B. S. Yediyurappa: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಬಿಎಸ್‌ವೈ ವಿರುದ್ಧ ಚಾರ್ಜ್‌ಶೀಟ್
ಸಿಐಡಿ ಅಧಿಕಾರಿಗಳಿಂದ 750 ಪುಟದ ಆರೋಪಪಟ್ಟಿ ಸಲ್ಲಿಕೆ
Team Udayavani, Jun 28, 2024, 6:55 AM IST
ಬೆಂಗಳೂರು: ಸಹಾಯ ಮಾಡುವ ನೆಪದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಅದಕ್ಕೆ ಪೂರಕವಾದ ಕೆಲ ವಿಡಿಯೋಗಳನ್ನು ತಮ್ಮ ಸಹಚರರ ಮೂಲಕ ಡಿಲೀಟ್ ಮಾಡಿಸಿದ್ದಾರೆ. ಜತೆಗೆ ಪ್ರಕರಣ ಮುಚ್ಚಿಹಾಕಲು 2 ಲಕ್ಷ ರೂ. ಕೊಡಿಸಿದ್ದಾರೆ ಎಂಬ ಮಹತ್ವದ ಆರೋಪ ಈಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೇಳಿಬಂದಿದೆ. ಬಿಎಸ್‌ವೈ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಈ ಅಂಶ ಪ್ರಮುಖವಾಗಿದೆ.
ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಮೊದಲ ಆರೋಪಿ, ಅವರ ಸಹಚರ 2ನೇ ಆರೋಪಿ ವೈ.ಎಂ. ಅರುಣ್, 3ನೇ ಆರೋಪಿ ಎಂ.ರುದ್ರೇಶ್ ಮತ್ತು 4ನೇ ಆರೋಪಿ ಜಿ.ಮರಿಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
ಹುಳಿಮಾವು ನಿವಾಸಿ 47 ವರ್ಷದ ಮಹಿಳೆಯೊಬ್ಬರು ಕಳೆದ ಫೆಬ್ರವರಿ 2ರಂದು ತಮ್ಮ ಪುತ್ರಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸುವ ವಿಚಾರದಲ್ಲಿ ಸಹಾಯ ಕೋರಿ ಯಡಿಯೂರಪ್ಪ ನಿವಾಸಕ್ಕೆ ಬಂದಿದ್ದರು. ಆಗ ಯಡಿಯೂರಪ್ಪ, ಅಪ್ರಾಪೆ¤ಯನ್ನು ಕೋಣೆಗೆ ಕರೆದೊಯ್ದು ಬಾಗಿಲು ಹಾಕಿಕೊಂಡು, ನಿನ್ನ ಮೇಲೆ ಕೃತ್ಯ ಎಸಗಿದ ಆರೋಪಿಯ ಮುಖ ನೆನಪಿದೆಯೇ ಎಂದು ಕೇಳುತ್ತಾ, ಅಪ್ರಾಪೆ¤ಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಬಳಿಕ ಬಾಲಕಿ ಗಾಬರಿಗೊಂಡು ಬಾಗಿಲು ತೆರೆಯುವಂತೆ ಹೇಳಿದಾಗ, ತಮ್ಮ ಜೇಬಿನಲ್ಲಿದ್ದ ಹಣ ಕೊಟ್ಟಿದ್ದಾರೆ. ಆ ನಂತರ ಕೋಣೆಯಿಂದ ಹೊರಗಡೆ ಬಂದು, ಬಾಲಕಿಯ ತಾಯಿಗೆ “ಈ ಕೇಸ್‌ನಲ್ಲಿ ಸಹಾಯ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿ, ಆಕೆಗೂ ಒಂದಷ್ಟು ಹಣ ಕೊಟ್ಟು ಕಳುಹಿಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.
ಸಾಕ್ಷ್ಯ ನಾಶಪಡಿಸಿದ್ದ ಬಿಎಸ್‌ವೈ:
ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿದ್ದ ಸಂತ್ರಸ್ತೆ ತಾಯಿ ಮಾಡಿಕೊಂಡಿದ್ದ ವಿಡಿಯೋವನ್ನು ಆಕೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದರು. ಅದನ್ನು ಗಮನಿಸಿದ ಬಿಎಸ್‌ವೈ, ತಮ್ಮ ಸಹಚರರಾದ ಅರುಣ್, ರುದ್ರೇಶ್, ಮರಿಸ್ವಾಮಿ ಮೂಲಕ ವಿಡಿಯೋ ಡಿಲೀಟ್ ಮಾಡಿಸಿ, ಆಕೆಗೆ 2 ಲಕ್ಷ ರೂ. ಕೊಟ್ಟು ಕಳುಹಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಯಡಿಯೂರಪ್ಪ ವಿರುದ್ಧ ಪೋಕೊÕà ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ 354(ಎ)ಲೈಂಗಿಕ ದೌರ್ಜನ್ಯ, ಐಪಿಸಿ 204- ಸಾಕ್ಷ್ಯ ನಾಶಪಡಿಸಿರುವುದು, ಐಪಿಸಿ 214 ಆರೋಪ ಮರೆ ಮಾಚಲು ಹಣದ ಆಮಿಷವೊಡ್ಡಿದ ಆರೋಪದಡಿ ಕೇಸ್ ದಾಖಲಿಸಲಾಗಿದೆ.
ಕೇಸ್‌ನಲ್ಲಿ ಇತರೆ ಮೂವರ ಪಾತ್ರವೇನು?:
ಯಡಿಯೂರಪ್ಪ ಸೂಚನೆ ಮೇರೆಗೆ ಇತರೆ ಆರೋಪಿಗಳಾದ ಅರುಣ್, ರುದ್ರೇಶ್, ಮರಿಸ್ವಾಮಿ, ಸಂತ್ರಸ್ತೆ ತಾಯಿಯನ್ನು ಪತ್ತೆ ಹಚ್ಚಿ, ಬಿಎಸ್‌ವೈ ಮನೆಗೆ ಕರೆತಂದಿದ್ದರು. ಬಳಿಕ ಆಕೆ ಫೇಸ್‌ಬುಕ್‌ನಲ್ಲಿ ಆಕೆ ಪೋಸ್ಟ್ ಮಾಡಿದ್ದ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಅಲ್ಲದೆ, ಆಕೆಯ ಫೋನ್‌ನಲ್ಲಿದ್ದ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದರು. ಆ ನಂತರ ಆಕೆಗೆ ರುದ್ರೇಶ್ 2 ಲಕ್ಷ ರೂ. ಕೊಟ್ಟು ಈ ವಿಚಾರ ಹೊರಗಡೆ ಬಾಯಿಬಿಡದಂತೆ ಹೇಳಿ ಕಳುಹಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ತನಿಖಾಧಿಕಾರಿಗಳು ಉಲ್ಲೇಖೀಸಿದ್ದಾರೆ. ಈ ಮೂವರ ವಿರುದ್ಧ ಸಾಕ್ಷ್ಯ ನಾಶ ಮತ್ತು ಅರೋಪ ಮರೆ ಮಾಚಲು ಹಣದ ಆಮಿಷವೊಡ್ಡಿದ್ದ ಆರೋಪದಡಿ ಕೇಸ್ ದಾಖಲಿಸಲಾಗಿದೆ.
750 ಪುಟಗಳ ಆರೋಪಪಟ್ಟಿ ಸಲ್ಲಿಕೆ:
ಸಿಐಡಿ ತನಿಖಾಧಿಕಾರಿಗಳು ಕೋರ್ಟ್‌ಗೆ ಬಿಎಸ್‌ವೈ ಸೇರಿ ನಾಲ್ವರು ಆರೋಪಿಗಳ ವಿರುದ್ಧ 750 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಜತೆಗೆ ಪ್ರಕರಣದಲ್ಲಿ 75 ಸಾಕ್ಷ್ಯಗಳ ಹೇಳಿಕೆ ಹಾಗೂ ಘಟನಾ ಸ್ಥಳದ ಮಹಜರು ಪ್ರಮಾಣ ಪತ್ರ, ಸಂತ್ರಸ್ತೆ ಹಾಗೂ ಆಕೆಯ ತಾಯಿ ಹೇಳಿಕೆಯನ್ನು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.
ಪ್ರಕರಣ ಹಿನ್ನೆಲೆ?
ಸಂತ್ರಸ್ತೆ ತಾಯಿ ನೀಡಿದ್ದ ದೂರು ಆಧರಿಸಿ ಯಡಿಯೂರಪ್ಪ ವಿರುದ್ಧ ಮಾ.14ರಂದು ಸದಾಶಿವನಗರ ಠಾಣೆ ಪೊಲೀಸರು ಪೋಕೊÕà ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ನಂತರ ತಮಗೆ ಜೀವ ಬೆದರಿಕೆ ಇರುವುದಾಗಿ ದೂರುದಾರ ಮಹಿಳೆ ಆರೋಪಿಸಿದ್ದರು. ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿತ್ತು. ಬಳಿಕ ಪ್ರಕರಣದ ಪ್ರಮುಖ ಆರೋಪಿ ಬಿಎಸ್‌ವೈ ಸೇರಿ ನಾಲ್ವರು ಆರೋಪಿಗಳ ವಿಚಾರಣೆ ನಡೆಸಿ ಇದೀಗ ಆರೋಪಪಟ್ಟಿ ಸಲ್ಲಿಸಿದೆ. ಅದಕ್ಕೂ ಮೊದಲು ಬಿಎಸ್‌ವೈ 2 ಬಾರಿ ಸಿಐಡಿ ವಿಚಾರಣೆಗೆ ಹಾಜರಾಗಿದ್ದರು. ಮೇ 26ರಂದು ಸಂತ್ರಸ್ತೆ ತಾಯಿ ಅನಾರೋಗ್ಯಕ್ಕೊಳಗಾಗಿ ಮೃತಪಟ್ಟಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.