Lok Sabha; ರಾಹುಲ್‌ ರೀತಿ ವರ್ತಿಸಬೇಡಿ, ಸತ್ಯ ಸಂಗತಿ ಮೂಲಕ ಉತ್ತರಿಸಿ: ಮೋದಿ


Team Udayavani, Jul 3, 2024, 6:53 AM IST

Don’t act like Rahul, answer with facts: Modi

ಹೊಸದಿಲ್ಲಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸಂಸದೀಯ ಪಕ್ಷದ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಮೋದಿ, ರಾಹುಲ್‌  ಗಾಂಧಿ ರೀತಿ ಎನ್‌ಡಿಎ ಸಂಸದರು ವರ್ತಿಸುವುದು ಬೇಡ. ಬದಲಿಗೆ ಸತ್ಯ ಸಂಗತಿಗಳೊಂದಿಗೆ ಉತ್ತರ ನೀಡಬೇಕು ಎಂದು ಕಿವಿಮಾತು ಹೇಳಿದರು. ಎನ್‌ಡಿಎ ಸಂಸದರು ಸಂಸ ದೀಯ ನಿಯಮಗಳನ್ನು ಪಾಲಿಸಬೇಕು ಮತ್ತು ಉತ್ತಮ ನಡವಳಿಕೆಯನ್ನು ಪ್ರದರ್ಶಿಸಬೇಕು. ವಿಪಕ್ಷದ ನಾಯಕ ರಾಹುಲ್‌  ಗಾಂಧಿ ಅತ್ಯಂತ ಬೇಜವಾಬ್ದಾರಿ ಭಾಷಣ ಮಾಡಿದ್ದಾರೆಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. ಹೊಸ ಸದಸ್ಯರಿಗೆ ಸಂಸತ್‌ ಬಗ್ಗೆ ತಿಳಿದು ಕೊಳ್ಳಬೇಕು ಎಂದರೆ ಅವರು ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಬೇಕು ಮತ್ತು ಅವರ ಜೀವನ ಪಯಣದಿಂದ, ಅವರ ಅನುಭವದಿಂದ ಹೊಸದನ್ನು ಕಲಿತುಕೊಳ್ಳಬೇಕು ಎಂದು ಮೋದಿ ಹೇಳಿದರೆನ್ನಲಾಗಿದೆ.

ಬಾಲಕ ಬುದ್ಧಿಯ ವಿಪಕ್ಷ ನಾಯಕ: ರಾಹುಲ್‌ಗೆ ಮೋದಿ ಪರೋಕ್ಷ ಟೀಕೆ

ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೋಮವಾರ ಸಂಸತ್‌ನಲ್ಲಿ ಮಾಡಿದ ಭಾಷಣಕ್ಕೆ ಪ್ರಧಾನಿ ಮಂಗಳವಾರ ತಿರುಗೇಟು ನೀಡಿದ್ದಾರೆ. ರಾಹುಲ್‌ ಅವರನ್ನು ಪರೋಕ್ಷವಾಗಿ “ಬಾಲಕ ಬುದ್ಧಿ’ ಎಂದು ಕರೆದಿದ್ದಾರೆ. “ಚಿಕ್ಕ ಮಕ್ಕಳ ಹಾಗೆ ಅವರು ನನಗೆ ಹೊಡೆದರು, ಇವರು ಹೊಡೆದರು, ನನಗೆ ಇಲ್ಲಿ ನೋವಾಗಿದೆ, ಅಲ್ಲಿ ನೋವಾಗಿದೆ ಎಂದು ಕಾಂಗ್ರೆಸ್‌ ಅನುಕಂಪ ಸೃಷ್ಟಿಸಿಕೊಳ್ಳಲು ನಾಟಕವಾಡುತ್ತಿದೆ. ಬೆಳೆದು ದೊಡ್ಡವರಾಗಿದ್ದರೂ ಕೆಲವರು ಮಕ್ಕಳಂತೆ ವರ್ತಿಸುತ್ತಾರೆ’ ಎಂದರು. ದೇಶ ಆ ನಾಯಕರ ಬಗ್ಗೆ ಚೆನ್ನಾಗಿ ಅರಿತುಕೊಂಡಿದೆ. ಹೀಗಾಗಿ ನಿನ್ನಿಂದ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಸಂದೇಶವನ್ನು ಅವರಿಗೆ ನೀಡುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿ ಹೇಳಿದ 3 ಪುಟ ಕಥೆ

ಕಾಂಗ್ರೆಸ್‌ ಕುರಿತು ಮೋದಿ ಸ್ವಾರಸ್ಯದ ಸಂಗತಿ ಹಂಚಿಕೊಂಡರು. ಮಗು ಸೈಕಲ್‌ನಿಂದ ಬಿದ್ದಾಗ, ಚೆನ್ನಾಗಿ ಸೈಕಲ್‌ ಓಡಿಸುತ್ತಿ. ಬಿದ್ದಿದ್ದಕ್ಕೆ ಬಹಳ ಚಿಂತಿಸಬೇಡ. ಕೇವಲ ಒಂದು ಇರುವೆ ಸತ್ತಿದೆ ಎಂದು ದೊಡ್ಡವರು ಮಗುವಿಗೆ ಸಮಾಧಾನ ಪಡಿಸುತ್ತಾರೆ. ಸದ್ಯ ಕಾಂಗ್ರೆಸ್‌ನದ್ದು ಇದೇ ಸ್ಥಿತಿಯಾ ಗಿದೆ. ಪರೀಕ್ಷೆಯಲ್ಲಿ 99 ಅಂಕ ಪಡೆದ ಮಗು ಸಿಹಿ ಹಂಚುತ್ತಿತ್ತು. ಆದರೆ ಮಗು 100ರ ಬದಲು 543ಕ್ಕೆ 99 ಅಂಕ ಪಡೆದಿರುವುದನ್ನು ಹೇಳಿರಲಿಲ್ಲ. ಇನ್ನೊಂದು ಸಂಗತಿ, ಶಾಲೆಯಲ್ಲಿ ಹೊಡೆದರೆಂದು ಮಗು ಅಳುತ್ತಾ ತಾಯಿಯ ಬಳಿ ಬಂದಿತ್ತು. ಆದರೆ ತಾನೇ ಎಲ್ಲರ ಊಟದ ಡಬ್ಬಿ ಕದ್ದಿರುವುದಾಗಿ ಚಿಂತಿಸುತ್ತಿರುವ ತಾಯಿಗೆ ಹೇಳಿರಲಿಲ್ಲ ಎಂದು ಮೋದಿ ಹೇಳಿದರು.

ಟಾಪ್ ನ್ಯೂಸ್

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

1

Heavy Rain: ನಿರಂತರ ಮಳೆಯ ಹಿನ್ನೆಲೆ; ಬೈಂದೂರು ತಾಲೂಕಿನ 19 ಶಾಲೆಗಳಿಗೆ ರಜೆ ಘೋಷಣೆ

Bar

Government; ಡಿಜಿಟಲೀಕರಣದತ್ತ ಅಬಕಾರಿ ಇಲಾಖೆ: ಭ್ರಷ್ಟಾಚಾರಕ್ಕೆ ಬೀಳಲಿದೆ ಕಡಿವಾಣ!

Udupi ಆನೆಕಾಲು ಮುಕ್ತ ಅನುಮೋದನೆಯಷ್ಟೇ ಬಾಕಿ

Udupi ಆನೆಕಾಲು ಮುಕ್ತ ಅನುಮೋದನೆಯಷ್ಟೇ ಬಾಕಿ

Darshan-case

Renukaswamy Case: ದರ್ಶನ್‌, ಪವಿತ್ರಾ ಗೌಡ ಸೇರಿ 10 ಮಂದಿ ಬೆರಳಚ್ಚು ಹೊಂದಾಣಿಕೆ

Mangaluruವಿವಿ ಶೈಕ್ಷಣಿಕ ಕ್ಯಾಲೆಂಡರ್‌ ವಿಳಂಬ: ಪದವಿ ಕೋರ್ಸ್‌ಗಳಿಂದ ವಿದ್ಯಾರ್ಥಿಗಳು ವಿಮುಖ

Mangaluruವಿವಿ ಶೈಕ್ಷಣಿಕ ಕ್ಯಾಲೆಂಡರ್‌ ವಿಳಂಬ: ಪದವಿ ಕೋರ್ಸ್‌ಗಳಿಂದ ವಿದ್ಯಾರ್ಥಿಗಳು ವಿಮುಖ

R.Ashok

Dengue ನಿಯಂತ್ರಣಕ್ಕೆ ಸರಕಾರದ ಬಳಿ ದುಡ್ಡಿಲ್ಲ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ

PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ

ASF

ASF; ಕೇರಳದಲ್ಲಿ ಹಂದಿ ಜ್ವರ ಉಲ್ಬಣ: 310 ಹಂದಿಗಳ ಹತ್ಯೆಗೈದ ಸರ್ಕಾರ!

Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್‌ ಅಸ್ತ್ರ

Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್‌ ಅಸ್ತ್ರ

C-V-Anand

Governor ವಿರುದ್ಧ ಸುಳ್ಳು: ಕೋಲ್ಕತಾ ಕಮಿಷನರ್‌ ವಿರುದ್ಧ ಶಿಸ್ತು ಕ್ರಮ?

1-aaee

Northern India: 20 ವರ್ಷಗಳಲ್ಲಿ ಅಂತರ್ಜಲ ಭಾರೀ ಮಟ್ಟದಲ್ಲಿ ಇಳಿಕೆ!

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

Heavy Rain: ಉಡುಪಿಯಲ್ಲಿ ಮಳೆಯ ಅಬ್ಬರ; ಹಲವೆಡೆ ಮನೆಗಳು ಜಲಾವೃತ

1

Heavy Rain: ನಿರಂತರ ಮಳೆಯ ಹಿನ್ನೆಲೆ; ಬೈಂದೂರು ತಾಲೂಕಿನ 19 ಶಾಲೆಗಳಿಗೆ ರಜೆ ಘೋಷಣೆ

Bar

Government; ಡಿಜಿಟಲೀಕರಣದತ್ತ ಅಬಕಾರಿ ಇಲಾಖೆ: ಭ್ರಷ್ಟಾಚಾರಕ್ಕೆ ಬೀಳಲಿದೆ ಕಡಿವಾಣ!

Udupi ಆನೆಕಾಲು ಮುಕ್ತ ಅನುಮೋದನೆಯಷ್ಟೇ ಬಾಕಿ

Udupi ಆನೆಕಾಲು ಮುಕ್ತ ಅನುಮೋದನೆಯಷ್ಟೇ ಬಾಕಿ

Darshan-case

Renukaswamy Case: ದರ್ಶನ್‌, ಪವಿತ್ರಾ ಗೌಡ ಸೇರಿ 10 ಮಂದಿ ಬೆರಳಚ್ಚು ಹೊಂದಾಣಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.