CM-DCM ವಿಚಾರದಲ್ಲಿ ಹೈಕಮಾಂಡ್ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿ: ರಂಭಾಪುರಿ ಶ್ರೀ
ಧರ್ಮ ಪೀಠದವರು ರಾಜಕೀಯದ ಬಗ್ಗೆ ಮಾತಾಡೋದು ಸರಿಯಲ್ಲ. ಆದರೆ...
Team Udayavani, Jun 29, 2024, 7:35 PM IST
ಕಲಬುರಗಿ: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಹಾಗೂ ಡಿಸಿಎಂ ಹುದ್ದೆಗಳ ವಿಚಾರದಲ್ಲಿ ಕೆಲವು ಪಕ್ಷದ ಹೈಕಮಾಂಡ್ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲಿ ಎಂದು ಬಾಳೆ ಹೊನ್ನುರು ರಂಭಾಪುರಿ ಜಗದ್ಗುರು ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಲಹೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಸಿಎಂ ಬದಲಾವಣೆ ಮಾಡಬೇಕೆಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಮೂವರನ್ನು ಡಿಸಿಎಂ ಮಾಡಿ ಅಂತಿದಾರೆ. ಎಲ್ಲಾ ಸಮುದಾಯ ಜನರ ಹಿತಾಸಕ್ತಿ ಕಾಪಾಡಿಕೊಂಡು ಹೋಗಬೇಕಾಗಿತ್ತು. ಆದರೆ ಅವರವರಲ್ಲೆ ಕಿತ್ತಾಡಿಕೊಂಡು ಹೋಗ್ತಿರೋದು ನೋವುಂಟು ಮಾಡಿದೆ ಎಂದು ಜಗದ್ಗುರುಗಳವರು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಹಾಗೂ ಡಿಸಿಎಂ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಅವರಿಗೆ ಬಿಟ್ಟಿದೆ. ಪ್ರಮುಖವಾಗಿ ಈ ವಿಷಯದ ಬಹಿರಂಗ ಚರ್ಚೆಗೆ ಸಂಬಂಧಿಸಿದಂತ ನಿಯಂತ್ರಣ ಮಾಡಬೇಕಾದ್ರೆ ಕಾಂಗ್ರೆಸ್ ಹೈಕಮಾಂಡ್ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕೆಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಕೆಲವು ಹಗರಣಗಳು ಹೊರ ಬರುತ್ತಿವೆ.ವಿರೋಧ ಪಕ್ಷ ಬಿಜೆಪಿಯು ಅದನ್ನ ಇಟ್ಟುಕೊಂಡು ಹೋರಾಟ ನಡೆಸುತ್ತಿದೆ. ಪ್ರಮುಖವಾಗಿ ಬೆಲೆ ಏರಿಕೆ ಜತೆಗೆ ಕೊಲೆ ಸುಲಿಗೆ ಹೆಚ್ಚಾಗಿ ನಡೆಯುತ್ತಿದೆ. ಸರ್ಕಾರ ಈ ವಿಷಯದಲ್ಲೂ ಪಕ್ಷ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಕೆಲವೆ ಕೆಲವು ಸಮುದಾಯದ ಜನರ ತುಷ್ಟಿಕರಣ ಮಾಡಬಾರದು. ಎಲ್ಲಾ ಸಮುದಾಯ ಜನರನ್ನು ಜೊತೆಗೆ ಕರೆದೊಯ್ಯಬೇಕು ಆದ್ರೆ ಅದು ಆಗ್ತಿಲ್ಲ.ಗ್ಯಾರೆಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣ ಇಲ್ಲ ಅಂತಾ ಹೇಳಿದ್ದಾರೆ. ಹಣಕಾಸು ಸಚಿವರು ಕೂಡ ಸಿಎಂ ಆಗಿರುವುದರಿಂದ ಅವರು ಯೋಚನೆ ಮಾಡಬೇಕು.ಜನರಿಗೆ ದುಡಿಮೆ ಮಾಡಿಸಬೇಕು ಹೊರತು ಸೋಮಾರಿತನ ಮಾಡಿಸಬಾರದು. ತಮ್ಮ ಪಕ್ಷದ ಜನಪ್ರಿಯತೆಗೆ ಈ ರೀತಿಯ ಅಗ್ಗದ ಪ್ರಚಾರ ಮಾಡಿ ಗ್ಯಾರಂಟಿಗಳಿಂದ ಹೊಡೆತ ಬಿದ್ದಿದೆ ಎಂದು ಜಗದ್ಗುರು ಗಳವರು ಹೇಳಿದರು.
ಸದ್ಯ ಮುಖ್ಯಮಂತ್ರಿ ಹಾಗೂ ಹೆಚ್ಚುವರಿ ಡಿಸಿಎಂ ಬೇಡಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯ ಪರವಾಗಿರುವ ಸಚಿವರು ಮೂರು ಜನ ಡಿಸಿಎಂ ಆಗಬೇಕು ಅಂತಾ ಹೇಳಿದ್ದರು. ಇನ್ನುಳಿದಂತೆ ಒಕ್ಕಲಿಗ ಸಮುದಾಯದ ಸ್ವಾಮೀಜಿ ಡಿಕೆಶಿಯವರನ್ನ ಮಾಡಬೇಕು ಅಂತಾ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಇರುವ ವೇದಿಕೆಯಲ್ಲೆ ಹೇಳಿರೊದು ವಿಪರ್ಯಾಸ. ಒಂದು ವೇಳೆ ಹೈ ಕಮಾಂಡ್ ಬದಲಾವಣೆ ಮಾಡುವ ಸಂಧರ್ಭ ಬಂದರೆ ಕಾಂಗ್ರೆಸ್ ಪಕ್ಷಕ್ಕೆ ವಿರಶೈವ ಸಮಾಜ ಬಹಳ ಕೊಡುಗೆ ಕೊಟ್ಟಿದೆ. ಈ ಹಿಂದೆ ವಿರೇಂದ್ರ ಪಾಟೀಲ್ ಅವರನ್ನ ಸಿಎಂ ಸ್ಥಾನದಿಂದ ಅರ್ಧದಲ್ಲೆ ಕೆಳಗಿಳಿಸಿದರು. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯರ ದುರಾಡಳಿತದಿಂದ ಜನ ಬೆಸತ್ತು ಕಾಂಗ್ರೆಸ್ ಅಧಿಕಾರ ಕೊಟ್ಟಿದ್ದಾರೆ ಎಂದು ವಿವರಣೆ ನೀಡಿದರು.
ಮುಖ್ಯಮಂತ್ರಿ ಸ್ಥಾನ ಲಿಂಗಾಯಿತರಿಗೆ ಕೊಡೊದಕ್ಕೆ ಆಗದೆ ಇದ್ದರೆ ಉಪ ಮುಖ್ಯಮಂತ್ರಿ ಸ್ಥಾನಕ್ಕಾದರೂ ಪರಿಗಣಿಸಬೇಕು.ಧರ್ಮ ಪೀಠದವರು ರಾಜಕೀಯ ಬಗ್ಗೆ ಮಾತಾಡೋದು ಸರಿಯಲ್ಲ. ಆದರೆ ಅನಿವಾರ್ಯವಾಗಿ ಹೇಳುವ ಪರಿಸ್ಥಿತಿ ಬಂದಾಗ ಧರ್ಮ ಪೀಠ ಮಾತಾಡಬೇಕಾಗಿದೆ ಎಂದು ಡಾ. ವೀರ ಸೋಮೇಶ್ವರ ಜಗದ್ಗುರುಗಳು ಹೇಳಿದರು.
ಸಿಎಂ ಡಿಸಿಎಂ ವಿಚಾರ ಹೈಕಮಾಂಡ್ ಯಾವುದೇ ನಿಟ್ಟಿನ ನಿರ್ಧಾರಕ್ಕೆ ಬರದೇ ಹೋದರೆ ಅವರವರಲ್ಲೆ ಕಿತ್ತಾಡಿಕೊಂಡು ಅಭಿವೃದ್ಧಿ ಹಿನ್ನಡೆ ಆಗುತ್ತೆ ಅಂತಾ ಆತಂಕ ಕಾಡ್ತಿದೆ. ಕಾಂಗ್ರೆಸ್ ಒಳ್ಳೆ ಆಡಳಿತ ನೀಡಬೇಕು ಎಂದರೆ ಯೋಗ್ಯರಿದ್ದರೆ ಅವರನ್ನೆ ಮುಂದುವರೆಸಿ ಇಲ್ಲ ಅಂದರೆ ಬೇರೆಯವರಿಗೆ ನೀಡಲಿ.ಕೆಲವೇ ಸಮುದಾಯದ ಜನರಿಗೆ ತುಷ್ಟಿಕರಣ ಮಾಡದೆ ಬದಲಾವಣೆ ವಿಚಾರ ಬಂದಾಗ ವೀರಶೈವ ಲಿಂಗಾಯತರಿಗೆ ಆದ್ಯತೆ ಕೊಡಬೇಕು.ಒಂದು ವೇಳೆ ಸಿಎಂ ಕೊಡಲಾಗದಿದ್ರೆ ಡಿಸಿಎಂ ಆದ್ರೂ ವೀರಶೈವರಿಗೆ ಕೊಡಬೇಕು ಎಂದ ಜಗದ್ಗುರು ಗಳವರು, ಲಿಂಗಾಯತ ಧರ್ಮ ಒಡೆಯಲು ಕೈ ಹಾಕಿದಾಗ ತಮ್ಮಿಂದ ತಪ್ಪಾಗಿದೆ ಅಂತಾ ಡಿಕೆಶಿ ಅವರೆ ನಮ್ಮಲ್ಲಿ ಕ್ಷಮಾಪಣೆ ಕೇಳಿದ್ದರು ಎಂದು ನೆನಪಿಸಿಕೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.