Sandalwood: ಮಾನ್ವಿತಾ ನಟನೆಯ ‘ಒನ್‌ ಆ್ಯಂಡ್‌ ಹಾಫ್’ ಸಿನಿಮಾ ಹಾಡಿನ ಗ್ಲಿಂಪ್ಸ್ ಬಂತು

Team Udayavani, Jul 1, 2024, 4:51 PM IST

Sandalwood: ಮಾನ್ವಿತಾ ನಟನೆಯ ‘ಒನ್‌ ಆ್ಯಂಡ್‌ ಹಾಫ್’ ಸಿನಿಮಾ ಹಾಡಿನ ಗ್ಲಿಂಪ್ಸ್ ಬಂತು

ಒನ್‌ ಆ್ಯಂಡ್‌ ಹಾಫ್- ಹೀಗೊಂದು ಸಿನಿಮಾ ಆರಂಭವಾಗಿದೆ. ಚರಣ್‌ ಈ ಸಿನಿಮಾ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರ ಜನ್ಮದಿನದ ಪ್ರಯುಕ್ತ ಹಾಡಿನ ಗ್ಲಿಂಪ್ಸ್‌ ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ನಟಿ ಮಾನ್ವಿತಾ ನಟಿಸಿದ್ದಾರೆ.

“ನನಗೆ ಇದು ಸ್ಪೆಷಲ್‌ ಸಿನಿಮಾ. ಈ ಸಿನಿಮಾ ಬಂದ ಮೇಲೆ ನನ್ನ ಲೈಫ್ ಗೆ ಹೊಸ ವ್ಯಕ್ತಿ ಬಂದರು. ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದಾರೆ. ಮ್ಯೂಸಿಕ್‌ಗೆ ಕುಳಿತರೆ ಮಣಿ ಅಣ್ಣ ಸೂಪರ್‌. ಲಿಖೀತಾ ಸಿರಿ ನನ್ನ ಕೋಸ್ಟಾರ್‌. ನಮ್ಮ 3 ಜನಕ್ಕೂ ಒಳ್ಳೆ ಬಾಂಡಿಂಗ್‌ ಇತ್ತು. ಶ್ರೇಯಸ್‌ ಡೈರೆಕ್ಟರ್‌ ಆಕ್ಟರ್‌ ಆಗಿ ಒಳ್ಳೆ ಕೆಲಸ ಮಾಡಿದ್ದಾರೆ’ ಎನ್ನುವುದು ಮಾನ್ವಿತಾ ಮಾತು.

ನಿರ್ದೇಶಕ ಕಂ ನಾಯಕ ಶ್ರೇಯಸ್‌ ಚಿಂಗಾ ಮಾತನಾಡಿ, ಇದು ತಂತ್ರಜ್ಞನರ ಸಿನಿಮಾ. ಪ್ರತಿಯೊಬ್ಬ ತಂತ್ರಜ್ಞರು ಕೂಡ ಫ್ಯಾಮಿಲಿ ತರಹ. ನಾನು ಸಿನಿಮಾವನ್ನು ತೆರೆಗೆ ತರಲು ಬೆಂಬಲಿಸಿದ ಇಡೀ ಚಿತ್ರತಂಡಕ್ಕೆ ಧನ್ಯವಾದ. ಈ ಸಮಯದಲ್ಲಿ ಜನ ಥಿಯೇಟರ್‌ಗೆ ಬರುತ್ತಿಲ್ಲ. ಇದು ತುಂಬಾ ವಿಭಿನ್ನ ಸಿನಿಮಾ. ಬೇರೆ ಭಾಷೆಯಲ್ಲಿ ಮಾಡುವ ಸಾಧ್ಯತೆ ನೂರಷ್ಟಿದೆ’ ಎಂದರು.

ನಿರ್ಮಾಪಕ ಆರ್‌.ಚರಣ್‌ ಸುಬ್ಬಯ್ಯ ಮಾತನಾಡಿ, “ನಾನು ಗಾಂಧಿನಗರದ ಹುಡ್ಗ. ಶ್ರೇಯಸ್‌ ಮಾಡಿದ ಡೆವಿಡ್‌ ಸಿನಿಮಾ ನೋಡಿ ಇಷ್ಟವಾಯ್ತು. ನನಗೆ ಊಹೆ ಕೂಡ ಮಾಡಲು ಆಗಲಿಲ್ಲ. ಈ ರೀತಿ ಸಿನಿಮಾ ಮಾಡಿದ್ದಾನೆ ಎಂದು. ಯಾವುದಾದರೂ ಕಾನ್ಸೆಪ್ಟ್ ಇದ್ದರೆ ಹೇಳು ಎಂದು ಹೇಳಿದೆ. ಅವನು ಹೇಳಿದ ಕೇಳಿದ ಕಥೆ ನನಗೆ ಇಷ್ಟವಾಯಿತು. ಒಂದೊಳ್ಳೆ ಬ್ಯೂಟಿಫ‌ುಲ್‌ ಸಬ್ಜೆಕ್ಟ್. ಈ ಸಿನಿಮಾವನ್ನು ಥಿಯೇಟರ್‌ಗೆ ಬಂದು ನೋಡಬೇಕು’ ಎಂದರು.

ನಟ ಶ್ರೇಯಸ್‌ ಚಿಂಗಾ, ಇದೀಗ “ಒನ್‌ ಯಂಡ್‌ ಹಾಫ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. ನಿರ್ದೇಶನದ ಜೊತೆಗೆ ಹೀರೋ ಆಗಿಯೂ ಅವರು ಅಭಿನಯಿಸುತ್ತಿದ್ದಾರೆ. ಶೂಟಿಂಗ್‌ ಮುಗಿಸಿರುವ ಚಿತ್ರತಂಡವೀಗ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬಿಝಿಯಾಗಿದೆ. “ಒನ್‌ ಆ್ಯಂಡ್‌ ಹಾಫ್’ ಕಾಮಿಡಿ ಜಾನರ್‌ ಸಿನಿಮಾವಾಗಿದ್ದು, ಮನರಂಜನೆ ಪಕ್ಕ ಅನ್ನೋದು ಚಿತ್ರತಂಡದ ಭರವಸೆ.

ಶ್ರೇಯಸ್‌ ಚಿಂಗಾ, ಮಾನ್ವಿತಾ ಕಾಮತ್‌ ಜೊತೆಗೆ ಸಾಧು ಕೋಕಿಲಾ, ಅನಿನಾಶ್‌, ಸುಚೇಂದ್ರ ಪ್ರಸಾದ್‌, “ಸ್ಪರ್ಶ’ ರೇಖಾ, ಅನಂತು, ಸುಂದರ ಶ್ರೀ, “ಕಾಮಿಡಿ ಕಿಲಾಡಿ’ ಖ್ಯಾತಿಯ ಹಿತೇಶ್‌ ಕುಮಾರ್‌, ಮಹಾಂತೇಶ್‌ ಹಿರೇಮಠ್ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಟಾಪ್ ನ್ಯೂಸ್

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

HD-Kumaraswamy

Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್‌ಡಿಕೆ

vidhana-Soudha

Karnataka Government: 21 ಐಎಎಸ್‌ ಅಧಿಕಾರಿಗಳ ವರ್ಗ

rahul gandhi (2)

UP; ಹಾಥರಸ್‌ ಕಾಲ್ತುಳಿತಕ್ಕೆ ಆಡಳಿತ ವೈಫ‌ಲ್ಯ ಕಾರಣ: ರಾಹುಲ್‌

1-weww

Bhojashala dispute: ಜೈನರ ಪರ ಸಲ್ಲಿಸಿದ್ದ ಅರ್ಜಿ ಹಿಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Huccha movie to be re-released with technical update

Huccha; ತಾಂತ್ರಿಕ ಅಪ್ಡೇಟ್ ನೊಂದಿಗೆ ಮರು ಬಿಡುಗಡೆಯಾಗಲಿದೆ ‘ಹುಚ್ಚ’

Kalki

Indian Cinema; ಕಲ್ಕಿ ಗೆಲುವಲ್ಲಿ ಸ್ಟಾರ್ ನಗು

Jigar

Jigar; ತೆರೆಗೆ ಬಂತು ಪ್ರವೀಣ್ ತೇಜ್ ನಟನೆಯ ಜಿಗರ್

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

HD-Kumaraswamy

Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್‌ಡಿಕೆ

1-ree

Sworn in; ಜೈಲಲ್ಲಿದ್ದೇ ಆಯ್ಕೆ ಆಗಿದ್ದ ಅಮೃತ್‌ಪಾಲ್‌, ರಶೀದ್‌ ಸಂಸದರಾಗಿ ಪ್ರಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.