Miracle: ಈ ಊರಿನ ಮನೆ, ಅಂಗಡಿ, ಕಚೇರಿಗಳಿಗೆ ಬಾಗಿಲೇ ಇಲ್ವಂತೆ… ಶನಿಯೇ ಇದರ ರಕ್ಷಕನಂತೆ

ನದಿಯಲ್ಲಿ ಬಂದ ಕರಿಕಲ್ಲು ಶನಿದೇವರಾಗಿ ಪರಿವರ್ತನೆ

ಸುಧೀರ್, Jul 2, 2024, 5:00 PM IST

Miracle: ಈ ಊರಿನ ಮನೆ, ಅಂಗಡಿ, ಕಚೇರಿಗಳಿಗೆ ಬಾಗಿಲೇ ಇಲ್ವಂತೆ… ಶನಿಯೇ ಇದರ ರಕ್ಷಕನಂತೆ

ನಮ್ಮ ದೇಶದಲ್ಲಿ ಬಾಗಿಲೇ ಇಲ್ಲದ ಊರೊಂದು ಇದೆ ಎಂದರೆ ನೀವು ನಂಬುತ್ತೀರಾ…? ಇಲ್ಲ ಎಂದರೂ ನಂಬಲೇಬೇಕು ಯಾಕೆಂದರೆ ನಮ್ಮ ದೇಶದ ಒಂದು ಊರಿನಲ್ಲಿ ಮನೆಗಳಿಗೆ ಬಾಗಿಲೇ ಇಲ್ವಂತೆ ಅಷ್ಟೇ ಯಾಕೆ ಇಲ್ಲಿರುವ ಒಂದು ಬ್ಯಾಂಕಿನಲ್ಲಿ ಲಾಕರ್ ವ್ಯವಸ್ಥೆಯೇ ಇಲ್ವಂತೆ… ಹಾಗಾದರೆ ಆ ಊರು ಎಲ್ಲಿದೆ, ಅಲ್ಲಿನ ಜನಕ್ಕೆ ಕಳ್ಳ ಕಾಕರ ಭಯ ಇಲ್ವಾ ? ಯಾಕೆ ಮನೆಗಳಿಗೆ ಬಾಗಿಲು ಇಟ್ಟಿಲ್ಲ, ಇದೆಲ್ಲದರ ಹಿಂದೆ ಯಾರಿದ್ದಾರೆ…! ಈ ಸ್ಟೋರಿ ಓದಿ.

ಶನಿ ಶಿಂಗ್ನಾಪುರ ಮಹಾರಾಷ್ಟ್ರದ ಅಹ್ಮದಾನಗರ ಜಿಲ್ಲೆಯ ಒಂದು ಹಳ್ಳಿ, ಈ ಊರಿನಲ್ಲಿ ನೂರಾರು ಮನೆಗಳಿವೆ ಆದರೆ ಒಂದೂ ಮನೆಗೂ ಬಾಗಿಲಿಲ್ಲ ಹಾಗಾದರೆ ಈ ಊರಿನಲ್ಲಿ ಕಳ್ಳತನ ನಡೆಯೋದಿಲ್ವಾ ಎಂದರೆ ಹಿಂದೆ ಎರಡು ಭಾರಿ ಕಳ್ಳತನ ಯತ್ನ ನಡೆದಿತ್ತು ಆದರೆ ಶನಿ ದೇವರು ಅದನ್ನು ತಡೆದಿದ್ದರು ಅಂದಿನಿಂದ ಇಂದಿನವರೆಗೂ ಯಾವುದೇ ಕಳ್ಳತನ ಪ್ರಕರಣ ನಡೆದಿಲ್ಲ ಎನ್ನುತ್ತಾರೆ ಊರಿನವರು.

ಶನಿ ದೇವರಿಂದ ಬಂದ ಹೆಸರು:
ಅಹ್ಮದಾನಗರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಶನಿ ಶಿಂಗ್ನಾಪುರ ಊರು ಇಲ್ಲಿರುವ ಶನಿ ದೇವರಿಂದ ಬಂದಿದೆ ಎನ್ನಲಾಗಿದೆ ಅಲ್ಲದೆ ಶನಿ ದೇವರು ಈ ಊರಿನಲ್ಲಿ ನೆಲೆಸಿರುವುದರಿಂದ ಶನಿ ಶಿಂಗ್ನಾಪುರ ಎಂಬ ಹೆಸರು ಬಂದಿದೆ.

ಶನಿ ಶಿಂಗ್ನಾಪುರ ಗ್ರಾಮ ಏಕೆ ವಿಶೇಷ?
ಶನಿ ದೇವರ ಶಕ್ತಿಗೆ ಶನಿ ಶಿಂಗ್ನಾಪುರ ಗ್ರಾಮದಲ್ಲಿ ಕಳ್ಳರು ಕಳ್ಳತನಕ್ಕೆ ಹೆದರುತ್ತಾರೆ. ಹಾಗಾಗಿ ಇಲ್ಲಿರುವ ಎಲ್ಲ ಮನೆಗಳಿಗೂ ಬಾಗಿಲುಗಳೇ ಇಲ್ಲ. ಅಲ್ಲದೆ ಇಲ್ಲಿನ ಕಚೇರಿಗಳಿಗೂ ಬಾಗಿಲುಗಳಿಲ್ಲ. ಜನರು ಧೈರ್ಯದಿಂದ ತಮ್ಮ ಮನೆಗಳನ್ನು ತೆರೆದಿಟ್ಟು ಬೇರೆ ಊರುಗಳಿಗೆ ಹೋಗಿ ಬರುತ್ತಾರೆ. ಇಲ್ಲಿನ ಪ್ರಸಿದ್ಧ ಶನಿದೇವನ ದೇವಾಲಯದಲ್ಲಿ 5 ಅಡಿ ಎತ್ತರದ ಶನಿ ದೇವರ ಪ್ರತಿಮೆ ಇದೆ ಇಲ್ಲಿಗೆ ದೂರದ ಊರುಗಳಿಂದ ಭಕ್ತರು ಶನಿ ದೇವರ ದರ್ಶನ ಪಡೆಯಲು ಬರುತ್ತಾರೆ.

ಕರಿ ಕಲ್ಲಿನ ರೂಪದಲ್ಲಿ ಬಂದ ಶನಿ ದೇವರು:
ದಂತಕಥೆಗಳು ಹೇಳುವ ಪ್ರಕಾರ ಇಲ್ಲಿನ ಹಳ್ಳಿಯಲ್ಲಿ ಒಮ್ಮೆ ಭಾರಿ ಮಳೆಯಾಗಿದ್ದು ಈ ವೇಳೆ ಶಿಂಗ್ನಾಪುರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ನದಿ ತೀರಕ್ಕೆ ಬೃಹತ್ ಗಾತ್ರದ ಕರಿ ಕಲ್ಲೊಂದು ನದಿ ತೀರಕ್ಕೆ ಬಂದಿತ್ತಂತೆ ಇದನ್ನು ಅಲ್ಲಿ ಆಟವಾಡುತ್ತಿದ್ದ ಮಕ್ಕಳು ನೋಡಿದ್ದಾರೆ ಇದನ್ನು ಕಂಡು ಹೆದರಿದ ಮಕ್ಕಳು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದಾರೆ ಏನಪ್ಪಾ ಎಂದು ನದಿ ತೀರಕ್ಕೆ ಬಂದು ನೋಡಿದಾಗ ಬೃಹತ್ ಗಾತ್ರದ ಕರಿ ಕಲ್ಲು ನದಿ ದಡದಲ್ಲಿ ಕಂಡು ಬಂದಿದೆ ಈ ವೇಳೆ ಏನೆಂದು ನೋಡಲು ಕೋಲಿನಿಂದ ಕಲ್ಲನ್ನು ದೂಡಿದ್ದಾರೆ ಆಗ ಕಲ್ಲಿನಿಂದ ರಕ್ತ ಸುರಿಯಲು ಆರಂಭವಾಗಿದೆ ಇದನ್ನು ಕಂಡು ಗಾಬರಿಗೊಂಡ ಏನೋ ಶಕ್ತಿ ಇದೆ ಎಂದು ಹೇಳಿ ಅಲ್ಲಿಂದ ಮನೆಗೆ ತೆರಳಿದ್ದಾರೆ. ಅದೇ ದಿನ ರಾತ್ರಿ ಊರಿನ ಮುಖಂಡನಿಗೆ ಕನಸ್ಸೊಂದು ಬಿದ್ದಿದ್ದು ನಾನು ಶನಿ ದೇವ ನಾನು ನಿಮ್ಮ ಊರಿನಲ್ಲಿರುವ ನದಿ ತೀರದಲ್ಲಿ ಇದ್ದೇನೆ ನನಗೊಂದು ಉಳಿದುಕೊಳ್ಳಲು ನೆಲೆ ಕಟ್ಟಿ ಕೊಡಿ ನಿಮ್ಮ ಊರಿನ ರಕ್ಷಣೆ ನಾನು ಮಾಡುತ್ತೇನೆ ಎಂದು ಆದೇಶ ನೀಡುತ್ತದೆ, ಅಷ್ಟು ಕೇಳಿದ ಮಾತ್ರಕ್ಕೆ ಎಚ್ಚೆತ್ತ ಮುಖಂಡ ಊರಿನ ಜನರನ್ನು ಕರೆಸಿ ತನಗೆ ಕನಸಿನಲ್ಲಿ ಶನಿ ದೇವರು ಬಂದು ದೇವಸ್ಥಾನ ಕಟ್ಟಿ ಕೊಡುವಂತೆ ಆದೇಶ ನೀಡಿದ್ದಾರೆ ಹಾಗಾಗಿ ಕೂಡಲೇ ನದಿ ತೀರದಲ್ಲಿರುವ ಕರಿ ಕಲ್ಲನ್ನು ತಂದು ದೇವರ ಆಜ್ಞೆಯಂತೆ ಛಾವಣಿ ಇಲ್ಲದ ದೇವಾಲಯವನ್ನು ಊರಿನಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ಆರಂಭಿಸುತ್ತಾರೆ. ಅಂದಿನಿಂದ ಊರಿನಲ್ಲಿ ಯಾವುದೇ ಕಳ್ಳತನ ಸೇರಿದಂತೆ ಅಹಿತಕರ ಘಟನೆಗಳು ನಡೆದಿಲ್ಲವಂತೆ.

ಲಕ್ಷಾಂತರ ಭಕ್ತರು ಬರುತ್ತಾರೆ:
ಶನಿ ದೇವರ ದರ್ಶನ ಪಡೆಯಲು ಅದೆಷ್ಟೋ ದೂರದಿಂದ ಲಕ್ಷಾಂತರ ಮಂದಿ ಭಕ್ತರು ಬರುತ್ತಾರಂತೆ ಅಲ್ಲದೆ ದೇವರಿಗೆ ಇಷ್ಟವಾದ ವಸ್ತುಗಳನ್ನು ತಂದು ದೇವರಿಗೆ ವಿಶೇಷ ಪೂಜೆ ನೆರವೇರಿಸುತ್ತಾರೆ ಇದರಿಂದ ತಮ್ಮ ಕಷ್ಟಗಳು, ಅರೋಗ್ಯ ಸಮಸ್ಯೆಗಳು ಪರಿಹಾರ ಆಗುತ್ತದೆ ಎಂಬ ನಂಬಿಕೆ ಭಕ್ತರದ್ದು.

ಪೊಲೀಸ್ ಠಾಣೆ ಇದ್ದರೂ ಅಪರಾಧ ಪ್ರಕರಣವಿಲ್ಲ:
ಈ ಊರಿನಲ್ಲಿ ಒಂದು ಪೊಲೀಸ್ ಠಾಣೆ ಇದ್ದು ಇಲ್ಲಿನ ಪೊಲೀಸರು ನೀಡಿರುವ ಮಾಹಿತಿಯಂತೆ ಇದುವರೆಗೂ ಈ ಠಾಣೆಯಲ್ಲಿ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ ಎನ್ನುತ್ತಾರೆ.

*ಸುಧೀರ್‌ , ಪರ್ಕಳ

ಟಾಪ್ ನ್ಯೂಸ್

1

ಕೆಲಸವಿಲ್ಲದೆ ಮಾನಸಿಕ ಒತ್ತಡ: 33ರ ಹರೆಯದಲ್ಲೇ ನೇಣಿಗೆ ಶರಣಾದ ಖ್ಯಾತ ಕಾರ್ಯಾಕಾರಿ ನಿರ್ಮಾಪಕಿ

2-agumbe

Agumbe: ಕಾಣೆಯಾಗಿದ್ದ ಯುವತಿ ಶವವಾಗಿ ಪತ್ತೆ; ಕೊಲೆ ಆರೋಪಿ ಬಂಧನ

Devadurga; ಬೆಳ್ಳಂಬೆಳಗ್ಗೆ ಮೂವರ ಮೇಲೆ ಚಿರತೆ ದಾಳಿ

Devadurga; ಬೆಳ್ಳಂಬೆಳಗ್ಗೆ ಮೂವರ ಮೇಲೆ ಚಿರತೆ ದಾಳಿ

ಮಕ್ಕಳೇ ದೇವರು ಎಂದ ಸ್ಕೂಲ್‌ ಮಾಸ್ಟರ್‌: ಒಂದು ಶಾಲೆ, ಒಬ್ಬರೇ ಶಿಕ್ಷಕ,  29 ವರ್ಷ ಸೇವೆ!

ಮಕ್ಕಳೇ ದೇವರು ಎಂದ ಸ್ಕೂಲ್‌ ಮಾಸ್ಟರ್‌: ಒಂದು ಶಾಲೆ, ಒಬ್ಬರೇ ಶಿಕ್ಷಕ,  29 ವರ್ಷ ಸೇವೆ!

ಸಹನೆ ವಜ್ರದ ಕವಚ: ಅನುಮಾನ, ಅಪಮಾನ, ಸನ್ಮಾನ!

ಸಹನೆ ವಜ್ರದ ಕವಚ: ಅನುಮಾನ, ಅಪಮಾನ, ಸನ್ಮಾನ!

Bhadra Dam; the water leaking from the river sleeves gate stopped

Bhadra Dam; ಕೊನೆಗೂ ನಿಂತಿತು ರಿವರ್ ಸ್ಲೀವ್ಸ್ ಗೇಟ್ ನಿಂದ ಸೋರಿಕೆಯಾಗುತ್ತಿದ್ದ ನೀರು

Electric shock: ಮೊಬೈಲ್‌ ಚಾರ್ಜ್‌ಗೆ ಹಾಕುವಾಗ ವಿದ್ಯುತ್‌ ಶಾಕ್‌; ವಿದ್ಯಾರ್ಥಿ ಬಲಿ!

Electric shock: ಮೊಬೈಲ್‌ ಚಾರ್ಜ್‌ಗೆ ಹಾಕುವಾಗ ವಿದ್ಯುತ್‌ ಶಾಕ್‌; ವಿದ್ಯಾರ್ಥಿ ಬಲಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

ವರ್ಷದ ಮೊದಲಾರ್ಧದಲ್ಲಿ 1081ಕೋಟಿ ರೂ.ಗಳಿಕೆ ಕಂಡ ಬಾಲಿವುಡ್: ಸೋತವರೆಷ್ಟು,ಗೆದ್ದವರೆಷ್ಟು?

“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು

“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು

1-qewewq

Yakshagana ರಂಗದಿಂದ ಮರೆಯಾದ ಮೃದು ಮಧುರ ಮಾತುಗಳ ಕುಂಬಳೆ ಶ್ರೀಧರ್ ರಾವ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

10

ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

1

ಕೆಲಸವಿಲ್ಲದೆ ಮಾನಸಿಕ ಒತ್ತಡ: 33ರ ಹರೆಯದಲ್ಲೇ ನೇಣಿಗೆ ಶರಣಾದ ಖ್ಯಾತ ಕಾರ್ಯಾಕಾರಿ ನಿರ್ಮಾಪಕಿ

3-honnavar

Honnavar: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಬಂಡೆ ಸಮೇತ ಗುಡ್ಡ ಕುಸಿತ

2-agumbe

Agumbe: ಕಾಣೆಯಾಗಿದ್ದ ಯುವತಿ ಶವವಾಗಿ ಪತ್ತೆ; ಕೊಲೆ ಆರೋಪಿ ಬಂಧನ

Devadurga; ಬೆಳ್ಳಂಬೆಳಗ್ಗೆ ಮೂವರ ಮೇಲೆ ಚಿರತೆ ದಾಳಿ

Devadurga; ಬೆಳ್ಳಂಬೆಳಗ್ಗೆ ಮೂವರ ಮೇಲೆ ಚಿರತೆ ದಾಳಿ

ಮಕ್ಕಳೇ ದೇವರು ಎಂದ ಸ್ಕೂಲ್‌ ಮಾಸ್ಟರ್‌: ಒಂದು ಶಾಲೆ, ಒಬ್ಬರೇ ಶಿಕ್ಷಕ,  29 ವರ್ಷ ಸೇವೆ!

ಮಕ್ಕಳೇ ದೇವರು ಎಂದ ಸ್ಕೂಲ್‌ ಮಾಸ್ಟರ್‌: ಒಂದು ಶಾಲೆ, ಒಬ್ಬರೇ ಶಿಕ್ಷಕ,  29 ವರ್ಷ ಸೇವೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.