Congress Party; ನೋಟಿಸ್‌ ಯಾಕೆ ಕೊಡ್ತೀರಿ ಅಂತಾ ಹೇಳಬೇಕು: ಡಾ.ಜಿ.ಪರಮೇಶ್ವರ್‌

ಯಾವ ಶಿಸ್ತು ಉಲ್ಲಂಘನೆ ಆಗಿದೆ ಅಂತ ಹೇಳಬೇಕು

Team Udayavani, Jul 2, 2024, 10:46 PM IST

Parameshwar

ಬೆಂಗಳೂರು: “ಪಕ್ಷದ ಚೌಕಟ್ಟು ಉಲ್ಲಂಘಿಸಿದಾಗ ನೋಟಿಸ್‌ ನೀಡುವುದು ಅಧ್ಯಕ್ಷರ ಕೆಲಸ. ಆದರೆ, ಯಾವ ಶಿಸ್ತು ಉಲ್ಲಂಘನೆಯಾಗಿದೆ ಅಂತ ಹೇಳಬೇಕಾಗುತ್ತದೆ’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತೀಕ್ಷ್ಣವಾಗಿ ಹೇಳಿದರು.
ಸದಾಶಿವನಗರದಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಶೋಕಾಸ್‌ ನೋಟಿಸ್‌ ನೀಡುವ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನೋಟಿಸ್‌  ಕೊಡುವುದು ಅಧ್ಯಕ್ಷರು ಮಾಡುವ ಕೆಲಸ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿ ಅಂತ ಹೇಳಬೇಕಾಗುತ್ತದೆ. ಈಗಲೂ ಅದೇ ರೀತಿ ಅಧ್ಯಕ್ಷರು ಹೇಳಿದ್ದಾರೆ . ಅವರು ಏನೇ ತೀರ್ಮಾನ ತೆಗೆದುಕೊಂಡರೂ ಕೇಳುತ್ತೇವೆ. ಯಾವ ಶಿಸ್ತು ಉಲ್ಲಂಘನೆ ಆಗಿದೆ ಅಂತ ಹೇಳಬೇಕು. ನಂತರ ಮುಂದಿನ ಬೆಳವಣಿಗೆ ಅಧ್ಯಕ್ಷರಿಗೆ ಬಿಟ್ಟಿದ್ದು’ ಎಂದು ತಿಳಿಸಿದರು.
ಸತ್ಯಶೋಧನಾ ಸಮಿತಿ ರಚನೆ ವಿಚಾರ ಕೇಳಿದಾಗ, “ರಾಜ್ಯಮಟ್ಟದಲ್ಲಿ ಸಮಿತಿ ಮಾಡುವುದು ಸರ್ವೇಸಾಮಾನ್ಯ. ಅಧ್ಯಕ್ಷರು ಈ ಸಮಿತಿ ಮಾಡುತ್ತಾರೆ. ಯಾಕೆಂದರೆ, ಅವರಿಗೂ ಜವಾಬ್ದಾರಿ ಇದೆಯಲ್ಲವೇ? ಎಐಸಿಸಿ ಮಾಡುವ ಸತ್ಯ ಶೋಧನಾ ಸಮಿತಿ ಬೇರೆ ಆಗಿದೆ. ಆ ಸಮಿತಿಯು ಜುಲೈ 10 ಅಥವಾ 12ರಂದು ರಾಜ್ಯಕ್ಕೆ ಭೇಟಿ ನೀಡಲಿದೆ.
ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಭಾಷಣಕ್ಕೆ ಬಿಜೆಪಿ ವಿರೋಧದ ಬಗ್ಗೆ ಕೇಳಿದಾಗ, “ಎಲ್ಲರನ್ನೂ, ಎಲ್ಲ ವರ್ಗದವರನ್ನೂ ಸಮಾನವಾಗಿ ಕರೆದೊಯ್ಯಬೇಕು. ಇದು ಹಿಂದೂ ಧರ್ಮದ ಸಾರಾಂಶ. ಇದಕ್ಕೆ ವಿರುದ್ಧವಾಗಿ ಇರುವವರು ಹಿಂದೂಗಳಲ್ಲ ಅಂದಿದ್ದಾರೆ. ಇದು ಯಾರಿಗೆ ಅನ್ವಯ ಆಗಬೇಕೋ ಆಗುತ್ತೆ. ಬಿಜೆಪಿಯವರಿಗೆ ಅನ್ವಯ ಆಗೋದಾದರೆ ಅವರಿಗೂ ಆಗುತ್ತೆ. ಆ ಅರ್ಥದಲ್ಲಿ ರಾಹುಲ್‌ ಗಾಂಧಿ ಮಾತನಾಡಿದ್ದಾರೆ’ ಎಂದು ತಿರುಗೇಟು ನೀಡಿದರು.
ಕೇಂದ್ರದ ಹೊಸ ಕಾನೂನು ಗೊಂದಲ ಕುರಿತು ಪ್ರತಿಕ್ರಿಯಿಸಿ, “ರಾಜ್ಯದಲ್ಲಿ 66 ಕೇಸ್‌ ದಾಖಲಾಗಿವೆ. ಈ ಪೈಕಿ ಬೆಂಗಳೂರಿನಲ್ಲಿ 20 ಕೇಸ್‌ ದಾಖಲಾಗಿವೆ. ಹೊಸ ಕಾನೂನುಗಳಲ್ಲಿ ಕೆಲವು ಉತ್ತಮವಾಗಿವೆ. ಕೆಲವು ಅಂಶಗಳು ಸರಿಯಾಗಿಲ್ಲ. ಹಿಂದೆ ಕೆಲವು ಸಂದರ್ಭಗಳಲ್ಲಿ ಕೇಸ್‌ ದಾಖಲು ಇತ್ತು. ಈಗ ಹೊಸ ಕಾನೂನುಗಳಲ್ಲಿ ಅವಕಾಶವಿಲ್ಲ. ಹೀಗೆ ಕೆಲವು ಗೊಂದಲಗಳಿವೆ. ಅವುಗಳ ಬಗ್ಗೆ ಚರ್ಚಿಸಿ ಕೇಂದ್ರದ ಗಮನಕ್ಕೆ ತರಲಾಗುವುದು’ ಎಂದರು.

ಟಾಪ್ ನ್ಯೂಸ್

renukaacharya

Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ

BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!

BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!

Heavy Rain ಜನ್ನಾಡಿ: ಹೊಳೆಯಂತಾದ ಬಿದ್ಕಲ್‌ಕಟ್ಟೆ – ಹಾಲಾಡಿ ರಾಜ್ಯ ಹೆದ್ದಾರಿ !

Heavy Rain ಜನ್ನಾಡಿ: ಹೊಳೆಯಂತಾದ ಬಿದ್ಕಲ್‌ಕಟ್ಟೆ – ಹಾಲಾಡಿ ರಾಜ್ಯ ಹೆದ್ದಾರಿ !

1-rasht-aa

Puri ಜಗದ್ವಿಖ್ಯಾತ ಜಗನ್ನಾಥ ರಥಯಾತ್ರೆ ಆರಂಭ; ಸಾಕ್ಷಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು

Accident-Logo

Bantwala: ಮಾರಿಪಳ್ಳದಲ್ಲಿ ಬಸ್‌-ದ್ವಿಚಕ್ರ ವಾಹನ ಢಿಕ್ಕಿ; ಸವಾರ ಮೃತ್ಯು

ರಾಜ್ಯದ ಏಕೈಕ ಜಗನ್ನಾಥ ದೇಗುಲದ ರಥೋತ್ಸವ ಸಂಭ್ರಮ

Guledgudda ರಾಜ್ಯದ ಏಕೈಕ ಜಗನ್ನಾಥ ದೇಗುಲದ ರಥೋತ್ಸವ ಸಂಭ್ರಮ

Mohua Moitra

NCW ಮುಖ್ಯಸ್ಥೆ ವಿರುದ್ಧ ಅವಹೇಳನಕಾರಿ ಪದ: ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

renukaacharya

Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ

ಪ್ರಹ್ಲಾದ ಜೋಶಿ

Hubli; ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ: ಪ್ರಹ್ಲಾದ ಜೋಶಿ

CM-Police

Karnataka Police: ಡ್ರಗ್ಸ್‌, ಜೂಜು ಮಟ್ಟಹಾಕಿ: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

Zeeka-Virus

Suspect Zika Virus: ಶಿವಮೊಗ್ಗದಲ್ಲಿ ವೃದ್ಧ ಸಾವು

HD-Kumaraswamy

MUDA Scam: ಹೆಲಿಕಾಪ್ಟರ್‌ನಲ್ಲಿ ಮುಡಾ ಕಡತ ರವಾನೆ: ಎಚ್‌ಡಿಕೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

renukaacharya

Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ

BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!

BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!

BJP 2

LDF ; ಸುರೇಶ್ ಗೋಪಿಯವರನ್ನು ಹೊಗಳಿದ್ದ ತ್ರಿಶೂರ್ ಮೇಯರ್ ಬೆಂಬಲಕ್ಕೆ ನಿಂತ ಬಿಜೆಪಿ

Heavy Rain ಜನ್ನಾಡಿ: ಹೊಳೆಯಂತಾದ ಬಿದ್ಕಲ್‌ಕಟ್ಟೆ – ಹಾಲಾಡಿ ರಾಜ್ಯ ಹೆದ್ದಾರಿ !

Heavy Rain ಜನ್ನಾಡಿ: ಹೊಳೆಯಂತಾದ ಬಿದ್ಕಲ್‌ಕಟ್ಟೆ – ಹಾಲಾಡಿ ರಾಜ್ಯ ಹೆದ್ದಾರಿ !

1-rasht-aa

Puri ಜಗದ್ವಿಖ್ಯಾತ ಜಗನ್ನಾಥ ರಥಯಾತ್ರೆ ಆರಂಭ; ಸಾಕ್ಷಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.