2026 T20 World Cup; ಭಾರತ-ಶ್ರೀಲಂಕಾ ಆತಿಥ್ಯ
Team Udayavani, Jul 1, 2024, 6:30 AM IST
ಬ್ರಿಜ್‌ಟೌನ್: ಮುಂದಿನ ಟಿ20 ವಿಶ್ವಕಪ್, ಅಂದರೆ 2026ರ ಆವೃತ್ತಿಗೆ ಭಾರತ ಮತ್ತು ಶ್ರೀಲಂಕಾ ದೇಶಗಳು ಜಂಟಿ ಆತಿಥ್ಯ ವಹಿಸಿಕೊಂಡಿವೆ. ಟೂರ್ನಿಯ ಆರಂಭ, ಮುಕ್ತಾಯದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಫೆಬ್ರವರಿ-ಮಾರ್ಚ್‌ನಲ್ಲಿ ಪಂದ್ಯಾವಳಿ ನಡೆಯುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.
10ನೇ ಟಿ20 ವಿಶ್ವಕಪ್ ಆವೃತ್ತಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿವೆ ಎಂದು ಐಸಿಸಿ, 2021ರ ನವೆಂಬರ್‌ನಲ್ಲೇ ಘೋಷಿಸಿತ್ತು. ಇದು ಮೊದಲನೇ ಬಾರಿಗೆ ಭಾರತ-ಲಂಕಾ ಜಂಟಿಯಾಗಿ ಟೂರ್ನಿ ಆಯೋಜಿಸುತ್ತಿವೆ. ಆದರೆ 2012ರಲ್ಲಿ ಶ್ರೀಲಂಕಾ ಮತ್ತು 2016ರಲ್ಲಿ ಭಾರತ ತಲಾ ಒಂದು ಬಾರಿ ಟಿ20 ವಿಶ್ವಕಪ್ ಆಯೋಜಿಸಿವೆ.ಮುಂದಿನ ವಿಶ್ವಕಪ್‌ನಲ್ಲೂ ಒಟ್ಟು 20 ತಂಡಗಳು ಪಾಲ್ಗೊಳ್ಳಲಿವೆ.
ಆತಿಥೇಯ ದೇಶಗಳಾಗಿ ಈಗಾಗಲೇ ಭಾರತ ಮತ್ತು ಶ್ರೀಲಂಕಾಕ್ಕೆ ಮುಂದಿನ ಟಿ20 ವಿಶ್ವಕಪ್‌ಗೆ ಅರ್ಹತೆ ಸಿಕ್ಕಿವೆ.
ಇನ್ನು ಈ ಬಾರಿಯ ಟೂರ್ನಿಯಲ್ಲಿ ಸೂಪರ್-8ಕ್ಕೇರಿದ್ದ ಆಸ್ಟ್ರೇಲಿಯಾ, ಇಂಗ್ಲೆಂಡ್, ಅಮೆರಿಕ, ಅಫ್ಘಾನಿಸ್ಥಾನ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡಗಳು ನೇರ ಪ್ರವೇಶ ಗಿಟ್ಟಿಸಿಕೊಂಡಿವೆ. ಅಲ್ಲದೆ, ಟಿ20 ವಿಶ್ವ ರ್‍ಯಾಂಕಿಂಗ್ ಆಧಾರದಲ್ಲಿ ನ್ಯೂಜಿ ಲ್ಯಾಂಡ್, ಐರ್ಲೆಂಡ್ ಮತ್ತು ಪಾಕಿಸ್ಥಾನ ತಂಡಗಳಿಗೂ ಪ್ರವೇಶ ಸಿಕ್ಕಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.