Udayavani Campaign: ಅಳಿಯೂರು ಕಾಲೇಜಿಗೆ ಬಸ್‌ ಬೇಕಾಗಿದೆ

Team Udayavani, Jun 26, 2024, 3:00 PM IST

Udayavani Campaign: ಅಳಿಯೂರು ಕಾಲೇಜಿಗೆ ಬಸ್‌ ಬೇಕಾಗಿದೆ

ಮೂಡುಬಿದಿರೆ: ಅಳಿಯೂರು ಮೂಡುಬಿದಿರೆ ತಾಲೂಕಿನ ಈಶಾನ್ಯ ಭಾಗದಲ್ಲಿರುವ ಗ್ರಾಮಾಂತರ ಪ್ರದೇಶ. ಇಲ್ಲಿರುವ ಸರಕಾರಿ ಹೈಸ್ಕೂಲಿನ ಮುಂದುವರಿದ ಭಾಗವಾಗಿ ಪ.ಪೂ. ಕಾಲೇಜು ಹುಟ್ಟಿಕೊಂಡದ್ದು ಹಲವು ದಶಕಗಳ ಹೋರಾಟದ ಫಲ. ಇಲ್ಲಿನ ಪ್ರಾಥಮಿಕ ಶಾಲೆಯಲ್ಲಿ 400ಕ್ಕಿಂತ ಅಧಿಕ, ಹೈಸ್ಕೂಲಲ್ಲೇ 400ಕ್ಕಿಂತ ಅಧಿಕ ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದಷ್ಟೆ ಪ್ರಾರಂಭವಾದ ಪಿಯುಸಿಗೂ ಬೇಡಿಕೆ ಇದೆ. ಈಗಾಗಲೇ 90ರ ಹತ್ತಿರ ದಾಖಲಾತಿ ಇದೆ.

ವಿಶೇಷವಾಗಿ ಹೈಸ್ಕೂಲಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮಗಳೆರಡೂ ಇರುವುದರಿಂದ ಬೇಡಿಕೆ ಪಡೆದುಕೊಂಡಿದೆ. ಆದರೆ, ಇಲ್ಲಿಗೆ ಬರುವ ಮಕ್ಕಳಿಗೆ ಸರಿಯಾದ ಬಸ್ಸು ಸೌಕರ್ಯ ಇಲ್ಲದೆ ಹಿನ್ನಡೆಯಾಗಿದೆ.

ಬೇಡಿಕೆಗಳೇನು?
*ಮೂಡುಬಿದಿರೆ ಕಡೆಯಿಂದ ಈಗಿರುವ ಬಸ್‌ಗಳ ಜತೆಗೆ ಬೆಳಗ್ಗೆ 9 ಗಂಟೆಗೊಂದು ಬಸ್ಸು ಬಿಡಬೇಕು. ಸಂಜೆ ಅಳಿಯೂರಲ್ಲಿ ಪಿಯುಸಿ 3.15ಕ್ಕೆ, ಹೈಸ್ಕೂಲು 4.15ಕ್ಕೆ ಬಿಡುವುದರಿಂದ ಒಮ್ಮೆಲೇ 500 ಮಕ್ಕಳೂ ಬಸ್ಸಿಗಾಗಿ ಧಾವಿಸುವ ಸ್ಥಿತಿ ಇದೆ. ಈ ರಶ್‌ ತಪ್ಪಿಸಲು, 3.30, 4.00 ಮತ್ತು 4.30ಕ್ಕೆ ಮೂಡುಬಿದಿರೆ ಹಾದಿಯಲ್ಲಿ ಬಸ್ಸು ಬಿಟ್ಟರೆ ಚೆನ್ನು ಎಂಬ ಅಭಿಪ್ರಾಯವಿದೆ.

*ಬೆಳುವಾಯಿ ಕಡೆಯಿಂದ ಬರುವವರು ಅಳಿಯೂರು ಮುಟ್ಟುವಾಗ 9.15 ಆಗುವ ಕಾರಣ ಪ್ರಾರ್ಥನೆ, ಎಸೆಂಬ್ಲಿಗೆ ತಡವಾಗುತ್ತದೆ. ಒಮ್ಮೊಮ್ಮೆ ಸ್ಪೆಶಲ್‌ ಕ್ಲಾಸಿಗೂ ತಡವಾಗುತ್ತದೆ.

ಇದಕ್ಕಾಗಿ, ಬೆಳುವಾಯಿಂದ 8.15ಕ್ಕೊಂದು ಬಸ್ಸು ಬಿಟ್ಟರೆ ದರೆಗುಡ್ಡೆ, ಪಣಪಿಲ ಆಗಿ ಬೇಗನೆ ಬರುವವರಿಗೆ ಅನುಕೂಲ. ಹಾಗೇನೇ,
ಸಂಜೆ ಸ್ಟ್ಯಾಂಡಿಗೆ ಬಂದು ಬೆಳುವಾಯಿ ಕಡೆಗೆ ಬಸ್ಸು ಹಿಡಿಯಲು ಮುಕ್ಕಾಲು ತಾಸು ಕಾಯುವ ಸ್ಥಿತಿ ಇದೆ ಎಂದು ಮನ್ವಿತಾ, ಸಿಂಚನಾ,ಸಾನ್ವಿ, ಸಾತ್ವಿಕಾ, ತೃಶಾ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. – ಹೊಸ್ಮಾರು ಕಡೆಗೆ ಸಾಗುವವರೂ ಮುಕ್ಕಾಲು ತಾಸು ಕಾಯುವ ಸ್ಥಿತಿ ಇದೆ. ಇದನ್ನು ನಿವಾರಿಸಲು, ಈ ಎರಡೂ ಮಾರ್ಗಗಳಲ್ಲಿ 4.30-5ರ ನಡುವೆ ಒಂದೊಂದು ಬಸ್ಸು ಇದ್ದರೆ ಅನುಕೂಲ. ಇದೆಲ್ಲವೂ ಗ್ರಾಮೀಣ. ಗುಡ್ಡಕಾಡು ಪ್ರದೇಶವಾದ ಕಾರಣ, ಮನೆ ಮುಟ್ಟುವಾಗ ತಡವಾಗುವ ಆತಂಕವೂ
ಈ ವಿದ್ಯಾರ್ಥಿಗಳನ್ನು ವಿಶೇಷವಾಗಿ ಹುಡುಗಿಯರನ್ನು ಕಾಡುತ್ತಿದೆ.

*ಧನಂಜಯ ಮೂಡುಬಿದಿರೆ

ಟಾಪ್ ನ್ಯೂಸ್

Rabakavi

Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ

Congress ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

Congress Govt ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

police crime

New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್

1-INDI-M

Stop ‘misusing’; ಸಂಸತ್ ಆವರಣದಲ್ಲಿ ವಿಪಕ್ಷ ಸಂಸದರಿಂದ ಪ್ರತಿಭಟನೆ

1-patla

Yakshagana;ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಕಲಾವಿದರಿಂದ ಅಮೆರಿಕದಲ್ಲಿ ಅಭಿಯಾನ

Defamation Case: 24 ವರ್ಷದ ಹಿಂದಿನ ಪ್ರಕರಣ- ಮೇಧಾ ಪಾಟ್ಕರ್‌ ಗೆ 5 ತಿಂಗಳ ಜೈಲುಶಿಕ್ಷೆ

Defamation Case: 24 ವರ್ಷದ ಹಿಂದಿನ ಪ್ರಕರಣ- ಮೇಧಾ ಪಾಟ್ಕರ್‌ ಗೆ 5 ತಿಂಗಳ ಜೈಲುಶಿಕ್ಷೆ

1-rahul

Parliament; ಹಿಂದೂಗಳು ಎಂದು ಹೇಳಿಕೊಳ್ಳುವವರು… ರಾಹುಲ್ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಜಪೆ: ಎತ್ತ ಹೋಗಲಿ? ಎಡಕ್ಕೊ , ಬಲಕ್ಕೊ: ಗೊಂದಲದಲ್ಲಿ ವಾಹನ ಚಾಲಕರು

ಬಜಪೆ: ಎತ್ತ ಹೋಗಲಿ? ಎಡಕ್ಕೊ , ಬಲಕ್ಕೊ: ಗೊಂದಲದಲ್ಲಿ ವಾಹನ ಚಾಲಕರು

Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ

Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ

Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ

Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ

Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್‌ ತೋಡು ಕುಸಿತ

Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್‌ ತೋಡು ಕುಸಿತ

Ullal ಮದನಿ ನಗರ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

Ullal ಮದನಿ ನಗರ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

1-sagara

Sagara; ಮರ ಕತ್ತರಿಸುತ್ತಿದ್ದಾಗ ಕೊಂಬೆ ಬಿದ್ದು ವ್ಯಕ್ತಿ ಸಾವು

Rabakavi

Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ

Congress ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

Congress Govt ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

police crime

New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್

ಕಾಪು: ವಾಹನ ಚಾಲಕರು, ಸಂಚಾರಿಗಳ ಪ್ರಾಣಕ್ಕೆ ಸಂಚಕಾರ

ಕಾಪು: ವಾಹನ ಚಾಲಕರು, ಸಂಚಾರಿಗಳ ಪ್ರಾಣಕ್ಕೆ ಸಂಚಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.