ಕಾರಟಗಿ: ಗುಡಿಗಾಗಿ ಅನಧಿಕೃತ ಗುಡಿಸಲು ತೆರವು ಕಾರ್ಯಾಚರಣೆ
Team Udayavani, Jun 27, 2024, 9:54 AM IST
ಉದಯವಾಣಿ ಸಮಾಚಾರ
ಕಾರಟಗಿ: ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಆರಂಭಿಸುವ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತಲಿನ ಅನಧಿಕೃತ ಗುಡಿಸಲು ಮತ್ತು ಶೆಡ್‌ಗಳನ್ನು ಪುರಸಭೆ ಸಿಬ್ಬಂದಿ ಜನರ ಸಹಕಾರದೊಂದಿಗೆ ಬುಧವಾರ ತೆರವು ಕಾರ್ಯ ಆರಂಭಿಸಿದರು.
ಕಳೆದ ಮೂರ್‍ನಾಲ್ಕು ತಿಂಗಳ ಹಿಂದೆ ದೇಗುಲ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ದೇಗುಲ ಸುತ್ತಲಿನ ಸ್ಥಳ ಪರಿಶೀಲನೆ ಬಳಿಕ ಸುತ್ತಲಿನ ಪ್ರದೇಶದಲ್ಲಿ ಅನಧಿಕೃತ ಶೆಡ್ ಹಾಗೂ ಗುಡಿಸಲು ತೆರವಿಗೆ ಸೂಚನೆ ನೀಡಿದ್ದರು.
ಇದೇ ವೇಳೆ ದೇವಿಕ್ಯಾಂಪ್‌ನ ಗುಡ್ಡದ ಬಳಿ ನಿವೇಶನ ನೀಡುವ ಭರವಸೆ ನೀಡಿ ತೆರವು ಕಾರ್ಯಕ್ಕೆ ಕಾಲಾವಕಾಶವನ್ನು
ಸಚಿವರು ನೀಡಿದ್ದರು. ಆದರೆ ನೀಡಿದ್ದ ಕಾಲಾವಕಾಶ ಮುಗಿದರೂ ನಿವಾಸಿಗಳ್ಯಾರು ತೆರವು ಕಾರ್ಯಕ್ಕೆ ಮುಂದಾಗಿರಲಿಲ್ಲ. ಅಲ್ಲದೆ ಅನಧಿಕೃತ ಶೆಡ್ ತೆರವಿಗೆ ಅನುವು ಮಾಡಿಕೊಡುವಂತೆ ಆಗ್ರಹಿಸಿ ಪಟ್ಟಣದ ವಿವಿಧ ಸಂಘಟನೆ, ಜನರು ಹಾಗೂ ಸರ್ವ ಧರ್ಮಿಯರು ತಾಲೂಕು ದಂಡಾಧಿಕಾರಿ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಮನವಿ ಸಲ್ಲಿಸಿದ್ದರು. ತೆರವು ಕಾರ್ಯಕ್ಕೆ ಬುಧವಾರ ಆಗಮಿಸಿದ ಬುಲ್ಡೊಜರ್ ವಾಹನಕ್ಕೆ ದೇಗುಲದ ಅರ್ಚಕ ಬಸವರಾಜ ಬಡಿಗೇರ ಪೂಜೆ ಸಲ್ಲಿಸಿದರು.
ನಂತರ ತೆರವು ಕಾರ್ಯ ಆರಂಭಗೊಂಡಿತು. ಮಂಗಳವಾರದಿಂದಲೇ ಅಲ್ಲಿನ ಕೆಲ ನಿವಾಸಿ ತಮ್ಮ ಗುಡಿಸಲು ಮತ್ತು ಶೆಡ್‌ಗಳನ್ನು ಸ್ವಯಂ ಪ್ರೇರಿತರಾಗಿ ತೆರವಿಗೆ ಮುಂದಾಗಿದ್ದರು. ಅಲ್ಲದೆ ದ್ಯಾವಮ್ಮ ದೇವಿ ದೇಗುಲದ ಸುತ್ತಲಿನ ಪರಿಸರದಲ್ಲಿ ಅನಧಿಕೃತವಾಗಿ ಹಾಕಿರುವ ಶೆಡ್ ಮತ್ತು ಗುಡಿಸಲು ತೆರವಿಗೆ ಧ್ವನಿವರ್ಧಕದ ಮೂಲಕ ಸೂಚನೆ ನೀಡಿದ್ದರು.
ಈ ಸಂದರ್ಭದಲ್ಲಿ ಪಿಐ ಪ್ರದೀಪ್ ಬಿಸೆ, ಪಿಎಸ್‌ಐ ಕಾಮಣ್ಣ, ಎಎಸ್‌ಐ ಬೊರಣ್ಣ, ಪುರಸಭೆ ವ್ಯವಸ್ಥಾಪಕ ಪರಮೇಶ್ವರ, ಪುರಸಭೆ
ಅಧಿಕಾರಿಗಳಾದ ಆದೇಪ್ಪ, ಅನಂತ ಸೇರಿದಂತೆ ಪಟ್ಟಣದ ಹಿರೇಮಠದ ಮರುಳಸಿದ್ಧಯ್ಯಸ್ವಾಮಿ, ಕಲ್ಲನಗೌಡ ಮಾ.ಪಾಟೀಲ್, ಮರಿಯಪ್ಪ ಸಾಲೋಣಿ, ನಾರಾಯಣ ಇಡಿಗೇರ, ತಾಯಪ್ಪ ಕೊಟ್ಯಾಳ, ಯೂಸುಫ ಸಾಬ್, ಅಯ್ಯಪ್ಪ ಬಂಡಿ,
ರಮೆಶ ಬಂಗಿ, ಹನಮಂತ ಸಿಂಗ್ ಕೋಟೆ, ವಿರುಪಣ್ಣ ಸಾಲೋಣಿ, ಖಾಜಾ ಹುಸೇನ್ ಮುಲ್ಲಾ, ಶ್ರೀನಿವಾಸ ಗೋಮರ್ಸಿ, ಹನುಮಂತಪ್ಪ ಸಿಂಗಾಪೂರ, ವೆಂಕಟೇಶ ಈಡಿಗೇರ, ನ್ಯಾಯವಾದಿ ವೀರೇಶ, ಶಂಕ್ರಪ್ಪ ಮೆಗೂರ, ಸೇರಿದಂತೆ ಸಮುದಾಯದ ಪ್ರಮುಖರು, ಜೆಸ್ಕಾಂ ಸಿಬ್ಬಂದಿ, ಪುರಸಭೆ ಪೌರಕಾರ್ಮಿಕರು ಇದ್ದರು.
ಮೂರು ಎಕರೆ ಭೂಮಿ ಎಂದು ಅಂದಾಜಿಸಿ ನಕ್ಷೆ ಸಿದ್ಧಪಡಿಸಲಾಗಿದೆ. ಇನ್ನೆರೆಡು ದಿನದಲ್ಲಿ ಸಂಪೂರ್ಣ ತೆರವು ಕಾರ್ಯ ಮುಗಿಸಿ ಬಳಿಕ ಸರ್ವೇ ನಡೆಸಿ ಜಾಗವನ್ನು ಸಂಪೂರ್ಣ ಹದ್ದು ಬಸ್ತು ಮಾಡಲಾಗುವುದು.
ಸುರೇಶ, ಪುರಸಭೆ ಮುಖ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.