Sensitive Area ವಿಪತ್ತು ನಿರ್ವಹಣೆ ಕುರಿತು ಕೃಷ್ಣಬೈರೇಗೌಡ ಕಡ್ಡಾಯ ಸೂಚನೆ

ಸೂಕ್ಷ್ಮ ಪ್ರದೇಶ ಗುರುತಿಸಲು ಸಿದ್ಧರಾಗಿ

Team Udayavani, Jun 26, 2024, 11:37 PM IST

Sensitive Area ವಿಪತ್ತು ನಿರ್ವಹಣೆ ಕುರಿತು ಕೃಷ್ಣಬೈರೇಗೌಡ ಕಡ್ಡಾಯ ಸೂಚನೆ

ಮಂಗಳೂರು: ಜಿಲ್ಲೆಯಲ್ಲಿ ಯಾವುದೇ ವಿಪತ್ತು ನಡೆಯುವ ಮೊದಲೇ ಅಪಾಯ ಸಾಧ್ಯತೆಯ ಸೂಕ್ಷ್ಮ ಪ್ರದೇಶಗಳನ್ನು ಸ್ಥಳೀಯವಾಗಿ ಸರಕಾರಿ ವ್ಯವಸ್ಥೆಯ ಕಾರ್ಯಪಡೆ ಗುರುತಿಸಿ ಸನ್ನದ್ಧರಾಗಿರಬೇಕು. ವಿಪತ್ತು ನಡೆದ ಬಳಿಕ ಅಲ್ಲಿಗೆ ಹೋಗುವಂತಹ ಪರಿಸ್ಥಿತಿ ಇರಲೇಬಾರದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಹಾನಗರ ಪಾಲಿಕೆ ಕಚೇರಿಯಲ್ಲಿ ಬುಧವಾರ ರಾತ್ರಿ ವಿಪತ್ತು ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಈ ಸೂಚನೆ ನೀಡಿದ್ದು, ಮುಂದೆ ವಿಪತ್ತು ನಡೆದರೆ ಒಂದೂ ಜೀವಹಾನಿ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದರು.

ಸ್ಥಳೀಯವಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್‌ ಕಲೆಕ್ಟರ್‌, ಗ್ರಾಮ ಸಹಾಯಕರಿಂದ ತೊಡಗಿ ಪೊಲೀಸ್‌ ಇಲಾಖೆಯವರಿಗೆ ಸಂಭಾವ್ಯ ಅಪಾಯಕಾರಿ ಪ್ರದೇಶಗಳ ಮಾಹಿತಿ ಇರುತ್ತದೆ. ಸಾಧ್ಯವಾದಷ್ಟೂ ಅವಘಡ ದುರಂತ ಆಗುವ ಸಾಧ್ಯತೆ ಇದ್ದಲ್ಲಿ ಮೊದಲೇ ಅಲ್ಲಿಗೆ ತೆರಳಿ ಪರಿಶೀಲಿಸಿ ಅದನ್ನು ಎದುರಿಸಲು ಸಜ್ಜಾಗಿರುವುದು ಮುಖ್ಯ, ದುರಂತ ನಡೆದ ಬಳಿಕ ತೆರಳಿ ಪರಿಹಾರ ಕೊಡು ವುದಕ್ಕೆ ಸೀಮಿತವಾಗಬಾರದು ಎಂದರು.

ಇಂಥ ಸನ್ನಿವೇಶಗಳನ್ನು ಎದುರಿಸುವ ಬಗ್ಗೆ ಜಿಲ್ಲಾಧಿಕಾರಿ ಸ್ಥಳೀಯವಾಗಿ ವಿಕೇಂದ್ರಿತ ವ್ಯವಸ್ಥೆ ರಚಿಸಿರುವ ಬಗ್ಗೆ ಸಚಿವರಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿಕೇಂದ್ರಿತ ವ್ಯವಸ್ಥೆ ಸರಿಯಾಗಿ ವ್ಯವಸ್ಥೆಯಾಗಬೇಕಾ ದರೆ ಮೊದಲು ವಿಕೇಂದ್ರಿತ ಇಂಟೆಲಿಜೆನ್ಸ್‌ ಇರಬೇಕಾದುದು ಮುಖ್ಯ. ಇದರಿಂದ ದುರಂತಗಳಿಗೆ ಸ್ಪಂದನೆ ಚುರುಕಾಗುತ್ತದೆ ಹಾಗೂ ಸುಲಭವಾಗುತ್ತದೆ ಎಂದರು.

ವಿಪತ್ತು ನಿರ್ವಹಣ ಇಲಾಖೆ ಕಾರ್ಯದರ್ಶಿ ವಿ.ರಶ್ಮಿ ಮಹೇಶ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿ,ಪಂ ಸಿಇಒ ಡಾ| ಆನಂದ್‌, ಮನಪಾ ಆಯುಕ್ತ ಆನಂದ್‌ ಸಿ.ಎಲ್‌, ಮಂಗಳೂರು ಡಿಸಿಪಿ ಸಿದ್ದಾರ್ಥ ಗೋಯಲ್‌ ಉಪಸ್ಥಿತರಿದ್ದರು.

ತಹಶೀಲ್ದಾರ್‌ ಉತ್ತರಕ್ಕೆ ಸಚಿವರ ಆಸಮಾಧಾನ
ಜಿಲ್ಲೆಯ ಕೆಲವು ತಹಶೀಲ್ದಾರ್‌ ಬಳಿ ಸ್ಥಳೀಯವಾಗಿ ಸಂಭಾವ್ಯ ಸೂಕ್ಷ್ಮ ಪ್ರದೇಶಗಳ ಬಗ್ಗೆ ಮಾಹಿತಿ ಕೇಳಿದ ಸಚಿವ ಬೈರೇಗೌಡ ಅವರ ಉತ್ತರದಿಂದ ಆಕ್ರೋಶಿತರಾದರು. ಎಲ್ಲ ವಿಪತ್ತು ಎದುರಿಸಲು ಸನ್ನದ್ಧರಿದ್ದೇವೆ ಎನ್ನುವ ಗಡಿಬಿಡಿಯ ಉತ್ತರ ನೀಡಿದ ತಹಶೀಲ್ದಾರ್‌ ಒಬ್ಬರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ವ್ಯಾಪ್ತಿಯಲ್ಲಿ ಮುಂದೆ ಆಗುವ ಅನಾಹುತಗಳಿಗೆ ನೀವೇ ಜವಾಬ್ದಾರಿ ವಹಿಸಿಕೊಳ್ಳುತ್ತೀರಾ ಎಂದು ಚಾಟಿ ಬೀಸಿದರು. ಅಧಿಕಾರಿಗಳು ಇಂತಹ ಗಂಭೀರ ವಿಚಾರಗಳಿಗೆ ಸಂವೇದನೆ ಬೆಳೆಸಿಕೊಳ್ಳಿ ಎಂದರು.

ಟಾಪ್ ನ್ಯೂಸ್

koratagere

Koratagere: ಎರಡು ವಿದ್ಯುತ್‌ ಉಪಸ್ಥಾವರ ಘಟಕಗಳ ಉದ್ಘಾಟನೆ

Amit Shah

3 new criminal laws; ತಮಿಳು ಸೇರಿ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ: ಶಾ

Shirva: ಅಪರಿಚಿತ ವ್ಯಕ್ತಿ ಆತ್ಮಹತ್ಯೆ

Shirva: ಅಪರಿಚಿತ ವ್ಯಕ್ತಿ ಆತ್ಮಹತ್ಯೆ

America ಸೌಂದರ್ಯ ಸ್ಪರ್ಧೆ: ಶಿರಸಿ ಮೂಲದ ಡಾ|ಶ್ರುತಿಗೆ ಕಿರೀಟ

America ಸೌಂದರ್ಯ ಸ್ಪರ್ಧೆ: ಶಿರಸಿ ಮೂಲದ ಡಾ|ಶ್ರುತಿಗೆ ಕಿರೀಟ

CM Siddu

Leadership change; ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ: ಸಿಎಂ ಸಿದ್ದರಾಮಯ್ಯ

1-csaddasd

Hosanagara: ಅಪಘಾತವಾಗಿ ಪಲ್ಟಿಯಾದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸರಕಾರಿ ಬಸ್

Rabakavi

Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಜಪೆ: ಎತ್ತ ಹೋಗಲಿ? ಎಡಕ್ಕೊ , ಬಲಕ್ಕೊ: ಗೊಂದಲದಲ್ಲಿ ವಾಹನ ಚಾಲಕರು

ಬಜಪೆ: ಎತ್ತ ಹೋಗಲಿ? ಎಡಕ್ಕೊ , ಬಲಕ್ಕೊ: ಗೊಂದಲದಲ್ಲಿ ವಾಹನ ಚಾಲಕರು

Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ

Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ

Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ

Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ

Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್‌ ತೋಡು ಕುಸಿತ

Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್‌ ತೋಡು ಕುಸಿತ

Ullal ಮದನಿ ನಗರ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

Ullal ಮದನಿ ನಗರ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

koratagere

Koratagere: ಎರಡು ವಿದ್ಯುತ್‌ ಉಪಸ್ಥಾವರ ಘಟಕಗಳ ಉದ್ಘಾಟನೆ

Amit Shah

3 new criminal laws; ತಮಿಳು ಸೇರಿ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ: ಶಾ

Shirva: ಅಪರಿಚಿತ ವ್ಯಕ್ತಿ ಆತ್ಮಹತ್ಯೆ

Shirva: ಅಪರಿಚಿತ ವ್ಯಕ್ತಿ ಆತ್ಮಹತ್ಯೆ

America ಸೌಂದರ್ಯ ಸ್ಪರ್ಧೆ: ಶಿರಸಿ ಮೂಲದ ಡಾ|ಶ್ರುತಿಗೆ ಕಿರೀಟ

America ಸೌಂದರ್ಯ ಸ್ಪರ್ಧೆ: ಶಿರಸಿ ಮೂಲದ ಡಾ|ಶ್ರುತಿಗೆ ಕಿರೀಟ

CM Siddu

Leadership change; ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.