚಂದ್ರಾಪುರ ಮಠ ವಿರಚಿತ ಕೃತಿ ಬಿಡುಗಡೆ
Team Udayavani, Jun 26, 2024, 12:44 PM IST
ಬೆಂಗಳೂರು: ರಾಮಚಂದ್ರಾಪುರ ಮಠ ಶ್ರೀ ಸಂಸ್ಥಾನ ರಾಘವೇಶ್ವರ ಭಾರತೀ ಸ್ವಾಮೀಜಿ ವಿರಚಿತ “ಭಾವರಾಮಾಯಣ ರಾಮಾ ವತರಣ’ ಕೃತಿಯ ಲೋಕಾರ್ಪಣೆಯು ಜೂ.29ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಹೊಸಕೆರೆಹಳ್ಳಿಯ ಪಿಇಎಸ್ ವಿವಿ ಕ್ಯಾಂಪಸ್ ಸಭಾಂಗಣದಲ್ಲಿ ನೆರವೇರಲಿದೆ ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ತಿಳಿಸಿದರು. ಗಿರಿನಗರ ರಾಮಾಶ್ರಮದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃತಿ ಲೋಕಾ ರ್ಪಣೆ ಸಮಾರಂಭದಲ್ಲಿ ಮಂತ್ರಾಲಯ ಮಠದ ಸುಬುಧೇಂದ್ರತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್, ಪಿಇಎಸ್ ವಿವಿ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ ಉಪಸ್ಥಿತರಿರಲಿದ್ದಾರೆ.
ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 108ಕ್ಕೂ ಹೆಚ್ಚು ಗಣ್ಯರು ಏಕಕಾಲದಲ್ಲಿ ಈ ಕೃತಿ ಲೋಕಾ ರ್ಪಣೆ ಮಾಡಲಿದ್ದಾರೆ ಎಂದು ವಿವರಿಸಿದರು. ನರ್ತನಯೋಗ ಸಂಸ್ಥೆಯ ನಿರ್ದೇಶಕ ಸ್ನೇಹಾ ನಾರಾಯಣ ಮತ್ತು ಯೋಗೀಶ್ ಕುಮಾರ್ ರಿಂದ ಭರತನಾಟ್ಯ, ಶ್ರೀಗಳೊಂದಿಗೆ ಸಂವಾದ, ಮಂತ್ರಾಲಯ ಶ್ರೀಗಳ ಆಶೀರ್ವಚನ ಇರಲಿದೆ. 2 ಸಾವಿರಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳು ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.
ಸಾವಣ್ಣ ಪಬ್ಲಿಕೇಶನ್ಸ್‌ನಿಂದ ಪ್ರಕಟ:
ಈ ಕೃತಿಯನ್ನು ಪ್ರಕಟಿಸಿದ ಸಾವಣ್ಣ ಪಬ್ಲಿಕೇಶನ್ಸ್‌ನ ಜಮೀಲ್ ಸಾವಣ್ಣ ಮಾತನಾಡಿ, ಈ ಕೃತಿಯಲ್ಲಿ ಶ್ರೀ ರಾಮಚಂದ್ರಾಪುರಮಠದ ಶ್ರೀಗಳು ಸಾರಿರುವ ಮೌಲ್ಯಗಳು ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿದ್ದು, ಇಡೀ ಸಮಾಜಕ್ಕೆ ಇದರ ಲಾಭ ಸಿಗಬೇಕು ಎಂಬ ಮಹದುದ್ದೇಶದಿಂದ ಈ ಕೃತಿಯನ್ನು ನಮ್ಮ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಕೃತಿ ಲೋಕಾರ್ಪಣೆ ದಿನ ರಿಯಾಯ್ತಿ ದರದಲ್ಲಿ ಪುಸ್ತಕ ಮಾರಾಟ ಮಾಡಲಾಗುವುದು ಎಂದು ಹೇಳಿದರು.
ಲೇಖಕ ಜಗದೀಶ್ ಶರ್ಮಾ ಸಂಪ, ಶ್ರೀ ಮಠದ ಮಾಧ್ಯಮ ಸಂಯೋಜಕ ಉದಯಶಂಕರ ಭಟ್ ಮಿತ್ತೂರು, ವಿತ್ತಾಧಿಕಾರಿ ಜೆ.ಎಲ್.ಗಣೇಶ್, ರಾಮಾಶ್ರಮ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಹೆಗಡೆ ಇದ್ದರು.
ಬಿಡುಗಡೆಗೆ ಮುನ್ನ6 ಮರು ಮುದ್ರಣ
“ಭಾವರಾಮಾಯಣ ರಾಮಾವತರಣ’ ಕೃತಿ ಬಿಡುಗಡೆಗೆ ಮುನ್ನವೇ 6 ಮರು ಮುದ್ರಣಗ ಳನ್ನು ಕಂಡಿದೆ. “ಜಗನ್ನಾಯಕನ ಜಾತಕ’ ಎಂಬ ಕೃತಿಯು ಮುಂದಿನ ಸಂಪುಟದಲ್ಲಿ ಬರಲಿದ್ದು 8ಕ್ಕೂ ಹೆಚ್ಚು ಸಂಪುಟಗಳು ಹೊರಬರುವ ನಿರೀಕ್ಷೆ ಇದೆ. ಜೂ.29ರಂದು ಶ್ರೀಮಠದ 10 ಮಂಡಲಗಳಲ್ಲೂ ಈ ಕೃತಿ ಬಿಡುಗಡೆಯಾಗಲಿದೆ ಎಂದು ಮೋಹನ ಭಾಸ್ಕರ ಹೆಗಡೆ ಎಂದು ಹೇಳಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.