OM; ದೇವಸ್ಥಾನಗಳ ಪರಿಸರದಲ್ಲಿನ ಅಂಗಡಿಗಳಿಗೆ ಓಂ ಪ್ರಮಾಣಪತ್ರ: ರಾಜಾ ಸಿಂಗ್

ಉಗುಳು ಜಿಹಾದ್, ಗೋವಿನ ಚರ್ಮದ ತುಪ್ಪದ ಪ್ರಸಾದ ನೀಡಲಾಗುತ್ತಿದೆ...

Team Udayavani, Jun 29, 2024, 8:18 PM IST

1-wwewewq

ಪಣಜಿ: ದೇಶದಾದ್ಯಂತ ದೇವಸ್ಥಾನಗಳ ಪರಿಸರದಲ್ಲಿನ ಹಿಂದು ಅಂಗಡಿಕಾರರು ಓಂ ಪ್ರಮಾಣಪತ್ರವನ್ನು ಅವಶ್ಯ ಪಡೆಯಬೇಕು, ಎಂದು ನಾನು ವಿನಂತಿಸುತ್ತೇನೆ, ಎಂಬ ಕರೆಯನ್ನು ತೆಲಂಗಾಣಾ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಹೇಳಿಕೆ ನೀಡಿದ್ದಾರೆ.

ಗೋವಾದ ಪೊಂಡಾದ ಶ್ರೀ ರಾಮನಾಥಿಯಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದು ರಾಷ್ಟ್ರ ಅಧಿವೇಶನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ’ ಇಂದು ಎಲ್ಲೆಡೆಯ ಚಿತ್ರವನ್ನು ನೋಡಿದರೆ ಥೂಕ ಜಿಹಾದ್,(ಉಗುಳು ಜಿಹಾದ್) ಆಕಳ ಚರ್ಮದಿಂದ ತಯಾರಿಸಿದ ತುಪ್ಪದಿಂದ ಹಿಡಿದು ಪದಾರ್ಥಗಳು, ಖವಾ, ಪೇಢೆ ಇವುಗಳನ್ನು ಪ್ರಸಾದವೆಂದು ಬಹಿರಂಗವಾಗಿ ವಿತರಿಸಲಾಗುತ್ತಿದೆ. ಭಕ್ತರು ಭಕ್ತಿಭಾವದಿಂದ ದೇವರಿಗೆ ಅದನ್ನು ಅರ್ಪಿಸುತ್ತಾರೆ. ಇದು ಒಂದು ರೀತಿಯಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ದೊಡ್ಡ ಪೆಟ್ಟಾಗಿದೆ. ಇಂದು ಅನೇಕ ತೀರ್ಥಕ್ಷೇತ್ರಗಳ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದುಯೇತರ ಅಂಗಡಿಕಾರರ ಪ್ರಸಾದದ, ಪೂಜಾಸಾಹಿತ್ಯಗಳ ಅಂಗಡಿಗಳು ಇರುತ್ತವೆ. ಅವರ ಬಳಿ ಇರುವ ಪ್ರಸಾದ ಮತ್ತು ಸಾಹಿತ್ಯಗಳೂ ಶುದ್ಧ ಮತ್ತು ಪವಿತ್ರ ಇರುತ್ತವೆ ಎಂದು ಹೇಳಲು ಬರುವುದಿಲ್ಲ. ಹೊರ ಊರಿನಿಂದ ಬಂದ ಭಕ್ತರಿಗೆ ಶುದ್ಧ ಪ್ರಸಾದ ಎಲ್ಲಿ ಸಿಗುತ್ತದೆ, ಎಂದು ಗೊತ್ತಿರುವುದಿಲ್ಲ. ಆದುದರಿಂದ ಸದ್ಯ ಕೇವಲ ಹಿಂದು ಅಂಗಡಿಕಾರರಿಗೆ ಪ್ರಸಾದ ಶುದ್ಧಿಗಾಗಿ ಓಂ ಪ್ರಮಾಣಪತ್ರವನ್ನು ವಿತರಿಸಲು ಆರಂಭಿಸಲಾಗಿದೆ. ಹಿಂದು ಅಂಗಡಿಕಾರರಿಗೆ ಓಂ ಪ್ರಮಾಣಪತ್ರವನ್ನು ಉಚಿತವಾಗಿ ನೀಡಲಾಗುತ್ತದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಶಿಯ ಜ್ಞಾನವಾಪಿ, ಮಥುರಾದ ಶ್ರೀಕೃಷ್ಣಭೂಮಿ ಮುಂತಾದ ಪ್ರಮುಖ ಹಿಂದೂ ದೇವಸ್ಥಾನಗಳ ಮೊಕದ್ದಮೆಗಳನ್ನು ಹೋರಾಡುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್, ಹಿಂದು ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂಧೆ ಮತ್ತು ಗೋಮಂತಕ ದೇವಸ್ಥಾನ ಮಹಾಸಂಘದ ರಾಜ್ಯ ಸಂಸದರು ಜಯೇಶ ಥಳಿ ಇವರು ಉಪಸ್ಥಿತರಿದ್ದರು.

ರಮೇಶ ಶಿಂಧೆ ಮಾತನಾಡಿ, ಮುಸಲ್ಮಾನರ ಒತ್ತಡದಿಂದಾಗಿ ದೇಶದಲ್ಲಿ ಹಲಾಲ್ ಸರ್ಟಿಫಿಕೆಟ್ ಅನ್ನು ಎಲ್ಲ ಉತ್ಪಾದನೆಗಳಿಗೆ ಕಡ್ಡಾಯ ಮಾಡಲಾಗುತ್ತಿದೆ. ಹಿಂದೂಗಳಿಗೂ ಹಲಾಲ್ ಪ್ರಮಾಣಿತ ಉತ್ಪಾದನೆಗಳನ್ನು ಪಡೆದುಕೊಳ್ಳಬೇಕಾಗುತ್ತಿದೆ. ತಮಿಳುನಾಡಿನ ದೇವಸ್ಥಾನಗಳಲ್ಲಿ ಹಲಾಲ್ ಪ್ರಮಾಣಿತ ಪದಾರ್ಥಗಳನ್ನು ಮಾರಲಾಗುತ್ತಿದೆ. ಇದು ಹಿಂದೂಗಳ ಧಾರ್ಮಿಕ ಹಕ್ಕುಗಳ ಮೇಲಿನ ಅತಿಕ್ರಮಣವಾಗಿದೆ. ದೇವರಿಗೆ ಅರ್ಪಿಸುವ ಪ್ರಸಾದವು ಶುದ್ಧ ಮತ್ತು ಸಾತ್ತ್ವಿಕವಾಗಿರಬೇಕು, ಇದು ಧರ್ಮಾಚರಣೆಯನ್ನು ಮಾಡುವ ಹಿಂದೂಗಳ ಹಕ್ಕಾಗಿದೆ. ಹಿಂದೂಗಳಿಗೆ ಶುದ್ಧ ಮತ್ತು ಉತ್ತಮ ಮಟ್ಟದ ಪ್ರಸಾದ ದೊರೆಯಲು ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ರಣಜೀತ ಸಾವರಕರ ಇವರ ಓಂ ಪ್ರತಿಷ್ಠಾನದ ವತಿಯಿಂದ ಓಂ ಪ್ರಮಾಣಪತ್ರ (ಸರ್ಟಿಫಿಕೆಟ್) ಬಿಡುಗಡೆಯಾಗಿದೆ.ಮಹಾರಾಷ್ಟ್ರದಲ್ಲಿ ತ್ರ್ಯಂಬಕೇಶ್ವರದಲ್ಲಿನ ದೇವಸ್ಥಾನಗಳ ಪರಿಸರದಲ್ಲಿ 100 ಪ್ರಸಾದ ಮಾರಾಟಗಾರರಿಗೆ ಓಂ ಸರ್ಟಿಫಿಕೆಟ್ ನೀಡಲಾಗಿದೆ. ಹಾಗೆಯೇ ಈ ಪ್ರಮಾಣಪತ್ರವನ್ನು ದೇಶದಾದ್ಯಂತದ ದೇವಸ್ಥಾನಗಳ ಪರಿಸರದಲ್ಲಿ ಅಂಗಡಿಕಾರರಿಗೆ ಅಳವಡಿಸಲು ಪ್ರಯತ್ನಿಸಲಾಗುವುದು ಎಂದರು.

ವಕ್ಫ್ ಬೋರ್ಡನ್ನು ವಿಸರ್ಜಿಸಿ !
ನ್ಯಾಯವಾದಿ ವಿಷ್ಣು ಜೈನ್ ಮಾತನಾಡಿ, ಹಿಂದೂಗಳ ಅನೇಕ ಪ್ರಾಚೀನ ದೇವಸ್ಥಾನಗಳು ಭಾರತೀಯ ಪುರಾತತ್ತ್ವ ಇಲಾಖೆ ನಿಯಂತ್ರಣದಲ್ಲಿವೆ; ಆದರೆ ಪುರಾತತ್ತ್ವ ಇಲಾಖೆಯ ದುರ್ಲಕ್ಷದಿಂದಾಗಿ ಈ ದೇವಸ್ಥಾನಗಳು ಜೀರ್ಣಗೊಂಡಿವೆ. ಆ ದೇವಸ್ಥಾನಗಳು ಜೀರ್ಣೋದ್ಧಾರವಾಗದೇ ಕೊನೆಯ ಹಂತದಲ್ಲಿವೆ. ವಾಸ್ತವದಲ್ಲಿ ಈ ದೇವಸ್ಥಾನಗಳು ಹಿಂದೂಗಳು ಅಮೂಲ್ಯ ಸಂಪತ್ತು ಆಗಿರುವುದರಿಂದ ಕೇಂದ್ರ ಸರಕಾರವು ಅವುಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರವನ್ನು ಮಾಡಬೇಕು, ಎಂದು ನಮ್ಮ ಬೇಡಿಕೆ ಇದೆ ಎಂದರು.

ದೇಶದ ವಿಭಜನೆಯಾದ ನಂತರ ಭಾರತದ ಅನೇಕ ಮುಸಲ್ಮಾನರು ತಮ್ಮ ಸಾವಿರಾರು ಎಕರೆ ಭೂಮಿ ಮತ್ತು ಸಂಪತ್ತು ಬಿಟ್ಟು ಪಾಕಿಸ್ಥಾನಕ್ಕೆ ಹೋದರು. ಅವರ ಈ ಸಂಪತ್ತನ್ನು ಇವ್ಹ್ಯಕ್ಯು ಪ್ರಾಪರ್ಟಿ ಆಕ್ಟ್, 1950 ಕ್ಕನುಸಾರ ಕೇಂದ್ರ ಸರಕಾರವು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗಿತ್ತು; ಆದರೆ ಆಗಿನ ಕಾಂಗ್ರೆಸ್ ಸರಕಾರವು ಈ ಎಲ್ಲ ಸಂಪತ್ತನ್ನು ವಕ್ಫ್ ಗೆ ನೀಡಿ ಅವರ ವಕ್ರ್ಪ ಬೊರ್ಡ್ ಸ್ಥಾಪಿಸಿತು. ಆದುದರಿಂದ ಅವರ ಈ ಕೃತಿ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ವಾಸ್ತವದಲ್ಲಿ ಆ ಭೂತಿ ಪಾಕಿಸ್ತಾನದಲ್ಲಿ ತಮ್ಮ ಸಂಪತ್ತನ್ನು ಬಿಟ್ಟು ಬಂದ ಹಿಂದೂಗಳಿಗೆ ನೀಡುವುದು ಆವಶ್ಯಕವಾಗಿತ್ತು. ಆದರೆ ಈಗ ವಕ್ಫ್ ಬೊರ್ಡ್ ಪ್ರಸ್ತುತ ಭೂಮತಿಯನ್ನು ಸರಕಾರ ಮತ್ತು ಖಾಸಗಿ ಜನರಿಗೆ ಬಾಡಿಗೆಯ ಕರಾರಿನ ಮೇಲೆ ನೀಡಿ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿದೆ, ಇದು ತಪ್ಪಾಗಿದೆ. ಸರಕಾರದ ಜಾಗವನ್ನು ಪಡೆದು ಅದೇ ಜಾಗಕ್ಕಾಗಿ ಸರಕಾರದಿಂದ ಬಾಡಿಗೆ ಪಡೆಯುವುದು ಇದು ಕಾನೂನು ಬಾಹಿರವಾಗಿದೆ. ಆದುದರಿಮದ ಈ ವಕ್ಫ್ ಬೋರ್ಡ್ ವಿಸರ್ಜಿಸಬೇಕು ಎಂದರು.

ಈ ಸಮಯದಲ್ಲಿ ಗೋಮಂತಕ ಮಂದಿರ ಮಹಾಸಂಘದ ಜಯೇಶ ಥಳಿ ಮಾತನಾಡಿ,’ ನಾವು ಮಂದಿರ ಮಹಾಸಂಘದ ವತಿಯಿಂದ ಗೋವಾದ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಫಾಸ್ಟಫುಡ್ ಮತ್ತು ಪ್ಲಾಸ್ಟಿಕ್ ಚೀಲಗಳ ವಿರುದ್ಧ ಅಭಿಯಾನವನ್ನು ನಡೆಸಿದ್ದೇವೆ. ಅದಕ್ಕೆ ಒಳ್ಳೆಯ ಬೆಂಬಲ ಸಿಕ್ಕಿದೆ. ಈಗ ನಾವು ಗೋವಾದಲ್ಲಿನ ಎಲ್ಲ ಮಂದಿರಗಳ ಪರಿಸರದಲ್ಲಿ ಹಿಂದು ಅಂಗಡಿಕಾರರಿಗೆ ಓಂ ಸರ್ಟಿಫಿಕೆಟ್ ಆರಂಭಿಸುವ ಬಗ್ಗೆ ಹೇಳಲಿದ್ದೇವೆ. ಇದರಿಂದ ಬರುವ ಭಕ್ತರಿಗೆ ಶುದ್ಧ ಸಾತ್ತ್ವಿಕ ಪ್ರಸಾದ ದೊರಕುಲಿದೆ ಎಂದರು.

ಟಾಪ್ ನ್ಯೂಸ್

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Rajasthan:ಪೊಲೀಸ್‌ ಭದ್ರತೆಗೆ ಆದ 9 ಲಕ್ಷ ರೂ.ಬಿಲ್‌ ಪಾವತಿಸಿ: ರಾಜಸ್ಥಾನ ರೈತನಿಗೆ ನೋಟಿಸ್‌

Rajasthan:ಪೊಲೀಸ್‌ ಭದ್ರತೆಗೆ ಆದ 9 ಲಕ್ಷ ರೂ.ಬಿಲ್‌ ಪಾವತಿಸಿ: ರಾಜಸ್ಥಾನ ರೈತನಿಗೆ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

k

Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.