Traffic Jam: ಬಿ.ಸಿ.ರೋಡು-ಕಲ್ಲಡ್ಕ ಮಧ್ಯೆ ಹದಗೆಟ್ಟ ಹೆದ್ದಾರಿ
ನಿಧಾನಗತಿಯಲ್ಲಿ ಸಾಗುವ ವಾಹನಗಳಿಂದಾಗಿ ಆಗಾಗ ಟ್ರಾಫಿಕ್ ಜಾಮ್
Team Udayavani, Jul 3, 2024, 12:55 AM IST
ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರು ವುದರಿಂದ ಮಳೆಗೆ ಬಿ.ಸಿ.ರೋಡಿನಿಂದ ಕಲ್ಲಡ್ಕವರೆಗೂ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಇದರಿಂದಾಗಿ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಪದೇ ಪದೇ ಟ್ರಾಫಿಕ್ ಜಾಮ್‌ನ ಕಿರಿಕಿರಿ ಉಂಟಾಗುತ್ತಿದೆ.
ಹೆದ್ದಾರಿಯುದ್ದಕ್ಕೂ ಹೊಂಡ ಗುಂಡಿಗಳ ಜತೆಗೆ ಸಾಕಷ್ಟು ಭಾಗಗಳಲ್ಲಿ ರಸ್ತೆ ಅಗೆದು ಹಾಕಿರುವುದರಿಂದ ಮಣ್ಣು ಸವೆದು ಕೇವಲ ಕಲ್ಲುಗಳು ಉಳಿದುಕೊಂಡಿದೆ. ಇದರಿಂದ ಕಾರು, ಆಟೋ ರಿಕ್ಷಾ ಸೇರಿದಂತೆ ಸಣ್ಣಪುಟ್ಟ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ವಾಹನಗಳ ಓಡಾಟ ಹೆಚ್ಚಿದ್ದಾಗ ವಾಹನಗಳ ಸರತಿ ಕಂಡುಬರುತ್ತಿದೆ.
ಮೆಲ್ಕಾರಿನ ಬೋಳಂಗಡಿಯಿಂದ ನರಹರಿ ಪರ್ವತ-ಕಲ್ಲಡ್ಕ ಮಧ್ಯೆ ವಾಹನಗಳು ತೀರಾ ನಿಧಾನಗತಿಯಲ್ಲಿ ಸಾಗುತ್ತಿರುವ ಕಾರಣ ಹೆಚ್ಚಿನ ಹೊತ್ತು ಸಂಚಾರದೊತ್ತಡ ಕಂಡುರುತ್ತಿದೆ. ಕಲ್ಲಡ್ಕದ ಬಳಿಕ ಕುದ್ರೆಬೆಟ್ಟಿನಿಂದ ಹೆಚ್ಚಿನ ಕಡೆ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದ್ದು, ಅಲ್ಲಿ ಯಾವುದೇ ಆತಂಕವಿಲ್ಲ.
ಬಿ.ಸಿ.ರೋಡಿನಿಂದ ಹೆದ್ದಾರಿಯಲ್ಲಿ ಸಾಗಿದ ವಾಹನಗಳು ಮಾಣಿಯ ಬಳಿಕ ಪುತ್ತೂರು ಕಡೆಗೂ ಸಾಗುವುದರಿಂದ ಹೆದ್ದಾರಿಯಲ್ಲಿ ಯಾವುದೇ ರೀತಿಯ ಸಂಚಾರದೊತ್ತಡ ಇರುವುದಿಲ್ಲ. ಆದರೆ ಬಿ.ಸಿ.ರೋಡು-ಕಲ್ಲಡ್ಕ ಮಧ್ಯೆ ಹೆದ್ದಾರಿ ಅವ್ಯವಸ್ಥೆಯಿಂದ ವಾಹನಗಳು ಬಹಳ ನಿಧಾನವಾಗಿ ಚಲಿಸಿ ತೊಂದರೆಯಾಗುತ್ತಿದೆ ಎಂದು ಬಂಟ್ವಾಳ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬಿ.ಸಿ.ರೋಡು ಸರ್ಕಲ್: ಸಂಚಾರ ಪಥ ಬದಲಾವಣೆ
ಕಾಮಗಾರಿಯ ಹಿನ್ನೆಲೆಯಲ್ಲಿ ಬಿ.ಸಿ.ರೋಡು ಸರ್ಕಲ್‌ನಲ್ಲಿ ಪದೇ ಪದೇ ಸಂಚಾರದ ಪಥ ಬದಲಾಗುವುದರಿಂದ ವಾಹನ ಚಾಲಕರು/ಸವಾರರು ಗೊಂದಲಕ್ಕೆ ಒಳಗಾಗುತ್ತಿದ್ದು, ಜತೆಗೆ ಕಾಮಗಾರಿಗಾಗಿ ರಸ್ತೆಯನ್ನು ಕಿರಿದಾಗಿಸಿರುವುದರಿಂದ ಬಸ್ ಸೇರಿದಂತೆ ಘನ ವಾಹನ ತಿರುಗಲು ಕಷ್ಟವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಮಳೆಗೆ ಹೊಂಡಗಳು ಸೃಷ್ಟಿಯಾಗಿ ಹೊಂಡ, ನೀರು ನಿಂತಿರುವುದನ್ನು ತಪ್ಪಿಸಲು ವಾಹನದವರು ಅಡ್ಡಾದಿಡ್ಡಿ ತಿರುಗಿಸುವುದರಿಂದಲೂ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.