Parappana Agrahara ಜೈಲಿನಲ್ಲಿ ಪುತ್ರ ಪ್ರಜ್ವಲ್‌ನನ್ನು ಭೇಟಿಯಾದ ಭವಾನಿ

ಅಮ್ಮನ ಕಂಡು ಭಾವುಕರಾದ ಮಾಜಿ ಸಂಸದ

Team Udayavani, Jul 2, 2024, 12:47 AM IST

Parappana Agrahara ಜೈಲಿನಲ್ಲಿ ಪುತ್ರ ಪ್ರಜ್ವಲ್‌ನನ್ನು ಭೇಟಿಯಾದ ಭವಾನಿ

ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನನ್ನು ತಾಯಿ ಭವಾನಿ ರೇವಣ್ಣ ಸೋಮವಾರ ಭೇಟಿಯಾಗಿ ಮಾತನಾಡಿದರು.

ಮಗ ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿಗೆ ಭೇಟಿಯಾದ ತಾಯಿ ಸ್ವಲ್ಪ ಹೊತ್ತು ಮಗನೊಂದಿಗೆ ಮಾತನಾಡಿದರು. ಮಗ ಭಾವುಕನಾದಾಗ ತಾಯಿ ಸಂತೈಸಿದರು. ಬಳಿಕ ಆರೋಗ್ಯದ ಬಗ್ಗೆ ವಿಚಾರಿಸಿದರು ಎಂದು ತಿಳಿದು ಬಂದಿದೆ.

ಕಾರಿನಲ್ಲಿ ಬಂದಿದ್ದ ಭವಾನಿ ಮಾಧ್ಯಮಗಳನ್ನು ಕಂಡು ಮುಖ ಮುಚ್ಚಿಕೊಂಡರು. ಬಳಿಕ ಕಾರಿನಿಂದ ಇಳಿದು ಸ್ಟಿಕ್‌ ಸಹಾಯದಿಂದ ನಡೆದುಕೊಂಡು ಜೈಲಿನತ್ತ ತೆರಳಿದರು. ಮಗನ ಭೇಟಿ ಬಳಿಕವೂ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟರು. ಪ್ರಜ್ವಲ್‌ ವಿರುದ್ಧ 3 ಅತ್ಯಾಚಾರ ಮತ್ತು ಬಲವಂತವಾಗಿ ಸಂತ್ರಸ್ತೆಯರ ಅಶ್ಲೀಲ ವೀಡಿಯೋ ಸೆರೆ ಹಾಗೂ ಲೈಂಗಿಕ ದೌರ್ಜನ್ಯದ ಆರೋಪ ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ತನಿಖೆಗೆ ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ಸದ್ಯ ನ್ಯಾಯಾಲಯ ಪ್ರಜ್ವಲ್‌ನನ್ನು ಜು. 8ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸೂರಜ್‌ 2 ದಿನ ಸಿಐಡಿ ವಶಕ್ಕೆ
ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸೂರಜ್‌ ರೇವಣ್ಣನನ್ನು ಸಿಐಡಿ ಅಧಿಕಾರಿಗಳು ಮತ್ತೂಮ್ಮೆ 2 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

7 ದಿನಗಳ ಪೊಲೀಸ್‌ ಕಸ್ಟಡಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಸೋಮವಾರ ಆರೋಪಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಕೆಲವೊಂದು ಪರೀಕ್ಷೆ, ಧ್ವನಿ ಮಾದರಿ ಸಂಗ್ರಹ ಮತ್ತು ಹೆಚ್ಚಿನ ವಿಚಾರಣೆ ನಡೆಸಬೇಕಾಗಿರುವುದರಿಂದ ಆರೋಪಿಯನ್ನು 6 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಿಐಡಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಜತೆಗೆ ಪ್ರಕರಣದ ತನಿಖಾ ಪ್ರಗತಿಯ ಮಾಹಿತಿಯನ್ನು ಕೋರ್ಟ್‌ಗೆ ನೀಡಿದರು. ಬಳಿಕ ಕೋರ್ಟ್‌ ಆರೋಪಿಯನ್ನು 2 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿತು.

ಟಾಪ್ ನ್ಯೂಸ್

Hathras; ಕಾಲ್ತುಳಿತಕ್ಕೆ ಕಾರಣವಾದ ಯಾರನ್ನೂ ಬಿಡುವುದಿಲ್ಲ…: ಭೋಲೆ ಬಾಬಾ

Hathras; ಕಾಲ್ತುಳಿತಕ್ಕೆ ಕಾರಣವಾದ ಯಾರನ್ನೂ ಬಿಡುವುದಿಲ್ಲ…: ಭೋಲೆ ಬಾಬಾ

Basavaraj Bommai

Basavaraj Bommai; ಒಂದುವರೆ ತಿಂಗಳುಗಳ‌ ಕಾಲ ಶಿಗ್ಗಾವಿಯಲ್ಲಿ ಧನ್ಯವಾದ ಯಾತ್ರೆ

ತರಾತುರಿಯ ಡಿಸಿ ವರ್ಗಾವಣೆಯು ಸಿಎಂ ಭ್ರಷ್ಟಾಚಾರವನ್ನು ಸಾಬೀತುಪಡಿಸಿದೆ: ಪ್ರಹ್ಲಾದ ಜೋಶಿ

Hubli;ತರಾತುರಿಯ ಡಿಸಿ ವರ್ಗಾವಣೆಯು ಸಿಎಂ ಭ್ರಷ್ಟಾಚಾರವನ್ನು ಸಾಬೀತುಪಡಿಸಿದೆ: ಪ್ರಹ್ಲಾದಜೋಶಿ

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

lakshmi hebbalkar

CM-DCM ಬದಲಾವಣೆ  ಚರ್ಚೆಯಲ್ಲಿ ನಾನಿಲ್ಲ: ಸಚಿವೆ ಹೆಬ್ಬಾಳ್ಕರ್

prahlad-joshi

Mahadayi ಪ್ರವಾಹ್ ಸಮಿತಿ ಭೇಟಿ ಬಗ್ಗೆ ಬೇರೆ ಅರ್ಥ ಕೊಡಬಾರದು: ಜೋಶಿ

samanta

Health illiterate; ‘ಆರೋಗ್ಯ ಅನಕ್ಷರಸ್ಥೆ’ ಎಂದ ವೈದ್ಯನಿಗೆ ನಟಿ ಸಮಂತಾ ತಿರುಗೇಟು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Basavaraj Bommai

Basavaraj Bommai; ಒಂದುವರೆ ತಿಂಗಳುಗಳ‌ ಕಾಲ ಶಿಗ್ಗಾವಿಯಲ್ಲಿ ಧನ್ಯವಾದ ಯಾತ್ರೆ

lakshmi hebbalkar

CM-DCM ಬದಲಾವಣೆ  ಚರ್ಚೆಯಲ್ಲಿ ನಾನಿಲ್ಲ: ಸಚಿವೆ ಹೆಬ್ಬಾಳ್ಕರ್

prahlad-joshi

Mahadayi ಪ್ರವಾಹ್ ಸಮಿತಿ ಭೇಟಿ ಬಗ್ಗೆ ಬೇರೆ ಅರ್ಥ ಕೊಡಬಾರದು: ಜೋಶಿ

CM-SC-Meeting

Government Decision; ದಲಿತ ವಿದ್ಯಾರ್ಥಿಗಳಿಗೆ ಬಂಪರ್‌: 15,000 ಸ್ಟೈ ಫಂಡ್‌

Link Aadhaar ಕೃಷಿಕರ ಪಂಪ್‌ಸೆಟ್‌ಗಳಿಗೆ ಆಧಾರ್‌ ಜೋಡಣೆ ಕಡ್ಡಾಯ

Link Aadhaar ಕೃಷಿಕರ ಪಂಪ್‌ಸೆಟ್‌ಗಳಿಗೆ ಆಧಾರ್‌ ಜೋಡಣೆ ಕಡ್ಡಾಯ

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Bellary; Lokayukta raid on corporation officials

Bellary; ಪಾಲಿಕೆ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

Hathras; ಕಾಲ್ತುಳಿತಕ್ಕೆ ಕಾರಣವಾದ ಯಾರನ್ನೂ ಬಿಡುವುದಿಲ್ಲ…: ಭೋಲೆ ಬಾಬಾ

Hathras; ಕಾಲ್ತುಳಿತಕ್ಕೆ ಕಾರಣವಾದ ಯಾರನ್ನೂ ಬಿಡುವುದಿಲ್ಲ…: ಭೋಲೆ ಬಾಬಾ

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Basavaraj Bommai

Basavaraj Bommai; ಒಂದುವರೆ ತಿಂಗಳುಗಳ‌ ಕಾಲ ಶಿಗ್ಗಾವಿಯಲ್ಲಿ ಧನ್ಯವಾದ ಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.