Farmers; ಬೆಳೆ ವಿಮೆ ‘ಷರತ್ತು’ ಬದಲಾವಣೆ: ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ

ರೈತರಿಗಿಂತ ಇನ್ಸುರೆನ್ಸ್ ಕಂಪನಿಗಳಿಗೆ ಹೆಚ್ಚು ಲಾಭ !

Team Udayavani, Jun 29, 2024, 10:43 PM IST

Chaluvarayaswamy

ಬೀದರ್ : ಫಸಲು ವಿಮಾ ಯೋಜನೆಯಡಿ ರೈತರಿಗಿಂತ ಇನ್ಸುರೆನ್ಸ್ ಕಂಪನಿಗಳಿಗೆ ಹೆಚ್ಚು ಲಾಭ ಆಗುತ್ತಿರುವ ಕುರಿತು ಆರೋಪ ಹಿನ್ನಲೆ ಸರ್ಕಾರ ಮತ್ತು ವಿಮಾ ಕಂಪನಿಗಳ ನಡುವಿನ ಷರತ್ತುಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮೆ ಯೋಜನೆಯಿಂದ ರೈತರಿಗೆ ಲಾಭಕ್ಕಿಂತ ಹಾನಿಯೇ ಹೆಚ್ಚು ಆಗುತ್ತಿದೆ ಎಂಬ ದೂರುಗಳಿದ್ದವು. ಈ ಬಗ್ಗೆ ಆರು ವರ್ಷಗಳ ಅಧ್ಯಯನ ನಡೆಸಿದಾಗ ವಿಮೆ ಕಂಪನಿಗೆ ಸುಮಾರು 2 ಸಾವಿರ ಕೋಟಿ ರೂ. ಲಾಭ ಆಗಿರುವುದು ಬಹಿರಂಗವಾಗಿತ್ತು. ಹಾಗಾಗಿ ಸರ್ಕಾರದ ಮಾರ್ಗಸೂಚಿಗಳಲ್ಲಿ ಬದಲಾವಣೆ ತರಲಾಗುತ್ತಿದ್ದು, ಶೇ. 100 ರಲ್ಲಿ ಶೇ. 20 ಕ್ಕಿಂತ ಅಧಿಕ ಲಾಭವನ್ನು ಕಂಪನಿ ಪಡೆಯುವಂತಿಲ್ಲ ಮತ್ತು ಇನ್ನುಳಿದ ಶೇ. 80 ರಷ್ಟು ಸರ್ಕಾರಕ್ಕೆ ಸೇರುವಂತೆ ನಿಯಮ ರೂಪಿಸಲಾಗಿದೆ ಎಂದು ತಿಳಿಸಿದರು.

ಬೀದರ್ ಗೆ ‘ಕೃಷಿ ಭಾಗ್ಯ’
ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂ. ಮೀಸಲಿಡಲಾಗಿದೆ. ಸದ್ಯ ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಯಲ್ಲಿದೆ. ರೈತರ ಬೇಡಿಕೆ ಮತ್ತು ಉಸ್ತುವಾರಿ ಸಚಿವರ ಮನವಿಯಂತೆ ಯೋಜನೆಯನ್ನು ಬೀದರ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಜತೆಗೆ ಸೂಕ್ಷ್ಮ ನೀರಾವರಿ ಮತ್ತು ಹನಿ ನೀರಾವರಿ ಸೇರಿದಂತೆ ಜಿಲ್ಲೆಗೆ ಯಂತ್ರೋಪಕರಣಗಳ ವಿತರಣೆಗೆ ಹೆಚ್ಚುವರಿ ಅನುದಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರದ ವಿಳಂಭ ಧೋರಣೆ ನಡುವೆಯೂ ರಾಜ್ಯದಲ್ಲಿ 4600 ಕೋಟಿ ರೂ. ಬರ ಪರಿಹಾರ ನೀಡಲಾಗಿದೆ. 1700 ಕೋಟಿ ರೂ. ಮುಂಗಾರು ಹಂಗಾಮಿನ ವಿಮೆ ಪರಿಹಾರ ಇತ್ಯರ್ಥ ಮಾಡಲಾಗಿದೆ. ರಾಜ್ಯದಲ್ಲಿ ಒಂದು ಸಾವಿರ ಕೋಟಿ ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಜತೆಗೆ ಸರ್ಕಾರ ಈ ಬಜೆಟ್ ನಲ್ಲಿಯೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇದು ರೈತರ ಬಗ್ಗೆ ಸರ್ಕಾರದ ಬದ್ದತೆಗೆ ಸಾಕ್ಷಿ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸ್ವಂತ ಕಟ್ಟಡ ಇಲ್ಲದ 17 ರೈತ ಸಂಪರ್ಕ ಕೇಂದ್ರಗಳನ್ನು 34 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. 14.50 ಕೋಟಿ ರೂಪಾಯಿ ವೆಚ್ಚದಲ್ಲಿ 58 ಗೋದಾಮುಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಕ-ಕ ಭಾಗದಲ್ಲಿ ಖಾಲಿ ಇರುವ 42 ಕೃಷಿ ಅಧಿಕಾರಿಗಳು ಮತ್ತು 231 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ತುಂಬಲು ಕೆಪಿ.ಸ್‌ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಾರೆ ರಾಜ್ಯಾದ್ಯಂತ ಕೃಷಿ ಇಲಾಖೆಯಲ್ಲಿ979 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಟಾಪ್ ನ್ಯೂಸ್

ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ: ದಿಲ್ಲಿ ಸರಕಾರ

Delhi Government: ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Supreme Court: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

SC: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

CM-Sidda-BGV

Belagavi: ಖಾನಾಪುರ ಪೊಲೀಸ್‌ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Sidda-BGV

Belagavi: ಖಾನಾಪುರ ಪೊಲೀಸ್‌ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ: ದಿಲ್ಲಿ ಸರಕಾರ

Delhi Government: ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Supreme Court: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

SC: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.