Udupi ವಾಯ್ಸ ಆಫ್ ಹೀಲಿಂಗ್ಸ್: ಸಾಧಕರಿಗೆ ಸಮ್ಮಾನ
ಟಿ.ಗೌತಮ್ ಪೈ, ಡಾ| ಎಚ್.ಎಸ್.ಬಲ್ಲಾಳ್, ಡಾ| ಜಿ.ಶಂಕರ್ ಅವರಿಗೆ ಜೀವಮಾನ ಶೇಷ್ಠ ಪ್ರಶಸ್ತಿ
Team Udayavani, Jul 2, 2024, 1:56 AM IST
ಉಡುಪಿ: ವೈದ್ಯರ ದಿನಾಚರಣೆ ಅಂಗವಾಗಿ ಕ್ರಿಯೇಟಿಂಗ್ ಪಬ್ಲಿಕ್ ಹೆಲ್ತ್ ಅವೇರ್ನೆಸ್ ಆ್ಯಂಡ್ ಸಪೋರ್ಟಿಂಗ್ ಹೆಲ್ತ್‌ಕೇರ್ ಸಿಸ್ಟಮ್ ವಿಭಾಗದಲ್ಲಿ ಮಣಿಪಾಲ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಟಿ.ಗೌತಮ್ ಪೈ, ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ.ಶಂಕರ್ ಅವರಿಗೆ ಜೀವಮಾನ ಶೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಿದಿಯೂರು ಹೊಟೇಲ್‌ನಲ್ಲಿ ರವಿವಾರ ಉಡುಪಿ ಡೆಂಟಾಕೇರ್‌ನ ಮಾಲಕ ಡಾ| ವಿಜಯೇಂದ್ರ ಅವರ ನೇತೃತ್ವದಲ್ಲಿ “ಮೈ ಮೆಲೋಡಿ ಡಾಟ್ ಇನ್’ ತಂಡದ ಐದನೇ ವರ್ಷಾಚರಣೆ ಪ್ರಯುಕ್ತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಕಿದಿಯೂರು ಹೊಟೇಲ್, ಐಎಂಎ, ಐಡಿಎ, ಆಯುಷ್, ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ “ವಾಯ್ಸ ಆಫ್ ಹೀಲಿಂಗ್ಸ್’ ಕಾರ್ಯಕ್ರಮ ನಡೆಯಿತು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ
ವೈದ್ಯಕೀಯ ಶಿಕ್ಷಕರಾದ ಕಸ್ತೂರ್ಬಾ ಆಸ್ಪತ್ರೆಯ ಸಿಒಒ ಡಾ| ಆನಂದ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಕಾಮತ್, ಡೀನ್ ಡಾ| ಪದ್ಮರಾಜ ಹೆಗ್ಡೆ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನ ಡೀನ್ ಡಾ| ಮೋನಿಕಾ ಸೊಲೋಮನ್, ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮೆಡಿಕಲ್ ಸೂಪರಿಟೆಂಡೆಂಟ್ ಡೀನ್ ಡಾ| ನಾಗರಾಜ್ ಎಸ್. ಹಾಗೂ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ಈಶ್ವರ ಮಲ್ಪೆ, ವಿಶು ಶೆಟ್ಟಿ ಅಂಬಲಪಾಡಿ, ಇಕ್ಬಾಲ್ ಅಹಮ್ಮದ್ ಹಾಗೂ ರವಿರಾಜ್ ಎಚ್.ಪಿ.ಅವರನ್ನು ಸಮ್ಮಾನಿಸಲಾಯಿತು.
ಡಾ| ಹರಿಪ್ರಸಾದ್ ಶೆಟ್ಟಿ, ಡಾ| ರಮೇಶ್ ಶೆಟ್ಟಿ, ಡಾ| ವಿಶ್ವಲತಾ ಸತೀಶ್, ಡಾ| ರಾಧೇಶ್ಯಾಮ್, ಡಾ| ಸಿಲ್ವಿನಿಯಾ ಎ.ಫೆರ್ನಾಂಡಿಸ್ ಅವರು ಮೋಸ್ಟ್ ಮೆಲೋಡಿಯಸ್ ವಾಯ್ಸ ಆಗಿ ಆಯ್ಕೆಯಾದರು.
ಎಂಎಲ್‌ಸಿ ಡಾ| ಧನಂಜಯ ಸರ್ಜಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೂಡ್ಲು ಕೃಷ್ಣಪ್ರಸಾದ್, ಉದ್ಯಮಿಗಳಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಭುವನೇಂದ್ರ ಕಿದಿಯೂರು, ಸಾಯಿರಾಧಾ ಡೆವಲಪರ್ಸ್‌ನ ಪ್ರವರ್ತಕ ಮನೋಹರ ಎಸ್. ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಐ.ಪಿ.ಗಡಾದ್, ಐಎಂಎ ಉಪಾಧ್ಯಕ್ಷ ಡಾ| ನವೀನ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Kaup town: ಟ್ರಾಫಿಕ್ ಒತ್ತಡ, ಪಾರ್ಕಿಂಗ್ ಕಿರಿಕಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.