![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jul 2, 2024, 4:23 PM IST
ಚೆನ್ನೈ: ಬಹುಭಾಷಾ ನಟಿ, ಕಾಲಿವುಡ್ ಬೆಡಗಿ ನಟಿ ಸುನೈನಾ (Actress Sunaina) ಅವರ ನಿಶ್ಚಿತಾರ್ಥ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ದುಬೈ ಮೂಲದ ಖ್ಯಾತ ಯೂಟ್ಯೂಬರ್ ಒಬ್ಬರ ಜೊತೆ ನಟಿ ಸುನೈನಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಹೈದರಾಬಾದ್ ಮೂಲದ ಸುನೈನಾ ಕನ್ನಡದ ಕನ್ನಡದ ‘ಗಂಗೆ ಬಾರೆ ತುಂಗೆ ಬಾರೆʼ ಸೇರಿದಂತೆ ಕಾಲಿವುಡ್, ಮಾಲಿವುಡ್ ನ ಕೆಲ ಸಿನಿಮಾದಲ್ಲಿ ನಟಿಸಿದ್ದಾರೆ. 35ರ ಹರೆಯದೆ ಸುನೈನಾ 40 ಹರೆಯದ ದುಬೈ ಮೂಲದ ಖಲೀದ್ ಅಲ್ ಅಮೇರಿ (Khalid Al Khalid) ಎನ್ನುವ ಯೂಟ್ಯೂಬರ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಸಿನಿವಲಯದಲ್ಲಿ ಹರಿದಾಡಿದೆ.
ಇತ್ತೀಚೆಗೆ ನಟಿ ಸುನೈನಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಕೈಗೆ ರಿಂಗ್ ಹಾಕಿರುವ ಫೋಟೋವೊಂದನ್ನು ಹಾಕಿ ʼLocked’ ಎನ್ನುವ ಸಂದೇಶ ಸಾರುವ ಇಮೋಜಿಯನ್ನು ಹಾಕಿರುವ ಫೋಟೋವನ್ನು ಹಾಕಿದ್ದರು. ಆ ಮೂಲಕ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವುದು ಅನೌನ್ಸ್ ಮಾಡಿದ್ದರು.
ಸುನೈನಾ ಅವರನ್ನು ವಿವಾಹವಾಗುವ ಹುಡುಗ ಯಾರು ಎನ್ನುವ ವಿಚಾರ ಚರ್ಚೆಯಲ್ಲಿರುವಾಗಲೇ, ದುಬೈ ಮೂಲದ ಖ್ಯಾತ ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ ಖಲೀದ್ ಅಲ್ ಅಮೇರಿ ಅವರು ಎಂಗೇಜ್ ಮೆಂಟ್ ಆಗಿರುವ ರೀತಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸುನೈನಾ ಹಾಕಿರುವ ಫೋಟೋಗೆ ಖಲೀದ್ ಅಲ್ ಅಮೇರಿ ಅವರು ರಿಯಾಕ್ಟ್ ಮಾಡಿದ್ದು, ಸುನೈನಾ ಹಾಗೂ ಖಲೀದ್ ಅಲ್ ಅಮೇರಿ ಇಬ್ಬರು ಗುಟ್ಟಾಗಿ ನಿಶ್ಚಿತಾರ್ಥ ಆಗಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ.
ಖಲೀದ್ ಅಲ್ ಅಮೇರಿ ಅವರ ಮೊದಲ ಪತ್ನಿ ಸಲ್ಮಾ ಅವರು ಇತ್ತೀಚೆಗೆ ಖಲೀದ್ ಹಾಗೂ ತಮ್ಮ ನಡುವೆ ವಿಚ್ಚೇದನವಾಗಿದೆ ಎಂದು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿದ್ದರು.
ಖಲೀದ್ ಅಲ್ ಅಮೇರಿ ಆಗಾಗ ಭಾರತಕ್ಕೆ ಬರುತ್ತಿರುತ್ತಾರೆ. ಇತ್ತೀಚೆಗೆ ಅವರು ನಟ ಮಮ್ಮುಟ್ಟಿ ಅವರೊಂದಿಗೆ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದರು.
ಸದ್ಯ ಸುನೈನಾ – ಖಲೀದ್ ನಿಶ್ಚಿತಾರ್ಥದ ಬಗ್ಗೆ ಅಧಿಕೃತವಾಗಿ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
2005ರಲ್ಲಿ ಟಾಲಿವುಡ್‌ನ ರೊಮ್ಯಾಂಟಿಕ್ ಕಾಮಿಡಿ ‘ಕುಮಾರ್ Vs ಕುಮಾರಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸುನೈನಾ 2008 ರಲ್ಲಿ ಬಂದ ‘ಕಾದಲಿಲ್ ವಿಝುಂತೇನ್’ ಸಿನಿಮಾದ ಮೂಲಕ ಮಿಂಚಿದರು.
‘ಮಾಸಿಲಾಮಣಿ’, ‘ಸಮರ್’, ‘ರೆಜಿನಾ’ ಮೊದಲಾದ ಸಿನಿಮಾದಲ್ಲಿ ಅವರು ನಟಿಸಿ ಗಮನ ಸೆಳೆದಿದ್ದಾರೆ. 2008ರಲ್ಲಿ ಬಂದ ಪ್ರಜ್ವಲ್ ದೇವರಾಜ್ ಅವರ ʼ ಗಂಗೆ ಬಾರೆ ತುಂಗೆ ಬಾರೆʼ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡದಲ್ಲೂ ಮಿಂಚಿದ್ದರು.
You seem to have an Ad Blocker on.
To continue reading, please turn it off or whitelist Udayavani.