![Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ](https://www.udayavani.com/wp-content/uploads/2024/07/u-415x256.jpg)
Udupi: ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಬೃಹತ್ ಮರ… ಮಲ್ಪೆ ರಾ. ಹೆದ್ದಾರಿ ತಾತ್ಕಾಲಿಕ ಬಂದ್
Team Udayavani, Jun 27, 2024, 9:04 AM IST
![Udupi: ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಬೃಹತ್ ಮರ… ಮಲ್ಪೆ ರಾ. ಹೆದ್ದಾರಿ ತಾತ್ಕಾಲಿಕ ಬಂದ್](https://www.udayavani.com/wp-content/uploads/2024/06/tree-2-620x397.jpg)
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಹಲವೆಡೆ ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಅದೇ ರೀತಿ ಆದಿ ಉಡುಪಿಯಲ್ಲಿ ಹೆದ್ದಾರಿಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದ ಪರಿಣಾಮ ಮಲ್ಪೆ ರಾ. ಹೆದ್ದಾರಿ ತಾತ್ಕಾಲಿಕ ಬಂದ್ ಆಗಿದೆ.
ಆದಿ ಉಡುಪಿ ಪಂದುಬೆಟ್ಟು ಸಮೀಪ ಬೃಹತ್ ಮರ ಧರೆಗುರುಳಿದೆ ಪರಿಣಾಮ ಮಲ್ಪೆ ರಸ್ತೆ ತಾತ್ಕಾಲಿಕ ಬಂದ್ ಆಗಿದೆ.
ಮಳೆ, ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಬುಧವಾರ ತಡರಾತ್ರಿ, ಗುರುವಾರ ಮುಂಜಾನೆ ಗಾಳಿಸಹಿತ ನಿರಂತರ ಮಳೆ ಸುರಿಯುತ್ತಿದ್ದು, ಹಲವೆಡೆ ಸಾಕಷ್ಟು ಹಾನಿ ಸಂಭವಿಸಿದೆ. ವಿಪರೀತ ಗಾಳಿ ಮಳೆಯಿಂದಾಗಿ ತಡರಾತ್ರಿ ಪಂದುಬೆಟ್ಟುವಿನಲ್ಲಿ ಮರವು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಪರಿಣಾಮ ಆರೇಳು ವಿದ್ಯುತ್ ಕಂಬ ಸಹಿತ, ವಿದ್ಯುತ್ ಲೈನ್ ಗಳು ನೆಲಕ್ಕೆಉರುಳಿ ಹಾನಿ ಸಂಭವಿಸಿದೆ. ಉಡುಪಿ- ಮಲ್ಪೆ ಹೆದ್ದಾರಿ ಸಂಪರ್ಕ ತಾತ್ಕಾಲಿಕ ಬಂದ್ ಆಗಿದ್ದು, ವಾಹನಗಳು ಪರ್ಯಾಯವ ಮಾರ್ಗದಲ್ಲಿ ಸಂಚರಿಸುತ್ತಿದೆ.
ತಡರಾತ್ರಿ ಮರ ಬಿದ್ದಿದ್ದರೂ ಬೆಳಗ್ಗೆ 7 ಗಂಟೆಯಾದರೂ ಸಂಬಂಧಪಟ್ಟ ಇಲಾಖೆಗಳು ಮರ ತೆರವುಗೊಳಿಸಲು ಮುಂದಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: Udupi; ಬೈಲಕೆರೆ ಬಳಿ ಮನೆಗಳಿಗೆ ನುಗ್ಗಿದ ನೀರು; ನಿವಾಸಿಗಳ ಸ್ಥಳಾಂತರ
ಟಾಪ್ ನ್ಯೂಸ್
![Udupi ಪತ್ರಿಕಾ ದಿನಾಚರಣೆ: ಸಮ್ಮಾನ, ಪ್ರತಿಭಾ ಪುರಸ್ಕಾರ](https://www.udayavani.com/wp-content/uploads/2024/07/u-415x256.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.