Kottiyoor Temple: ಕೇರಳದ ಶಕ್ತಿ ತಾಣ ಕೊಟ್ಟಿಯೂರು
Team Udayavani, Jun 27, 2024, 7:45 AM IST
ಕೇರಳವನ್ನು ದೇವರ ಸ್ವಂತ ನಾಡು ಎಂದು ಕರೆಯುತ್ತಾರೆ. ಇಲ್ಲಿ ಅನೇಕ ದೇವಾಲಯಗಳಿದ್ದು, ಈ ಪೈಕಿ ಪ್ರಸಿದ್ಧತೆ ಪಡೆದ ಕೆಲವು ದೇಗುಲಗಳಲ್ಲಿ ಕೊಟ್ಟಿಯೂರೂ ದೇವಸ್ಥಾನವು ಒಂದು. ಈ ದೇವಸ್ಥಾನವು ಕೇರಳದ ಕಣ್ಣೂರಿನ ಕೊಟ್ಟಿಯೂರ್‌ಎಂಬ ಗ್ರಾಮದಲ್ಲಿದೆ. ಇದು ಶಿವನ ದೇವಾಲಯವಾಗಿದೆ. ಈ ದೇವಾಲಯ ಕಟ್ಟಿ- ಯೂರು ಎಂಬ ಹೆಸರಿನಿಂದ ಹುಟ್ಟಿಕೊಂಡಿದ್ದು ಸ್ಥಳೀಯ ಭಾಷೆಯಲ್ಲಿ ಕೊಟ್ಟಿಯೂರೂ ಎಂಬುದಾಗಿ ಕರೆಯಲಾಗುತ್ತದೆ.
ಈ ದೇವಸ್ಥಾನ ಪುರಾಲಿಮಲದ ಕಟ್ಟನ್ ರಾಜವಂಶದ ಆಲ್ವಿಕೆಯಲ್ಲಿತ್ತು. ಇಲ್ಲಿ ನಾವು ಎರಡು ದೇವಾಲಯಗಳನ್ನು ಕಾಣಬಹುದು. ಕೊಟ್ಟಿಯೂರು ಗ್ರಾಮದ ಸಮೀಪದಲ್ಲಿ ಹರಿಯುವ ವವಾಲಿ ನದಿಯ ಪಶ್ಚಿಮ ದಡದಲ್ಲಿರುವ ದೇಗುಲವನ್ನು ಇಕ್ಕರೆ ಕೊಟ್ಟಿಯೂರು ಎಂದೂ, ವಾವಲಿ ನದಿಯ ಪೂರ್ವ ದಡದಲ್ಲಿ ಇರುವ ದೇವಾಲಯವನ್ನು ಅಕ್ಕರೆ ಕೊಟ್ಟಿಯೂರು ಎಂದು ಕರೆಯಲಾಗುತ್ತದೆ.
ಈ ದೇವಾಲಯವು ಮಲಬಾರ್ ವಿಶೇಷ ವರ್ಗದ ದೇವಾಲಯವಾಗಿದೆ. ಈ ಅಕ್ಕರೆ ಕೊಟ್ಟಿಯೂರುನ ವಿಶೇಷವೆಂದರೆ ಈ ದೇವಾಲಯವು ತಾತ್ಕಾಲಿಕ ಯಾಗ ದೇಗುಲವಾಗಿದ್ದು ಇದನ್ನು ಕೊಟ್ಟಿಯೂರು ವೈಶಾಖ ಮಹೋತ್ಸವದಲ್ಲಿ ಮಾತ್ರ ತೆರೆಯಲಾಗುವುದು. ವೈಶಾಖ ಹಬ್ಬದ 27 ದಿನಗಳನ್ನು ಹೊರತುಪಡಿಸಿ ವರ್ಷದ ಪೂರ್ತಿ ಈ ದೇವಾಲಯವನ್ನು ಮುಚ್ಚಲಾಗುತ್ತದೆ.
ಸುಮಾರು 80 ಎಕ್ರೆಗಳಷ್ಟು ದಟ್ಟವಾದ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿರುವ ಪವಿತ್ರ ಪ್ರವಾಸಿ ತಾಣ ಇದಾಗಿದೆ. ಅಕ್ಕರೆ ಕೊಟ್ಟಿಯೂರು ದಕ್ಷ ಯಾಗದ ಸ್ಥಳವಾಗಿದೆ ಎಂದು ಪುರಾಣಗಳು ಹೇಳುತ್ತದೆ. ಈ ಸ್ಥಳದಲ್ಲಿಯೇ ಸತಿ ದೇವಿಯು ತನ್ನನ್ನು ತಾನೇ ದಹಿಸಿಕೊಂಡಳು ಎಂದೂ ಹೇಳಲಾಗುತ್ತದೆ.
ಈ ದೇವಾಲಯದ ಮತ್ತೂಂದು ಮಹತ್ವ ಏನೆಂದರೆ ಇದು ಕೇರಳದ ಎರಡನೇ ಶ್ರೀಮಂತ ದೇವಾಲಯವಾಗಿದೆ. ಸತಿ ದೇವಿಯು ತನ್ನನ್ನು ತಾನೇ ದಹಿಸಿಕೊಂಡ ಸ್ವಯಂಭೂಲಿಂಗದ ಪಕ್ಕದಲ್ಲಿರುವ ಎತ್ತರದ ವೇದಿಕೆಯಾದ ಅಮ್ಮರಕ್ಕಲು ತಾರದಲ್ಲಿ ಸತಿಯನ್ನು ಶಕ್ತಿಯಾಗಿ ಪೂಜಿಸಲಾಗುತ್ತದೆ. ಇದು ಶಕ್ತಿ ಪೀಠಗಳ ಮೂಲ ದೇವಾಲಯ ಎಂದು ನಂಬಲಾಗಿದೆ. ಹಾಗೆ ಹಿಂದೂ ದೈವಗಳ ಉಪಸ್ಥಿತಿಯ ಸಂಗಮವಾಗಿರುದರಿಂದ ಈ ಸ್ಥಳವನ್ನು ಕೊಟ್ಟಿಯೂರು ಎಂದು ಕರೆಯಲಾಯಿತು.
ಈ ದೇಗುಲಕ್ಕೆ ತಲುಪಲು ಸುಲಭ ಮಾರ್ಗ ರೈಲಿನ ಮೂಲಕ ಕಣ್ಣೂರು ರೈಲ್ವೇ ನಿಲ್ದಾಣಕ್ಕೆ ಬಂದು ಕೊಟ್ಟಿಯೂರು ಗ್ರಾಮಕ್ಕೆ ಬಸಿನಲ್ಲಿ ಪ್ರಯಾಣಿಸುವುದು.
-ಸ್ಫೂರ್ತಿ ಕಮಲ್ ಪಿ.ಎಸ್.
ಚಿತ್ತಾರಿ, ಬೇಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.