Washington; ಬಿಸಿಲಿನ ಬೇಗೆಗೆ ಕರಗಿಯೇ ಹೋಯಿತು ಲಿಂಕನ್ ಪ್ರತಿಮೆ!
Team Udayavani, Jun 29, 2024, 6:10 AM IST
ವಾಷಿಂಗ್ಟನ್ ಡಿ.ಸಿ.: ಅಮೆರಿಕದ ವಾಷಿಂಗ್ಟನ್‌ನಲ್ಲಿ ತಾಪಮಾನದ ಏರಿಕೆಯಿಂದಾಗಿ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಮೇಣದ ಪ್ರತಿಮೆಯೇ ಕರಗಿಹೋಗಿದೆ.
ಇಲ್ಲಿನ ಶಾಲೆಯೊಂದರ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ 6 ಅಡಿ ಎತ್ತರದ ಲಿಂಕನ್ ಪ್ರತಿಮೆ ಕರಗಿದ್ದು, ಮೀಮ್‌ಗಳಿಗೆ ಆಹಾರವಾಗಿದೆ. ವಾಷಿಂಗ್ಟನ್‌ನಲ್ಲಿ ತಾಪಮಾನ 3 ಅಂಕಿಗಳನ್ನು ದಾಟಿದೆ. ಹೀಗಾಗಿ ಮೇಣದ ಪ್ರತಿಮೆ ಕರಗಿ, ಬೇರೆಯದೇ ಆಕಾರ ಪಡೆದಿದೆ. ಲಿಂಕನ್ ಅವರ ತಲೆಯ ಭಾಗ ಸಂಪೂರ್ಣವಾಗಿ ಕರಗಿ ಹೋಗಿದೆ ಎಂದು ವರದಿಗಳು ತಿಳಿಸಿವೆ.
ಈ ಪ್ರತಿಮೆ ನಿರ್ಮಿಸಿರುವ ಸ್ಯಾಂಡಿ ವಿಲಿಯಮ್ಸ್ ಈ ಕುರಿತಾಗಿ ಮಾಹಿತಿ ನೀಡಿದ್ದು, 60 ಡಿಗ್ರಿ ಸೆ. (140 ಡಿಗ್ರಿ ಫ್ಯಾ.) ತಾಪಮಾನವನ್ನು ತಾಳಿಕೊಳ್ಳುವಂತೆ ಈ ಪ್ರತಿಮೆ ನಿರ್ಮಾಣ ಮಾಡಿದ್ದೆವು. ಆದರೆ ವಾಷಿಂಗ್ಟನ್‌ನಲ್ಲಿ ಇಷ್ಟು ತಾಪಮಾನ ದಾಖಲಾಗಿಲ್ಲ ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ವಾಷಿಂಗ್ಟನ್‌ನಲ್ಲಿ ತಾಪಮಾನ ಸುಮಾರು 37 ಡಿಗ್ರಿಗೆ ಏರಿಕೆಯಾಗಿದೆ. ಬಾಲ್ಟಿಮೋರ್‌ನಲ್ಲಿ ಗರಿಷ್ಠ 37.77 ಡಿಗ್ರಿ ಸೆ. (101 ಡಿ. ಫ್ಯಾ)ಗೆ ತಾಪಮಾನ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.