Bajaj Bruzer; ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಜಾಜ್‌ ಬ್ರೂಝರ್‌

ಭಾರತದ ಬಜಾಜ್‌ ಆಟೋ ಕಂಪೆನಿಯಿಂದ ವಿನೂತನ ಆವಿಷ್ಕಾರ

Team Udayavani, Jul 3, 2024, 6:48 AM IST

Bajaj Bruzer is the world’s first CNG bike

ದ್ವಿಚಕ್ರ ವಾಹನಗಳು ಎಂದಾಕ್ಷಣ ನಮಗೆ ಸಾಧಾರಣವಾಗಿ ನೆನಪಾಗುವುದು ಪೆಟ್ರೋಲ್‌ ಚಾಲಿತವೋ ಅಥವಾ ಇತ್ತೀಚೆಗೆ ಜನಪ್ರಿಯ ಗೊಳ್ಳುತ್ತಿರುವ ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ. ಆದರೆ ಇದೀಗ ವಿಶ್ವವನ್ನೇ ಬೆರಗುಗೊಳಿಸುವಂತಹ ಒಂದು ಹೊಸ ದ್ವಿಚಕ್ರ ವಾಹನವನ್ನು ಭಾರತೀಯ ಮೋಟಾರ್‌ ಕಂಪೆನಿ ಬಜಾಜ್‌ ಬಿಡುಗಡೆ ಗೊಳಿಸಲಿದೆ. ವಿಶೇಷವೆಂದರೆ ಅದು ಕೂಡ ವಿಶ್ವದ ಪ್ರಪ್ರಥಮ ಸಿಎನ್‌ಜಿ ಬೈಕ್‌.

ಬಿಡುಗಡೆ ಯಾವಾಗ ?

ಬಜಾಜ್‌ ಆಟೋ ಈ ಹಿಂದೆ ಈ ಬಜಾಜ್‌ ಬ್ರೂಝರ್‌ ಸಿಎನ್‌ಜಿ ಬೈಕ್‌ ಅನ್ನು 2024ರ ಜೂನ್‌ 18ರಂದು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಆದರೆ ಕಾರಣಾಂತರಗಳಿಂದ ಕಂಪೆನಿಯು ಆ ದಿನಾಂಕವನ್ನು ಮುಂದೂಡಿ ಜುಲೈ 5 ರಂದು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಕಂಪೆನಿಯು ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಲ್ಲಿ ಬಜಾಜ್‌ ಎಂಡಿ ರಾಜೀವ್‌ ಬಜಾಜ್‌ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಕೂಡ ಭಾಗವಹಿಸಲಿದ್ದಾರೆ.

ವಿಶೇಷತೆಗಳೇನು?

ಬಜಾಜ್‌ನ ಈ ಸಿಎನ್‌ಜಿ ಬೈಕ್‌ ವೃತ್ತಾಕಾರದ ಎಲ್‌ಇಡಿ ಹೆಡ್‌ಲೈಟ್‌, ಸಣ್ಣ ಸೈಡ್‌ ವ್ಯೂ ಮಿರರ್‌ಗಳು, ಮುಚ್ಚಿದ ಸಿಎನ್‌ಜಿ ಟ್ಯಾಂಕ್‌, ಉದ್ದ ಸಿಂಗಲ್‌ ಸೀಟ್‌, ಹ್ಯಾಂಡ್‌ ಗಾರ್ಡ್‌, ಅಲಾಯ್‌ ವೀಲ್‌ಗ‌ಳು, ಫ್ರಂಟ್‌ ಡಿಸ್ಕ್ ಬ್ರೇಕ್‌ ಮತ್ತು ಡಿಜಿಟಲ್‌ ಸ್ಪೀಡೋಮೀಟರ್‌ನಂತಹ ವೈಶಿಷ್ಟಗಳನ್ನು ಹೊಂದಿರಲಿದೆ. ಇದಲ್ಲದೇ ಒಂದಕ್ಕಿಂತ ಹೆಚ್ಚು ವಿಧಗಳ ಬೈಕ್‌ಗಳನ್ನು ತರಲಾಗುವುದು ಎಂದು ನಿರೀಕ್ಷಿಸಲಾಗಿದೆ. ಮಾಹಿತಿಯ ಪ್ರಕಾರ, ಕಂಪೆನಿಯು ತನ್ನ ಯಾವುದೇ ಪ್ರವೇಶ ಮಟ್ಟದ ಬೈಕ್‌ಗಳಲ್ಲಿ ಸಿಎನ್‌ಜಿ ತಂತ್ರಜ್ಞಾನವನ್ನು ಒದಗಿಸಬಹುದು. ಈ ಕಾರಣದಿಂದಾಗಿ, ಅದರ ಮೈಲೇಜ್‌ ಒಂದು ಕಿಲೋ ಸಿಎನ್‌ಜಿ ಗ್ಯಾಸ್‌ನಲ್ಲಿ 100 ಕಿ. ಮೀ. ವರೆಗೆ ಇರಲಿದೆ. 125 ಸಿಸಿ ಯ ಈ ಬೈಕ್‌ನ ಎಂಜಿನ್‌ ಐದು-ಸ್ಪೀಡ್‌ ಗೇರ್‌ಬಾಕ್ಸ್‌ನೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಬೈಕ್‌ನ ಬಿಡುಗಡೆಯ ಬಳಿಕವಷ್ಟೇ ಸಿಗಲಿದೆ.

ವಿನ್ಯಾಸದ ಗುಟ್ಟು ಸೋಶಿಯಲ್‌ ಮೀಡಿಯಾದಲ್ಲಿ ರಟ್ಟು !

ಬಜಾಜ್‌ನ ಸಿಎನ್‌ಜಿ ಬೈಕ್‌ ಬಿಡುಗಡೆಗೂ ಮುನ್ನವೇ ಹಲವಾರು ಬಾರಿ ಪರೀಕ್ಷಾರ್ಥವಾಗಿ ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಲಾಗಿದೆ. ಬೈಕ್‌ನಲ್ಲಿ ಯಾವುದಾದರೂ ತಾಂತ್ರಿಕ ದೋಷವಿದೆಯೇ ಎಂದು ಪರೀಕ್ಷಿಸುವ ಜತೆಯಲ್ಲಿ  ಅದರ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಕಂಪೆನಿ  ಬೈಕ್‌ ಅನ್ನು ಸಾರ್ವಜನಿಕವಾಗಿಯೇ ಪರೀಕ್ಷೆಗೆ  ಒಳಪಡಿಸಿದೆ. ಈ ವೇಳೆ ಬೈಕ್‌ನ ವಿನ್ಯಾಸದ ಬ್ಲೂಪ್ರಿಂಟ್‌ ಸೋರಿಕೆಯಾಗಿದೆ. ಬೈಕ್‌ನ ಚಾಸಿಸ್‌, ಸಿಎನ್‌ಜಿ ಮತ್ತು ಪೆಟ್ರೋಲ್‌ ಟ್ಯಾಂಕ್‌ ಬಗ್ಗೆ  ಮಾಹಿತಿಯನ್ನು ಬಹಿರಂಗವಾಗಿದೆ. ಬೈಕ್‌ಗೆ ಸಿಲಿಂಡರ್‌ ಹಿಡಿದಿಡಲು ಬ್ರೇಸ್‌ಗಳೊಂದಿಗೆ ಡಬಲ್‌ ಕ್ರೇಡಲ್‌ ಫ್ರೇಮ್‌ ನೀಡಬಹುದು. ಸಿಎನ್‌ಜಿ ಸಿಲಿಂಡರ್‌ ಅನ್ನು ಸೀಟಿನ ಕೆಳಗೆ ಅಳವಡಿಸಲಾಗಿದೆ. ಆದರೆ ಸಿಎನ್‌ಜಿ ತುಂಬಲು ಸಹಕಾರಿ ಯಾಗಲು ನಳಿಕೆಯನ್ನು ಮುಂಭಾಗದಿಂದ ನೀಡಲಾಗಿದೆ. ಜತೆಗೆ ಹೆಚ್ಚುವರಿಯಾಗಿ ಬ್ಯಾಕಪ್‌ ಉದ್ದೇಶದಿಂದ ಸಣ್ಣ ಪೆಟ್ರೋಲ್‌ ಟ್ಯಾಂಕ್‌ಅನ್ನು ಕೂಡ ಹೊಂದಿರಲಿದೆ.

ಬಜಾಜ್‌ ಬ್ರೂಝರ್‌ನ ಎರಡು  ಪ್ರಮುಖ ಮಾದರಿಗಳು ಹೇಗಿರಲಿದೆ? ಬೆಲೆಯೆಷ್ಟು?

ಬಜಾಜ್‌ ಬ್ರೂಝರ್‌ಅನ್ನು ಎರಡು ಮಾದರಿಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಒಂದು ನಗರ ಪ್ರದೇಶಗಳಿಗೆ ಮತ್ತು ಗ್ರಾಮೀಣ ಪ್ರದೇಶಕ್ಕೆ ಹೊಂದುವಂತೆ ಆವೃತ್ತಿಯಾಗಿದೆ. ಎರಡನೆಯದು ಆಫ್ರೋಡ್‌ ಸವಾರಿ ಮಾಡಲರ್ಹ ವಾದ ಬೈಕ್‌ ಆಗಿದೆ. ಇದು ಸಂಪ್‌ ಗಾರ್ಡ್‌, ನಕಲ್‌ ಗಾರ್ಡ್‌ ಮತ್ತು ಹ್ಯಾಂಡಲ್‌ಬಾರ್‌ಬ್ರೇಸ್‌ ಅನ್ನು ಹೊಂದಿರಲಿದೆ.

ಬೈಕ್‌ನ ಅಂದಾಜು ಎಕ್ಸ್‌ ಶೋರೂಮ್‌ ಬೆಲೆ ಸುಮಾರು 80 ಸಾವಿರ ರೂ.ಗಳಷ್ಟು ಇರಲಿದೆ ಎಂದು ಅಂದಾಜಿಸಲಾಗಿದ್ದು, ಅನಾವರಣ ಸಮಾರಂಭದಲ್ಲಿ  ಬೈಕ್‌ನ ನಿಖರ ಬೆಲೆಯನ್ನೂ ಬಹಿರಂಗಪಡಿಸಬಹುದು.

  ಅವನೀಶ್‌ ಭಟ್‌, ಸವಣೂರು

ಟಾಪ್ ನ್ಯೂಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23-mandya

Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

23-mandya

Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ

1(1

Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.