Sandalwood; ಟ್ರೇಲರ್‌ನಲ್ಲಿ ‘ತಾಜ್’ ಪ್ರೀತಿ; ಹೊಸಬರ ಚಿತ್ರ ತೆರೆಗೆ ಸಿದ್ಧ
Team Udayavani, Jun 29, 2024, 5:26 PM IST
ಈಗಾಗಲೇ ತನ್ನ ಟೈಟಲ್, ಟೀಸರ್ ಬಿಡುಗಡೆ ಮಾಡಿರುವ ಹೊಸಬರ “ತಾಜ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಯುವ ನಿರ್ದೇಶಕ ಬಿ. ರಾಜರತ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ತಾಜ್’ ಸಿನೆಮಾದಲ್ಲಿ ನವ ನಟ ಷಣ್ಮುಖ ಜೈ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದು, ಅಪ್ಸರಾ ನಾಯಕಿಯಾಗಿ ಅಭಿನಯಿಸಿದ್ದಾರೆ.
“ತಾಜ್’ ಸಿನೆಮಾದ ಟ್ರೇಲರ್ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ಬಿ. ರಾಜರತ್ನ, “ಇದೊಂದು ನೈಜ ಘಟನೆ ಆಧರಿಸಿದ ಸಿನೆಮಾ. ನಮ್ಮ ಸುತ್ತಮುತ್ತ ನಡೆದ ಒಂದಷ್ಟು ವಿಷಯಗಳು ಇಟ್ಟುಕೊಂಡು ಜೊತೆಗೆ ಕೆಲ ಸಿನಿಮೀಯ ಅಂಶಗಳನ್ನು ಸೇರಿಸಿ ಈ ಸಿನೆಮಾ ಮಾಡಿದ್ದೇವೆ. ಎಲ್ಲ ವರ್ಗದ ಆಡಿಯನ್ಸ್‌ಗೂ ಈ ಸಿನೆಮಾ ಇಷ್ಟವಾಗಲಿದೆ. ಜಾತಿ, ಧರ್ಮಕ್ಕಿಂತ ಪ್ರೀತಿ, ಮಾನವೀಯತೆ ಮುಖ್ಯ ಎಂಬ ಸಂದೇಶವನ್ನು ಈ ಸಿನೆಮಾದಲ್ಲಿ ಹೇಳಿದ್ದೇವೆ. ಆದಷ್ಟು ಬೇಗ ಸಿನೆಮಾ ಬಿಡುಗಡೆ ಮಾಡುವ ಯೋಚನೆಯಿದೆ’ ಎಂದರು.
ಸಿನೆಮಾದ ಬಗ್ಗೆ ಮಾತನಾಡಿದ ನಾಯಕ ನಟ ಷಣ್ಮುಖ ಜೈ, “ಅಂದು ಕೊಂಡಿದ್ದಕ್ಕಿಂತ ಹೆಚ್ಚು ಚೆನ್ನಾಗಿ ಈ ಸಿನೆಮಾ ಮೂಡಿಬಂದಿದೆ. ಬಜೆಟ್ ಸ್ವಲ್ಪ ಹೆಚ್ಚಾಗುತ್ತ ಹೋದರೂ, ಸಿನಿಮಾಕ್ಕೆ ಏನೇನು ಬೇಕೋ, ಅದೆಲ್ಲವನ್ನೂ ಕೊಟ್ಟು ಈ ಸಿನೆಮಾ ಮಾಡಿದ್ದೇವೆ. ಈಗಾಗಲೇ ಈ ಸಿನಿಮಾಕ್ಕೆ ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಥಿಯೇಟರ್‌ನಲ್ಲೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಟ್ರೇಲರ್ ಬಿಡುಗಡೆ ವೇಳೆ ಹಾಜರಿದ್ದ ನಟರಾದ ಕಡ್ಡಿ ವಿಶ್ವ, ವರ್ಧನ್, ರೋಬೋ, ಕಾಶೀನಾಥ್, ನಿರ್ಮಾಪಕ ರವಿ, ಛಾಯಾಗ್ರಹಕ ದೀಪಕ್ ಕುಮಾರ್ ಜೆ. ಕೆ, ರಾಮಕೃಷ್ಣ ಮತ್ತಿತರರು “ತಾಜ್’ ಸಿನಿಮಾದ ಕುರಿತು ಮಾತನಾಡಿದರು. ಚಿತ್ರದಲ್ಲಿ ಷಣ್ಮುಖ ಜೈ, ಅಪ್ಸರಾ, ಕಡ್ಡಿ ವಿಶ್ವ, ವರ್ಧನ್ ಅವರೊಂದಿದೆ ಬಲರಾಜವಾಡಿ, ಪದ್ಮವಾಸಂತಿ, ಶೋಭರಾಜ್, ಪಟ್ರೆ ನಾಗರಾಜ್, ಸೂರಜ್ ಹೀಗೆ ಕಲಾವಿದರ ದಂಡೇ “ತಾಜ್’ ಸಿನಿಮಾದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.