Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Team Udayavani, Jul 3, 2024, 12:38 AM IST

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

ಮಡಿಕೇರಿ: ಮಳೆಯ ನಡುವೆ ಕೊಡಗಿನ ವಿವಿಧೆಡೆ ಕಾಡಾನೆ ಉಪಟಳ ಮಿತಿ ಮೀರಿದೆ. ಹಿಂಡು ಹಿಂಡು ಆನೆಗಳು ತೋಟಗಳಿಗೆ ಹಾನಿ ಮಾಡುತ್ತಿವೆ ಮತ್ತು ವಾಹನಗಳನ್ನು ಜಖಂಗೊಳಿಸುತ್ತಿವೆ.

ನಿರಂತರ ಮಳೆಯಿಂದಾಗಿ ಕಾಫಿ ತೋಟಗಳು ಹಸುರಾಗಿವೆ, ಹಲಸಿನ ಹಣ್ಣು ಸುವಾಸನೆ ಬೀರುತ್ತಿವೆ. ಹಣ್ಣು ಪ್ರಿಯ ಕಾಡಾನೆಗಳು ತೋಟದಿಂದ ತೋಟಕ್ಕೆ ಸಂಚರಿಸುತ್ತ ಫ‌ಸಲನ್ನು ತಿಂದು ತೇಗುತ್ತಿವೆ. ಮುಖ್ಯ ರಸ್ತೆಗಳಲ್ಲಿ ದಿಢೀರ್‌ ಆಗಿ ಕಾಣಿಸಿಕೊಳ್ಳುವ ಆನೆಗಳು ವಾಹನಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸುತ್ತಿವೆ.

ಮನೆಯ ಸಮೀಪ ನಿಲ್ಲಿಸಿದ್ದ ಆಟೋ ರಿಕ್ಷಾದ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಮಡಿಕೇರಿ ತಾಲೂಕಿನ ಕಕ್ಕಬ್ಬೆ ನಾಲಡಿ ಗ್ರಾಮದ ವಾಟೆಕಾಡುವಿನಲ್ಲಿ ಸಂಭವಿಸಿದೆ. ದೇವಯ್ಯ ಅವರು ಆಟೋ ರಿಕ್ಷಾ ನಿಲ್ಲಿಸಿ ಮನೆಗೆ ತೆರಳಿದ್ದರು. ರಾತ್ರಿಯ ವೇಳೆ ಕಾಡಾನೆ ಆಟೋ ರಿಕ್ಷಾದ ಮೇಲೆ ದಾಳಿ ಮಾಡಿ ಜಖಂಗೊಳಿಸಿದೆ.ಚೆಯ್ಯಂಡಾಣೆ ಗ್ರಾಮ ವ್ಯಾಪ್ತಿಯಲ್ಲಿ ಬೊವ್ವೆàರಿಯಂಡ ಹರೀಶ್‌ ಹಾಗೂ ಸಜನ್‌ ಅವರ ತೋಟಕ್ಕೆ ಹಾನಿಯಾಗಿದೆ.

ಸುಂಟಿಕೊಪ್ಪದ ಅತ್ತೂರು ನಲ್ಲೂರುಗ್ರಾಮದ ಕಡ್ಲೆಮನೆ ರಘು ಕುಮಾರ ಅವರ ಮನೆಯ ಸಮೀಪದ ತೋಟದಫ‌ಸಲನ್ನು ತಿಂದು ಧ್ವಂಸಗೊಳಿಸಿದೆ. ಬಾಳೆಗಿಡಗಳನ್ನು ಸಂಪೂರ್ಣ ತಿಂದು ಹಾಕಿದೆ. ಅರಣ್ಯ ಇಲಾಖೆ ಎಷ್ಟೇ ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳ ಹಿಂಡು ತೋಟಗಳಲ್ಲಿಯೇ ಆಶ್ರಯ ಪಡೆದುಕೊಳ್ಳುತ್ತಿವೆ. ಈ ಭಾಗದ ಬಹುತೇಕ ತೋಟಗಳಿಗೆ ದಾಳಿ ಮಾಡಿರುವ ಕಾಡಾನೆಗಳು ಬಾಳೆಯೊಂದಿಗೆ ಕಾಫಿ ಗಿಡಗಳನ್ನು ಕೂಡ ನಾಶಗೊಳಿಸಿವೆ.

ಕಾರ್ಯಾಚರಣೆ ನಡೆಸಿದ ದಿನ ಮರೆಯಾಗುವ ಕಾಡಾನೆಗಳು ಮತ್ತೆ ಮಾರನೇಯ ದಿನ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಹಾಡಹಗಲೇ ಮುಖ್ಯ ರಸ್ತೆಯಲ್ಲೂ ಆನೆಗಳು ಸಂಚರಿ ಸುತ್ತಿವೆ. ಸುಂಟಿಕೊಪ್ಪ, ಆನೆಕಾಡು, ಕುಶಾಲನಗರ ಹೆದ್ದಾರಿಯಲ್ಲಿ ನಿತ್ಯ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ಆತಂಕದಲ್ಲೇ ತೆರಳಬೇಕಾಗಿದೆ.

ವೀರಾಜಪೇಟೆ ತಾಲೂಕಿನ ಬಿಟ್ಟಂ ಗಾಲ ಗ್ರಾ.ಪಂ. ವ್ಯಾಪ್ತಿಯ ಒಂದನೇ ರುದ್ರಗುಪ್ಪೆ ಭಾಗದ ತೋಟಗಳ ಮೇಲೂ ಕಾಡಾನೆಗಳ ದಾಳಿಯಾಗಿದೆ. ಸ್ಥಳೀಯ ಬೆಳೆಗಾರಾದ ಎ.ಎಚ್‌. ಸರಸ್ವತಿ ಹಾಗೂ ಟೋಮಿ ಅವರ ತೋಟಗಳಿಗೆ ನುಗ್ಗಿರುವ ಆನೆಗಳು ಕಾಫಿ, ಅಡಿಕೆ, ತೆಂಗು ಮತ್ತು ಬಾಳೆ ಕೃಷಿಯನ್ನು ನಾಶಗೊಳಿಸಿವೆ. ವಿದ್ಯುತ್‌ ಸಂಪರ್ಕದ ತಂತಿ ಮತ್ತು ಪರಿಕರಗಳಿಗೂ ಹಾನಿ ಮಾಡಿದ್ದು, ವಿದ್ಯುತ್‌ ವ್ಯತ್ಯಯವಾಗಿದೆ. ಕಾರ್ಮಿಕರು ತೋಟಕ್ಕೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಟಾಪ್ ನ್ಯೂಸ್

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Kharajola

MUDA Scam; ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕಾರಜೋಳ

Dravid–gavskar

Indian Cricket; ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ ಕೊಡಿ: ಗವಾಸ್ಕರ್‌

rain 21

Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

1-wqwewewq

T20 ಸರಣಿ ಸಮಬಲ: ಜಿಂಬಾಬ್ವೆ ವಿರುದ್ಧ 100 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ

renukaacharya

Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

6

Kasargod: ಹಾವು ಕಡಿದು ಸಾವಿಗೀಡಾದ ಮಹಿಳೆಯ ಮನೆಯಲ್ಲಿ ವಿಚಿತ್ರ ಘಟನೆ

Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ

Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Madikeri ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

Madikeri ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ

Kharajola

MUDA Scam; ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕಾರಜೋಳ

Dravid–gavskar

Indian Cricket; ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ ಕೊಡಿ: ಗವಾಸ್ಕರ್‌

rain 21

Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.