![River](https://www.udayavani.com/wp-content/uploads/2024/07/River-415x234.jpg)
Bihar, ಬಳಿಕ ಝಾರ್ಖಂಡ್ನಲ್ಲಿ ಸೇತುವೆಯೊಂದರ ಗರ್ಡರ್ ಕುಸಿತ
Team Udayavani, Jul 1, 2024, 12:26 AM IST
![1-jha](https://www.udayavani.com/wp-content/uploads/2024/07/1-jha-620x346.jpg)
ರಾಂಚಿ: ಬಿಹಾರದಲ್ಲಿ ನಿರ್ಮಾಣ ಹಂತದಲ್ಲಿರುವ ಐದು ಸೇತುವೆಗಳು ಕುಸಿಯುತ್ತಿರುವಂತೆಯೇ, ಝಾರ್ಖಂಡ್ನ ಗಿರಿಧ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯೊಂದರ ಗರ್ಡರ್ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಶನಿವಾರ ಸುರಿದ ಭಾರೀ ಮಳೆಯಿಂದಾಗಿ ಘಟನೆ ಸಂಭವಿಸಿದ್ದು, ಸೇತುವೆಯ ಪಿಲ್ಲರ್ ಕೂಡ ವಾಲಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ಫತೇಹ್ಪುರದ ಭೆಳವಗತಿ ರಸ್ತೆಯಿಂದ ದುಮ್ರಿತೊಲಾ ಮತ್ತು ಕರಿಪಹ್ರಿ ಗ್ರಾಮಗಳನ್ನು ಸಂಪರ್ಕಿಸಲು ಈ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. ಗರ್ಡರ್ ಅಳವಡಿಸಿ ಕೇವಲ ವಾರವಷ್ಟೇ ಆಗಿದ್ದು, ಅದು ಬಲವಾಗಲು 28 ದಿನಗಳ ಸಮಯ ಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಭಾರೀ ಮಳೆಯಾದ ಕಾರಣ ಗರ್ಡರ್ ಕುಸಿದು ಬಿದ್ದಿದೆ.
ಟಾಪ್ ನ್ಯೂಸ್
![River](https://www.udayavani.com/wp-content/uploads/2024/07/River-415x234.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.