Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್‌’

Team Udayavani, Jun 29, 2024, 6:14 AM IST

Rain ದ.ಕ.ದಲ್ಲಿ ಮಳೆ ಇಳಿಮುಖ: 3 ದಿನ “ಎಲ್ಲೋ ಅಲರ್ಟ್‌’

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ತೀವ್ರತೆ ತುಸು ಕ್ಷೀಣಗೊಂಡಿದೆ. ಶುಕ್ರವಾರ ಜಿಲ್ಲೆಯ ಕೆಲವು ಕಡೆ ಸಾಧಾರಣ ಮಳೆಯಾಗಿದೆ. ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಮಂಗಳೂರು ನಗರದಲ್ಲಿ ಮಧ್ಯಾಹ್ನ ತುಸು ಮಳೆಯಾಗಿದೆ.

ಕಾಲು ಜಾರಿ ಚನಿಯ ಎಂಬವರು ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಅರಂತೋಡು ಗ್ರಾಮದ ಬಾಜಿನಡ್ಕದಲ್ಲಿ ಸಂಭವಿಸಿದೆ.

ಮೂರು ದಿನ ಮಳೆ ಸಾಧ್ಯತೆ
ಮುಂದಿನ ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ “ಎಲ್ಲೋ ಅಲರ್ಟ್‌’ ಘೋಷಿಸಿದೆ. ಮಳೆ ಬಿಡುವು ನೀಡಿದ ಪರಿಣಾಮ ಗರಿಷ್ಠ ತಾಪಮಾನ ಏರಿಕೆ ಕಂಡಿದ್ದು, ಮಂಗಳೂರಿನಲ್ಲಿ ಶುಕ್ರವಾರ 30.8 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.8 ಡಿ.ಸೆ., 23.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.2 ಡಿ.ಸೆ. ತಾಪಮಾನ ಏರಿಕೆ ಕಂಡಿತ್ತು.

ಇನ್ನೂ ಮಳೆ ಕೊರತೆ
ಕರಾವಳಿ ಭಾಗದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗು ತ್ತಿದ್ದರೂ ಜೂನ್‌ ತಿಂಗಳಿನಲ್ಲಿ ಸುರಿಯಬೇಕಾದ ವಾಡಿಕೆ ಮಳೆ ಇನ್ನೂ ಸುರಿದಿಲ್ಲ. ಕೆಎಸ್‌ಎನ್‌ಡಿಎಂಸಿ ಮಾಹಿತಿ ಪ್ರಕಾರ ಜೂ.1 ರಿಂದ 28ರ ವರೆಗೆ ದ.ಕ. ಜಿಲ್ಲೆಯಲ್ಲಿ 838 ಮಿ.ಮೀ. ಮಳೆಯಾಗಬೇಕಿದ್ದು, 751 ಮಿ.ಮೀ. ಸುರಿದು ಶೇ.10ರಷ್ಟು ಕೊರತೆ, ಉಡುಪಿ ಜಿಲ್ಲೆಯಲ್ಲಿ 1007 ಮಿ.ಮೀ. ವಾಡಿಕೆ ಮಳೆಯಲ್ಲಿ 839 ಮಿ.ಮೀ. ಮಳೆಯಾಗಿ ಶೇ. 17ರಷ್ಟು ಕೊರತೆ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 621 ಮಿ.ಮೀ. ವಾಡಿಕೆ ಮಳೆಯ ಪೈಕಿ 516 ಮಿ.ಮೀ. ಸುರಿದು ಶೇ.17ರಷ್ಟು ಕೊರತೆ ಇದೆ. ಒಟ್ಟಾರೆ ಕರಾವಳಿ ಭಾಗದಲ್ಲಿ 751 ಮಿ.ಮೀ. ಮಳೆಯಾಗಬೇಕು. ಆದರೆ, 639 ಮಿ.ಮೀ. ಮಳೆಯಾಗಿ ವಾಡಿಕೆಗಿಂತ ಶೇ.15ರಷ್ಟು
ಕೊರತೆ ಇದೆ.

ಉಡುಪಿಯಲ್ಲೂ ಮಳೆ ಇಳಿಮುಖ
ಉಡುಪಿ: ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಗುರುವಾರದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಆವರಿಸಿದ್ದ ಕೃತಕ ನೆರೆ ಇಳಿಕೆಯಾಗಿದೆ. ಶುಕ್ರವಾರ ಹಲವೆಡೆ ಸಾಧಾರಣ ಮಳೆಯಾಗಿದೆ. ಕುಂದಾಪುರ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಬಿಸಿಲು ಮೋಡ ಕವಿದ ವಾತಾವರಣದ ನಡುವೆ ಬಿಟ್ಟುಬಿಟ್ಟು ಮಳೆಯಾಗಿದೆ.

ಬೊಮ್ಮರಬೆಟ್ಟು, ಮಣಿಪುರ, ಕೊರಂಗ್ರಪಾಡಿ, ಹಿರೇಬೆಟ್ಟು, ಅಂಜಾರು, ಕಡೆಕಾರು, ಕುತ್ಪಾಡಿ, ಶಿವಳ್ಳಿ, ಬಡಬೆಟ್ಟು, ಗಂಗೊಳ್ಳಿ, ಉಳೂ¤ರು. ವಕ್ವಾಡಿ, ಶಿರ್ವ, ನಂದಿಕೂರು. ಮಾಳ, ಕಾರ್ಕಳ, ಕಾವಡಿಯಲ್ಲಿ ಮನೆಗಳಿಗೆ ಹಾನಿಯಾಗಿದೆ. ಕಾರ್ಕಳ 18.9, ಕುಂದಾ‌ಪುರ 60.1, ಉಡುಪಿ 16.2, ಬೈಂದೂರು 40.2 , ಬ್ರಹ್ಮಾವರ 66, ಕಾಪು 16, ಹೆಬ್ರಿ 41. 0 ಮಿ. ಮೀ. ಮಳೆಯಾಗಿದೆ.

ಸುಳ್ಯ: ಚಾಮಡ್ಕ, ಸೋಣಂಗೇರಿ
ಪಾಲ್ಸ್‌ ವೀಕ್ಷಣೆಗೆ ನಿಷೇಧ
ಸುಳ್ಯ: ಮಳೆ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಸುಳ್ಯ ತಾಲೂಕಿನ ಚಾಮಡ್ಕ ಜಲಪಾತ ಮತ್ತು ಸೋಣಂಗೇರಿಯ ಜಲಪಾತ ವೀಕ್ಷಣೆಗೆ ಜಿಲ್ಲಾಧಿಕಾರಿಗಳು ನಿಷೇಧ ವಿಧಿಸಿದ್ದು, ಸ್ಥಳೀಯ ಗ್ರಾ.ಪಂ. ವತಿಯಿಂದ ತಡೆಬೇಲಿ ನಿರ್ಮಿಸಲಾಗಿದೆ.

ಸುಳ್ಯ ತಹಶೀಲ್ದಾರ್‌ ಜಿ.ಮಂಜುನಾಥ್‌, ತಾ.ಪಂ. ಕಾರ್ಯನಿರ್ವಹಣಾಧಿ ಕಾರಿ ರಾಜಣ್ಣ ಅವರು ಪಿಡಿಒ ದಯಾನಂದ ಪತ್ತುಕುಂಜ ಅವರೊಂದಿಗೆ ಚಾಮಡ್ಕ ಪಾಲ್ಸ್‌ಗೆ ತೆರಳಿ ತಡೆಬೇಲಿ ಕಟ್ಟಿಸುವ ಕಾರ್ಯ ನಡೆಸಿದರು. ಸಾರ್ವಜನಿಕರಿಗೆ ಸೂಚನೆಗಾಗಿ ಕೆಂಪು ಪಟ್ಟಿಯನ್ನು ಕೂಡಾ ಕಟ್ಟಲಾಗಿದ್ದು, ಪ್ರವೇಶ ನಿಷೇಧದ ಫಲಕವನ್ನು ಹಾಕಲಾಗಿದೆ. ಈ ನಿಷೇಧವನ್ನು ಉಲ್ಲಂಘಿಸುವುದು ಕಂಡು ಬಂದಲ್ಲಿ ದಂಡದ ಜತೆಗೆ ಕ್ರಿಮಿನಲ್‌ ಕೇಸು ದಾಖಲಿಸಲು ನಿರ್ದೇಶನವಿರುವುದಾಗಿ ತಹಶೀಲ್ದಾರ್‌ ಮತ್ತು ಇ.ಒ.ತಿಳಿಸಿದ್ದಾರೆ.

ಟಾಪ್ ನ್ಯೂಸ್

david miller gave clarification on his retirement news

South Africa; ಟಿ20ಯಿಂದ ನಿವೃತ್ತಿ? ಸ್ಪಷ್ಟನೆ ನೀಡಿದ ಡೇವಿಡ್‌ ಮಿಲ್ಲರ್‌

Fraud Case ಬಿಟ್‌ ಕಾಯಿನ್‌ ಹೂಡಿಕೆ ಮಾಡಿಸಿ ಲಕ್ಷಾಂತರ ವಂಚನೆ; ದೂರು

Fraud Case ಬಿಟ್‌ ಕಾಯಿನ್‌ ಹೂಡಿಕೆ ಮಾಡಿಸಿ ಲಕ್ಷಾಂತರ ವಂಚನೆ; ದೂರು

MLC ಮೇಲ್ಮನೆಗೆ ಬಸವನಗೌಡ ಬಾದರ್ಲಿ ಏಕೈಕ ಸ್ಪರ್ಧಿ: ನಾಡಿದ್ದು ಅವಿರೋಧ ಆಯ್ಕೆ ಘೋಷಣೆ

MLC ಮೇಲ್ಮನೆಗೆ ಬಸವನಗೌಡ ಬಾದರ್ಲಿ ಏಕೈಕ ಸ್ಪರ್ಧಿ: ನಾಡಿದ್ದು ಅವಿರೋಧ ಆಯ್ಕೆ ಘೋಷಣೆ

JDS-BJP ನಾಳೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಹೆಸರು ಅಖೈರು?

JDS-BJP ನಾಳೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಹೆಸರು ಅಖೈರು?

job for kannadigas

Editorial; ಕನ್ನಡಿಗರಿಗೆ ಉದ್ಯೋಗ: ಸರಕಾರ ಗಮನಹರಿಸಲಿ

ವಾರ್ತಾ ಇಲಾಖೆ ಆಯುಕ್ತರಾಗಿ ಮತ್ತೆ ಹೇಮಂತ್‌ ನಿಂಬಾಳ್ಕರ್‌ ಅಧಿಕಾರ ಸ್ವೀಕಾರ

ವಾರ್ತಾ ಇಲಾಖೆ ಆಯುಕ್ತರಾಗಿ ಮತ್ತೆ ಹೇಮಂತ್‌ ನಿಂಬಾಳ್ಕರ್‌ ಅಧಿಕಾರ ಸ್ವೀಕಾರ

T20 WC; The emotion of the moment is the reason for eating the pitch sand: Rohit

T20 WC; ಪಿಚ್ ಮಣ್ಣು ತಿನ್ನಲು ಆ ಕ್ಷಣದ ಭಾವನೆಗಳೇ ಕಾರಣ: ರೋಹಿತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud Case ಬಿಟ್‌ ಕಾಯಿನ್‌ ಹೂಡಿಕೆ ಮಾಡಿಸಿ ಲಕ್ಷಾಂತರ ವಂಚನೆ; ದೂರು

Fraud Case ಬಿಟ್‌ ಕಾಯಿನ್‌ ಹೂಡಿಕೆ ಮಾಡಿಸಿ ಲಕ್ಷಾಂತರ ವಂಚನೆ; ದೂರು

Road

Traffic Jam: ಬಿ.ಸಿ.ರೋಡು-ಕಲ್ಲಡ್ಕ ಮಧ್ಯೆ ಹದಗೆಟ್ಟ ಹೆದ್ದಾರಿ

ಸೇತುವೆ ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ

Bridge ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಆದೇಶ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

david miller gave clarification on his retirement news

South Africa; ಟಿ20ಯಿಂದ ನಿವೃತ್ತಿ? ಸ್ಪಷ್ಟನೆ ನೀಡಿದ ಡೇವಿಡ್‌ ಮಿಲ್ಲರ್‌

Fraud Case ಬಿಟ್‌ ಕಾಯಿನ್‌ ಹೂಡಿಕೆ ಮಾಡಿಸಿ ಲಕ್ಷಾಂತರ ವಂಚನೆ; ದೂರು

Fraud Case ಬಿಟ್‌ ಕಾಯಿನ್‌ ಹೂಡಿಕೆ ಮಾಡಿಸಿ ಲಕ್ಷಾಂತರ ವಂಚನೆ; ದೂರು

MLC ಮೇಲ್ಮನೆಗೆ ಬಸವನಗೌಡ ಬಾದರ್ಲಿ ಏಕೈಕ ಸ್ಪರ್ಧಿ: ನಾಡಿದ್ದು ಅವಿರೋಧ ಆಯ್ಕೆ ಘೋಷಣೆ

MLC ಮೇಲ್ಮನೆಗೆ ಬಸವನಗೌಡ ಬಾದರ್ಲಿ ಏಕೈಕ ಸ್ಪರ್ಧಿ: ನಾಡಿದ್ದು ಅವಿರೋಧ ಆಯ್ಕೆ ಘೋಷಣೆ

JDS-BJP ನಾಳೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಹೆಸರು ಅಖೈರು?

JDS-BJP ನಾಳೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಹೆಸರು ಅಖೈರು?

job for kannadigas

Editorial; ಕನ್ನಡಿಗರಿಗೆ ಉದ್ಯೋಗ: ಸರಕಾರ ಗಮನಹರಿಸಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.