![Puttur Temple: ತೆಂಗಿನ ಮರ ತೆರವು ವೇಳೆ ಕಾರ್ಮಿಕನಿಗೆ ಗಾಯ](https://www.udayavani.com/wp-content/uploads/2025/02/puttur-1-415x260.jpg)
![Puttur Temple: ತೆಂಗಿನ ಮರ ತೆರವು ವೇಳೆ ಕಾರ್ಮಿಕನಿಗೆ ಗಾಯ](https://www.udayavani.com/wp-content/uploads/2025/02/puttur-1-415x260.jpg)
Team Udayavani, Jul 2, 2024, 6:36 AM IST
ಬ್ರಿಜ್‌ಟೌನ್: ಐತಿಹಾಸಿಕ ಟಿ20 ವಿಶ್ವಕಪ್ ಗೆದ್ದ ಬಳಿಕ ತವರಿಗೆ ಮರಳಬೇಕಿದ್ದ ಭಾರತ ಕ್ರಿಕೆಟ್ ತಂಡ, ಕೆರಿಬಿಯನ್ ರಾಷ್ಟ್ರದಲ್ಲಿ ಬೀಸುತ್ತಿರುವ ಭಾರೀ ಚಂಡಮಾರುತದ ಕಾರಣ ಅಲ್ಲೇ ಉಳಿದುಕೊಂಡಿದೆ. ಮಳೆ, ಚಂಡಮಾರುತದಿಂದಾಗಿ ಅಲ್ಲಿನ ಪರಿಸ್ಥಿತಿ ಅಪಾಯ ಮಟ್ಟದಲ್ಲಿರುವುದರಿಂದ ವಿಮಾನ ನಿಲ್ದಾಣಗಳು ಬಂದ್ ಆಗಿವೆ. ಹೀಗಾಗಿ, ರೋಹಿತ್ ಶರ್ಮ ಪಡೆ ತವರಿಗೆ ವಾಪಸಾಗುವುದು ವಿಳಂಬಗೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.
ಭಾರತ ತಂಡದ ಆಟಗಾರರು ಮತ್ತವರ ಕುಟುಂಬಸ್ಥರು, ಬೆಂಬಲ ಸಿಬಂದಿ, ಬಿಸಿಸಿಐ ಅಧಿಕಾರಿಗಳು ಸೇರಿದ ಇಡೀ ತಂಡ ಬಾರ್ಬಡಾಸ್ ಕರಾವಳಿ ತೀರದಲ್ಲಿರುವ ಹೊಟೇಲ್‌ನಲ್ಲಿ ತಂಗಿದೆ. ಚಂಡಮಾರುತದ ಕಾರಣ, ಭಾರತೀಯ ಆಟಗಾರರಿರುವ ಹೊಟೇಲ್ ಸೇವೆಯಲ್ಲೂ ವ್ಯತ್ಯಯವಾಗಿದೆ ಎಂದು ವರದಿಯಾಗಿದೆ.
ಅಪಾಯಕಾರಿಯಾಗಿ, ಗಂಟೆಗೆ 130 ಕಿ.ಮೀ.ಗೂ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಕೆರಿಬಿಯನ್ ರಾಷ್ಟ್ರಕ್ಕೆ ಭೇಟಿ ನೀಡಿರುವ ಪ್ರವಾಸಿಗರಿಗೆ ಒಳಾಂಗಣದಲ್ಲೇ ಉಳಿದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಎಂದೂ ವರದಿಗಳು ಹೇಳಿವೆ. ಅಲ್ಲದೇ ಬಾರ್ಬಡಾಸ್‌ನಲ್ಲಿ ನಿಷೇದಾಜ್ಞೆ ಜಾರಿ ಮಾಡಿದ್ದು, ಜನರಿಗೆ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.