UV Fusion: ಕನಸಿನ ಆಸೆಯ ಸುತ್ತ


Team Udayavani, Jun 26, 2024, 5:29 PM IST

14

ಆಸೆ ಯಾರಿಗೆ ಇರುವುದಿಲ್ಲ ಹೇಳಿ? ಅಂಬೆಗಾಲು ಇಡುವ ಮಗುವಿ ನಿಂದ ಹಿಡಿದು ಇಹಲೋಕ ತ್ಯಜಿಸುವ ವೃದ್ಧನ ವರೆಗೂ ಅದೆಷ್ಟೋ ಆಸೆಗಳು ಇರುತ್ತವೆ. ಪುಟ್ಟ ಕಂದಮ್ಮನಿಗೆ ಜಾತ್ರೆಯಲ್ಲಿ ಕಂಡ ಬಣ್ಣ ಬಣ್ಣದ ಆಟಿಕೆಗಳ ಮೇಲೆ ಆಸೆಯಾದರೆ, ತಾಯಿಗೆ ತನ್ನ ಮಗು ಉತ್ತಮ ಬದುಕನ್ನು ಕಟ್ಟಿ ಬೆಳೆಯಬೇಕೆಂಬ ಆಸೆ. ವಿದ್ಯಾರ್ಥಿಗೆ ಒಳ್ಳೆಯ ಅಂಕ ಗಳಿಸುವ ಆಸೆಯಾದರೆ, ಶಿಕ್ಷಕನಿಗೆ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಸಾಧನೆಯನ್ನು ಮಾಡಬೇಕೆಂಬ ಆಸೆ.

ತರುಣಿಯರಿಗೆ ಚಿನ್ನ ಕೊಂಡು ಕೊಳ್ಳಬೇಕೆಂಬ ಆಸೆಯಾದರೆ, ಚಿನ್ನ ವ್ಯಾಪಾರಸ್ಥನಿಗೆ ಒಳ್ಳೆಯ ವ್ಯಾಪಾರವಾಗಲೆಂಬ ಆಸೆ. ಗರ್ಭಿಣಿಗೆ ಆರೋಗ್ಯವಂತ ಮಗು ಜನಿಸಲಿ ಎಂಬ ಆಸೆಯಾದರೆ, ಯಮನ ಹಾದಿಯನ್ನು ಕಾಯುತ್ತಿರುವ ವೃದ್ಧನಿಗೆ ಸುಖ ಮರಣ ಹೊಂದಿ ಸ್ವರ್ಗ ಸೇರಬೇಕೆಂಬ ಆಸೆ.

ಹೀಗೆ ನಾವು ಹುಟ್ಟಿನಿಂದ ಸಾವು ಕಾಣುವವರೆಗೂ ಸಾವಿರಾರು ಆಸೆಗಳನ್ನು ಹೊತ್ತು ಜೀವನ ನಡೆಸುತ್ತಿರುತ್ತೇವೆ. “ಕನಸು ಕಾಣಬೇಕು” ಎಂಬ ಅಬ್ದುಲ್‌ ಕಲಾಂ ಅವರ ಒಂದು ಸಂದೇಶ ಅದೆಷ್ಟೋ ಯುವಜನರಿಗೆ ಪ್ರೇರಣೆಯಾಗಿ ಕನಸನ್ನು ನನಸಾಗಿಸುವತ್ತ ಹೆಜ್ಜೆ ಹಾಕಿದ್ದಾರೆ. ಒಮ್ಮೆ ಒಬ್ಬ ವಿದ್ಯಾರ್ಥಿಯು ಸಭಿಕರನ್ನು ಉದ್ದೇಶಿಸಿ ಮಾತನಾಡುವಾಗ ಆತ “ನನಗೆ ಮುಂದೊಂದು ದಿನ ಆಕಾಶದಲ್ಲಿ ಹಾರಾಡಬೇಕೆಂಬ (ಪೈಲೆಟ್‌) ಆಸೆ ಇದೆ” ಎಂದು ಹೇಳುತ್ತಾನೆ. ಇನ್ನೊಬ್ಬ ವಿದ್ಯಾರ್ಥಿ ಅದೇ ಸಭೆಯಲ್ಲಿ ಮಾತನಾಡುವಾಗ “ನನಗೆ ಉದ್ಯಮಿಯಾಗಬೇಕೆಂಬ ಕನಸು ಇದೆ” ಎಂದು ಹೇಳುತ್ತಾನೆ. ಇಬ್ಬರೂ ಕೂಡ ತನೇನಾಗಬೇಕು ಎಂಬುದನ್ನು ಎರಡು ವಿಭಿನ್ನ ಪದಗಳನ್ನು ಬಳಸಿ ಹೇಳಿದ್ದಾರೆ. ಹಾಗಾದರೆ ಕನಸು ಕೂಡ ಆಸೆಯ ಮತ್ತೂಂದು ರೂಪ ಎಂದು ಹೇಳಬಹುದಲ್ಲವೇ? ಎಲ್ಲ ಕನಸುಗಳನ್ನು ಆಸೆಗಳು ಎಂದು ಹೇಳಬಹುದು, ಆದರೆ ಎಲ್ಲ ಆಸೆಗಳನ್ನು ಕನಸುಗಳು ಎಂದು ಹೇಳಲಾಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ.

ಆಸೆಗಳಿಲ್ಲದ ಮನುಷ್ಯನ ಬದುಕು ಬಿಡಿಗಾಸಿಗೂ ಬೆಲೆ ಬಾಳದು. ಜೀವ ದೇಹಕ್ಕೆ ಚೈತನ್ಯ ನೀಡಿದರೆ, ಆಸೆ ಜೀವನಕ್ಕೆ ಚೈತನ್ಯ ನೀಡುತ್ತದೆ. ನಮ್ಮೆಲ್ಲ ಆಸೆಗಳಿಗೆ ಕನಸಿನ ಗೂಡು ಕಟ್ಟಿ ಜೀವನದ ಹಾದಿಯಲ್ಲಿ ಎಚ್ಚರಿಕೆಯಿಂದ ಸಾಗುತ್ತೇವೆ. ಆ ಕನಸನ್ನು ನನಸಾಗಿಸಲು ನಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಪಟ್ಟು, ಶ್ರದ್ಧೆಯಿಂದ, ದೃಢತೆ, ಬದ್ಧತೆ, ಸಮಯ ಪಾಲನೆ ಇವುಗಳನ್ನು ಪಾಲಿಸಬೇಕು. ನಾವು ಜೀವನದಲ್ಲಿ ತಿರುಕನಂತೆ ಕನಸು ಮಾತ್ರ ಕಾಣದೆ ಕನಸಿನ ಆಸೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುವುದು ಉತ್ತಮವಾದ ನಡೆ ಎಂಬುದು ನನ್ನ ಅನಿಸಿಕೆ.

 - ಮಧುರಾ

ಕಾಂಚೋಡು

ಟಾಪ್ ನ್ಯೂಸ್

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

isrel netanyahu

India ವರ, ಇರಾಕ್‌, ಇರಾನ್‌ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.