India ಹಿಂದೂ ರಾಷ್ಟ್ರವಲ್ಲ ಇದಕ್ಕೆ ಫಲಿತಾಂಶ ಸಾಕ್ಷಿ:ಅಮರ್ತ್ಯ ಸೇನ್
Team Udayavani, Jun 28, 2024, 6:34 AM IST
ಕೋಲ್ಕತಾ: “ಭಾರತ ಹಿಂದೂ ರಾಷ್ಟ್ರವಲ್ಲ’ ಎಂಬುದಕ್ಕೆ ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಹೇಳಿದ್ದಾರೆ. ಬಂಗಾಲಿ ಸುದ್ದಿಮಾಧ್ಯಮವೊಂದರ ಜತೆ ಮಾತನಾಡಿ, ವಿಚಾರಣೆಯಿಲ್ಲದೇ ಜನರನ್ನು ಕಂಬಿಯ ಹಿಂದೆ ಇರಿಸುವ ಕ್ರಮ ಬ್ರಿಟಿಷ್ ಕಾಲದಿಂದ ಈವರೆಗೂ ಮುಂದುವರಿದಿದೆ. ಅದರಲ್ಲೂ ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿ ಸರಕಾರದಲ್ಲಿ ಇಂಥ ಪ್ರಕರಣ ಹೆಚ್ಚಾಗಿದೆ. ಪ್ರತೀ ಚುನಾವಣೆ ಬಳಿಕ ಬದಲಾವಣೆ ಕಾಣುತ್ತಿದೆ. ಈ ಬಾರಿ ಭಾರತ ಹಿಂದೂ ರಾಷ್ಟ್ರವಲ್ಲ ಎಂಬುದು ತಿಳಿದುಬಂದಿದೆ ಎಂದರು.
ಪ್ರಖ್ಯಾತ ಅರ್ಥಶಾಸ್ತ್ರಜ್ಞ, ಸೇನ್ ರಾಜಕೀಯವಾಗಿ ಮುಕ್ತ ಮನಸ್ಸಿನ ಅಗತ್ಯವನ್ನು ಒತ್ತಿಹೇಳಿದರು, ವಿಶೇಷವಾಗಿ ಜಾತ್ಯತೀತ ಸಂವಿಧಾನವನ್ನು ಹೊಂದಿರುವ ಜಾತ್ಯತೀತ ರಾಷ್ಟ್ರವಾಗಿ ಭಾರತದ ಸ್ಥಾನಮಾನವನ್ನು ನೀಡಲಾಗಿದೆ. ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಪರಿವರ್ತಿಸುವ ಕಲ್ಪನೆಯು ಸೂಕ್ತವೆಂದು ನಾನು ಪರಿಗಣಿಸುವುದಿಲ್ಲ ಎಂದುರು.
ಅಯೋಧ್ಯೆ(ಫೈಜಾಬಾದ್) ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸ್ಥಾನ ಕಳೆದುಕೊಂಡಿರುವುದನ್ನು ಭಾರತಕ್ಕೆ ಹಿಂದೂ-ಕೇಂದ್ರಿತ ಗುರುತನ್ನು ರಚಿಸಲು ಬಿಜೆಪಿಯ ಪ್ರಯತ್ನಗಳ ನಿರಾಕರಣೆ ಎಂದು ವ್ಯಾಖ್ಯಾನಿಸಬಹುದು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.