West Bengal; ನಡು ಬೀದಿಯಲ್ಲೇ ಮಹಿಳೆಗೆ ನಿರ್ದಯವಾಗಿ ಥಳಿತ:ವಿಡಿಯೋ ವೈರಲ್
ತೃಣಮೂಲ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಸಿಪಿಎಂ
Team Udayavani, Jun 30, 2024, 6:43 PM IST
ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ಮಹಿಳೆಯೊಬ್ಬಳಿಗೆ ನಡುರಸ್ತೆಯಲ್ಲೆ ಅಮಾನವೀಯವಾಗಿ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಪುರುಷನೊಬ್ಬ ಮಹಿಳೆ ಮತ್ತು ಇನ್ನೊಬ್ಬ ಪುರುಷನನ್ನು ಕೋಲುಗಳಿಂದ ಥಳಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಥಳಿಸಿದ ವ್ಯಕ್ತಿ ಮಹಿಳೆಯ ತಲೆ ಕೂದಲಿಗೆ ಕೈ ಹಾಕಿ ಬದಿಗೆ ಎಳೆದೊಯ್ದಿದ್ದಾನೆ.ಸುತ್ತಲಿದ್ದ ನೂರಾರು ಜನರು ಮೂಕಪ್ರೇಕ್ಷಕರಾಗಿ ನಿಂತಿದ್ದರು.
ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದ ಲಕ್ಷ್ಮೀಕಾಂತಪುರದಲ್ಲಿ ನಡೆದಿದೆ ಎಂದು ಹೇಳಲಾಗಿದೆ ವೈರಲ್ ದೃಶ್ಯಗಳಲ್ಲಿ, ‘ಜೆಸಿಬಿ’ ಎಂದು ಕರೆಯಲ್ಪಡುವ ತಾಜೆಮುಲ್ ಎಂಬ ವ್ಯಕ್ತಿ ಮಹಿಳೆ ಮತ್ತು ಪುರುಷನನ್ನು ದೊಣ್ಣೆಯಿಂದ ಅಮಾನುಷವಾಗಿ ಥಳಿಸುತ್ತಿದ್ದಾನೆ. ತಾಜೆಮುಲ್ ಚೋಪ್ರಾ ವಿಧಾನಸಭಾ ಕ್ಷೇತ್ರದ ಟಿಎಂಸಿ ಶಾಸಕ ಹಮೀದುರ್ ರೆಹಮಾನ್ ಅವರ ನಿಕಟವರ್ತಿ ಎನ್ನಲಾಗಿದ್ದು ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
CPI(M) ಖಂಡನೆ ; ಆಕ್ರೋಶ
ಎಕ್ಸ್ ನಲ್ಲಿ ವೀಡಿಯೊವನ್ನು ಹಂಚಿಕೊಂಡ CPI(M) ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿ ಎಂ.ಡಿ. ಸಲೀಂ, “#KangarooCourt ಕೂಡ ಅಲ್ಲ! ವಿಚಾರಣೆ ಮತ್ತು ಶಿಕ್ಷೆಯನ್ನು JCB ಎಂದು ಅಡ್ಡಹೆಸರಿನ ತಾಜೆಮುಲ್ ತೃಣಮೂಲ ಕಾಂಗ್ರೆಸ್ ನ ಗೂಂಡಾಗಳು ಚೋಪ್ರಾದಲ್ಲಿ ನೀಡಿದ್ದಾರೆ.ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಅಕ್ಷರಶಃ ಬುಲ್ಡೋಜರ್ ನ್ಯಾಯ” ಎಂದು ಬರೆದಿದ್ದಾರೆ.
ವಿಡಿಯೋ ಮಾಡಿದ ವ್ಯಕ್ತಿಯನ್ನು ತನ್ನ ಮನೆಯಿಂದ ಹೊರಹಾಕಲಾಗಿದೆ ಎಂದು ಸಲೀಂ ಆರೋಪಿಸಿದ್ದಾರೆ. “ಮಹಿಳೆಯ ಮೇಲೆ ನಿರ್ದಯವಾಗಿ ಹಲ್ಲೆ ನಡೆಸುತ್ತಿರುವ ಜೆಸಿಬಿ ಅಕಾ ತಾಜೆಮುಲ್ ಎನ್ನುವವನು ಮನ್ಸೂರ್ ಆಲಂನ ಕೊಲೆಯ ಪ್ರಮುಖ ಆರೋಪಿಯಾಗಿದ್ದಾನೆ. ಕೊಲೆಗಾರರು ನಿರಾಳವಾಗಿದ್ದಾರೆ, ಬಂಗಾಳದಲ್ಲಿ ನ್ಯಾಯದ ವಿಡಂಬನೆ ಮುಂದುವರೆದಿದೆ” ಎಂದು ಬರೆದಿದ್ದಾರೆ.
This is the ugly face of Mamata Banerjee’s rule in West Bengal.
The guy in the video, who is beating up a woman mercilessly, is Tajemul (popular as JCB in the area). He is famous for giving quick justice through his ‘insaf’ sabha and is a close associate of Chopra MLA Hamidur… pic.twitter.com/fuQ8dVO5Mr
— Amit Malviya (@amitmalviya) June 30, 2024
ಬಿಜೆಪಿ ಕಿಡಿ
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, “ಇದು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಡಳಿತದ ಕೊಳಕು ಮುಖವಾಗಿದೆ. ಮಹಿಳೆಯನ್ನು ನಿರ್ದಯವಾಗಿ ಥಳಿಸುವ ವೀಡಿಯೊದಲ್ಲಿರುವ ವ್ಯಕ್ತಿ ತಾಜೆಮುಲ್ (ಜೆಸಿಬಿ ಎಂದು ಕರೆಯಲಾಗುತ್ತದೆ) ತಮ್ಮ ‘ಇನ್ಸಾಫ್’ ಸಭೆಯ ಮೂಲಕ ತ್ವರಿತ ನ್ಯಾಯವನ್ನು ನೀಡಿದ್ದಾನೆ. ಈತ ಚೋಪ್ರಾ ಶಾಸಕ ಹಮೀದುರ್ ರೆಹಮಾನ್ ಅವರ ನಿಕಟವರ್ತಿ.ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯೇ ಇಲ್ಲ. ಮಮತಾ ಬ್ಯಾನರ್ಜಿ ಈ ದೈತ್ಯನ ವಿರುದ್ಧ ವರ್ತಿಸುತ್ತಾರೆಯೇ ಅಥವಾ ಶೇಖ್ ಷಹಜಹಾನ್ ಪರವಾಗಿ ನಿಂತಂತೆ ಅವನನ್ನು ರಕ್ಷಿಸುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳ ಸರಕಾರ ಮತ್ತು ತೃಣಮೂಲ ಕಾಂಗ್ರೆಸ್ ಈ ವೀಡಿಯೊ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.