Father: ಬಾಳದಾರಿಯಲ್ಲಿ ಅಪ್ಪ ಎಂಬ ಭರವಸೆ


Team Udayavani, Jun 28, 2024, 2:52 PM IST

8-uv-fusion

ಅಪ್ಪ  ಎಂಬ ಒಂದು ಪದ ಎರಡು ಅಕ್ಷರಕ್ಕಿರುವ  ಶಕ್ತಿ ನಿಜಕ್ಕೂ ಅದ್ಭು ತವೆನಿಸುವುದು. ಅವ ಗದರಿಕೆಯೊಳಗೆ ಮೃದು ಮನಸ್ಸನ್ನು ಮರೆಮಾಚಿದ ಸರದಾರ. ಮಗನಿಗೆ ಅಮ್ಮನ ಮೇಲೆ  ಒಲವಾದರೆ ಮಗಳಿಗೆ ತಂದೆಯ ಮೇಲೆ ಸ್ವಲ್ಪ ಒಲವು ಹೆಚ್ಚು. ಅನುಭವವಿಲ್ಲದಿದ್ದರೂ ಅಲ್ಪ ಸ್ವಲ್ಪ ಅರಿತವಳು ನಾ.

ಒಬ್ಬ ಮಗುವಿನ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಕನಸುಗಳಿಗೆ ಸೇತುವೆಯಾಗಿ ಕೈ ಹಿಡಿದು ನಡೆಸುವ ಜಗತ್ತಿನ ಅದ್ಭುತ , ಪರಿಶುದ್ಧ ಪ್ರೀತಿಯ ಸಾಹುಕಾರರು ಅಪ್ಪ -ಅಮ್ಮ. ಜನ್ಮ ನೀಡಿದ್ದು ಜನನಿಯಾದರು ಜವಾಬ್ದಾರಿ ಹೊರುವುದು ತಂದೆ, ಕನಸುಗಳಿಗೆ ಸ್ಫೂರ್ತಿ ತಾಯಿ ತುಂಬಿದರೆ,ಬೆವರಿಳಿಸಿ ಕಾಯಕಯೋಗಿಯಾಗಿ ದುಡಿದು ಮಗುವಿನ ಸಾಧನೆಯ ಹಿಂದೆ ನಿಲ್ಲುವುದು ತಂದೆ. ಎಷ್ಟೊಂದು ಸುಂದರವಾದ ಸೇತುವೆಗಳಾಗಿ ಮಗುವಿನ ಭವಿಷ್ಯದ ಹಾದಿಗೆ ದಾರಿದೀಪವಾಗಿ ಬೆಳಗುತ್ತಾರೆ ಅಲ್ಲವೇ.

ಆದರೆ ಎಲ್ಲರ ಬದುಕು ಒಂದೇ ಪಥದಲ್ಲಿ ಸಾಗಲಾರದು, ಕೆಲವೊಮ್ಮೆ  ಕೆಲವರ ಬದುಕು ಬಹು ದೊಡ್ಡ ಅನಿರೀಕ್ಷಿತ ತಿರುವು ಪಡೆದು ಸಾಗುವಂತ ಕ್ಷಣಗಳು ಬಹು ಕಹಿಯಾಗಿರುತ್ತದೆ. ಮಕ್ಕಳ ಭವಿಷ್ಯದ ರಥವು  ತಂದೆ – ತಾಯಿಗಳ ಜವಾಬ್ದಾರಿಯ ದಾರಿಯಲ್ಲಿ ಸಾಗುವುದು.ಆದರೆ  ವಿಧಿಯಾಟವೋ ದುರದೃಷ್ಟವೋ ಜವಾಬ್ದಾರಿಯೂ ಕೆಲವೊಮ್ಮೆ ಒಬ್ಬರ ಹೆಗಲ ಮೇಲೆ ಹೊರೆಯಾಗುವ ಸಂದರ್ಭಗಳು ಕೆಲವೊಬ್ಬರ ಜೀವನದಲ್ಲಿ ಬಂದೊದಗುವ ಪರಿಸ್ಥಿತಿಗಳು ಇವೆ .  ಇದು  ಅದೆಷ್ಟೋ ಜನರ ಬಾಳಿನಲ್ಲಿ  ಅರಗಿಸಿಕೊಳ್ಳಲಾಗದ ನೋವು ಹೌದು.

ಅವನಿರದ ಅಪೂರ್ಣ ಬದುಕು ನನ್ನದು.

ನನ್ನ ಬಾಳ ಪುಟದೊಳಗೆ  ಅವನಿಲ್ಲದ ಕ್ಷಣ –  ದಿನಗಳ ಪುಟಗಳ ಅಧ್ಯಾಯವೇ ತುಂಬಿದೆ . ನೆನಪುಗಳ  ಕಿರು ಹೊತ್ತಿಗೆಯೂ ಇರದೇ ಎಲ್ಲವೂ ಬರೀ ಹಾಳೆಗಳು. ಬರೆಯಬಹುದದಾರೂ ಏನು ಅವನ ನೆನಪುಗಳೇ ಇಲ್ಲದ ಅಧ್ಯಾಯವನ್ನು ಪೂರ್ಣಗೊಳಿಸುವುದಾದರು ಹೇಗೆ?

ಅಪ್ಪ ಎಂಬ ಅದ್ಬುತ ಅಧ್ಯಾಯವು ವಿಧಿಯ ಕ್ರೂರ ಆಟಕ್ಕೆ  ವಿರಾಮ  ಕಂಡಿರುವಾಗ .ಅರಿವಿರದ ಆ ಮುಗª ಬಾಲ್ಯ ಅವನ ಪ್ರೀತಿಯ ಆಸರೆಯಿಲ್ಲದೆ ತಾಯಿಯ ಪ್ರೀತಿಯ ಅಕ್ಕರೆಯೊಂದಿಗೆ ಸಾಗಿತ್ತು. ನೋವುಗಳು ಅರಿವಿನ ಬಿಂಬ ಮನದಲಿ ಮೂಡುವ ಮೊದಲೇ ಪುಟ್ಟ ಮನಸಿನಲಿ ಅವನಿಲ್ಲದ ಕೊರಗು ತುಂಬಿಸಿತ್ತು.ನಿರೀಕ್ಷೆಗೂ ಮೀರಿದ ಹೊಡೆತದ ನೋವು ಕರಗದೆ ಇಂದಿಗೂ  ಮನಸನ್ನು ಮೂಕವಾಗಿಸಿದೆ.

ಹೆಣ್ಣು ಮಕ್ಕಳಿಗೆ ಅಪ್ಪ ಅಂದರೆ ಅದೇನೋ ಅಮ್ಮನಿಗಿಂತ ಸ್ವಲ್ಪ ಒಲವು ಅಪ್ಪನ ಕಡೆಗೆ. ಬಹುಷಃ ಅವ ನನ್ನ ಬಾಲ ದಿನಗಳಿಗೆ ಜೊತೆಯಾಗುತ್ತಿದರೆ ನನಿಗೂ ಹಾಗೇ ಅನಿಸುತಿತ್ತೋ ಏನೋ.ನನ್ನ ಪುಟಾಣಿ ಕೈಗಳಲ್ಲಿ ಅವನ ಕೈ ಹಿಡಿದು ನಡೆಯಲಿಲ್ಲ, ಅವ ಕೊಡಿಸಿದ ಕಿರುಗೆಜ್ಜೆ ಹಾಕಿ ಲಜ್ಜೆ ಇಟ್ಟು ಕುಣಿಯಲಾಗಲಿಲ್ಲ,ಬೆನ್ನ ಮೇಲೆ ಕೂತು ಆಟ ಆಡಲಿಲ್ಲ ಎಲ್ಲವೂ ತೆಳು ಪರದೆಯ ಮೇಲೆ ಅರೆ ಕ್ಷಣ ಮೂಡಿದ ಹುಸಿ ಕನಸಿಗಷ್ಟೇ ನನ್ನ ಬಾಳಲ್ಲಿ ಅವನ ನೆನಪು.

ಕನಸಿನ ಅಂಬಾರಿಯು ನಿಂತು ಕಾಯುತ್ತಿದ್ದರು. ಅವನೆಂದು ಅಂಬಾರಿಯ ಹೊತ್ತು ಸಾಗಲೇ ಇಲ್ಲ, ಆ ಅಂಬಾರಿಯೊಳಗೆ ನಾ ಕೂತು ಸವಾರಿ ಮಾಡಲೇ ಇಲ್ಲ. ಕಮರಿದ ಕನಸುಗಳು ಮುಂದೆ ನನಸಾಗುವ ಭರವಸೆ ಇರಲಿಲ್ಲವಾದರೂ, ಅಪ್ಪ ಎನ್ನುವ ನನ್ನ ಬದುಕಿನ ದೀಪ ಭರವಸೆಯ ನಂದಾದೀಪವಾಗಿ ನನ್ನೊಡನೆ ಸದಾ ಬೆಳಗಿ ಆಶೀರ್ವಾದ ಹಾರೈಕೆಯ ರಕ್ಷೆಯಾಗಿ ಕೈ ಹಿಡಿಯುವ ಬಲವಾದ ನಂಬಿಕೆ ನನ್ನದು.

ಕೈ ಹಿಡಿದು ನಡೆಸಲಿಲ್ಲವಾದರೂ ಪರೋಕ್ಷವಾಗಿ ಕೈ ಹಿಡಿದು ನಡೆಸುವವ, ಎಲ್ಲೆ ಎಡವಿದರು ಮೇಲೆತ್ತಿ ಧೈರ್ಯ ತುಂಬುವ, ನೋವ ತುಂಬಿದ ಮನಕೆ  ನನ್ನೊಳಗೆ  ಶಕ್ತಿ ತುಂಬುವವ ನನ್ನ ಜೊತೆಗೆ ಸದಾ ಬೆಂಗಾವ ಲಾಗಿ ಇರುವ ಭರವಸೆ ಅಪ್ಪ. ನನ್ನ  ಭವಿಷ್ಯವನ್ನು ಸದಾ ಬೆಳಗುವಂತೆ ಕಾಪಾಡುವ ಜೀವ  ಎಂದಿಗೂ ನನ್ನೊಂದಿಗೆ ಜೀವಂತವಾಗಿರುವುದು.

-ವಿಜಯಲಕ್ಷ್ಮೀ ಬಿ.

ವಿವೇಕಾನಂದ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

vijayapura

Vijayapura; ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ

Krishna-Byregowda

DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ

Kishkindha Anjanadri ,ಅಂಜನಾದ್ರಿ ಹುಂಡಿ,Africa, Italy, England currency

Kishkindha ಅಂಜನಾದ್ರಿ ಹುಂಡಿಯಲ್ಲಿ ಆಫ್ರಿಕಾ, ಇಟಲಿ, ಇಂಗ್ಲೆಂಡ್ ಕರೆನ್ಸಿ

ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Trekking: ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Modi-Lokasabha

Lokasabha: ಕಾಂಗ್ರೆಸ್‌ಗೆ 100ಕ್ಕೆ 99 ಸಿಕ್ಕಿದ್ದಲ್ಲ- ಪ್ರಧಾನಿ ಮೋದಿ ವಾಗ್ದಾಳಿ

T20 World Cup Final; ಸೂರ್ಯ ಕ್ಯಾಚ್ ಬಗ್ಗೆ ಅನುಮಾನ ಪಟ್ಟವರಿಗೆ ಸಿಕ್ಕಿತು ಉತ್ತರ

T20 World Cup Final; ಸೂರ್ಯ ಕ್ಯಾಚ್ ಬಗ್ಗೆ ಅನುಮಾನ ಪಟ್ಟವರಿಗೆ ಸಿಕ್ಕಿತು ಉತ್ತರ

Bidar; ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಶಿಕ್ಷಕರ ಅಮಾನತ್ತು

Bidar; ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಶಿಕ್ಷಕರ ಅಮಾನತ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

vijayapura

Vijayapura; ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ

3-crime

Crime News: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Krishna-Byregowda

DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ

Kishkindha Anjanadri ,ಅಂಜನಾದ್ರಿ ಹುಂಡಿ,Africa, Italy, England currency

Kishkindha ಅಂಜನಾದ್ರಿ ಹುಂಡಿಯಲ್ಲಿ ಆಫ್ರಿಕಾ, ಇಟಲಿ, ಇಂಗ್ಲೆಂಡ್ ಕರೆನ್ಸಿ

ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Trekking: ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.