ಬಜಪೆ: ಎತ್ತ ಹೋಗಲಿ? ಎಡಕ್ಕೊ , ಬಲಕ್ಕೊ: ಗೊಂದಲದಲ್ಲಿ ವಾಹನ ಚಾಲಕರು

Team Udayavani, Jul 1, 2024, 1:34 PM IST

ಬಜಪೆ: ಎತ್ತ ಹೋಗಲಿ? ಎಡಕ್ಕೊ , ಬಲಕ್ಕೊ: ಗೊಂದಲದಲ್ಲಿ ವಾಹನ ಚಾಲಕರು

ಬಜಪೆ: ಬಜಪೆ- ಮಂಗಳೂರು ರಾಜ್ಯ ಹೆದ್ದಾರಿ 67ರಲ್ಲಿ ಕೆಂಜಾರು ವಿಮಾನ ನಿಲ್ದಾಣದಿಂದ ಮರವೂರು ಸೇತುವೆಯಾಗಿ ಮಂಗಳೂರು ಮಹಾನಗರ ಪಾಲಿಕೆಯ ಸ್ವಾಗತದ್ವಾರದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದೆ. ಹೊಸ ಸೇತುವೆಯೂ ನಿರ್ಮಾಣವಾಗಿದೆ. ಆದರೆ ಮಂಗಳೂರಿನಿಂದ ವಿಮಾನ ನಿಲ್ದಾಣದ ಕಡೆಗೆ ಬರುವ ವಾಹನಗಳಿಗೆ ಮರಕಡದಲ್ಲಿ ರಾಜ್ಯ ಹೆದ್ದಾರಿ 67ರ ಪಾಲಿಕೆಯ ಸ್ವಾಗತ ದ್ವಾರದ ಬಳಿ ಮುಂದಕ್ಕೆ ಯಾವ ರಸ್ತೆ ಬಳಸಬೇಕು ಎಂಬ ಗೊಂದಲದಿಂದ  ಅಪಘಾತಕ್ಕೆ
ಕಾರಣವಾಗುತ್ತಿದೆ.

ಇಲ್ಲಿ ಹಾದಿಯನ್ನು ಸೂಚಿಸುವ ಸೂಚನ ಫಲಕ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಮರಕಡದಿಂದ ಪಾಲಿಕೆಯ ಸ್ವಾಗತ ದ್ವಾರದ ಬಳಿಕ ಏಕಮುಖ ರಸ್ತೆಯಾಗಿದೆ. ಪಾಲಿಕೆಯ ಸ್ವಾಗತ ದ್ವಾರದಿಂದ ಕೆಂಜಾರು ವಿಮಾನ ನಿಲ್ದಾಣ ತನಕ ದ್ವಿಪಥ ರಸ್ತೆಯಾಗಿದೆ. ಇಲ್ಲಿಯ ತನಕ ಮಂಗಳೂರು ಪಾಲಿಕೆಯ ವ್ಯಾಪ್ತಿ ಇದೆ.

ಮರಕಡದಿಂದ ಸ್ವಾಗತ ದ್ವಾರದ ತನಕ ಏಕಮುಖ ರಸ್ತೆಯಲ್ಲಿ ಬಂದ ವಾಹನಗಳಿಗೆ ಹೊಸ ಸೇತುವೆ ಇರುವ ರಸ್ತೆ ಕಾಣುತ್ತಿಲ್ಲ. ಇದರಿಂದ ಅವರು ಹಳೆಯ ಸೇತುವೆಯ ರಸ್ತೆಯಲ್ಲಿ ನೇರವಾಗಿ ಬರುತ್ತಿರುವುದು ಅಪಘಾತಕ್ಕೆ ಕಾರಣವಾಗಿದೆ.

ದಿನ ನಿತ್ಯ ಪ್ರಯಾಣಿಸುವವರಿಗಿಂತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳೇ ಹೆಚ್ಚು ಇಲ್ಲಿ
ಸಂಚಾರ ಮಾಡುವುದರಿಂದ ಈ ರಸ್ತೆಯ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ.

ವಿಮಾನ ನಿಲ್ದಾಣದಿಂದ ಹಾಗೂ ಬಜಪೆ ಕಡೆಯಿಂದ ಬರುವ ವಾಹನಗಳು ಮರವೂರು ಹಳೆ ಸೇತುವೆಯಲ್ಲಿ ನೇರವಾಗಿ ಬರುತ್ತದೆ. ಮರಕಡದಿಂದ ಬರುವ ವಾಹನಗಳು ಕೂಡ ದ್ವಾರದ ಬಳಿಕ ಎಡಕ್ಕೆ ಹೊಸ ಸೇತುವೆಯ ರಸ್ತೆಯಲ್ಲಿ ಚಲಿಸದೇ ನೇರವಾಗಿ ಹಳೆ ಸೇತುವೆ ಯಲ್ಲಿ ಸಂಚಾರ ಮಾಡಿದರೆ, ಅದು ವಾಹನಗಳು ನೇರನೇರ ಢಿಕ್ಕಿ ಹೊಡೆಯಲು ಕಾರಣವಾಗುತ್ತದೆ. ಮರಕಡದಿಂದ ನಿಲ್ದಾಣಕ್ಕೆ ಬರುವ ವಾಹನಗಳು ಈಗಲೂ ಹಳೆ ಸೇತುವೆಯಲ್ಲಿಯೇ ಬರುತ್ತಿದ್ದು, ಅಪಘಾತಕ್ಕೆ ಕಾರಣವಾಗಬಹುದು.

ಸೂಚನ ಫಲಕ ಅಗತ್ಯ
ಪಾಲಿಕೆಯ ದ್ವಾರದ ಬಳಿ ಯಾವ ಕಡೆಗೆ ತಿರುಗಬೇಕು ಎಂಬ ಸೂಚನ ಫಲಕ ಅಗತ್ಯವಾಗಿ ಬೇಕು. ಮಂಗಳೂರು, ಮರಕಡದಿಂದ ಬರುವ ವಾಹನಗಳಿಗೆ ಸಮರ್ಪಕವಾಗಿ ಕಾಣುವಂತೆ, ಮಳೆ ಬಂದರೂ, ರಾತ್ರಿಯಲ್ಲೂ ಕಾಣುವಂತೆ ಸೂಚನಾ ಫಲಕ ಹಾಕಬೇಕು.

ದ್ವಿಪಥ ರಸ್ತೆ ಕಾಮಗಾರಿ ಬಾಕಿ
ಮರಕಡದಿಂದ ಪಾಲಿಕೆಯ ಸ್ವಾಗತ ದ್ವಾರದ ಬಳಿ ತನಕ ದ್ವಿಪಥ ರಸ್ತೆ ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಇಲ್ಲಿ ವಾಹನ ಸಂಚಾರಕ್ಕೆ ಭಾರಿ ತೊಂದರೆಯಾಗಿದೆ. ಕಿರಿದಾದ ರಸ್ತೆ,ತಿರುವು, ಎರುಪೇರುಗಳಿಂದ ಕೂಡಿದೆ. ಉಳಿದ ದ್ವಿಪಥ ರಸ್ತೆ
ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕಾಗಿ ಸ್ಥಳೀ ಯರು ಆಗ್ರಹಿಸಿದ್ದಾರೆ. ಪ್ರತಿ ನಿತ್ಯ ವಾಹನಗಳು ಸದಾ ಸಾಲಾಗಿ ಸಾಗುತ್ತವೆ.

ಟಾಪ್ ನ್ಯೂಸ್

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

HD-Kumaraswamy

Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್‌ಡಿಕೆ

vidhana-Soudha

Karnataka Government: 21 ಐಎಎಸ್‌ ಅಧಿಕಾರಿಗಳ ವರ್ಗ

rahul gandhi (2)

UP; ಹಾಥರಸ್‌ ಕಾಲ್ತುಳಿತಕ್ಕೆ ಆಡಳಿತ ವೈಫ‌ಲ್ಯ ಕಾರಣ: ರಾಹುಲ್‌

1-weww

Bhojashala dispute: ಜೈನರ ಪರ ಸಲ್ಲಿಸಿದ್ದ ಅರ್ಜಿ ಹಿಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ವಸತಿ ಯೋಜನೆ: 4 ವರ್ಷಗಳಿಂದ ದ.ಕ.ಕ್ಕೆ ಮನೆಯೇ ಸಿಕ್ಕಿಲ್ಲ!

Mangaluru ವಸತಿ ಯೋಜನೆ: 4 ವರ್ಷಗಳಿಂದ ದ.ಕ.ಕ್ಕೆ ಮನೆಯೇ ಸಿಕ್ಕಿಲ್ಲ!

“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್‌ ಗುಂಡೂರಾವ್‌

“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್‌ ಗುಂಡೂರಾವ್‌

Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ

Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ

Tulu Cinema ಕರಾವಳಿಯಾದ್ಯಂತ “ಧರ್ಮದೈವ’ ತುಳು ಸಿನೆಮಾ ತೆರೆಗೆ

Tulu Cinema ಕರಾವಳಿಯಾದ್ಯಂತ “ಧರ್ಮದೈವ’ ತುಳು ಸಿನೆಮಾ ತೆರೆಗೆ

Pavoor ಉಳಿಯ ಅಕ್ರಮ ಮರಳುಗಾರಿಕೆ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ

Pavoor ಉಳಿಯ ಅಕ್ರಮ ಮರಳುಗಾರಿಕೆ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

HD-Kumaraswamy

Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್‌ಡಿಕೆ

1-ree

Sworn in; ಜೈಲಲ್ಲಿದ್ದೇ ಆಯ್ಕೆ ಆಗಿದ್ದ ಅಮೃತ್‌ಪಾಲ್‌, ರಶೀದ್‌ ಸಂಸದರಾಗಿ ಪ್ರಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.