Actress Akshita Bopaiah: ತಮಿಳಿನತ್ತ ನವನಟಿ ಅಕ್ಷಿತಾ ಸಿನಿಯಾನ
Team Udayavani, Jul 2, 2024, 2:26 PM IST
![18](https://www.udayavani.com/wp-content/uploads/2024/07/18-620x372.jpg)
![18](https://www.udayavani.com/wp-content/uploads/2024/07/18-620x372.jpg)
ಹೊಸ ಹೊಸ ಅವಕಾಶಗಳಿಗಾಗಿ ನವನಟಿಯರು ಎದುರು ನೋಡುತ್ತಿರುತ್ತಾರೆ. ಅದು ಯಾವುದೇ ಭಾಷೆಯಾದರೂ ಸರಿ, ಮಿಂಚಬೇಕು ಎಂಬುದಷ್ಟೇ ಉದ್ದೇಶ. ಈಗ ಇದೇ ರೀತಿ ಕನ್ನಡದ ನವನಟಿಗೆ ತಮಿಳು ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿದೆ. ಆಕೆಯೇ ಅಕ್ಷಿತಾ ಬೋಪಯ್ಯ.
ಅಕ್ಷಿತಾ ಬೋಪಯ್ಯ ಅವರು ಕನ್ನಡದ “ಬ್ರಹ್ಮಚಾರಿ’, “ಶಿವಾರ್ಜುನ’, “ಐ ಲವ್ ಯೂ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆ ಮೂಲಕ ಅವರು ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಈಗ ಕಾಲಿವುಡ್‌ನಲ್ಲಿ ಅವರಿಗೆ ಒಂದು ಅವಕಾಶ ಸಿಕ್ಕಿದೆ. ಕನ್ನಡದ “ಸಿದ್ಲಿಂಗು 2′ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಸಂಸ್ಥೆಯೇ ಈಗ ತಮಿಳಿನಲ್ಲಿ ಹೊಸ ಸಿನಿಮಾ ನಿರ್ಮಿಸುತ್ತಿದ್ದು, ಅದಕ್ಕೆ ಅಕ್ಷಿತಾ ಬೋಪಯ್ಯ ನಾಯಕಿ ಆಗಿದ್ದಾರೆ.