ಇಂದಿನಿಂದ 3 ದೇಸಿ ಕಾನೂನು ಜಾರಿ; ಏನೆಲ್ಲ ಹೊಸತು?
ವಸಾಹತುಶಾಹಿ ಬ್ರಿಟಿಷ್ ಕಾಲದ ಕ್ರಿಮಿನಲ್ ಕಾನೂನುಗಳಿಗೆ ತಿಲಾಂಜಲಿ
Team Udayavani, Jul 1, 2024, 6:47 AM IST
ಹೊಸದಿಲ್ಲಿ: ವಸಹಾತುಶಾಹಿಯ ಪಳೆಯುಳಿಕೆಯಂತಿದ್ದ ಮೂರು ಕ್ರಿಮಿನಲ್ ಕಾಯ್ದೆಗಳಿಗೆ ಬದಲಾವಣೆ ತಂದು ಪರಿಚಯಿಸ ಲಾದ ಹೊಸ ಕಾನೂನುಗಳು ಸೋಮವಾರದಿಂದ ದೇಶಾದ್ಯಂತ ಜಾರಿಯಾಗಲಿವೆ.
ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಬದಲಿಗೆ ಭಾರ ತೀಯ ನ್ಯಾಯ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಬದಲಿಗೆ ಭಾರ ತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಸಾಕ್ಷ್ಯ ಕಾಯ್ದೆಯ ಬದಲಿಗೆ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ಬರಲಿವೆ.
ಈ ಮೊದಲು ಜಾರಿಯಲ್ಲಿದ್ದ ಕ್ರಿಮಿನಲ್ ಕಾನೂನುಗಳು ಬ್ರಿಟಿಷ್ ಕಾಲದವುಗಳಾಗಿದ್ದವು. ಇವುಗಳಲ್ಲಿ ವಸಾಹಾತುಶಾಹಿ ಮನಃಸ್ಥಿತಿ ತುಂಬಿತ್ತು ಎಂಬ ಕಾರಣಕ್ಕೆ ಹಾಗೂ ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಬೇಕು ಎಂಬ ಉದ್ದೇಶ ದಿಂದ ಹೊಸ ಕಾನೂನುಗಳನ್ನು ರಚನೆ ಮಾಡ ಲಾಗಿತ್ತು. ಯಾವುದೇ ಠಾಣೆಯಲ್ಲಿ ಎಫ್ಐಆರ್ ರಚನೆ ಮಾಡಬಹುದಾದ ಅವಕಾಶ (ಜೀರೋ ಎಫ್ಐಆರ್), ಅಪರಾಧ ಪ್ರಕರಣಗಳಲ್ಲಿ ಕಡ್ಡಾಯವಾಗಿ ವೀಡಿಯೋ ಚಿತ್ರೀಕರಣ, ಆನ್‌ಲೈನ್‌ನಲ್ಲಿ ದೂರು ದಾಖಲು, ಎಸ್‌ಎಂಎಸ್ ಮೂಲಕ ಎಲೆಕ್ಟ್ರಾನಿಕ್ ಸಮನ್ಸ್ ಮುಂತಾದ ಅವಕಾಶಗಳನ್ನು ಈ ಹೊಸ ಕಾನೂನುಗಳು ನೀಡುತ್ತವೆ.
45 ದಿನಗಳಲ್ಲಿ ಶಿಕ್ಷೆ ಘೋಷಣೆ
ವಿಚಾರಣೆ ಮುಗಿದ 45 ದಿನಗಳ ಒಳಗೆ ಅಪರಾಧಿಗಳಿಗೆ ಶಿಕ್ಷೆ ಘೋಷಣೆ ಮಾಡಬೇಕು. ಅಲ್ಲದೆ ಮೊದಲ ವಿಚಾರಣೆ ನಡೆದ 60 ದಿನಗಳ ಒಳಗೆ ಆರೋಪಗಳನ್ನು ಪಟ್ಟಿ ಮಾಡಬೇಕು ಎಂಬುದನ್ನು ಹೊಸ ಕಾನೂನುಗಳಲ್ಲಿ ಸೇರ್ಪಡೆ ಮಾಡಲಾಗಿದೆ. ಇದು ತ್ವರಿತ ನ್ಯಾಯದಾನಕ್ಕೆ ಸಹಾಯಕವಾಗಲಿದೆ. ಜತೆಗೆ ಅತ್ಯಾಚಾರಕ್ಕೆ ತುತ್ತಾದ ಮಹಿಳೆಯ ಹೇಳಿಕೆಯನ್ನು ಮಹಿಳಾ ಪೊಲೀಸರೇ ದಾಖಲಿಸಬೇಕು ಎಂಬುದನ್ನು ಇದರಲ್ಲಿ ಸೇರಿಸಲಾಗಿದೆ. ಐಪಿಸಿಯಲ್ಲಿ ದಾಖಲಾದ ಅಪರಾಧಗಳಾದ ಮದುವೆಯಾಗುವುದಾಗಿ ಸುಳ್ಳು ಭರವಸೆ, ಅಪ್ರಾಪ್ತ ವಯಸ್ಸಿನವರ ಮೇಲೆ ಸಾಮೂಹಿಕ ಅತ್ಯಾಚಾರ, ಗುಂಪುಹಲ್ಲೆ ಮತ್ತು ಸರಗಳ್ಳತನಗಳನ್ನು ಅಪರಾಧಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಮೂರು ಹೊಸ ಕಾನೂನುಗಳನ್ನು ಜಾರಿ ಮಾಡಲು ಕೇಂದ್ರ ಸರಕಾರ ಭರದ ಸಿದ್ಧತೆಗಳನ್ನು ಕೈಗೊಂಡಿದೆ. ಎನ್‌ಸಿಆರ್‌ಬಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತರಬೇತಿಯನ್ನು ನೀಡಲಾಗಿದೆ. ಸಹಾಯಕ ತಂಡಗಳು ಮತ್ತು ಕಾಲ್ ಸೆಂಟರ್‌ಗಳನ್ನು ತೆರೆಯಲಾಗಿದೆ. ದೇಶದ 17,500ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಏನಿತ್ತು? ಏನಾಯಿತು?
-ಭಾರತೀಯ ದಂಡ ಸಂಹಿತೆ – ಭಾರತೀಯ ನ್ಯಾಯ ಸಂಹಿತೆ
-ಅಪರಾಧ ಪ್ರಕ್ರಿಯಾ ಸಂಹಿತೆ – ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ
-ಸಾಕ್ಷ್ಯ ಕಾಯ್ದೆ – ಭಾರತೀಯ ಸಾಕ್ಷ್ಯ ಅಧಿನಿಯಮ
ಏನೆಲ್ಲ ಹೊಸತು?
-ಶೂನ್ಯ ಎಫ್ಐಆರ್
-ಕಡ್ಡಾಯ ವೀಡಿಯೋ ಚಿತ್ರೀಕರಣ
-ಆನ್‌ಲೈನ್ ಮೂಲಕ ದೂರು ದಾಖಲು
-ಎಸ್‌ಎಂಎಸ್ ಮೂಲಕ ಸಮನ್ಸ್
-45 ದಿನಗಳ ಒಳಗೆ ಶಿಕ್ಷೆ ಘೋಷಣೆ
-60 ದಿನಗಳ ಒಳಗೆ ಆರೋಪಪಟ್ಟಿ ಸಲ್ಲಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.