Raj B Shetty: ಮತ್ತೆ ʼಒಂದು ಮೊಟ್ಟೆಯ ಕಥೆʼ ತಂಡದ ಸಿನಿಮಾ ಮಾಡಲಿದ್ದಾರೆ ರಾಜ್‌ ಬಿ ಶೆಟ್ಟಿ

Team Udayavani, Jun 26, 2024, 6:01 PM IST

Raj B Shetty: ಮತ್ತೆ ʼಒಂದು ಮೊಟ್ಟೆಯ ಕಥೆʼ ತಂಡದ ಸಿನಿಮಾ ಮಾಡಲಿದ್ದಾರೆ ರಾಜ್‌ ಬಿ ಶೆಟ್ಟಿ

ಬೆಂಗಳೂರು/ಮಂಗಳೂರು: ಕರಾವಳಿ ಭಾಗದ ಕಥೆಯನ್ನು ಹೇಳುವ ಮೂಲಕ ಇಂದು ಸ್ಯಾಂಡಲ್‌ ವುಡ್‌ ಹಾಗೂ ಮಾಲಿವುಡ್‌ ನಲ್ಲಿ ತನ್ನ ನಟನೆಯ ಮೂಲಕ ಮಿಂಚಿರುವ ನಿರ್ದೇಶಕ, ನಟ ರಾಜ್‌ ಶೆಟ್ಟಿ ಹೊಸ ಸಿನಿಮಾವೊಂದನ್ನು ಅನೌನ್ಸ್‌ ಮಾಡಲಿದ್ದಾರೆ.

ರಾಜ್‌ ಬಿ ಶೆಟ್ಟಿ ಚಂದನವನದಲ್ಲಿ ಈಗಾಗಲೇ ತಾನೊಬ್ಬ ನಿರ್ದೇಶಕ ಮಾತ್ರವಲ್ಲ ಅದ್ಭುತ ನಟ ಕೂಡ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಅವರ ನಟನಾ ಕೌಶಲ್ಯ ಮಾಲಿವುಡ್‌ ಮಂದಿಯನ್ನೂ ಫಿದಾ ಆಗಿಸಿದೆ. ಇತ್ತೀಚೆಗಷ್ಟೇ ಮಮ್ಮುಟ್ಟಿ ಅವರೊಂದಿಗೆ ʼಟರ್ಬೊʼ ಸಿನಿಮಾದಲ್ಲಿ ಖಡಕ್‌ ರೋಲ್‌ ನಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದರು.

ರಾಜ್‌ ಬಿ ಶೆಟ್ಟಿ ಅವರು ನಿರ್ದೇಶನ ಮಾಡುವ ಸಿನಿಮಾಗಳಿಗೆ ಪ್ರತ್ಯೇಕ ಪ್ರೇಕ್ಷಕರಿರುತ್ತಾರೆ. 2017 ರಲ್ಲಿ ಅವರ ಚೊಚ್ಚಲ ನಿರ್ದೇಶನದ ʼಒಂದು ಮೊಟ್ಟೆಯ ಕಥೆʼ ಚಿತ್ರ ಬಿಡುಗಡೆ ಆಗಿತ್ತು. ಈ ಸಿನಿಮಾಕ್ಕೆ ನಿರೀಕ್ಷೆಗೂ ಮೀರಿ ಉತ್ತಮ ಅಭಿಪ್ರಾಯ ಎಲ್ಲೆಡಯಿಂದ ಕೇಳಿ ಬಂದಿತ್ತು. ಇದಾದ ಬಳಿಕ 2021 ರಲ್ಲಿ ʼಗರುಡ ಗಮನ ವೃಷಭ ವಾಹನʼ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ʼಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರದಲ್ಲಿನ ಅಭಿನಯ ಹಾಗೂ ನಿರ್ದೇಶನಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ರಾಜ್‌ ಬಿ ಶೆಟ್ಟಿ ಮತ್ತೆ ʼಒಂದು ಮೊಟ್ಟೆಯ ಕಥೆʼಯ  ತಂಡದೊಂದಿಗೆ ಸಿನಿಮಾವನ್ನು ಮಾಡಲಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್‌ ಲೈವ್‌ ಬಂದು ಮಾಹಿತಿ ನೀಡಿದ್ದಾರೆ.

“ಮೊದಲಿಗೆ ನಾವು ಸಿನಿಮಾ ಮಾಡಲು ಶುರು ಮಾಡಿದ್ದು ಮಂಗಳೂರಿನಿಂದ. ʼಒಂದು ಮೊಟ್ಟೆಯ ಕಥೆʼ ಸಿನಿಮಾ ಮಾಡುವಾಗ ನಮಗೆ ಒಳ್ಳೆಯ ಕಥೆಯನ್ನು ತುಂಬಾ ಜನರಿಗೆ ತಲುಪಿಸಬೇಕೆನ್ನುವ ಉದ್ದೇಶವಿತ್ತು. ‘ಮ್ಯಾಂಗೊ ಪಿಕಲ್ ಎಂಟರ್‌ಟೈನ್‌ಮೆಂಟ್’ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ನಾನು ಮತ್ತು ನನ್ನ ತಂಡ ಆ ಸಿನಿಮಾವನ್ನು ಮಾಡಿದ್ವೀವಿ. ಆ ಸಿನಿಮಾ ನಿರೀಕ್ಷೆಗೂ ಮೀರಿ ಹಿಟ್‌ ಕೊಟ್ಟಿತು. ಒಂದು ಒಳ್ಳೆಯ ಕಥೆಯನ್ನು ಹೇಳಬೇಕು. ಆ ಕಥೆಯನ್ನು ಪ್ರೇಕ್ಷಕರು ಒಪ್ಪುತ್ತಾರೆ ಎನ್ನುವುದು ನಾನು ಹಾಗೂ ನನ್ನ ತಂಡದ ಅಂದುಕೊಂಡಿರುವ ಸೂತ್ರ. ಅದೇ ನಿಟ್ಟಿನಲ್ಲಿ ಇನ್ನೊಂದು ಸಿನಿಮಾವನ್ನು ತರುತ್ತಿದ್ದೇವೆ.  ‘ಮ್ಯಾಂಗೊ ಪಿಕಲ್ ಎಂಟರ್‌ಟೈನ್‌ಮೆಂಟ್’ ಇದನ್ನು ನಿರ್ಮಾಣ ಮಾಡುತ್ತಿದೆ. ಈ ಬ್ಯಾನರ್‌ ಎರಡನೇ ಸಿನಿಮಾ ಇದು. ಈ ಸಿನಿಮಾದ ಪೋಸ್ಟರ್‌ ನ್ನು ನಾಳೆ ಹಂಚಿಕೊಳ್ಳುತ್ತೇನೆ. ಈ ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ನಾನು ತುಂಬಾ ಹೆಮ್ಮೆಪಡಬಹುದಾದ ಸಿನಿಮಾ ಆಗಿರಲಿದೆ. ಕಮರ್ಷಿಯಲಿ ಒಂದು ಕಥೆ ಹೇಳಿ ದುಡ್ಡು ಮಾಡುವುದಕ್ಕಿಂತ, ಒಂದೊಳ್ಳೆ ಸಿನಿಮಾ ಮಾಡುತ್ತೇವೆ. ಆ ಮೇಲೆ ಅದರ ಗುಣಮಟ್ಟವನ್ನು ಅದು ಕಮರ್ಷಿಯಲಿ ಎಷ್ಟು ದುಡ್ಡು ಮಾಡಬೇಕೆನ್ನುವುದನ್ನು ಪ್ರೇಕ್ಷಕರು ನಿರ್ಧಾರ ಮಾಡಬೇಕು ಅಂಥ ನಂಬಿದಂತಹ ಸಿನಿಮಾ ಅದು. ಅದರ ಹೆಸರು ಹಾಗೂ ಪೋಸ್ಟರ್‌ ನ್ನು ನಾಳೆ ಸಂಜೆ 4 ಗಂಟೆಗೆ ಅನೌನ್ಸ್‌ ಮಾಡುತ್ತಿದ್ದೇವೆ. ಈ ಸಿನಿಮಾವನ್ನು ನಾನು ಮತ್ತು ನನ್ನ ತಂಡ ಪ್ರಸ್ತುತ ಪಡಿಸುತ್ತಿದ್ದೇವೆ. ಎಂದಿನಂತೆ ಪ್ರೀತಿ, ಪ್ರೋತ್ಸಾಹ ಇರಲಿ” ಎಂದು ಹೇಳಿದ್ದಾರೆ.

ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವುದರ ಬಗ್ಗೆ ರಾಜ್‌ ಬಿ ಶೆಟ್ಟಿ ಗುಟ್ಟು ಬಿಟ್ಟುಕೊಟ್ಟಿಲ್ಲ.

ʼಒಂದು ಮೊಟ್ಟೆಯ ಕಥೆʼಯನ್ನು ಪವನ್ ಕುಮಾರ್ – ಸುಹಾನ್ ಪ್ರಸಾದ್ ನಿರ್ಮಾಣ ಮಾಡಿದ್ದರು. ರಾಜ್ ಬಿ ಶೆಟ್ಟಿ, ಉಷಾ ಭಂಡಾರಿ, ಶೈಲಶ್ರೀ, ಪ್ರಕಾಶ್ ತುಮಿನಾಡು, ಶ್ರೇಯಾ ಅಂಚನ್, ದೀಪಕ್ ರೈ ಪಾಣಾಜೆ, ವಿಜೆ ವಿನಿತ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದರು.

ಟಾಪ್ ನ್ಯೂಸ್

1-mofdd

NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

1-mangaluru

Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು

10

ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

1-vijayendra

CM ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಯತ್ನ; ಬಿಜೆಪಿ ಪ್ರಮುಖ ನಾಯಕರು ವಶಕ್ಕೆ

vijayapura

Vijayapura; ಕೃಷ್ಣಾ ನದಿ ತೆಪ್ಪ ದುರಂತ: ಮೂವರ ಶವಪತ್ತೆ, ಇಬ್ಬರಿಗಾಗಿ ಶೋಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್‌ ಲಾಂಚ್‌

Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್‌ ಲಾಂಚ್‌

18

Actress Akshita Bopaiah: ತಮಿಳಿನತ್ತ ನವನಟಿ ಅಕ್ಷಿತಾ ಸಿನಿಯಾನ

Kaadaadi: ಆದಿತ್ಯ ಕಾದಾಡಿ ಚಿತ್ರ ತೆರೆಗೆ ಸಿದ್ಧ

Kaadaadi: ಆದಿತ್ಯ ಕಾದಾಡಿ ಚಿತ್ರ ತೆರೆಗೆ ಸಿದ್ಧ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ – ಭುವನ್‌ ದಂಪತಿ: ಕೊಡವ ಶೈಲಿಯಲ್ಲಿ ಫೋಟೋಶೂಟ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ – ಭುವನ್‌ ದಂಪತಿ: ಕೊಡವ ಶೈಲಿಯಲ್ಲಿ ಫೋಟೋಶೂಟ್

Kiccha Sudeep: ಶೀಘ್ರದಲ್ಲಿ ʼMaxʼ ಮೆಗಾ ಅಪ್ಡೇಟ್..‌ ಆ.15ಕ್ಕೆ ರಿಲೀಸ್‌ ಆಗೋದು ಪಕ್ಕಾ?

Kiccha Sudeep: ಶೀಘ್ರದಲ್ಲಿ ʼMaxʼ ಮೆಗಾ ಅಪ್ಡೇಟ್..‌ ಆ.15ಕ್ಕೆ ರಿಲೀಸ್‌ ಆಗೋದು ಪಕ್ಕಾ?

MUST WATCH

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

ಹೊಸ ಸೇರ್ಪಡೆ

1-mofdd

NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

1-mangaluru

Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು

10

ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.