ಸ್ತನ ಕ್ಯಾನ್ಸರ್‌ ಕಾಡಿದ ಚಿತ್ರರಂಗದ ಸುಂದರಿಯರಿವರು.. ಕಾಯಿಲೆಯನ್ನೇ ಗೆದ್ದ ದಿಟ್ಟೆಯರು..


ಸುಹಾನ್ ಶೇಕ್, Jun 29, 2024, 3:25 PM IST

10

ಬಾಲಿವುಡ್‌ ನಟಿ ಹಿನಾ ಖಾನ್‌ ಅವರು ತನಗೆ ಸ್ತನ ಕ್ಯಾನ್ಸರ್‌ (Breast Cancer) ಇದೆಯೆಂದು ಹೇಳಿಕೊಂಡಿದ್ದಾರೆ. ತಾನು ಅದನ್ನು ಧೈರ್ಯವಾಗಿಯೇ ಎದುರಿಸಿ ಬೇಗ ಗುಣಮುಖರಾಗಿ ಬರುತ್ತೇನೆ ಎಂದು ಹೇಳಿದ್ದಾರೆ.

ಅಭಿಮಾನಿಗಳ ಹಿನಾ ಖಾನ್‌(Hina Khan) ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿಯೆಂದು ಹಾರೈಸಿದ್ದಾರೆ. ಸ್ತನ ಕ್ಯಾನ್ಸರ್‌ ಹೆಚ್ಚಾಗಿ ಕಂಡುಬರುವ ದೇಶಗಳಲ್ಲಿ ಭಾರತದ ಹೆಸರೂ ಕೂಡ ಮುಂಚೂಣಿಯಲ್ಲಿದೆ. ಕಳೆದ ಕೆಲ ವರ್ಷಗಳಲ್ಲಿ 30ರ ವಯಸ್ಸು ದಾಟಿದ ಮಹಿಳೆಯರು ಸ್ತನ ಕ್ಯಾನ್ಸರ್‌ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ.

ಪ್ರತಿ 28 ಭಾರತೀಯ ಮಹಿಳೆಯರಿಗೆ  1 ಬಾರಿ ಸ್ತನ ಕ್ಯಾನ್ಸರ್ ಎದುರಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಸ್ತನ ಕ್ಯಾನ್ಸರ್ ನ ಅಪಾಯವು 30 ರ ಹರೆಯಕ್ಕೆ ಪ್ರವೇಶಿಸಿದ ತಕ್ಷಣ ಪ್ರಾರಂಭವಾಗುತ್ತದೆ ಮತ್ತು ಆಕೆಯು 50 ಮತ್ತು 60 ಗಳನ್ನು ಮೀರಿದ ನಂತರ ಅದು ಕೊನೆಗೊಳ್ಳುತ್ತದೆ ಎಂದು ಒಮೆಗಾ ಆಸ್ಪತ್ರೆಯ ವರದಿಯೊಂದು ತಿಳಿಸಿದೆ.

ಆತಂಕಕಾರಿ ಸಂಗತಿಯೆಂದರೆ ಸ್ತನ ಕ್ಯಾನ್ಸರ್‌ನಿಂದ ಹೆಚ್ಚು ಸಾವನ್ನಪ್ಪುವ ದೇಶಗಳ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ  ಎಂದು ವರದಿಯೊಂದು ತಿಳಿಸಿದೆ.

2022 ರ ಅಂತ್ಯದ ವೇಳೆಗೆ  ಐದು ವರ್ಷಗಳ ಅವಧಿಯಲ್ಲಿ 5.25 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಇಂಡಿಯಾ ಟಿವಿಯ ವರದಿ ತಿಳಿಸಿದೆ.

ಕಳೆದ ದಶಕದಲ್ಲಿ, 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಂಭವವು ಶೇಕಡಾ 3 ರಿಂದ 8 ಕ್ಕೆ ಏರಿದೆ. ಅನುವಂಶಿಕ ರೂಪಾಂತರಗಳಿಂದ ಅನಾರೋಗ್ಯಕರ ಜೀವನಶೈಲಿಯವರೆಗೆ, ಹದಿಹರೆಯದವರು ಎಂದಿಗಿಂತಲೂ ಹೆಚ್ಚು ಸ್ತನ ಕ್ಯಾನ್ಸರ್ ಗೆ ಗುರಿಯಾಗುತ್ತಿದ್ದಾರೆ.

ಸ್ತನ ಕ್ಯಾನ್ಸರ್‌ ಬಗ್ಗೆ ಮುಕ್ತವಾಗಿ ಮಾತಾಡಿ ಆ ಬಗ್ಗೆ ಜಾಗ್ರತೆಯನ್ನು ವಹಿಸಲು ಸಲಹೆ – ಸೂಚನೆ ನೀಡುವವರು ತೀರಾ ಕಡಿಮೆ. ಬಣ್ಣದ ಲೋಕದ ಖ್ಯಾತ ನಟಿಯರಿಗೆ ಸ್ತನ ಕ್ಯಾನ್ಸರ್‌ ಕಾಡಿದೆ. ಈ ಬಗ್ಗೆ ನಟಿಯರು ಧ್ವನಿ ಎತ್ತಿ ಇತರರಿಗೆ ಧೈರ್ಯವನ್ನು ತುಂಬಿದ್ದಾರೆ.

ತಾಹಿರಾ ಕಶ್ಯಪ್ (Tahira Kashyap): ಬಾಲಿವುಡ್‌ ನಟ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ತಮಗೆ ಸ್ತನ ಕ್ಯಾನ್ಸರ್‌ ವಾದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. 2018 ರಲ್ಲಿ ಅವರಿಗೆ ಸ್ತನ ಕ್ಯಾನ್ಸರ್‌ ಕಾಣಿಸಿಕೊಂಡಿತು. 2019 ರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು. 0 ಸ್ಟೇಜ್‌ ನಿಂದ ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಅವರು, ಸ್ತನಛೇದನ ಪ್ರಕ್ರಿಯೆಗೆ ಒಳಗಾಗಿ ಕ್ಯಾನ್ಸರ್‌ ನಿಂದ ಗೆದ್ದು ಬಂದಿದ್ದರು. ಆಗ ಅವರಿಗೆ 35 ವರ್ಷ ವಯಸ್ಸಾಗಿತ್ತು.

ಮಹಿಮಾ ಚೌಧರಿ (Mahima Chaudhry): ಬಾಲಿವುಡ್‌ ನಟಿ ಮಹಿಮಾ ಚೌಧರಿ ಅವರಿಗೆ 2021ರಲ್ಲಿ ಸ್ತನ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ಮೊದಲಿಗೆ ಅವರಿಗೆ ಇದರ ಬಗ್ಗೆ ಅರಿವಿರಲಿಲ್ಲ. ಸಾಮಾನ್ಯ ಚೆಕ್‌ ಅಪ್‌ ಗೆಂದು ಹೋಗಿದ್ದಾಗ ಅವರಿಗೆ ವರ್ಷದಿಂದ ಸ್ತನ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು.  ಇದಾದ ಬಳಿಕ ವರ್ಷಗಳ ಹೋರಾಡಿ ಆರಂಭಿಕ ಹಂತಗಳಲ್ಲೇ ಕ್ಯಾನ್ಸರ್‌ ನಿಂದ ಗೆದ್ದು ಬಂದಿದ್ದರು.

ಮಮ್ತಾಜ್ (Mumtaz):‌  2002 ರಲ್ಲಿ ತನ್ನ 52ನೇ ವಯಸ್ಸಿನಲ್ಲಿ ಹಿರಿಯ ನಟಿ ಮಮ್ತಾಜ್‌ ಅವರಿಗೆ ಸ್ತನ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ಮುಮ್ತಾಜ್ ರೋಗದೊಂದಿಗೆ ಹೋರಾಡಿ ನೂರಾರು  ಸ್ತನ ಕ್ಯಾನ್ಸರ್ ರೋಗಿಗಳಿಗೆ ಸ್ಫೂರ್ತಿ ಆಗಿದ್ದರು. ವರದಿಗಳ ಪ್ರಕಾರ ಮುಮ್ತಾಜ್ ಆರು ಕೀಮೋಥೆರಪಿಗಳನ್ನು ಮತ್ತು ಒಟ್ಟು 35 ರೇಡಿಯೇಷನ್ ಚಿಕಿತ್ಸೆಗಳಿಗೆ ಒಳಗಾಗಿದ್ದರು.‌

ಹಂಸ ನಂದಿನಿ (Hamsa Nandini): ಟಾಲಿವುಡ್‌ ನಟಿ ಹಂಸ ನಂದಿನಿ ಅವರಿಗೆ ಸ್ತನ ಕ್ಯಾನ್ಸರ್‌ ಇರುವುದು 2021 ರಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಗಡ್ಡೆಯೊಂದು ಪತ್ತೆಯಾಗಿತ್ತು. ಅದನ್ನು ಸರ್ಜರಿ ಮೂಲಕ ತೆಗೆಯಲಾಗಿತ್ತು. ಇದಾದ ನಂತರ ಟೆಸ್ಟ್‌ ಮಾಡಿಸಿದಾಗ ಅವರಿಗೆ ಸ್ತನ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ತಿಂಗಳುಗಟ್ಟಲೇ ಸಂಕಷ್ಟದ ಸಮಯದಲ್ಲಿ ಹೋರಾಡುತ್ತಾ, ಗುಣಮುಖನಾಗುತ್ತೇನೆ ಎನ್ನುವ ವಿಶ್ವಾಸದಲ್ಲಿ ಅವರು ನಗುಮುಖದಿಂದಲೇ ಕಾಯಿಲೆಯನ್ನು ಎದುರಿಸಿದರು. ಕೊನೆಗೂ ಅವರ ಸ್ತನ ಕ್ಯಾನ್ಸರ್‌ ಗುಣಮುಖವಾಯಿತು. ಇದಾದ ಬಳಿಕ ಅವರು ಅನೇಕರಿಗೆ ಈ ಬಗ್ಗೆ ಅರಿವು ಮೂಡಿಸಿದ್ದಾರೆ.

ಛವಿ ಮಿತ್ತಲ್ (Chhavi Mittal): ಖ್ಯಾತ ಕಿರುತೆರೆ ನಟಿ ಛವಿ ಮಿತ್ತಲ್ ಅವರಿಗೆ ಸ್ತನ ಕ್ಯಾನ್ಸರ್‌ ಇರುವುದು 2022 ರ ಏಪ್ರಿಲ್‌ ನಲ್ಲಿ ಪತ್ತೆಯಾಗಿತ್ತು. ಜಿಮ್‌ ಮಾಡುವಾಗ ಅವರಿಗೆ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ವೇಳೆ ವೈದ್ಯರು ಅವರಿಗೆ ಎಆರ್ ಐ ಸ್ಕ್ಯಾನ್‌ ಮಾಡಲು ಸಲಹ ನೀಡಿದ್ದರು. ಸ್ಕ್ಯಾನ್‌ ಬಳಿಕ ಅವರ ಸ್ತನದಲ್ಲಿ ಗಡ್ಡೆಯೊಂದು ಇರುವುದು ಪತ್ತೆಯಾಗಿತ್ತು. ಇದಾದ ಬಳಿಕ ಅವರು ಚಿಕಿತ್ಸೆ ಪಡೆಯಲು ಆರಂಭಿಸಿದ್ದರು. ಸುದೀರ್ಘ ಅವಧಿಯ ಕಾಲ ಹೋರಾಡಿದ ಬಳಿಕ ಅವರು ಕೊನೆಗೂ ಕ್ಯಾನ್ಸರ್‌ ಗೆದ್ದು ಬಂದಿದ್ದರು. ಇಂದಿಗೂ ಅವರು ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.

ಗೌತಮಿ: ಸೌತ್‌ ನಟಿ ಗೌತಮಿ ಅವರಿಗೆ 2005ರಲ್ಲಿ ಸ್ತನ ಕ್ಯಾನ್ಸರ್‌ ಪತ್ತೆಯಾಗಿತ್ತು. ದಿಟ್ಟವಾಗಿ ಇದನ್ನು ಎದುರಿಸಿದ ಅವರು ವೈದ್ಯರ ಸಲಹೆಯನ್ನು ಪಾಲಿಸಿ, ಕೊನೆಗೂ ಕ್ಯಾನ್ಸರ್‌ ಗೆದ್ದು ಬಂದಿದ್ದರು.

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.