Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898 ಎಡಿ’

Team Udayavani, Jul 1, 2024, 8:55 AM IST

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898ಎಡಿ’

ಹೈದರಾಬಾದ್:‌ ನಾಗ್‌ ಅಶ್ವಿನ್‌ (Nag Ashwin) ನಿರ್ದೇಶನದ ಪ್ಯಾನ್‌ ಇಂಡಿಯಾ ʼಕಲ್ಕಿ 2898ಎಡಿ’ (Kalki 2898 AD) ವಿಶ್ವದಾದ್ಯಂತ ಭರ್ಜರಿ ಸದ್ದು ಮಾಡಿದೆ. ದೊಡ್ಡ ಬಜೆಟ್‌ ನಲ್ಲಿ ನಿರ್ಮಾಣವಾದ ಈ ಸಿನಿಮಾದ ಗಳಿಕೆಯೂ ದಿನಕಳೆದಂತೆ ಹೆಚ್ಚಾಗುತ್ತಿದೆ.

ಈಗಾಗಲೇ ಹಲವು ದಾಖಲೆಗಳನ್ನು ಮುರಿದಿರುವ ಪ್ರಭಾಸ್ (Prabhas)ʼಕಲ್ಕಿʼ ಈಗ ಬಾಕ್ಸ್‌ ಆಫೀಸ್‌ ನಲ್ಲಿ ಕೋಟಿ ಕೋಟಿ ಗಳಿಸುವ ಮೂಲಕ ಸುದ್ದಿಯಾಗಿದೆ. ರಿಲೀಸ್‌ ಆದ ನಾಲ್ಕೇ ದಿನದಲ್ಲಿ ಸಿನಿಮಾ ಬೆಚ್ಚಿಬೀಳಿಸುವಂತಹ ಕಮಾಯಿ ಮಾಡಿದೆ.

ಮಹಾಭಾರತ ಹಾಗೂ ಸೈನ್ಸ್‌ ಫೀಕ್ಷನ್ ಅಂಶಗಳನ್ನುಒಳಗೊಂಡಿರುವ ಚಿತ್ರದಲ್ಲಿ ಅದ್ಧೂರಿ ಎಎಫ್‌ ಎಕ್ಸ್‌ ಹಾಗೂ ಕಲಾವಿದರ ಅಭಿನಯ ಕಮಾಲ್‌ ಮಾಡಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ʼಕಲ್ಕಿʼ ಅವತಾರವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಜೂ.27 ರಂದು ಚಿತ್ರ ತೆರೆಕಂಡಿತು. ಇದೀಗ ರಿಲೀಸ್‌ ಆಗಿ ನಾಲ್ಕೇ ದಿನದಲ್ಲಿ 500 ಕೋಟಿ ಗಳಿಕೆ ಕಾಣುವ ಮೂಲಕ ಭರ್ಜರಿಯಾಗಿ ಸದ್ದು ಮಾಡಿದೆ. ಚಿತ್ರದ ಗಳಿಕೆ ಬಗ್ಗೆ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್‌ ʼಎಕ್ಸ್‌ʼನಲ್ಲಿ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ.

ಭಾರತದಲ್ಲಿ 300 ಕೋಟಿ ಗಳಿಕೆ ಕಾಣುವುದರ ಜೊತೆಗೆ  ಉತ್ತರ ಅಮೆರಿಕಾದ ಗಲ್ಲಾಪೆಟ್ಟಿಗೆಯಲ್ಲಿ $10.5 ಮಿಲಿಯನ್ (ಅಂದಾಜು 87 ಕೋಟಿ ರೂ.) ಗಳಿಕೆ ಕಂಡಿದೆ. ಆ ಮೂಲಕ ವಿದೇಶದಲ್ಲಿ ಆರಂಭಿಕ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿ ʼಕಲ್ಕಿʼ ಹೊರಹೊಮ್ಮಿದೆ.

ಭಾನುವಾರ(ಜೂ.30 ರಂದು) ʼಕಲ್ಕಿʼ ಭಾರತದಲ್ಲಿ 85 ಕೋಟಿ ರೂ.ಗಳಿಸಿದೆ. ಚಿತ್ರದ ತೆಲುಗು ವರ್ಷನ್ 36.8 ಕೋಟಿ ಗಳಿಸಿದ್ದರೆ, ಹಿಂದಿ ವರ್ಷ ಭಾನುವಾರ 39 ಕೋಟಿ ಗಳಿಸಿದೆ ಎಂದು ವರದಿ ತಿಳಿಸಿದೆ.

ಸುಮಾರು 600 ಕೋಟಿ ನಿರ್ಮಾಣವಾದ ʼಕಲ್ಕಿʼ 800 ಕೋಟಿಗೂ ಹೆಚ್ಚಿನ ಲೈಫ್‌ ಟೈಮ್‌ ಬ್ಯುಸಿನೆಸ್‌ ಮಾಡುವ ಸಾಧ್ಯತೆಯಿದೆ ಎನ್ನುವುದು ವ್ಯಾಪಾರ ತಜ್ಞರ ಊಹೆ.

ಚಿತ್ರದಲ್ಲಿ ಪ್ರಭಾಸ್‌, ಅಮಿತಾಭ್‌ ಬಚ್ಚನ್‌, ದೀಪಿಕಾ ಪಡುಕೋಣೆ, ಕಮಲ್‌ ಹಾಸನ್‌, ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

4-punjalkatte

Ajilamogaru: ನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ನಿಯೋಜನೆ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

2-kushtagi

ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ; ಚಾಲಕ ಸಾವು; ಹಲವು ಪ್ರಯಾಣಿಕರಿಗೆ ಗಾಯ

vidhana-Soudha

Karnataka Government: 7ನೇ ವೇತನ ಆಯೋಗದ ಶಿಫಾರಸಿಗೆ ಎಳ್ಳುನೀರು?

High-Court

HSRP ಅಳವಡಿಕೆ ಅವಧಿ ಸೆ. 15ರವರೆಗೆ ವಿಸ್ತರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

7

‘The Indian House’ Movie: ರಾಮ್‌ಚರಣ್‌ ನಿರ್ಮಾಣದಲ್ಲಿ ʼದಿ ಇಂಡಿಯನ್‌ ಹೌಸ್‌ʼ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

4-punjalkatte

Ajilamogaru: ನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ

3-kushtagi

Kushtagi: ಕಳ್ಳರ ಅಟ್ಟಹಾಸಕ್ಕೆ 13 ಶ್ರೀಗಂಧದ ಮರ ಬಲಿ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ನಿಯೋಜನೆ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.