ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ; ಕೃಷಿಕರಲ್ಲಿ ಆತಂಕ

Team Udayavani, Jun 30, 2024, 1:35 AM IST

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ

ಸುಳ್ಯ: ಎಳೆ ಅಡಿಕೆ ಉದುರುವ ಸಮಸ್ಯೆ ತೀವ್ರಗೊಂಡಿದ್ದು, ಇದು ಈ ಬಾರಿಯ ಫಸಲಿನ ಮೇಲೆ ತೀವ್ರ ಪರಿಣಾಮ ಬೀರಲಿದೆ.

ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಲ್ಲೂ ಈ ಸಮಸ್ಯೆ ತೀವ್ರವಾಗಿದೆ. ಮಳೆ ಆರಂಭಗೊಂಡ ಕೆಲವು ದಿನಗಳ ಬಳಿಕ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಈಗಾಗಲೇ ಶೇ.50ರಷ್ಟು ಎಳೆ ಅಡಿಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಅಡಿಕೆ ಕೃಷಿಗೆ ಯಥೇತ್ಛ ನೀರು ಅಗತ್ಯ. ಈ ಬಾರಿಯ ಬೇಸಗೆಯಲ್ಲಿ ಬಿಸಿಲು ತೀವ್ರವಾಗಿದ್ದು, ಹೆಚ್ಚಿನ ಕಡೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಇದು ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಬೇಸಗೆಯಲ್ಲಿ ಅಡಿಕೆ ಹಿಂಗಾರ ಕರಟುವ ಸಮಸ್ಯೆ ಕಾಣಿಸಿಕೊಂಡಿತ್ತು.

ಬೇಸಗೆಯಲ್ಲಿ ಬಾರೀ ಪ್ರಮಾಣದಲ್ಲಿ ತಾಪಮಾನ ಹೆಚ್ಚಳಗೊಂಡಿತ್ತು. ಜತೆಗೆ ಮೇ ಅಂತ್ಯದವರೆಗೂ ಸರಿಯಾಗಿ ಮಳೆಯಾ ಗಿರಲಿಲ್ಲ. ಬಳಿಕ ಮಳೆ ಆಗಿದ್ದು, ಆಗ ಎಳೆ ಅಡಿಕೆ ಉದುರಲು ಆರಂಭಗೊಂಡಿತ್ತು.

ಮಳೆ ಬಿದ್ದ ಬಳಿಕ ಅಲ್ಪ ಪ್ರಮಾಣದಲ್ಲಿ ಎಳೆ ಅಡಿಕೆ ಉದು ರುವುದು ಕಡಿಮೆಯಾಗಿತ್ತು. ಅನಂತರ ಮಳೆ ಹಾಗೂ ಬಿಸಿಲ ವಾತಾವರಣದಲ್ಲಿ ಉಷ್ಣತೆ ಏರಿಕೆ ಯಾಗಿ ಹಲವೆಡೆ ಎಳೆ ಅಡಿಕೆ ಉದುರುತ್ತಿರುವುದು ಕಂಡು ಬರುತ್ತಿದೆ. ಮಳೆ ಆರಂಭವಾದ ಕೆಲವು ದಿನಗಳಲ್ಲಿ ಮತ್ತೆ ಬಿಸಿಲಿನ ವಾತಾ ವರಣ ಇರುವು ದರಿಂದ ಶಿಲೀಂಧ್ರಗಳು ಎಳೆ ಅಡಿಕೆ ರಸವನ್ನು ಹೀರುವುದರಿಂದ ಅವು ಉದುರುತ್ತವೆ ಎನ್ನುತ್ತಾರೆ ಕೃಷಿಕರು.

ಈಗಾಗಲೇ ಅಡಿಕೆಗೆ ಔಷಧ ಸಿಂಪಡಣೆ ಆರಂಭಿಸಲಾಗಿದೆ. ಸಾಮಾನ್ಯ ವಾಗಿ ಮೊದಲ ಹಂತದಲ್ಲಿ ಅಡಿಕೆ ಫಸಲು ನಿಲ್ಲಲು ಔಷಧ ಸಿಂಪಡಿಸಲಾಗುತ್ತದೆ. ಕೆಲವರು ಪ್ರತಿ ತಿಂಗಳು ಅಥವಾ 2-3 ತಿಂಗಳಿಗೊಮ್ಮೆ ಔಷಧ ಸಿಂಪಡಿಸುತ್ತಾರೆ. ಎಳೆ ಅಡಿಕೆ ಉದುರುವುದನ್ನು ತಡೆ ಯಲೂ ಔಷಧ ಸಿಂಪಡಿಸುತ್ತಿದ್ದಾರೆ. ಇದರಿಂದ ಕೆಲವೆಡೆ ಮಾತ್ರ ಸಮಸ್ಯೆ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ ರೈತರು.

ಕೀಟ ರಸ ಹೀರುವುದರಿಂದ ಎಳೆ ಅಡಿಕೆ ಉದುರುತ್ತದೆ. ಮಳೆಗಾಲ ಸಂದರ್ಭದಲ್ಲಿ ಇದು ಅಲ್ಲಲ್ಲಿ ಕಂಡುಬರುತ್ತದೆ. ಔಷಧ ಸಿಂಪಡಣೆ ಮೂಲಕ ನಿಯಂತ್ರಣ ಸಾಧ್ಯವಿದೆ. ಸ್ಪಷ್ಟವಾಗಿ ಯಾವ ಕಾರಣದಿಂದ ಎಳೆ ಅಡಿಕೆ ಉದುರುತ್ತಿದೆ, ಅದಕ್ಕೆ ಯಾವ ಔಷಧ ಮೂಲಕ ನಿಯಂತ್ರಣ ಸಾಧ್ಯ ಎಂಬುದನ್ನು ಸ್ಥಳಕ್ಕೆ ಭೇಟಿ ನೀಡಿ ಅಥವಾ ಉದುರಿದ ಎಳೆ ಅಡಿಕೆಯನ್ನು ಪರಿಶೀಲಿಸಿ ತಿಳಿಯಬಹುದು.
– ಡಾ| ನಾಗರಾಜ್‌ ವಿಜ್ಞಾನಿ, ಸಿ.ಪಿ.ಸಿ.ಐ. ವಿಟ್ಲ

ಟಾಪ್ ನ್ಯೂಸ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.