ಶಿವಮೂರ್ತಯ್ಯ ಸುರೇಬಾನರ ಚಿಂತನೆ ಅಜರಾಮರ: ವಿನಾಯಕ ಶಾಲದಾರ

Team Udayavani, Jun 27, 2024, 5:50 PM IST

ಶಿವಮೂರ್ತಯ್ಯ ಸುರೇಬಾನರ ಚಿಂತನೆ ಅಜರಾಮರ: ವಿನಾಯಕ ಶಾಲದಾರ

ಉದಯವಾಣಿ ಸಮಾಚಾರ
ನರಗುಂದ: ಮಹಾಜನ ವರದಿಯಂತೆ ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗವೆಂದು ಘಲಾಚ ಪಾಹಿಜಿ ಚಳುವಳಿ ವಿರುದ್ಧ ನರಗುಂದದಲ್ಲಿ ಬಂದ್‌ ಆಚರಿಸಿ ಬೆಳಗಾವಿ ಎಂದೆಂದೂ ಕರ್ನಾಟಕದ್ದೇ ಎಂದಿದ್ದ ಅಪ್ರತಿಮ ಹೋರಾಟಗಾರ ಶಿವಮೂರ್ತಯ್ಯ ಸುರೇಬಾನ ಅವರ ಚಿಂತನೆಗಳು ಅಜರಾಮರ ಎಂದು ಶಿಕ್ಷಕ ವಿನಾಯಕ ಶಾಲದಾರ ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ ಏಕೀಕರಣ ಯೋಧರ ಯಶೋಗಾಥೆ-14ರ ಕಾರ್ಯಕ್ರಮದಲ್ಲಿ ಹೋರಾಟಗಾರ ಶಿವಮೂರ್ತಯ್ಯ ಸುರೇಬಾನ ಅವರ ಕುರಿತು ಉಪನ್ಯಾಸ ನೀಡಿದರು.

ತಮ್ಮ ಬದುಕಿನುದ್ದಕ್ಕೂ ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದ ಶಿವಮೂರ್ತಯ್ಯ ಸುರೇಬಾನ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರೀಯವಾಗಿ ಇದ್ದರು.

ಭಾರತೀಯ ಸೇನೆಯಲ್ಲಿ ಯೋಧರಾಗಿದ್ದ ಶಿವಮೂರ್ತಯ್ಯನವರು ನಿವೃತ್ತಿ ನಂತರ ಅಳವಂಡಿ ಶಿವಮೂರ್ತಿ ಶ್ರೀಗಳ
ಅನುಯಾಯಿಗಳಾಗಿ ಅವರ ಪ್ರಭಾವದಿಂದ ಹುಬ್ಬಳ್ಳಿ ಗಲಭೆ ಮತ್ತು ತುಂಗಭದ್ರಾ ನದಿ ನೀರು ಹೋರಾಟದ ಮೂಲಕ ಕರ್ನಾಟಕ ಏಕೀಕರಣ  ಚಳವಳಿಯಲ್ಲಿ ಪಾಲ್ಗೊಂಡಿದ್ದ ಅವರ ಪಾತ್ರ ಹಿರಿದಾದುದು ಎಂದರು. ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಶ್ರೀ ಆಶೀರ್ವಚನ ನೀಡಿ, ಈ ಭಾಗದಲ್ಲಿ ಹೋರಾಟಕ್ಕೆ ಇನ್ನೊಂದು ಹೆಸರೆ ಶಿವಮೂರ್ತಯ್ಯನವರು ಎನ್ನುವ ಹಾಗೆ ಸಾಮಾಜಿಕ ಜೀವಿಗಳಾಗಿದ್ದ ಅವರು ಪ್ರತಿಯೊಂದು ಹೋರಾಟದಲ್ಲೂ ಮುಂಚೂಣಿಯಲ್ಲಿರುತ್ತಿದ್ದರು.

1980ರಲ್ಲಿ ನಡೆದ ರೈತರ ವಿವಿಧ ಬೇಡಿಕೆಗಳಿಗಾಗಿ ನಡೆದ ಹೋರಾಟದಲ್ಲಿ ಸಕ್ರಿಯರಾಗಿದ್ದ ಶಿವಮೂರ್ತಯ್ಯನವರು ಎರಡನೇ ಮಹಾ ಯುದ್ಧದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿ ಅಪ್ರತಿಮ ದೇಶಾಭಿಮಾನಿ ಹಾಗೂ ನಾಡಿನ ಅಭಿಮಾನಿಗಳಾಗಿದ್ದರು ಎಂದರು. ಈ ವೇಳೆ ಮಹೇಶ್ವರಯ್ಯ ಸುರೇಬಾನ ಅವರು ಮಾತನಾಡಿದರು. ತಿಮ್ಮಣ್ಣ ಆನೇಗುಂದಿ, ಡಾ| ಬಿ.ಎಸ್‌. ಕೋನನ್ನವರ, ಮಲ್ಲಪ್ಪ ಅರೆಬೆಂಚಿ, ವೀರಯ್ಯ ಸಾಲಿಮಠ, ಈರಣ್ಣ ಐನಾಪೂರ ಇದ್ದರು.

ಶಿವಮೂರ್ತಯ್ಯನವರ ಹೋರಾಟದ ಬದುಕು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಏಕೀಕರಣ ಪ್ರಶಸ್ತಿ ಪಡೆದ ಅವರು ಬಂಡಾಯದ ನಾಡಿನ ತಾಯಿ ಕನ್ನಡಾಂಬೆಯ ಹೆಮ್ಮೆಯ ಪುತ್ರರಾಗಿದ್ದರು.

*ಶ್ರೀ ಶಾಂತಲಿಂಗ ಸ್ವಾಮಿಗಳು, ದೊರೆಸ್ವಾಮಿ 
ವಿರಕ್ತಮಠ, ಭೈರನಹಟ್ಟಿ

ಟಾಪ್ ನ್ಯೂಸ್

Kiccha Sudeep: ಶೀಘ್ರದಲ್ಲಿ ʼMaxʼ ಮೆಗಾ ಅಪ್ಡೇಟ್..‌ ಆ.15ಕ್ಕೆ ರಿಲೀಸ್‌ ಆಗೋದು ಪಕ್ಕಾ?

Kiccha Sudeep: ಶೀಘ್ರದಲ್ಲಿ ʼMaxʼ ಮೆಗಾ ಅಪ್ಡೇಟ್..‌ ಆ.15ಕ್ಕೆ ರಿಲೀಸ್‌ ಆಗೋದು ಪಕ್ಕಾ?

Siruguppa: ಐತಿಹಾಸಿಕ ಬೂದಿ ದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ಭೇಟಿ… ಪರಿಶೀಲನೆ

Siruguppa: ಐತಿಹಾಸಿಕ ಬೂದಿ ದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ಭೇಟಿ… ಪರಿಶೀಲನೆ

krishne-bhyre-gowda

ಸರಕಾರಿ ಕಾರ್ಯಕ್ರಮಕ್ಕೆ ಬಂದು ಸ್ವಾಮೀಜಿ ರಾಜಕೀಯ ಮಾತಾಡಿದರೆ ಹೇಗೆ?: ಕೃಷ್ಣಭೈರೇಗೌಡ ಅಸಮಾಧಾನ

Vijayapura: 18 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದ ವಿಜಯಪುರದ ರೈತ ಸಾಕಿದ್ದ ಎತ್ತು.!

Vijayapura: 18 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದ ವಿಜಯಪುರದ ರೈತ ಸಾಕಿದ್ದ ಎತ್ತು.!

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್…  25 ಲಕ್ಷಕ್ಕೆ ಡೀಲ್

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bommai BJP

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ: ಬಸವರಾಜ ಬೊಮ್ಮಾಯಿ

2-gadag

Gadag: ಪೊಲೀಸರ ಮೇಲೆ‌ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು

1-ree

Mundargi; ನೀರಾವರಿ ಇಲಾಖೆ‌ ಕಚೇರಿ ಒಳಗೇ ಆತ್ಮಹತ್ಯೆಗೆ ಮುಂದಾದ ರೈತ

Gangavathi

ಗಂಗಾವತಿ: ಮುಂಗಾರಿಗೆ ಕೆರೆ, ಕೊಳ್ಳಗಳು ಸಂಪೂರ್ಣ ಭರ್ತಿ

Education ಇಲಾಖೆಯ ಆದೇಶಕ್ಕೆ ಕಿಮ್ಮತ್ತು ನೀಡದ ಸೆಂಟ್ ಪಾಲ್ಸ್ ಆಂಗ್ಲ ಮಾಧ್ಯಮ ಶಾಲೆ

Education ಇಲಾಖೆಯ ಆದೇಶಕ್ಕೆ ಕಿಮ್ಮತ್ತು ನೀಡದ ಸೆಂಟ್ ಪಾಲ್ಸ್ ಆಂಗ್ಲ ಮಾಧ್ಯಮ ಶಾಲೆ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

Kiccha Sudeep: ಶೀಘ್ರದಲ್ಲಿ ʼMaxʼ ಮೆಗಾ ಅಪ್ಡೇಟ್..‌ ಆ.15ಕ್ಕೆ ರಿಲೀಸ್‌ ಆಗೋದು ಪಕ್ಕಾ?

Kiccha Sudeep: ಶೀಘ್ರದಲ್ಲಿ ʼMaxʼ ಮೆಗಾ ಅಪ್ಡೇಟ್..‌ ಆ.15ಕ್ಕೆ ರಿಲೀಸ್‌ ಆಗೋದು ಪಕ್ಕಾ?

Siruguppa: ಐತಿಹಾಸಿಕ ಬೂದಿ ದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ಭೇಟಿ… ಪರಿಶೀಲನೆ

Siruguppa: ಐತಿಹಾಸಿಕ ಬೂದಿ ದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ಭೇಟಿ… ಪರಿಶೀಲನೆ

krishne-bhyre-gowda

ಸರಕಾರಿ ಕಾರ್ಯಕ್ರಮಕ್ಕೆ ಬಂದು ಸ್ವಾಮೀಜಿ ರಾಜಕೀಯ ಮಾತಾಡಿದರೆ ಹೇಗೆ?: ಕೃಷ್ಣಭೈರೇಗೌಡ ಅಸಮಾಧಾನ

Vijayapura: 18 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದ ವಿಜಯಪುರದ ರೈತ ಸಾಕಿದ್ದ ಎತ್ತು.!

Vijayapura: 18 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದ ವಿಜಯಪುರದ ರೈತ ಸಾಕಿದ್ದ ಎತ್ತು.!

12

Chowkidar Movie: ಚೌಕಿದಾರ್‌ಗೆ ಮುಹೂರ್ತ ಇಟ್ರಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.