Rain: ಮರೆಯದ ಮೇಘರಾಜನ ನೆನಪು


Team Udayavani, Jun 26, 2024, 4:06 PM IST

9-uv-fusion

ಬಿಸಿಲಿನ ತಾಪಕ್ಕೆ ಗಿಡ-ಮರಗಳೆಲ್ಲ ಬಾಡಿ ಬೆಂಡಾದಾಗ ಜೀವತುಂಬಲು ಮೇಘರಾಜ ತುಂತುರಿನ ನಿನಾದದಲ್ಲಿ ಧರೆಗಿಳಿದು ಬಾಡಿಬೆಂಡಾಗಿದ್ದ ಗಿಡ-ಮರಗಳ ತನಿಸುವ ಕಾಲವೆಂದರೆ ಮಳೆಗಾಲ.ಮನಸ್ಸಿಗೆ ಮರಗಳಿಗೆ ತಂಪೆರೆವ ಕಾಲವಿದು. ಮಳೆಗಾಲ ಬಂತೆಂದರೆ ಎಲ್ಲರ ಮನದಲ್ಲಿ ಸಂತಸದ ಭಾವ ಮನೆಮಾಡಲಾರಂಭಿಸುತ್ತವೆ. ಹಲವಾರು ಸುಮಧುರ ನೆನಪುಗಳು ಮರು ಕಳಿಸುತ್ತವೆ.

ಗಾಳಿ ಮಿಂಚು ಗುಡುಗು ಸಿಡಿಲಿನ ಆರ್ಭಟಕ್ಕೆ ಮೂಡುವ ಆತಂಕ, ತಂಪಾಗಿ ಬೀಸುವ ಗಾಳಿ ಜತೆಗೆ ಜಿಟಿ-ಜಿಟಿ ಸದ್ದು ಮಾಡುವ ಮಳೆಹನಿ ಮನದಲ್ಲಿ ಬಾಲ್ಯದ ನೆನಪುಗಳು ಒಂದು ಕ್ಷಣ ಕಣ್ಮುಂದೆ ಬಂದು ಹೋಗುತ್ತದೆ. ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸುತ್ತದೆ. ಮಕ್ಕಳ ಪಾಲಿಗೆ ಮಳೆ ಅನ್ನೋದು ಗೆಳೆಯ ರೊಂದಿಗೆ ಕೊಡೆ-ರೈನ್‌ ಕೋ ಟ್‌ ತೆಗೆದುಕೊಂಡು ಹೋಗುವುದೇ ಒಂದು ಖುಷಿ.

ಬಹುದಿನಗಳಿಂದ ಬಾರದ ಮಳೆಗೆ ನೆಲದಲ್ಲಿ ಕುಳಿತು ಬಾನಿನಡೆಗೆ ದಿನಾಲು ಕಣ್ಣ ಹಾಯಿಸಿತ್ತಿರುವ ರೈತನಿಗೆ ಆಕಾಶದಲ್ಲಿ ಕರಿಮೋಡ ಕಂಡೊಡನೆ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ. ಹೀಗೆ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧವರೆಗೆ ಮಳೆ ಬಂದರೆ ಖುಷಿಗೆ ಪಾರವೇ ಇಲ್ಲ.

ನನಗಂತು ಮಳೆ ಬಂತೆಂದರೆ ಸಾಕು. ನನ್ನ ಬಾಲ್ಯದ ಸವಿನೆನಪು ಕಣ್ಮುಂದೆ ಬರುತ್ತದೆ. ನಾನು ಚಿಕ್ಕವಳಿರುವಾಗ ಮಳೆ ಬಂತು ಅಂದರೆ ಖುಷಿಯೋ ಖುಷಿ ಏಕೆಂದರೆ ಶಾಲೆಯಿಂದ ಮನೆಗೆ ಬರುವಾಗ ಮಳೆ ಬಂತು ಅಂದರೆ ಸಾಕು ಮಳೆಯಲ್ಲಿ ನೆನೆಯುತ್ತಾ ಗೆಳತಿಯರೊಡನೆ ಪುಸ್ತಕದ ಹಾಳೆಯನ್ನು ಹರಿದು ಅದರಿಂದ ದೋಣಿಯನ್ನು ಮಾಡಿ ರೋಡಲ್ಲಿ ಹರಿಯುವ ನೀರಿಗೆ ದೋಣಿಯನ್ನು ತೇಲಿ ಬಿಡುತ್ತಾ ನೀರಾಟ ಆಡಿಕೊಂಡು ಬರುವುದೇ ಒಂದು ಮಜಾ.

ಯಾರದು ದೋಣಿ ಮುಂದೆ ಹೋಗಿರುತ್ತದೆ ಅವರ ದೋಣಿಯನ್ನು ನೀರಿನಲ್ಲಿ ಮುಳುಗಿಸಿ ಬಿಡುತ್ತಿದ್ದೇವು ಅದು ಅವರಿಗೆ ಗೊತ್ತಿರುತ್ತಿರಲಿಲ್ಲ. ಅವಳಿಗೆ ನಿನ್ನ ದೋಣಿ ಮುಳುಗಿತು ಅಂತ ಸಿಕ್ಕಾಪಟ್ಟೆ ಕಾಡಿಸುತ್ತಿದ್ವಿ ಪಾಪ ಅವಳು ನನ್ನ ದೋಣಿ ನೀರಿನಲ್ಲಿ ಮುಳುಗಿಹೋದ ಅಂತ ಅಳುತ್ತಿದ್ದಳು.

ಹೀಗೆ ಮಳೆ ಬಂತು ಅಂದರೆ ಸಾಕು ತಲೆಯೆತ್ತಿ ನೇರವಾಗಿ ಸುರಿಯುವ ಮಳೆಗೆ ನಾಲಿಗೆ ಚಾಚಿ ಮಳೆಹನಿಗಳು ಕುಡಿದು ಕೆಸರು ಕಂಡರೆ ಸಾಕು ಜಿಗಿದಾಡುವ ಕೆಸರಾಟ. ಅಲ್ಲಲ್ಲಿ ನಿಂತ ನೀರಿನಲ್ಲಿ ಆಗ ತಾನೆ ಮೊಟ್ಟೆಯೊಡೆದು ಹೊರಬಂದ ಮರಿಗಳನ್ನು ಮೀನುಗಳು ಎಂದು ತಿಳಿದು ಆಶ್ಚರ್ಯವೆಂಬಂತೆ ನೋಡುತ್ತಿದ್ದ ಕ್ಷಣಗಳು ರೋಡಿನಲ್ಲಿ ಗಾಡಿಗಳ ಹಾಯ್ದು ಹೋಗಬೇಕಾದರೆ ಅದರಲ್ಲಿದ್ದ ಪೆಟ್ರೋಲ್‌ ರೋಡ್‌ ಮೇಲೆ ಬಿದ್ದಾಗ ಅದು ವಿವಿಧ ಬಣ್ಣಗಳ ಮಿಶ್ರಣ ಮಾಡಿ ಹಾಕಿದ ಹಾಗೆ ಕಾಣುತ್ತಿತ್ತು. ಅದನ್ನು ಕಂಡ ನಾವು ಕಾಮನಬಿಲ್ಲು ಎಂದು ತಿಳಿದು ಕಿರುಚಾಡಿದ ಕ್ಷಣಗಳು ಇಂದಿಗೂ ಹಚ್ಚ ಹಸಿರಾಗಿವೆ

ಮಳೆಯಲ್ಲಿ ನೆನೆದು ಬಟ್ಟೆಯನ್ನೆಲ್ಲ ಕೊಳೆ ಮಾಡಿಕೊಂಡು ಬಂದ ನಮಗೆ, ಮನೆಗೆ ಬರುತ್ತಲೇ ಬೈಗುಳ ಖಾಯಂ ಆಗಿರುತ್ತಿದ್ದವು. ಬೈಯುತ್ತಲೇ ಅಮ್ಮ ನಮಗೆ ಟವೆಲ್‌ ತೆಗೆದುಕೊಂಡು ಬಂದು ತಲೆಮರೆಸಿ ನಮಗೆ ಬಿಸಿಬಿಸಿಯಾದ ತಿಂಡಿಗಳನ್ನು ಮಾಡಿಕೊಡುತ್ತಿದ್ದಳು, ತಿಂಡಿ ತಿನ್ನುತ್ತ ನನಗಷ್ಟೇ ಬೈಯ್ಯುತ್ತಿ ನಿನ್ನ ದೊಡ್ಡ ಮಗಳಿಗೆ ಬೈಯೋದಿಲ್ಲ ಆಕಿ ಅಷ್ಟೇ ನಿನ್‌ ಮಗಳು ತಗೋ ಅಂತ ಅಂತಿದ್ದೆ. ಇವಾಗ ಇವನ್ನೆಲ್ಲ ನೆನಪಿಸಿಕೊಂಡರೆ ತುಂಬಾನೇ ನಗುಬರುತ್ತದೆ.

ಹೀಗೆ ಮಳೆ ಬಂತೆಂದರೆ ಸುರಿಯುವ ಮಳೆ ಹನಿಗಳ ಜೊತೆ ಅವಿಸ್ಮರಣೀಯ ಸಂಬಂಧ ತುಂಟಾಟ ತರ್ಲೆ ಮರೆಯಲಾಗದ ನೆನಪುಗಳು ಮತ್ತೆ ಮತ್ತೆ ನೆನಪಿನ ಬುತ್ತಿಯನ್ನು ಬಿಚ್ಚಿಡುವ ಹಾಗೆ ಮಾಡುವ ಕಾಲವನ್ನು ಮರೆಯಲು ಸಾಧ್ಯವೇ ಇಲ್ಲ.

ಸೌಭಾಗ್ಯ

ನಾಗರಳ್ಳಿ

ಟಾಪ್ ನ್ಯೂಸ್

Deshpande

Guarantee Schemes: ಸಿರಿವಂತರು ಉಚಿತ ಯೋಜನೆ ಬಳಸುವುದು ಸೂಕ್ತವಲ್ಲ-ಆರ್‌.ವಿ.ದೇಶಪಾಂಡೆ

Bharamasagara: ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

Bharamasagara: ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

Wadi ಬಿಸಿಯೂಟ ಸೇವಿಸಿ 33 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Wadi ಬಿಸಿಯೂಟ ಸೇವಿಸಿ 33 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

police crime

Mangalore ಕಾರಾಗೃಹದಲ್ಲಿ ಖೈದಿಗಳ ಮಾರಾಮಾರಿ: ಇಬ್ಬರು ಆಸ್ಪತ್ರೆಗೆ

Kalammawadi Dam ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನೀರು ಪಾಲು

Kalammawadi Dam ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನೀರು ಪಾಲು

koratagere

Koratagere: ಎರಡು ವಿದ್ಯುತ್‌ ಉಪಸ್ಥಾವರ ಘಟಕಗಳ ಉದ್ಘಾಟನೆ

Amit Shah

3 new criminal laws; ತಮಿಳು ಸೇರಿ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ: ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

Deshpande

Guarantee Schemes: ಸಿರಿವಂತರು ಉಚಿತ ಯೋಜನೆ ಬಳಸುವುದು ಸೂಕ್ತವಲ್ಲ-ಆರ್‌.ವಿ.ದೇಶಪಾಂಡೆ

Bharamasagara: ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

Bharamasagara: ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

Wadi ಬಿಸಿಯೂಟ ಸೇವಿಸಿ 33 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Wadi ಬಿಸಿಯೂಟ ಸೇವಿಸಿ 33 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

police crime

Mangalore ಕಾರಾಗೃಹದಲ್ಲಿ ಖೈದಿಗಳ ಮಾರಾಮಾರಿ: ಇಬ್ಬರು ಆಸ್ಪತ್ರೆಗೆ

Kalammawadi Dam ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನೀರು ಪಾಲು

Kalammawadi Dam ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನೀರು ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.