Desi Swara-ಕತಾರ್‌; ಪರಿಸರ ದಿನಾಚರಣೆ: ಭಾಷಣ ಸ್ಪರ್ಧೆ

ಗಲ್ಫಾರ್‌ ಅಲ್‌ ಮಿಸನಾ

Team Udayavani, Jun 29, 2024, 12:57 PM IST

Desi Swara-ಕತಾರ್‌; ಪರಿಸರ ದಿನಾಚರಣೆ: ಭಾಷಣ ಸ್ಪರ್ಧೆ

ಕತಾರ್‌:ಕತಾರ್‌ನಲ್ಲಿರುವ ಗಲ್ಫಾರ್‌ ಅಲ್‌ ಮಿಸನಾದ ಸಂಸ್ಥೆಯ ಕ್ಯುಎಚ್‌ಎಸ್‌ಇ (ಗುಣಮಟ್ಟ, ಆರೋಗ್ಯ, ಸುರಕ್ಷೆ ಹಾಗೂ ಪರ್ಯಾವರಣ) ವಿಭಾಗ ಮತ್ತು ಟೋಸ್ಟ್‌ ಮಾಸ್ಟರ್‌ ಕ್ಲಬ್‌ ವತಿಯಿಂದ ಸಂಸ್ಥೆಯ ಉದ್ಯೋಗಿಗಳ ಮಕ್ಕಳಿಗೆ ಭಾಷಣ ಸ್ಪರ್ಧೆಯನ್ನು ಸಂಸ್ಥೆಯ ಪ್ರಧಾನ ಕಾರ್ಯಾಲಯದ ಆವರಣದಲ್ಲಿ ಜೂ.8ರಂದು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧಿಗಳು, ಅವರ ಪೋಷಕರು, ಸ್ಪರ್ಧೆಯ ತೀರ್ಪುಗಾರರು ಹಾಗೂ ಅತಿಥಿಗಳು ಆಗಮಿಸಿದ್ದರು.

ಭಾಷಣ ಸ್ಪರ್ಧೆಯನ್ನು ವಯೋಮಿತಿಯ ಆಧಾರದ ಮೇಲೆ ಎರಡು ವರ್ಗಗಳಾಗಿ ವಿಂಗಡಣೆ ಮಾಡಲಾಗಿತ್ತು. ಮೊದಲನೆಯದು 6ರಿಂದ 9 ವರ್ಷ ವಯೋಮಿತಿಯ ಮಕ್ಕಳಿಗೆ ಹಾಗೂ ಎರಡನೆಯದು 10ರಿಂದ 13 ವರ್ಷದ ಮಕ್ಕಳಿಗೆ ಮೀಸಲಾಗಿತ್ತು. ಒಟ್ಟು 17 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು ಹಾಗೂ ತಮ್ಮ ವಾಕ್ಚಾತುರ್ಯವನ್ನು ಸಮಸ್ತ ಸಭಿಕರೆದುರಿಗೆ ಪ್ರದರ್ಶಿಸಿ ಮೆಚ್ಚುಗೆ ಪಡೆದರು.

ಕಾರ್ಯಕ್ರಮದ ನಿರ್ದೇಶಕರು ಹಾಗೂ ಸಂಸ್ಥೆಯ ಕ್ಯುಎಚ್‌ಎಸ್‌ಇ ವ್ಯವಸ್ಥಾಪಕರು ಆದ ಜಾನ್‌ ಹೆನ್ರಿ ಅವರು ಎಲ್ಲರನ್ನೂ ಸ್ವಾಗತಿಸಿದರು. ತಮ್ಮ ಆಕರ್ಷಕ ಭಾಷಣದಲ್ಲಿ ಅನುಭವ ಹಂಚಿಕೊಳ್ಳುತ್ತಾ, ಅತ್ಯುತ್ತಮ ಪ್ರದರ್ಶನ ನೀಡಿದರು. ಇಂತಹ ಪರಿಸರ ಪ್ರಜ್ಞಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮಹತ್ವ ಹಾಗೂ ಯುವಜನರ ಮೇಲೆ ಅದರಿಂದಾಗುವ ಸಕಾರಾತ್ಮಕ ಪ್ರಭಾವದ ಪ್ರಾಮುಖ್ಯವನ್ನು ಪುನರುಚ್ಚರಿಸಿದರು. ಗಲ್ಫಾರ್‌ ಅಲ್‌ ಮಿಸನಾದ ಸಂಸ್ಥೆಯು ಕತಾರ್‌ನಲ್ಲಿ ಇಂತಹ ಸಮಾಜ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಕಳೆದ 25 ವರ್ಷಗಳಿಂದ ಹಮ್ಮಿಕೊಳ್ಳುತ್ತಿರುವುದನ್ನು ಶ್ಲಾ ಸಿದರು. ಲಕ್ಷ್ಮೀ ಶಾರದಾ ಅವರು ನಾಲ್ಕು ಜನ ತೀರ್ಪುಗಾರರ ತಂಡದ ಪರಿವೀಕ್ಷಕರಾಗಿ ಉತ್ತಮ ಕಾರ್ಯ ನಿರ್ವಹಿಸಿದರು.

ಕಾರ್ಯಕ್ರಮದ ಅನಂತರ ಟೋಸ್ಟ್‌ ಮಾಸ್ಟರ್‌ ಕ್ಲಬ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಟಾಗಿಲು ಅವರು ಮಾತನಾಡಿ, ಈ ಕಾರ್ಯಕ್ರಮವನ್ನು ಏರ್ಪಡಿಸಲು ಕಾರಣಿಕರ್ತರಾದ ಸಂಸ್ಥೆಯ ಆಡಳಿತ ಸಮಿತಿ, ಸಂಸ್ಥಾಪಕ ನಿರ್ದೇಶಕರಾದ ಸತೀಶ್‌ ಜೆ.ಪಿಲೈ, ಕ್ಯುಎಚ್‌ಎಸ್‌ಇ ಮುಖ್ಯಸ್ಥರಾದ ನವನೀತ ಶೆಟ್ಟಿ ಹಾಗೂ ಎಲ್ಲ ಸ್ಪರ್ಧಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಗಲ#ರ್‌ಮಿಸ್‌ ನಾದ್‌ ಸಂಸ್ಥೆಯ ಉದ್ಯೋಗಿಗಳ ಮಕ್ಕಳಿಗೆ “ಯುವ ನಾಯಕತ್ವ ಕಾರ್ಯಕ್ರಮ’ (ಯೂತ್‌ ಲೀಡರ್‌ಶಿಪ್‌ ಪ್ರೋಗ್ರಾಂ) ಹಮ್ಮಿಕೊಳ್ಳಲಾಗುವುದೆಂದು ಇದೇ ಸಂದರ್ಭದಲ್ಲಿ ಘೋಷಿಸಿದರು. ಇದರಿಂದ ಸಂಸ್ಥೆಯು ಮಕ್ಕಳ ಪ್ರತಿಭೆಗೆ ಪ್ರೇರಣೆ ನೀಡಲು ಬದ್ಧರಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ನಿರ್ವಿಘ್ನವಾಗಿ ಹಾಗೂ ಸುಸೂತ್ರವಾಗಿ ನೆರವೇರಲು ಕಾರಣಕರ್ತರಾದವರು ಮಹಮ್ಮದ್‌ ಇಮ್ರಾನ್‌ ಹಾಗೂ ಅವರ ತಂಡದವರು, ಎರಡು ವರ್ಗದ ಭಾಷಣ ಸ್ಪರ್ಧೆಯನ್ನು ನಡೆಸಿಕೊಟ್ಟವರು ಮಹಮ್ಮದ್‌ ಆಶೀರ್‌ ಹಾಗೂ ಅಬ್ದುಲ್‌ ಕದಲ್‌, ಆಯೋಜಕರ ತಂಡವು ಕಾರ್ಯಕ್ರಮವನ್ನು ಸರಾಗವಾಗಿ ಹಾಗೂ ಸುಸಜ್ಜಿತವಾಗಿ ನೆರವೇರಲು ಕಾರಣವಾಯಿತು. ಪ್ರತಿಯೊಬ್ಬ ಸ್ಪರ್ಧಿಗೂ ಉಡುಗೊರೆ, ಪ್ರಮಾಣ ಪತ್ರ ಹಾಗೂ ಒಂದು ಸಸಿಯನ್ನು ಕೊಡುಗೆಯಾಗಿ ವಿತರಿಸಲಾಯಿತು. ಸ್ಪರ್ಧೆಯ ವಿಜೇತರಿಗೆ ಪ್ರತಿ ವರ್ಗದಲ್ಲಿ ಪದಕ, ಉಡುಗೊರೆ ಹಾಗೂ ಟ್ರೋಫಿಯನ್ನು ಪ್ರದಾನ ಮಾಡಲಾಯಿತು.

ಟಾಪ್ ನ್ಯೂಸ್

koo

Koo: ದಿನಂಪ್ರತಿ ‘ಕೂ’ ಹೇಳುತ್ತಿದ್ದ ಹಕ್ಕಿ ಮೌನವಾಯಿತು, ಸಾಮಾಜಿಕ ಮಾಧ್ಯಮ ಕೂ ಆ್ಯಪ್ ಸ್ಥಗಿತ

1-mofdd

NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

1-mangaluru

Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು

10

ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

1-vijayendra

CM ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಯತ್ನ; ಬಿಜೆಪಿ ಪ್ರಮುಖ ನಾಯಕರು ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UAE ರಾಸ್‌ ಅಲ್‌ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು

UAE ರಾಸ್‌ ಅಲ್‌ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು

Desi Swara: ವೀರಶೈವವು ಬಸವಪೂರ್ವ ಯುಗದ ಸನಾತನ ಧರ್ಮ

Desi Swara: ವೀರಶೈವವು ಬಸವಪೂರ್ವ ಯುಗದ ಸನಾತನ ಧರ್ಮ

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

MUST WATCH

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

ಹೊಸ ಸೇರ್ಪಡೆ

koo

Koo: ದಿನಂಪ್ರತಿ ‘ಕೂ’ ಹೇಳುತ್ತಿದ್ದ ಹಕ್ಕಿ ಮೌನವಾಯಿತು, ಸಾಮಾಜಿಕ ಮಾಧ್ಯಮ ಕೂ ಆ್ಯಪ್ ಸ್ಥಗಿತ

1-mofdd

NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

1-mangaluru

Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು

10

ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.